ಭೂಮಿಯನ್ನು ಬಾಹ್ಯಕಾಶಕ್ಕೆ ಸಂಪರ್ಕಿಸಲು ನಾಸಾ ಮಾಡುತ್ತಿರುವುದೇನು..?

|

ಇಂದಿನ ದಿನದಲ್ಲಿ ಕೃತಕ ಬುದ್ದಿಮತ್ತೆ ಕುರಿತಂತೆ ಸಾಕಷ್ಟು ಸುದ್ದಿಗಳು ಹೊರಬರುತ್ತಿದೆ. ಗೂಗಲ್ ಫೇಕ್ ಆಪ್‌ಗಳನ್ನು ಗುರುತಿಸಲು ಕೃತಕ ಬುದ್ದಿಮತ್ತೆ ಬಳಕೆ ಮಾಡಿಕೊಳ್ಳುತ್ತಿದ್ದರೆ, ವಿವಿಧ ಸ್ಮಾರ್ಟ್‌ಫೋನ್‌ಗಳು ತಮ್ಮ ಕ್ಯಾಮೆರಾದಲ್ಲಿ ಉತ್ತಮ ಫೋಟೋಗಳನ್ನು ಸೆರೆಹಿಡಿಯುವಂತೆ ಮಾಡಲು ಕೃತಕ ಬುದ್ದಿಮತ್ತೆ ಸಹಾಯವನ್ನು ಪಡೆಯುತ್ತಿರುವುದು ಇದಕ್ಕೆ ಉದಾಹರಣೆ ಎನ್ನಬಹುದಾಗಿದೆ.

ಭೂಮಿಯನ್ನು ಬಾಹ್ಯಕಾಶಕ್ಕೆ ಸಂಪರ್ಕಿಸಲು ನಾಸಾ ಮಾಡುತ್ತಿರುವುದೇನು..?

ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಇನ್ನು ಮುಂದೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇರಲ್ಲ..! ಬದಲಾಗಲಿದೆ.!

ಆದರೆ ಇವು ನಮ್ಮ-ನಿಮ್ಮ ದಿನನಿತ್ಯದ ಅನುಭವದಲ್ಲಿ ಕಾಣಸಿಗುವ ಕೃತಕ ಬುದ್ದಿಮತ್ತೆಯ ಉಪಯೋಗಳಾಗಿದೆ ಆದರೆ ಇದಕ್ಕೂ ಮೀರಿದಂತೆ ಕೃತಕ ಬುದ್ದಿಮತ್ತೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಇದು ಮುಂದಿನ ದಿನದಲ್ಲಿ ನಮ್ಮ ನಿತ್ಯದ ಜೀವನ ವಿಧಾನವನ್ನು ಬದಲಾಯಿಸಲಿದೆ. ಇದಕ್ಕಾಗಿ ಕೃತಕ ಬುದ್ದಿಮತ್ತೆಯನ್ನು ನಾಸಾ ತನ್ನ ಸಹಾಯಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗಿದೆ.

ಮುಂದಿನ ತಲೆಮಾರು:

ಮುಂದಿನ ತಲೆಮಾರು:

ಈಗಾಗಲೇ ಕೃತಕ ಬುದ್ದಿಮತ್ತೆ ಎಲ್ಲೇಡೆ ಆವರಿಸಿಕೊಳ್ಳುತ್ತಿದ್ದು, ಮುಂದಿನ ಶತಮಾನ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯದ್ದೇ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ನಿಧಾನವಾಗಿ ಈ ತಂತ್ರಜ್ಞಾನ ಎಲ್ಲ ಕ್ಷೇತ್ರಗಳಲ್ಲೂ ಅವರಿಸಿಕೊಳ್ಳುತ್ತಿದ್ದು, ಮುಂದಿನ ದಿನದಲ್ಲಿ ಬಹುತೇಕ ಕಡೆ ಕೃತಕ ಬುದ್ದಿಮತ್ತೆ ಬಳಕೆಯಾಗಲಿದೆ.

ಬಾಹ್ಯಾಕಾಶಕ್ಕೂ ಕೃತಕ ಬುದ್ದಿಮತ್ತೆ:

ಬಾಹ್ಯಾಕಾಶಕ್ಕೂ ಕೃತಕ ಬುದ್ದಿಮತ್ತೆ:

ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಸಹಾಯದಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸತನವನ್ನು ಮಾಡಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಮುಂದಾಗಿದೆ. ಭೂಮಿ-ಬಾಹ್ಯಕಾಶದ ನಡುವೆ ಸಂಪರ್ಕಸೇತುವಾಗಿ ಕೃತಕ ಬುದ್ದಿಮತ್ತೆಯನ್ನು ಬಳಸಿಕೊಳ್ಳಲಿದೆ ಎನ್ನುವ ಮಾತು ಕೇಳಿಬಂದಿದೆ.

ಸಂವಹನಕ್ಕೆ  ಕೃತಕ ಬುದ್ದಿಮತ್ತೆ;

ಸಂವಹನಕ್ಕೆ ಕೃತಕ ಬುದ್ದಿಮತ್ತೆ;

ಭೂಮಿ ಮತ್ತು ಬಾಹ್ಯಾಕಾಶ ನೌಕೆ ನಡುವಿನ ಸಂವಹನವನ್ನು ನಡೆಸುವ ಕಾರ್ಯಕ್ಕೆ ಕೃತಕ ಬುದ್ದಿಮತ್ತೆಯನ್ನು ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂಬುದರ ಕುರಿತು ನಾಸಾ ಅಧ್ಯಯನವನ್ನು ಮಾಡುತ್ತಿದೆ ಎನ್ನಲಾಗಿದೆ. ಈ ಹೊಸ ಪ್ರಯತ್ನ ಇಸ್ರೋ ಸೇರಿದಂತೆ ಬೇರೆ ಬೇರೆ ಕಂಪನಿಗಳಿಗೆ ಸೂರ್ತಿಯನ್ನು ನೀಡಲಿದೆ ಎನ್ನಲಾಗಿದೆ.

ಹೊಸ ಗ್ರಹಗಳ ಹುಡುಕಾಟಕ್ಕೆ:

ಹೊಸ ಗ್ರಹಗಳ ಹುಡುಕಾಟಕ್ಕೆ:

ಭೂಮಿಯ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಇತರೆ ಗ್ರಹಗಳನ್ನು ಕಂಡುಹಿಡಿಯುವ ಸಲುವಾಗಿ ಕೃತಕ ಬುದ್ದಿಮತ್ತೆಯನ್ನು ನಾಸಾ ಬಳಸಿಕೊಳ್ಳಲಿದೆ. ಈಗಾಗಲೇ ಈ ಕಾರ್ಯವೂ ಶುರುವಾಗಿದೆ ಎನ್ನಲಾಗಿದೆ.

Best Mobiles in India

English summary
NASA using artificial intelligence. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X