ಬಾಹ್ಯಾಕಾಶ ನೌಕೆ ಲಾಂಚ್ ಇಸ್ರೋದಿಂದ ಇತಿಹಾಸ ನಿರ್ಮಾಣ

Written By:

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ಕಿರೀಟದಲ್ಲಿ ಇನ್ನೊಂದು ಗರಿಯನ್ನು ಸೇರ್ಪಡೆಗೊಳಿಸುವ ಎಲ್ಲಾ ತಯಾರಿಯನ್ನು ಮಾಡಿಕೊಂಡಿದೆ. ಇದೇ ಮೇ 23 ರಂದು ಇಸ್ರೋ ಹಾಗೂ ಈ ಸಂಸ್ಥೆಯು ತನ್ನ ಪ್ರಥಮ ಬಾಹ್ಯಾಕಾಶ ನೌಕೆಯನ್ನು ಲಾಂಚ್ ಮಾಡುವ ನಿಟ್ಟಿನಲ್ಲಿದ್ದು, ಇದನ್ನು ಮಾಡುವ ಐದನೇ ದೇಶವಾಗಿ ಭಾರತ ಪ್ರಸಿದ್ಧಗೊಳ್ಳಲಿದೆ. ಇದುವರೆಗೆ ಅಮೇರಿಕಾ, ರಷ್ಯಾ ಮತ್ತು ಫ್ರಾನ್ಸ್ ಹಾಗೂ ಜಪಾನ್ ಯಶಸ್ವಿಯಾಗಿ ಬಾಹ್ಯಾಕಾಶ ನೌಕೆಯನ್ನು ಲಾಂಚ್ ಮಾಡಿದ ದೇಶಗಳಾಗಿವೆ. ಆದರೆ ಇದರಲ್ಲಿರುವ ವಿಶೇಷತೆಯೆಂದರೆ ಇದೊಂದು ಸ್ಥಳೀಯ ಪ್ರಾರಂಭ ಎಂಬುದಾಗಿದೆ.

(Reusable Launch Vehicle - Technology Development) RLV-TD ರಚನೆಗೆ ಐದು ವರ್ಷಗಳನ್ನು ತೆಗೆದುಕೊಳ್ಳಲಾಗಿದ್ದು, ಇದಕ್ಕೆ ತಗಲಿರುವ ವೆಚ್ಚ 95 ಕೋಟಿಯಾಗಿದೆ. ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ. ಪೂರ್ಣ ಪ್ರಮಾಣದ ಪುನರ್ಬಳಕೆಯ ಬಾಹ್ಯಾಕಾಶ ನೌಕೆಯ ನಿರ್ಮಾಣಕ್ಕೆ 10 ರಿಂದ 15 ವರ್ಷಗಳು ಬೇಕಾಗುತ್ತದೆ. ಬನ್ನಿ ಬಾಹ್ಯಾಕಾಶ ನೌಕೆಯ ಕುರಿತಾದ ಇನ್ನಷ್ಟು ಸಂಗತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಪ್ರದರ್ಶಕ ಲಾಂಚ್

ತಂತ್ರಜ್ಞಾನ ಪ್ರದರ್ಶಕ ಲಾಂಚ್

#1

ತಂತ್ರಜ್ಞಾನ ಪ್ರದರ್ಶಕ ಲಾಂಚ್ ಇದಾಗಿದ್ದು ಇದು ಪುಟ್ಟ ಹೆಜ್ಜೆಯಾಗಿದೆ. ಎಂಬುದಾಗಿ ಇಸ್ರೋ ಅಧಿಕಾರಿ ವಲಯ ತಿಳಿಸಿದ್ದು, ಖಂಡಿತ ಇದೊಂದು ಶ್ಲಾಘನೀಯ ಪ್ರಯೋಗವಾಗಿ ಹೊರಹೊಮ್ಮಿದೆ.

ಪ್ರಯೋಗಾತ್ಮಕ ಬಾಹ್ಯಾಕಾಶ ನೌಕೆ

ಪ್ರಯೋಗಾತ್ಮಕ ಬಾಹ್ಯಾಕಾಶ ನೌಕೆ

#2

ಈ ಪ್ರಯೋಗಾತ್ಮಕ ಬಾಹ್ಯಾಕಾಶ ನೌಕೆಯನ್ನು ಸ್ಪೇಸ್ ಪೋರ್ಟ್ ಶ್ರೀಹರಿಕೋಟಾದಿಂದ ಲಾಂಚ್ ಮಾಡಲಾಗುತ್ತಿದ್ದು, ಬಂಗಾಳ ಕೊಲ್ಲಿಯಲ್ಲಿ ಇದು ಮರಳಲಿದೆ ಎಂಬುದಾಗಿ ಅಂದಾಜಿಸಲಾಗಿದೆ.

ನೀರಿನ ಪರಿಣಾಮ

ನೀರಿನ ಪರಿಣಾಮ

#3

ಅದಾಗ್ಯೂ ಇದನ್ನು ಸಮುದ್ರದಿಂದ ಪುನಃ ಪಡೆದುಕೊಳ್ಳುವುದು ಅಸಾಧ್ಯದ ಮಾತಾಗಿದ್ದರೂ ನೀರಿನ ಪರಿಣಾಮದಿಂದ ನಾಶವನ್ನು ಕಾಣಲಿದೆ.

ನ್ಯಾವಿಗೇಟ್

ನ್ಯಾವಿಗೇಟ್

#4

ಪ್ರಯೋಗದ ಉದ್ದೇಶವು ವರ್ಚುವಲ್ ರನ್‌ವೇಯಲ್ಲಿ ಉಂಟಾಗುವ ಶಬ್ಧಕ್ಕಿಂತ ಐದು ಪಟ್ಟು ತೀವ್ರವಾಗಿರಬಹುದಾದ ವೇಗದಲ್ಲಿ ಜಾರಿಕೊಂಡು ನ್ಯಾವಿಗೇಟ್ ಮಾಡುತ್ತದೆಯೇ ಎಂಬುದನ್ನು ಕಂಡುಕೊಳ್ಳುವುದಾಗಿದೆ.

ಹಾರಾಟದ ಪರೀಕ್ಷೆ

ಹಾರಾಟದ ಪರೀಕ್ಷೆ

#5

ಪ್ರಸ್ತುತ ವಿನ್ಯಾಸವು ಮೂಲತಃ ಹಾರಾಟದ ಪರೀಕ್ಷೆಯನ್ನು ವಿವಿಧ ತಂತ್ರಜ್ಞಾನಗಳ ಮೂಲಕ ಶಬ್ಧಾತೀತ ವಿಮಾನ, ಸ್ವಾಯತ್ತ ಲ್ಯಾಂಡಿಂಗ್, ಚಾಲಿತ ಕ್ರೂಸ್ ವಿಮಾನ, ಹೈಪರ್ ಸೋನಿಕ್ ಫ್ಲೈಟ್‌ಗಳು ಬಳಸುವ ಉಸಿರಾಟ ನೋದನ ಬಳಸಿಕೊಂಡು ಸ್ಕ್ರಾಮ್‌ಜೆಟ್ ಎಂಜಿನ್ ಬಳಸಿಕೊಂಡು ಮೌಲ್ಯಮಾಪಗೊಳಿಸಲಾಗುತ್ತಿದೆ.

ಭೂಮಿಯ ವಾತಾವರಣ

ಭೂಮಿಯ ವಾತಾವರಣ

#6

ಮಾದರಿ ನೌಕೆಯು ಯೋಜಿಸಿರುವ ನೌಕೆಯ ಆರನೇ ಒಂದು ಭಾಗದಷ್ಟಿದೆ. ಇದು ಬಾಹ್ಯಾಕಾಶದಲ್ಲಿ 43 ಮೈಲುಗಳಷ್ಟು ಪ್ರಯಾಣ ಮಾಡಲಿದೆ ಹಾಗೂ ಭೂಮಿಯ ವಾತಾವರಣವನ್ನು ಮರುಪ್ರವೇಶಿಸಲಿದೆ.

ಕಡಿಮೆ ದರ

ಕಡಿಮೆ ದರ

#7

ಪಾಶ್ಚಾತ್ಯ ದೇಶಗಳು ರೆಕ್ಕೆಯುಳ್ಳ ಪುನರ್ಬಳಕೆಯ ಉಡಾವಣಾ ವಾಹನಗಳನ್ನು ರದ್ದುಗೊಳಿಸಿದ್ದರೂ, ಇಸ್ರೋದ ವಿಜ್ಞಾನಿಗಳು ಕಡಿಮೆ ದರದಲ್ಲಿ ಇಂತಹ ಒಂದು ಪ್ರಯೋಗಕ್ಕೆ ಸಿದ್ಧರಾಗಿದ್ದಾರೆ.

ಬಾಹ್ಯಾಕಾಶ ನೌಕೆಯ ಲಾಂಚ್

ಬಾಹ್ಯಾಕಾಶ ನೌಕೆಯ ಲಾಂಚ್

#8

ಎಲ್ಲವೂ ಸುಸೂತ್ರವಾಗಿ ನಡೆದಲ್ಲಿ, ಬಾಹ್ಯಾಕಾಶ ನೌಕೆಯನ್ನು ಲಾಂಚ್ ಮಾಡುವುದು 10 ಪಟ್ಟು ಕಡಿಮೆ ದರದ್ದಾಗಲಿದೆ ಎಂಬುದು ಮೂಲಗಳ ಮಾಹಿತಿಯಾಗಿದೆ.

ಕಡಿಮೆ ದರದ ಯೋಜನೆ

ಕಡಿಮೆ ದರದ ಯೋಜನೆ

#9

ಬಾಹ್ಯಾಕಾಶದಲ್ಲಿ ಕಡಿಮೆ ದರದ ಯೋಜನೆಗಳನ್ನು ತಾನೇ ಲಾಂಚ್ ಮಾಡುವ ಮೂಲಕ ಸ್ಥಾಪನೆಯನ್ನೇ ನಿರ್ಮಸಿದೆ.

ಮಾರ್ಸ್ ಆರ್ಬಿಟರ್ ಮಿಶನ್

ಮಾರ್ಸ್ ಆರ್ಬಿಟರ್ ಮಿಶನ್

#10

2013 ರಲ್ಲಿ ಇಸ್ರೋ ಬರೇ $78 ಮಿಲಿಯನ್‌ಗೆ ಮಾರ್ಸ್ ಆರ್ಬಿಟರ್ ಮಿಶನ್ ಅನ್ನು ಲಾಂಚ್ ಮಾಡಿತ್ತು.

ಹತ್ತನೇ ಒಂದು ಭಾಗ

ಹತ್ತನೇ ಒಂದು ಭಾಗ

#11

ಈ ದರವು ತನ್ನ ಮಾರ್ಸ್ ಮಿಶನ್‌ಗಾಗಿ ನಾಸಾ ವಿನಿಯೋಗಿಸಿದ ಹತ್ತನೇ ಒಂದು ಭಾಗವಾಗಿದೆ ಎಂಬುದು ದಾಖಲೆಗಳಿಂದ ತಿಳಿದು ಬಂದಿರುವ ಅಂಶವಾಗಿದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Indian Space Research Organisation is all set to add another feather in its cap. Come 23 May, and Isro will be launching its first space shuttle, with India becoming the fifth nation to do so.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot