TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಮಂಗಳ ಗ್ರಹದ ಬಗ್ಗೆ ಸಾಕಷ್ಟು ಅಧ್ಯಾಯನ ನಡೆಸುವ ಸಲುವಾಗಿ, ರೋವರ್ ಅನ್ನು ಮಂಗಳನ ಅಂಗಳಕ್ಕೆ ಇಳಿಸಿದ್ದ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ, ಮತ್ತೊಂದು ಹೊಸ ಪ್ರಾಜೆಕ್ಟ್ ಆಂಭಿಸಿದೆ. ಶೀಘ್ರವೇ ಮಂಗಳನ ಅಂಗಳಕ್ಕೆ ಹೆಲಿಕಾಪ್ಟರ್ ಅನ್ನು ಕಳುಹಿಸಲು ಮುಂದಾಗಿದ್ದು, ಇದರ ಸಹಾಯದಿಂದ ಮಂಗಳನ ಅಂಗಳದ ಚಿತ್ರಗಳನ್ನು ಸೆರೆಹಿಡಿಯಲಿದೆ ಎನ್ನಲಾಗಿದೆ.
2020ರ ಜುಲೈನಲ್ಲಿ ಮಂಗಳಗ್ರಹಕ್ಕೆ ಮತ್ತೊಂದು ರೋವರ್ ನೊಂದಿಗೆ ಜೊತೆಗೆ ಹೆಲಿಕಾಪ್ಟರ್ ಕಳುಹಿಸಲು ನಾಸಾ ಸಿದ್ಧತೆ ನಡೆಸಿದೆ. ಈಗಾಗಲೇ ನಾಸಾ ಡ್ರೋನ್ ಮಾದರಿಯ ಹೆಲಿಕಾಪ್ಟರ್ ಅನ್ನು ಸಿದ್ಧಪಡಿಸಿದ್ದು, ಅದರ ಪರೀಕ್ಷೆಯನ್ನು ನಡೆಸುತ್ತಿದೆ. ಈ ಬಗ್ಗೆ ವಿಡಿಯೋವನ್ನು ಸಹ ಬಿಡುಗಡೆ ಮಾಡಿದೆ.
ಮಾರ್ಸ್ 2020:
ಈಗಾಗಲೇ ಮಂಗಳ ಅಂಗಳವನ್ನು ತಲುಪಲು ಅಮೆರಿಕಾ ಮತ್ತು ಭಾರತ ಸ್ಪರ್ಧೆಯನ್ನು ನಡೆಸುತ್ತಿದ್ದು, ಇದರ ಮಧ್ಯದಲ್ಲಿಯೇ ಸ್ಪೇಸ್ X ಖಾಸಗಿ ಸಂಸ್ಥೆಯೂ ಮಂಗಳ ಅಂಗಳಕ್ಕೆ ಮಾನವವನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿದೆ. ಇದೇ ಹಿನ್ನಲೆಯಲ್ಲಿ ನಾಸಾ ಮಾರ್ಸ್ 2020 ಮಿಷನ್ ಆರಂಭಿಸಿದೆ.
ಫೋಟೋ ಕ್ಲಿಕಿಸಲು:
ಮಾರ್ಸ್ 2020 ರೋವರ್ ಮಿಷನ್ ಯೋಜನೆಯಲ್ಲಿ ನಾಸಾ ಡ್ರೋನ್ ಮಾದರಿಯ ಹೆಲಿಕಾಪ್ಟರ್ ವೊಂದನ್ನು ಹಾರಿಸಲಿದೆ ಎನ್ನಲಾಗಿದೆ. ಇದು ಮಂಗಳ ಅಂಗಳದ ಪರಿಚಯವನ್ನು ವಿಜ್ಞಾನಿಗಳಿಗೆ ತೋರಿಸಿಕೊಡಲಿದೆ ಎನ್ನಲಾಗಿದೆ. ಇದು ಮಂಗಳದ ವಾತಾವರಣಕ್ಕೆ ಹೊಂದಿ ಕೊಂಡು ಕಾರ್ಯನಿರ್ವಹಿಸಲಿದೆ.
ಮೊದಲ ಪ್ರಯತ್ನ:
ನಾಸಾ ಇದೇ ಮೊದಲ ಬಾರಿಗೆ ಅನ್ಯ ಗ್ರಹದಲ್ಲಿ ಹೆಲಿಕಾಪ್ಟರ್ ಹಾರಿಸುವ ಯೋಜನೆಯನ್ನು ರೂಪಿಸಿದ್ದು, ಭಾರೀ ಕುತೂಹಲವನ್ನು ಕೆರಳಿಸಿದೆ. ಇದು ಮುಂದಿನ ಪ್ರಯೋಗಗಳಿಗೆ ಮುನ್ನುಡಿಯಾಗಲಿದೆ. ಮಂಗಳನ ಅಂಗಳದಲ್ಲಿರುವ ಕುತೂಹಲಗಳಿಗೆ ತೆರೆಎಳೆಯುವ ಸಾಧ್ಯತೆಗಳಿದೆ.
ರೋವರ್ ಜೊತೆಗೆ:
ರೋವರ್ ನೊಂದಿಗೆ ಮಂಗಳನ ಅಂಗಳಕ್ಕೆ ಸಾಗುವ ಹೆಲಿಕಾಪ್ಟರ್, ರೋವರ್ ನೊಂದಿಗೆ ಕಾರ್ಯನಿರ್ವಹಿಸಲಿದೆ. ಮಂಗಳ ಗ್ರಹದಲ್ಲಿ ಹಾರಾಟ ನಡೆಸಿ, ದತ್ತಾಂಶಗಳನ್ನು ರೋವರ್‌ಗೆ ತಲುಪಿಸಲಿದ್ದು, ಎರಡನ್ನು ವಿಜ್ಞಾನಿಗಳು ಭೂಮಿಯೊಂದಲೇ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.
ವಿನ್ಯಾಸ:
ಮಂಗಳನಲ್ಲಿ ಹಾರುವ ಹೆಲಿಕಾಪ್ಟರ್ ಕೊಂಚ ಭಿನ್ನವಾಗಿದ್ದು, ಅತೀ ತಾಪಮಾನ ಮತ್ತು ಅತೀ ಶೀತದ ಸಂದರ್ಭದಲ್ಲಿಯೂ ಹಾನಿಯಾಗದಂತೆ ನಿರ್ಮಿಸಲಾಗಿದೆ. 1.8 Kg ತೂಕವಿರುವ ಹೆಲಿಕಾಪ್ಟರ್, ಸೋಲಾರ್ ಸೆಲ್ ಗಳ ಚಾರ್ಜಿಂಗ್ ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸಲಿದೆ. ಟವರ್ ಮಾದರಿಯ ವಿನ್ಯಾಸ ಹೊಂದಿದ್ದು, ಮಧ್ಯಭಾಗದಲ್ಲಿ ರೆಕ್ಕೆಗಳನ್ನು ಹೊಂದಿದೆ.