ಮಂಗಳ ಗ್ರಹಕ್ಕೆ ರೋಬೋಟ್‌ಗಳ ಪ್ರಯಾಣ: ನಾಸಾದಿಂದ ನೋಂದಣಿ ಆರಂಭ

Written By:

ಮಂಗಳ ಗ್ರಹಕ್ಕೆ ಹೋಗುವ ಗಗನಯಾತ್ರಿಗಳಿಗೆ ಸಹಾಯ ಮಾಡುವಂತಹ, ಮಾನವನಂತೆಯೇ ಕಾಣುವ ರೋಬೋಟ್‌ಗಳನ್ನು ಅಭಿವೃದ್ದಿ ಪಡಿಸುವ 'ಸ್ಪೇಸ್‌ ರೋಬೋಟಿಕ್‌ ಚಾಲೆಂಜ್‌' ಸ್ಪರ್ಧೆಗೆ ನಾಸಾ ನೋಂದಣಿ ಪ್ರಾರಂಭಿಸಿದೆ. ನಾಸಾವು ನೋಂದಣಿ ಆರಂಭಿಸಿರುವ ಈ ಸ್ಪರ್ಧೆಯು $1 ದಶಲಕ್ಷ ಬಹುಮಾನ ನೀಡುವುದಾಗಿದೆ.

ಮಂಗಳ ಗ್ರಹಕ್ಕೆ ರೋಬೋಟ್‌ಗಳ ಪ್ರಯಾಣ: ನಾಸಾದಿಂದ ನೋಂದಣಿ ಆರಂಭ

ಅಂದಹಾಗೆ 'ಸ್ಪೇಸ್‌ ರೋಬೋಟಿಕ್‌ ಚಾಲೆಂಜ್‌' ಸ್ಪರ್ಧೆಯನ್ನು ಹಮ್ಮಿಕೊಂಡಿರುವುದು ರೋಬೋಟ್‌ಗಳ ದಕ್ಷತೆಯನ್ನು ಇನ್ನೂ ಹೆಚ್ಚುಗೊಳಿಸುವುದಾಗಿದೆ ಎಂದು ನಾಸಾ ಹೇಳಿದೆ. ವಿಶೇಷವೆಂದರರೆ ಟೆಕ್ನಾಲಜಿ ಆಧಾರಿತವಾದ ರೋಬೋಟ್‌ಗಳು ಈ ಸ್ಪರ್ಧೆಯಲ್ಲಿ ಮಂಗಳ ಗ್ರಹಕ್ಕೆ ಹೋಗುವುದರ ಬಗ್ಗೆ ಮುನ್ಸೂಚನೆ, ವಾಸಿಸಲು ಯೋಗ್ಯ ಪ್ರದೇಶಗಳನ್ನು ಆಯ್ಕೆ ಮಾಡುವುದು, ಗಗನಯಾತ್ರಿಗಳಿಗಿಂತ ಮುಂಚಿತವಾಗಿ ಹೋಗಿ ವಾಸಸ್ಥಾನ ವ್ಯವಸ್ಥೆ ಮಾಡುವುದು, ಲೈಫ್‌ ಸಪೋರ್ಟ್‌ ಸಿಸ್ಟಮ್‌, ಸಂವಹನ ಮತ್ತು ಸೋಲಾರ್ ಉಪಕರಣಗಳು, ಪ್ರಾಥಮಿಕ ಹಂತದ ವೈಜ್ಞಾನಿಕ ಸಂಶೋಧನೆ ಆರಂಭಿಸುವ ಚಟುವಟಿಕೆಗಳನ್ನು ಮಾಡಬಹುದಾಗಿದೆ.

'ಸ್ಪೇಸ್‌ ರೋಬೋಟಿಕ್‌ ಚಾಲೆಂಜ್‌' ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ವಾಸ್ತವಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಬೇಕು, ಅಲ್ಲದೇ ಸ್ಪರ್ಧೆಯಲ್ಲಿನ ಸರಣಿ ಟಾಸ್ಕ್‌ಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.

ಮಂಗಳ ಗ್ರಹಕ್ಕೆ ರೋಬೋಟ್‌ಗಳ ಪ್ರಯಾಣ: ನಾಸಾದಿಂದ ನೋಂದಣಿ ಆರಂಭ

ಹೈಡ್ರಾಲಿಕ್ಸ್‌ ಬಳಸಿಕೊಂಡು ಕೆಲವು ಭೂಮಿ ಆಧಾರಿತ ರೋಬೋಟ್‌ಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಈ ರೋಬೋಟ್‌ಗಳನ್ನು ಸ್ಪೇಸ್‌ನಲ್ಲಿ ಬಳಸಲು ಆಗುವುದಿಲ್ಲ, ಕಾರಣ ಕರಗುವ ತಾಪಮಾನ ಮತ್ತು ಕಠಿಣ ಪರಿಸರದ ಮೇಲ್ಮೈ ಗ್ರಹದಲ್ಲಿ ಇವುಗಳನ್ನು ಬಳಸಲು ಸಾಧ್ಯವಿಲ್ಲ.

ಮಂಗಳ ಗ್ರಹಕ್ಕೆ ರೋಬೋಟ್‌ಗಳ ಪ್ರಯಾಣ: ನಾಸಾದಿಂದ ನೋಂದಣಿ ಆರಂಭ

ಸ್ಪರ್ಧೆಗೆ ರೋಬೋಟ್‌ಗಳ ಅರ್ಹತೆಯನ್ನು ಪರಿಶೀಲನೆ ನಡೆಸುವ ಸುತ್ತು ಸೆಫ್ಟೆಂಬರ್ ಮಧ್ಯಾಂತರದಿಂದ ನವೆಂಬರ್‌ ಮಧ್ಯಾಂತರದಲ್ಲಿ ನಡೆಯಲಿದೆ. ಸ್ಪರ್ಧೆಯ ಅಂತಿಮ ಸುತ್ತು ಯಾವಾಗ ನಡೆಯಲಿದೆ ಎಂದು ಡಿಸೆಂಬರ್‌ನಲ್ಲಿ ಪ್ರಕಟಣೆ ನೀಡಲಾಗುತ್ತದೆ. ನಂತರ 2017 ರ ಜನವರಿ ತಿಂಗಳಿನಿಂದ ಜೂನ್ ತಿಂಗಳವರೆಗೆ ತರಬೇತಿ ನಡೆಯುತ್ತದೆ. ಜೂನ್‌ ತಿಂಗಳಲ್ಲಿ ವಾಸ್ತವ 'ಸ್ಪೇಸ್‌ ರೋಬೋಟಿಕ್ಸ್‌ ಚಾಲೆಂಜ್‌' ಸ್ಪರ್ಧೆ ನೆಡೆಯಲಿದೆ.

ನಾಸಾದಿಂದ ಮಂಗಳ ಗ್ರಹದಲ್ಲಿ ನಗರ ಪತ್ತೆ!

Read more about:
English summary
NASA opens registration to prepare robots for Mars journey. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot