Subscribe to Gizbot

ಭಾರತದ 'ಚಂದ್ರಯಾನ-2' ಯೋಜನೆ ವೆಚ್ಚ ಒಂದು ಹಾಲಿವುಡ್ ಸಿನಿಮಾಗಿಂತ ಕಡಿಮೆ!!

Written By:

ಚಂದ್ರನ ನೆಲದಲ್ಲಿ ಸುಗಮವಾಗಿ ಇಳಿಯಬಲ್ಲ ಚಂದ್ರಯಾನ-2 ಯೋಜನೆ ಮತ್ತು ರೋವರ್‌ ನಡಿಗೆಯನ್ನು ಇಸ್ರೋ ಕೈಗೊಳ್ಳಲಿದ್ದು, ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಶುರುವಾಗುತ್ತಿರುವ ಭಾರತ 'ಚಂದ್ರಯಾನ-2' ಯೋಜನೆ ಒಂದು ಹಾಲಿವುಡ್ ಸಿನಿಮಾಗಿಂತಲೂ ಕಡಿಮೆ ವೆಚ್ಚದ ಬಜೆಟ್ ಆಗಿರಲಿದೆ.!!

ನಾಸಾದ ಅಪೋಲೋ ಮತ್ತು ರಷ್ಯಾದ ಲೂನಾ ಮಿಷನ್‌ಗಳಲ್ಲಿ ರೋವರ್‌ಗಳು ಚಂದ್ರನ ಸಮಭಾಜಕ ಪ್ರದೇಶದಲ್ಲಿ ಇಳಿದಿದ್ದವು. ಆದರೆ ಇಸ್ರೋ ತನ್ನ ನೌಕೆಯನ್ನು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಸಲು ಯೋಚಿಸುತ್ತಿದೆ ಎಂದು ಇಸ್ರೋ ಅಧ್ಯಕ್ಷ ಡಾ. ಕೆ. ಶಿವನ್ ಅವರು ಮಾಧ್ಯಮಗಳಿಗೆ ತಿಳಸಿದ್ದಾರೆ.!!

ಭಾರತದ 'ಚಂದ್ರಯಾನ-2' ಯೋಜನೆ ವೆಚ್ಚ ಒಂದು ಹಾಲಿವುಡ್ ಸಿನಿಮಾಗಿಂತ ಕಡಿಮೆ!!

ಇಡೀ ಪ್ರಪಂಚದಲ್ಲಿಯೇ ಅತ್ಯಂತ ಕಡಿಮೆ ಬಜೆಟ್‌ನಲ್ಲಿ 'ಮಂಗಳಯಾನ' ( 470 ಕೋಟಿ ರೂ.) ಯೋಜನೆ ಕೈಗೊಂಡ ನಂತರ ಇಸ್ರೋ ಮುಂದೆ ''ಚಂದ್ರಯಾನ 2'' ಯೋಜನೆ ನಿಂತಿದೆ.!! ಹಾಗಾದರೆ, ಇಸ್ರೋವಿನ ''ಚಂದ್ರಯಾನ 2'' ಯೋಜನೆ ಹೇಗಿರಲಿದೆ? ''ಚಂದ್ರಯಾನ 2' ಯೋಜನೆಯಿಂದ ಆಗುವ ಲಾಭಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚಂದ್ರಯಾನ-2 ಉಡಾವಣೆ ಯಾವಾಗ?

ಚಂದ್ರಯಾನ-2 ಉಡಾವಣೆ ಯಾವಾಗ?

ಭೂಮಿಯಿಂದ ಚಂದ್ರನಿರುವ ದೂರ ಮತ್ತು ಚಂದ್ರನ ಮೇಲ್ಮೈನ ಯಾವ ಭಾಗ ಭೂಮಿಗೆ ಸಮೀಪವಿದೆ ಎಂಬೆಲ್ಲಾ ಅಂಶಗಳು ಚಂದ್ರಯಾನ-2 ಉಡಾವಣೆಯ ದಿನಾಂಕ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ಹೊಂದಿವೆ.ಹಾಗಾಗಿ, ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಉಪಗ್ರಹ ಉಡಾವಣೆ ಮಾಡಲಾಗುವುದು ಎಂದು ಡಾ. ಶಿವನ್ ತಿಳಿಸಿದ್ದಾರೆ.

800 ಕೋಟಿ ರೂ.ಬಜೆಟ್!!

800 ಕೋಟಿ ರೂ.ಬಜೆಟ್!!

ಅತ್ಯಂಕ ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶ ಯಾನವನ್ನು ಕೈಗೊಳ್ಳುವ ಏಕೈಕ ಬಾಹ್ಯಾಕಾಶ ಸಂಸ್ಥೆ ಇಸ್ರೋ 800 ಕೋಟಿ ರೂ.ವೆಚ್ಚದಲ್ಲಿ ಚಂದ್ರಯಾನ 2 ಅನ್ನು ಕೈಗೊಳ್ಳುತ್ತಿದೆ. ಚಂದ್ರಯಾನ 2ಗೆ ವೆಚ್ಚವಾಗುತ್ತಿರುವ ಹಣ ಒಂದು ಹಾಲಿವುಡ್ ಸಿನಿಮಾದ ಬಜೆಟ್‌ಗಿಂತಲೂ ಕಡಿಮೆ ಎಂದರೆ ನೀವು ಇನ್ನೂ ಆಶ್ಚರ್ಯವಾಗಬಹುದು.!!

ಕಡಿಮೆ ವೆಚ್ಚದಲ್ಲಿ ಯೋಜನೆ ಹೇಗೆ ಸಾಧ್ಯ?

ಕಡಿಮೆ ವೆಚ್ಚದಲ್ಲಿ ಯೋಜನೆ ಹೇಗೆ ಸಾಧ್ಯ?

ಕಟ್ಟುನಿಟ್ಟಿನ ಗುಣಮಟ್ಟ ನಿಯಂತ್ರಣ ಮತ್ತು ನಮ್ಮ ಬಾಹ್ಯಾಕಾಶ ಯೋಜನೆಯ ಉತ್ಪನ್ನಗಳನ್ನು ಗರಿಷ್ಠಗೊಳಿಸಿದ್ದರಿಂದ ಅಂತರ್‌ಗ್ರಹ ಯಾತ್ರೆ ವೆಚ್ಚ ಕಡಿಮೆಯಾಗಿದೆ ಎಂದು ಡಾ. ಶಿವನ್ ಹೇಳಿದ್ದಾರೆ. ಬಾಹ್ಯಾಕಾಶ ನೌಕೆ ಅಥವಾ ರಾಕೆಟ್‌ ಅಭಿವೃದ್ಧಿಯ ಪ್ರತಿ ಹಂತದಲ್ಲೂ ಕಟ್ಟುನಿಟ್ಟಿನ ನಿಗಾವಹಿಸಿದ್ದಾಗಿ ಅವರು ತಿಳಿಸಿದ್ದಾರೆ.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಚಂದ್ರಗ್ರಹಣಗಳ ಸಮಸ್ಯೆ!!

ಚಂದ್ರಗ್ರಹಣಗಳ ಸಮಸ್ಯೆ!!

ಚಂದ್ರನ ಮೇಲೆ ಮುಂಜಾವಿನಿಂದ ಮುಸ್ಸಂಜೆಯ ಒಳಗೆ ಲ್ಯಾಂಡಿಂಗ್‌ ಆಗುವ ಮತ್ತು ರೋವರ್ ನಡಿಗೆ ಕೈಗೊಳ್ಳಲು ಪ್ರಯತ್ನಿಸಲಾಗಿದೆ. ಚಂದ್ರಗ್ರಹಣಗಳ ಕಾರಣದಿಂದ ಏಪ್ರಿಲ್‌ನಿಂದ ನವೆಂಬರ್‌ ನಡುವೆ ಚಂದ್ರಯಾನ-2 ಉಡಾವಣೆ ಸಾಧ್ಯವಾಗದೆ ಇದ್ದರೆ ಕಷ್ಟ ಏಕೆಂದರೆ, ಚಂದ್ರಯಾನ 2 ಉಡಾವಣೆಗೆ ನಿಖರ ಕಾಲಾವಧಿ ತಿಂಗಳಲ್ಲಿ ಒಂದು ಬಾರಿ ಮಾತ್ರ ಬರುತ್ತದೆ.!!

ಚಂದ್ರನ ಧ್ರುವದಲ್ಲಿ ಮೇಲೆ ರೋವರ್!!

ಚಂದ್ರನ ಧ್ರುವದಲ್ಲಿ ಮೇಲೆ ರೋವರ್!!

ಚಂದ್ರಯಾನ 2 ರೋವರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಬಳಿಯಲ್ಲಿ ಇಳಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಕೋಟ್ಯಂತರ ವರ್ಷಗಳಷ್ಟು ಹಳೆಯದಾದ ಬಂಡೆಗಲ್ಲುಗಳಿರುವ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯನ್ನು ಅಧ್ಯಯನ ಮಾಡಲು ಇಸ್ರೋ ಚಿಂತಿಸಿದೆ.!!

ಓದಿರಿ:ನಾಸಾ ವಿಜ್ಞಾನಿಗಳಿಗೆ ನಿಗೂಢ ಎನಿಸಿದೆಯಂತೆ ಮಂಗಳ ಗ್ರಹದ ಈ ಜಾಗ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Chandrayaan-2, the lunar mission under which the ISRO will for the first time attempt to land a rover on the moon's south pole. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot