Subscribe to Gizbot

GSLV ಮಾರ್ಕ್-3 ಯಶಸ್ವಿ ಉಡಾವಣೆ.!..ಪ್ರಜ್ವಲಿಸಿದ ಭಾರತ!!

Written By:

ಇಂದು ಸಂಜೆ 5.28 ನಿಮಿಷಕ್ಕೆ 3136 ಕೆಜಿ ತೂಕದ ಜಿಸ್ಯಾಟ್-19 ಸಂವಹನ ಉಪಗ್ರಹವನ್ನು ಹೊತ್ತ ಹಾರಿದ 'ಜಿಎಸ್‌ಎಲ್‌ವಿ ಮಾರ್ಕ್-3' ಯಶಸ್ವಿಯಾಗಿ ಉಡಾವಣೆಗೊಂಡಿದೆ.! ಹೌದು, ಭಾರತದ ಮೊದಲ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಾಮರ್ಥ್ಯದ 'ಜಿಎಸ್‌ಎಲ್‌ವಿ ಮಾರ್ಕ್ 3' ತನ್ನ ಗುರಿ ಮಟ್ಟಿದೆ.!!

ಜಿಎಸ್‌ಎಲ್‌ವಿ ಮಾರ್ಕ್-3 ಉಡಾವಣೆಯಾದ 16ನೇ ನಿಮಿಷಕ್ಕೆ ಯಶಸ್ವಿಯಾಗಿದ್ದು, ಅಮೆರಿಕಾ, ರಷ್ಯಾ ಮತ್ತು ಚೀನಾ ಮಾತ್ರ ಸಾಧಿಸಿದ್ದ ಹಾದಿಗೆ ಭಾರತದ ಅವಕಾಶದ ಬಾಗಿಲು ತೆರೆದಿದೆ. ಹಾಗಾಗಿ, ತಮ್ಮದೇ ಉಡಾವಣಾ ವಾಹಕದಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಾಮರ್ಥ್ಯವನ್ನು ಭಾರತವು ಸಾಧಿಸಿದೆ.!!

 GSLV ಮಾರ್ಕ್-3 ಯಶಸ್ವಿ ಉಡಾವಣೆ.!..ಪ್ರಜ್ವಲಿಸಿದ ಭಾರತ!!

43 ಮೀಟರ್ ಉದ್ದ, ಸುಮಾರು 200 ಆನೆಗೂ ಹೆಚ್ಚು ತೂಕವನ್ನು ಹೊಂದಿರುವ ಮತ್ತು ಏಕಕಾಲಕ್ಕೆ 4 ಟನ್ ತೂಕದ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲ ಜಿಎಸ್‌ಎಲ್‌ವಿ ಮಾರ್ಕ್-3 ಈ ಉಡಾವಣೆ ಯಶಸ್ವಿಯಾಗಿದ್ದು, ಭಾರತದ ಗಗನಯಾತ್ರಿ ಬಾಹ್ಯಾಕಾಶ ಯಾತ್ರೆಗೆ ಇದು ಪ್ರಮುಖ ಹೆಜ್ಜೆಯಾಗಿದೆ.!!

 GSLV ಮಾರ್ಕ್-3 ಯಶಸ್ವಿ ಉಡಾವಣೆ.!..ಪ್ರಜ್ವಲಿಸಿದ ಭಾರತ!!

ಭಾರತವು ಮುಂದಿನ 10 ರಿಂದ 15 ವರ್ಷಗಳಲ್ಲಿ ಅಂತರಿಕ್ಷಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಉದ್ದೇಶಕ್ಕೆ ಕ್ರಯೋಜನಿಕ್ ಎಂಜಿನ್ ಹೊಂದಿರು 'ಜಿಎಸ್‌ಎಲ್‌ವಿ ಮಾರ್ಕ್-3' ಯಶಸ್ವಿ ಮೊದಲ ಹೆಜ್ಜೆಯಾಗಿದ್ದು, ಇನ್ನು ಭಾರತದ ಭವಿಷ್ಯ ಮತ್ತಷ್ಟು ಪ್ರಜ್ವಲಿಸಿದೆ.!!

English summary
GSLV MkIII powered by indigenous high thrust cryogenic engine. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot