ಭಾರತಕ್ಕೆ ಮತ್ತೊಂದು ಗರಿ..ಇಸ್ರೋ ನಿರ್ಮಿಸಿದ ಸೋಲಾರ್ ಕಾರ್ ಯಶಸ್ವಿ!!

Written By:

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತೊಂದು ಮೈಲಿಗಲ್ಲನ್ನು ನಿರ್ಮಿಸಲು ಮುಂದಾಗಿದೆ.!! ಹೌದು, ಕೆಲವೇ ಕೆಲವು ವರ್ಷಗಳಲ್ಲಿ ಪ್ರಪಂಚದ ಟಾಪ್ ಬಾಹ್ಯಾಕಾಶ ಸಂಸ್ಥೆಗಳ ಸ್ಥಾನದಲ್ಲಿ ಹೆಸರು ಪಡೆದಿರುವ ಇಸ್ರೂ ಇದೀಗ ಮತ್ತೆ ಹೊಸ ಹೊಸ ಬಾಷ್ಯಗಳನ್ನು ಬರೆಯಲು ಸಿದ್ದವಾಗಿದೆ.!!

ಆದರೆ, ಇದು ಬಾಹ್ಯಾಕಾಶ ವಿಜ್ಞಾನದಲ್ಲಲ್ಲ. ಬದಲಾಗಿ ದೇಶೀ ನಿರ್ಮಿತ ಸೋಲಾರ್ ಹೈಬ್ರೀಡ್ ಕಾರ್ ನಿರ್ಮಾಣದಲ್ಲಿ.!! ಹೌದು, ಸಂಪೂರ್ಣ ದೇಶೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಈ ಕಾರನ್ನು ತಯಾರು ಮಾಡಿದ್ದು, ಕಾರಿನ ಯೋಜನೆ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ ಎಂದು ಇಸ್ರೊ ಹೇಳಿದೆ.!!

ಹಾಗಾದರೆ, ಇಸ್ರೊ ನಿರ್ಮಿಸಿರುವ ನೂತನ ಸೂಲಾರ್ ನಿರ್ಮಿತ ಕಾರು ಬೇರೆ ಏನಿಲ್ಲಾ ವಿಶೇಷತೆಗಳನ್ನು ಹೊಂದಿದೆ. ಈ ಕಾರಿನ ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋಲಾರ್ ಕಾರು ಯಶಸ್ವಿ!!

ಸೋಲಾರ್ ಕಾರು ಯಶಸ್ವಿ!!

ಇಸ್ರೋದಿಂದ ತಯಾರಿಸಿರುವ ಮೊದಲ ಹೈಬ್ರೀಡ್ ಕಾರನ್ನು ಸೋಲಾರ್ ಕಾರನ್ನು ತಿರುವನಂತಪುರಂನ ವಿಕ್ರಮ್ ಸಾರಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಪ್ರದರ್ಶಿಸಲಾಗಿದ್ದು, ಈಗಾಗಲೇ ಕಾರಿನ ಚಾಲನೆ ಕೂಡ ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ.!!

ಸಂಪೂರ್ಣ ದೇಶೀ ಸಂಪನ್ಮೂಲ!!

ಸಂಪೂರ್ಣ ದೇಶೀ ಸಂಪನ್ಮೂಲ!!

ಇದೇ ಮೊದಲ ಸಾರಿ ಸಂಪೂರ್ಣ ದೇಶೀಯ ಸಂಪನ್ಮೂಲ ಬಳಸಿಕೊಂಡು ಈ ಕಾರನ್ನು ತಯಾರಿಸಲಾಗುತ್ತಿದೆ. ಈ ರೀತಿಯಾಗಿ ತಯಾರಾಗುತ್ತಿರುವ ಮೊದಲ ದೇಶೀಯ ಹೈಬ್ರೀಡ್ ಕಾರು ಎನ್ನುವ ಖ್ಯಾತಿಗೆ ಈ ಕಾರ್ ಪಡೆಸುಕೊಳ್ಳಲಿದೆ.!!

ಹೈಬ್ರೀಡ್ ಕಾರು ತಯಾರಿಕೆ ಉದ್ದೇಶವೇನು?

ಹೈಬ್ರೀಡ್ ಕಾರು ತಯಾರಿಕೆ ಉದ್ದೇಶವೇನು?

ತೈಲ ಇಂಧನ ಚಾಲಿತ ವಾಹನಗಳು ಜೀವಿಗಳಿಗೆ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುತ್ತಿದ್ದು, ಮಾಲಿನ್ಯ ರಹಿತ ವಾಹನಗಳು ಸಾರಿಗೆ ವ್ಯವಸ್ಥೆಗೆ ಪರಿಚಯವಾಗಬೇಕು ಎಂದು ಇಸ್ರೋ ಈ ಕಾರಿನ ಅಭಿವೃದ್ದಿ ಮಾಡಿರುವುದಾಗಿ ಹೇಳಿದೆ.!!

ಲಿಥಿಯಮ್ ಇಯೋನ್ ಬ್ಯಾಟರಿ!!

ಲಿಥಿಯಮ್ ಇಯೋನ್ ಬ್ಯಾಟರಿ!!

ಅಭಿವೃಧ್ಧಿಪಡಿಸಿರುವ ನೂತನ ಹೈಬ್ರೀಡ್ ಕಾರು ಲಿಥಿಯಮ್ ಇಯೋನ್ ಬ್ಯಾಟರಿಗಳಿಂದ ಕಾರ್ಯನಿರ್ವಹಳೆ ನೀಡಲಿದೆ. ಇನ್ನು ವಿಧ್ಯತ್ ಜೊತೆಗೆ ಸೌರಶಕ್ತಿಯಿಂದಲೂ ಸಹ ಕಾರುಗಳ ಬ್ಯಾಟರಿಯನ್ನು ಚಾರ್ಚ್ ಮಾಡಬಹುದಾಗಿದೆ ಎಂದು ಇಸ್ರೋ ಸಂಸ್ಥೆ ತಿಳಿಸಿದೆ.

 ಕಾರಿನ ದರ ಕಡಿಮೆ ಮಾಡುವುದರ ಬಗ್ಗೆ ಗಮನ!!

ಕಾರಿನ ದರ ಕಡಿಮೆ ಮಾಡುವುದರ ಬಗ್ಗೆ ಗಮನ!!

ನೂತನವಾಗಿ ಹೈಬ್ರೀಡ್ ಕಾರಿನ ನಿರ್ಮಾಣ ಮತ್ತು ಕಾರಿನ ಪ್ರದರ್ಶನ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇಸ್ರೋ ಕಾರಿನ ದರವನ್ನು ಕಡಿಮೆ ಮಾಡುವುದರ ಬಗ್ಗೆ ಗಮನ ಹರಿಸುತ್ತಿದೆ. ಹಾಗಗಿ ಮುಂದಿನ ದಿನಗಳಲ್ಲಿ ಹೈಬ್ರೀಡ್ ಕಾರು ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಲಕ್ಷಣಗಳಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Indian Space Research Organisation (Isro) recently demonstrated a solar hybrid electric car. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot