ಪ್ರಕೃತಿ ವಿಸ್ಮಯದ ಈ ವಸ್ತುವಿನಿಂದ ಕಾರು ತಯಾರಿಸಿದರೆ 1 ಕೆ.ಜಿಗಿಂತ ಕಡಿಮೆ ತೂಕವಿರುತ್ತದೆ!!

  ಇಂದು ನಾವು ಬಳಸುತ್ತಿರುವ ತಂತ್ರಜ್ಞಾನ ಎಂಬುದು ಮನುಷ್ಯನಿಗೆ ಅನ್ಯಗ್ರಹ ಜೀವಿಗಳಿಂದ ಸಿಕ್ಕಿದ್ದಲ್ಲ. ಬದಲಾಗಿ ನಮ್ಮ ಸುತ್ತಮುತ್ತಲಿನ ಪರಿಸರವೇ ನಮಗೆ ತಂತ್ರಜ್ಞಾನಕ್ಕೆ ದಾರಿಯನ್ನು ತೋರಿಸಿಕೊಟ್ಟಿದೆ. ಪ್ರಕೃತಿಯಿಂದಲೇ ಮನುಷ್ಯ ತಂತ್ರಜ್ಞಾನವನ್ನು ಪಡೆದುಕೊಂಡಿದ್ದಾರೆ. ಇತಿಹಾಸದಿಂದ ಭವಿಷ್ಯದವರೆಗೂ ತಂತ್ರಜ್ಞಾನದ ಮೂಲ ಪ್ರಕೃತಿಯೇ ಆಗಿರುತ್ತದೆ. !

  ನಿಜ ಹೇಳಬೇಕೆಂದಂರೆ ತಂತ್ರಜ್ಞಾನಕ್ಕೆ ಪ್ರಯೋಗಾಲಯಗಳ ಅಗತ್ಯವೇ ಇಲ್ಲ. ನಮ್ಮ ಸುತ್ತಮುತ್ತಲಿನ ಪ್ರಕೃತಿಯೇ ನಮಗೆ ತಂತ್ರಜ್ಞಾನದ ಪ್ರಯೋಗಾಲಯವಾಗಿ ಇದ್ದು ಬಿಡುತ್ತದೆ. ಇಂತಹ ಪ್ರಕೃತಿ ವಿಸ್ಮಯಗಳೇ ನಮಗೆ ತಂತ್ರಜ್ಞಾನ ಬೆಳವಣಿಗೆಗೆ ಪ್ರೇರಣೆಯಾಗಿವೆ. ಪ್ರಕೃತಿ ಇಂದಿನ ಬಹುತೇಕ ಎಲ್ಲಾ ತಂತ್ರಜ್ಞಾನಗಳಿಗೂ ಹಲವು ಗುಟ್ಟುಗಳನ್ನು ಬಿಚ್ಚಿಟ್ಟಿದೆ ಎಂಬುದು ಸಹ ಸತ್ಯ.

  ಈ ವಸ್ತುವಿನಿಂದ ಕಾರು ತಯಾರಿಸಿದರೆ 1 ಕೆ.ಜಿಗಿಂತ ಕಡಿಮೆ ತೂಕವಿರುತ್ತದೆ!!

  ನಮಗೆ ಇಷ್ಟವಾದಾಗ ಮತ್ತು ಬಿಡುವಿನ ವೇಳೆಯಲ್ಲಿ ಕಲಿಯಬಹುದಾದ ಪ್ರಕೃತಿ ಅನುಕರಣೆ ತಂತ್ರಜ್ಞಾನ ಕೂಡ ಆಧುನಿಕ ತಂತ್ರಜ್ಞಾನಕ್ಕಿಂತ ಯಾವ ರೀತಿಯಲ್ಲೂ ಕಡಿಮೆ ಇಲ್ಲ . ಹಾಗಾಗಿ, ಇಂದಿನ ಲೇಖನದಲ್ಲಿ ಪ್ರಕೃತಿಯಿಂದ ಮನುಷ್ಯ ಎರವಲು ಪಡೆದಿರುವ ಇತ್ತೀಚಿನ ತಂತ್ರಜ್ಞಾನಗಳು ಯಾವುವು? ಅವುಗಳಿಂದ ಆದ ಲಾಭವೇನು ಎಂಬ ಅಂಶಗಳನ್ನು ತಿಳಿದುಕೊಳ್ಳೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಏರೋಜೆಲ್’ ಎಂಬ ಘನ ವಸ್ತು!!

  ಮಳೆ ಬರುವ ಮುನ್ನ ಗುಂಪಾಗಿ ಹಾರುವ ಡ್ರ್ಯಾಗನ್ ಫ್ಲೈಗಳನ್ನು ಯಾರು ನೋಡಿಲ್ಲಾ ಹೇಳಿ? ಏರೋಪ್ಲೇನ್ ಚಿಟ್ಟೆಗಳು ತನ್ನಲ್ಲಿರುವ ತೆಳುವಾದ ರೆಕ್ಕೆಗಳ ನೆರವಿನಿಂದ ಸಮುದ್ರ, ಭೂಖಂಡಗಳನ್ನೂ ದಾಟುತ್ತವೆ. ಇದರ ಸ್ಫೂರ್ತಿಯಿಂದಲೇ ಅಮೆರಿಕ ವಿಜ್ಞಾನಿಗಳು ಅತೀ ತೆಳುವಾದ ‘ಏರೋಜೆಲ್' ಎಂಬ ಘನ ವಸ್ತುವೊಂದನ್ನು ತಯಾರಿಸಿದ್ದಾರೆ. ಇದರಿಂದ ಕಾರು ತಯಾರಿಸಿದರೆ 1 ಕೆ.ಜಿಗಿಂತ ಹೆಚ್ಚು ತೂಕ ಇರದು ಎಂಬುದು ಅಚ್ಚರಿಯಲ್ಲದೇ ಮತ್ತಿನ್ನೇನು?!

  ಜೇನುನೊಣಗಳೇ ಸ್ಫೂರ್ತಿ!!

  ಗುಂಪು ಗುಂಪಾಗಿ ಈಜುವ ಕೆಲವು ಮೀನಿನುಗಳು, ಗಾಳಿಯಲ್ಲಿ ಗುಂಪು ಗುಂಪಾಗಿ ಹಾರುವ ಜೇನು ನೊಣಗಳು ಒಂದಕ್ಕೊಂದು ತಾಕದಂತೆ ಹೇಗೆ ಚಲಿಸುತ್ತಿವೆ ಎಂಬ ಆಲೋಚನೆ ಹೊಸ ತಂತ್ರಾಂಶವನ್ನು ಕಂಡುಹಿಡಿಯಲು ಸಹಕಾರಿಯಾಗಿದೆ. ಪೋಲೆಂಡ್ ಮತ್ತು ಕೊಲಂಬಿಯಾ ಸಂಶೋಧಕರು ವಿಮಾನ ಪ್ರಯಾಣಕ್ಕೆ ನೆರವಾಗುವಂತಹ ತಂತ್ರಾಂಶವನ್ನು ತಯಾರಿಸಲು ಈ ಮೀನು ಮತ್ತು ಜೇನುನೊಣಗಳೇ ಸ್ಫೂರ್ತಿ ಎಂದರೆ ಆಶ್ಚರ್ಯವಾಗುವಂತದ್ದು ಏನಿಲ್ಲ.!

  ಮಿಂಚು ಹುಳುಗಳ ಎಲ್‌ಇಡಿಗಳು!!

  ರಾತ್ರಿಯಲ್ಲಿ ಮಿನುಗುವ ಮಿಂಚು ಹುಳುಗಳು ಬಲ್ಬ್ ಕಂಡುಹಿಡಿಯಲು ಪ್ರೇರಣೆ ಆಗಿರಬಹುದು ಎಂದು ಎಲ್ಲರೂ ಊಹಿಸಬಹುದು. ಆದರೆ, ಹೊಸ ಮಾದರಿಯ ಎಲ್‌ಇಡಿ ಬಲ್ಬ್ ಗಳ ತಯಾರಿಗೆ ಸ್ಫೂರ್ತಿ ತುಂಬಿವೆ. ಮಿಂಚು ಹುಳುಗಳ ಉದರ ಭಾಗದಲ್ಲಿರುವ ವಿಶೇಷ ಪೊರೆಗಳ ಸ್ಫೂರ್ತಿಯಿಂದಲೇ ಹೊಸ ಮಾದರಿಯ ಪೊರೆಗಳನ್ನು ತಯಾರಿಸಿ ಎಲ್‌ಇಡಿ ಬಲ್ಬ್‌ಗಳಿಗೆ ವಿಜ್ಞಾನಿಗಳು ಅಳವಡಿಸಿದರು. ಇದರಿಂದ ಬಲ್ಬ್ ಪ್ರಕಾಶಮಾನ ಪ್ರಕಾಶ ಶೇ 55ರಷ್ಟು ಹೆಚ್ಚಾಯಿತು.

  ಗಾಜಿನಲ್ಲಿ ಬಲೆ ಹೆಣೆದರು!!

  ಗಗನಚುಂಬಿ ಕಟ್ಟಡಗಳಿಗೆ ಅಳವಡಿಸುವ ಗಾಜುಗಳಿಗೆ ಡಿಕ್ಕಿಹೊಡೆದು ವರ್ಷಕ್ಕೆ ಅಸಂಖ್ಯ ಹಕ್ಕಿಗಳು ಸಾಯುತ್ತಿದ್ದುದ್ದನ್ನು ತಡೆಯಲು ಆರ್ಬ್ ವೀವರ್ ಎಂಬ ಜೇಡ ಪರಿಹಾರ ಸೂಚಿಸಿದೆ. ಈ ಕೀಟ ಬಲೆ ಹೆಣೆಯಲು ಬಿಡುಗಡೆ ಮಾಡುವ ದಾರಗಳಿಗೆ ನೇರಳಾತೀತ ಕಿರಣಗಳನ್ನು ಪ್ರತಿಬಿಂಬಿಸುವ ಗುಣವಿರುವುದನ್ನು ನೋಡಿ, ಜೇಡರ ಬಲೆಯಂತೆ ಗೆರೆಗಳನ್ನು ರಚಿಸಿ ಹೊಸ ಮಾದರಿಯ ಗಾಜನ್ನು ತಯಾರಿಸಿದ್ದಾರೆ. ಗಾಜಿನ ಮೇಲೆ ದಾರ ಇದ್ದರೆ ಅಂದ ಕೆಡುವ ಆತಂಕವಿಲ್ಲ. ಏಕೆಂದರೆ, ಈ ಗೆರೆಗಳು ನಮ್ಮ ಬರಿಗಣ್ಣಿಗೆ ಗೋಚರಿಸುವುದಿಲ್ಲ. ಆದರೆ ಪಕ್ಷಿಗಳ ಕಣ್ಣಿಗೆ ಕಾಣುತ್ತವೆ.

  Oneplus 6 First Impressions - Gizbot Kannada
  ಕಿಂಗ್‌ಫಿಷರ್‌ ನೀಡಿತು ಐಡಿಯಾ!!

  ಕಿಂಗ್‌ಫಿಷರ್‌ ನೀಡಿತು ಐಡಿಯಾ!!

  ಕಿಂಗ್‌ಫಿಷರ್‌ ಹಕ್ಕಿಯು ಮೀನುಗಳನ್ನು ಬೇಟೆಯಾಡಲು ಗಾಳಿಯಿಂದ ಹಾರಿ ನೀರನ್ನು ಮುಟ್ಟುವಾಗ ಹೆಚ್ಚು ಶಬ್ದವಾಗದಂತೆ ಎಚ್ಚರಿಕೆ ವಹಿಸುತ್ತದೆ. ಇದಕ್ಕೆ ಕಾರಣ ಹಕ್ಕಿಯ ಕೊಕ್ಕು. ಇದರ ಸ್ಫೂರ್ತಿಯಿಂದಲೇ ಬುಲೆಟ್ ರೈಲಿನ ಮುಂದಿನ ಭಾಗವನ್ನು 50 ಮೀಟರ್ ಉದ್ದ ಇರುವಂತೆ ತಯಾರಿಸಿದರು. ಈಗ ಇವು ಬುಲೆಟ್ ರೈಲಿನ ಶೇ 15ರಷ್ಟು ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದೆ. ಶೇ 10ಪಟ್ಟು ಹೆಚ್ಚಿನ ವೇಗದಲ್ಲಿ ಚಲಿಸಲು ಕಿಂಗ್‌ಫಿಷರ್‌ನ ಕೊಕ್ಕು ತಂತ್ರಜ್ಞಾನಕ್ಕೆ ಸ್ಫೂರ್ತಿಯಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  What do a kingfisher, cocklebur pods and a Namibian beetle have in common? Besides being living organisms, they have all served as inspiration for creative human technologies to solve challenging problems. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more