Just In
Don't Miss
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Movies
"ಕಾಂತಾರ' ಯಾಕೆ ಆಸ್ಕರ್ಗೆ ನಾಮಿನೇಟ್ ಆಗ್ಲಿಲ್ಲ ಅಂದ್ರೆ? ಸೀಕ್ವೆಲ್ಗೆ ಪ್ರಶಸ್ತಿ ಗ್ಯಾರೆಂಟಿ": ವಿಜಯ್ ಕಿರಗಂದೂರ್
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೈಜ್ಞಾನಿಕ ಕಾದಂಬರಿಗಳಲ್ಲಿ ಹೇಳಲಾದ ಇಂದಿನ ಪ್ರಖ್ಯಾತ ಟೆಕ್ನಾಲಜಿಗಳು
ಮಾನವ ಇಂದು ಟೆಕ್ನಾಲಜಿ ಎಂಬ ಡೈಮೆಂಡ್ ಯುಗದಲ್ಲಿ ಬದುಕುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ನೆನಪಿಡಬೇಕಾದ ವಿಷಯ ಅಂದ್ರೆ ಇಂದಿನ ಎಲ್ಲಾ ಟೆಕ್ನಾಲಜಿಗಳು ಸಹ ಹಿಂದಿನ ಪ್ರಖ್ಯಾತ ವೈಜ್ಞಾನಿಕ ಕಾದಂಬರಿಗಳ ಆಧಾರದಿಂದ ಅಭಿವೃದ್ದಿಗೊಂಡಿರುವ ಬಗ್ಗೆ.
ಇಲೆಕ್ಟ್ರಿಕ್ ಕಾರುಗಳು, ಇತರೆ ಗ್ರಹಗಳ ಮೇಲೆ ವಾಸಿಸಲು ಸಜ್ಜಾಗುತ್ತಿರುವುದು, ಫ್ಲೈಯಿಂಗ್ ಕಾರುಗಳು ಮತ್ತು ಇತರೆ ಗ್ಯಾಜೆಟ್‌ಗಳ ಕಲ್ಪನೆಗಳೆಲ್ಲವೂ ಸಹ ವೈಜ್ಞಾನಿಕ ಕಾದಂಬರಿಕಾರರ ಕಲ್ಪನೆಗಳಾಗಿವೆ. ಅಂದಹಾಗೆ ಇಂದಿನ ಲೇಖನದಲ್ಲಿ ಅಂದು ವೈಜ್ಞಾನಿಕ ಕಾದಂಬರಿಯಲ್ಲಿ ಹೇಳಲಾಗಿ ಅಭಿವೃದ್ದಿಗೊಂಡಿರುವ ಅತ್ಯಾಧುನಿಕ ಟೆಕ್ನಾಲಜಿಗಳು ಯಾವುವು ಎಂದು ತಿಳಿಸುತ್ತಿದ್ದೇವೆ. ಅವುಗಳು ಯಾವುವು ಎಂದು ಲೇಖನದ ಸ್ಲೈಡರ್ ಕ್ಲಿಕ್ಕಿಸಿ ಓದಿರಿ.
ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ಸಂವಹನ ಉಪಗ್ರಹಗಳು
1945 ರಲ್ಲಿ ವೈಜ್ಞಾನಿಕ ಕಾದಂಬರಿಕಾರ 'ಅರ್ಥರ್ ಸಿ. ಕ್ಲಾರ್ಕ್' ರವರು ಸಂವಹನ ಉಪಗ್ರಹಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅಂದು ತಿರಸ್ಕರಿಸಲಾದ ಅವರ ಸಂವಹನ ಉಪಗ್ರಹಗಳ ಪರಿಕಲ್ಪನೆ ಇಂದು ನೈಜವಾಗಿ ಅಭಿವೃದ್ದಿಗೊಂಡು ಬಾಹ್ಯಾಕಾಶಕ್ಕೆ ಸಂವಹನ ಉಪಗ್ರಹಗಳನ್ನು ಕಳುಹಿಸಲಾಗಿದೆ.

ರಿಯಲ್ ಟೈಮ್ ಆಡಿಯೋ ಭಾಷಾಂತರ
ರಿಯಲ್ ಟೈಮ್ ಭಾಷಾಂತರವನ್ನು 2014 ರಿಂದಲೂ ಸಹ ಮೈಕ್ರೋಸಾಫ್ಟ್ ರಿಯಲ್ ಟೈಮ್ ಭಾಷಾಂತರವನ್ನು ಅಭಿವೃದ್ದಿಪಡಿಸುವುದರಲ್ಲಿ ಕಾರ್ಯನಿರತವಾಗಿದೆ. ಮೈಕ್ರೋಸಾಫ್ಟ್ ರಿಯಲ್ ಟೈಮ್ ಭಾಷಾಂತರವನ್ನು ವೀಡಿಯೊ ಕರೆ, ವಾಯ್ಸ್ ಕರೆಗಳ ಸೇವೆಯನ್ನು ನೀಡುವ 'ಸ್ಕೈಪಿ' ಆಪ್‌ನಲ್ಲಿ ಅಭಿವೃದ್ದಿಪಡಿಸುತ್ತಿದೆ. ಪ್ರಸ್ತುತದಲ್ಲಿ ಸ್ಪ್ಯಾನಿಷ್ ಮತ್ತು ಇಂಗ್ಲೀಷ್ ಭಾಷೆಗಳ ರಿಯಲ್ ಟೈಮ್ ಭಾಷಾಂತರ ಫೀಚರ್ ಇದೆ.

ಇಯರ್‌ಬಡ್ಸ್
ಸಾಂಪ್ರಾದಾಯಿಕವಾಗಿ ಈಗ ಐಪಾಡ್‌ನಲ್ಲಿ ಬಳಸುವ ಬಿಳಿ ಇಯರ್‌ಬಡ್ಸ್ ಎಲ್ಲೆಡೆ ಪ್ರಖ್ಯಾತಗೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅಂದಹಾಗೆ ಇಯರ್‌ಬಡ್ಸ್ ಬಗ್ಗೆ ಕಾಲ್ಪನಿಕ ವಿಜ್ಞಾನದಲ್ಲಿ ಪದೇ ಪದೇ ಹೇಳಲಾದ ಆಧುನಿಕ ಗ್ಯಾಜೆಟ್‌ಗಳ ಪ್ರೇರೇಪಣೆಯೇ ಇಂದಿನ ಇಯರ್‌ಬಡ್ಸ್‌ಗಳಾಗಿವೆ. ಆದರೆ ಜಾಗತಿಕ ಮಾರುಕಟ್ಟೆಗೆ 1980 ರಲ್ಲಿ ಇಯರ್‌ಬಡ್ಸ್‌ಗಳು ದಾಪುಗಾಲಿರಿಸಿದವು.

ಚಂದ್ರನ ಮೇಲೆ ಪಾದಾರ್ಪಣೆ
ಜೂಲ್ಸ್ ವರ್ನ್'ರವರು 19ನೇ ಶತಮಾನದ ಪ್ರಖ್ಯಾತ ಅನ್ವೇಷಣೆಯ ಸೃಜನಶೀಲ ಚಿಂತನೆಗಳನ್ನು ಹೊಂದಿದ್ದವರು. ಇವರ ' From The Earth To The Moon' ಎಂಬ ಭವಿಷ್ಯವಾಣಿ ಹೊಂದಿದ್ದ ವೈಜ್ಞಾನಿಕ ಕಾದಂಬರಿ ಕಲ್ಪನೆ ನೈಜವಾಗಿ ಮಾನವ ಚಂದ್ರನ ಮೇಲೆ ಹೋಗಲು ಪ್ರೇರೇಪಣೆ ಹೊಂದಿತು.

ಇಲೆಕ್ಟ್ರಿಕ್ ಕಾರುಗಳು
ಜಾನ್ ಬ್ರುನ್ನರ್'ರವರ 1968 ರ 'ಸ್ಟ್ಯಾಂಡ್ ಆನ್ ಜಾನ್‌ಜಿಬಾರ್' ಕಾದಂಬರಿಯ ಹೆಚ್ಚಿನ ಪುಟಗಳಲ್ಲಿ 2010 ರ ಜಗತ್ತಿನ ಕಲ್ಪನೆಯ ಬಗ್ಗೆ ಹೇಳಲಾಗಿತ್ತು. ಅದರಲ್ಲಿ ಅವರು ಹೋಂಡಾ ಕಂಪನಿ ಇಲೆಕ್ಟ್ರಿಕ್ ಕಾರನ್ನು ತಯಾರು ಮಾಡುವ ಮುಂಚೂಣಿ ಕಂಪನಿಯಾಗಲಿದೆ ಎಂದು ಅವರು ಹೇಳಿದ್ದರು. ಅಲ್ಲದೇ ಆನ್‌ಲೈನ್ ಡಿಜಿಟಲ್ ಅವತಾರ್ ಬಗ್ಗೆ ಸಹ ಪ್ರಸ್ತಾಪ ಮಾಡಿದ್ದರು. ಇಂದು ದಿನದಿಂದ ದಿನಕ್ಕೆ ಇಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ.

ವೀಡಿಯೋ ಗೇಮ್ ವಾರ್‌ಫೇರ್
ಇಂದು ಪೈಲಟ್ ಇಲ್ಲದ ಯುದ್ಧ ವಿಮಾನಗಳನ್ನು ಸಹ ಅಭಿವೃದ್ದಿಪಡಿಸಲಾಗಿದೆ. ಅಲ್ಲದೇ ಮೊದಲ ವಾರ್‌ಫೇರ್ ವೀಡಿಯೋ ಗೇಮ್ 'ವಿಯೆಟ್ನಾಂ' ಆಗಿತ್ತು. ಈ ಬಗ್ಗೆ ಆರ್ಸನ್ ಸ್ಕಾಟ್ ಕಾರ್ಡ್'ರವರು 1985 ರಲ್ಲಿ ತಮ್ಮ 'ಎಂಡರ್ ಗೇಮ್ಸ್' ಕಾದಂಬರಿಯಲ್ಲಿ ಹೇಳಿದ್ದರು.

ವೀಡಿಯೋ ಚಾಟ್
ಮೊಟ್ಟ ಮೊದಲ ಬಾರಿಗೆ ಫೇಸ್‌ಟೆಲಿಫೋನ್ ಬಗ್ಗೆ AT&T ರವರಿಂದ '1964 World's Fair' ಎಂಬ ಕಾದಂಬರಿಯಿಂದ ಪರಿಚಯವಾಗಿತ್ತು. ಇಂದಿನ ಸ್ಕೈಪಿ ಆಪ್‌ನಲ್ಲಿನ ವೀಡಿಯೋ ಚಾಟಿಂಗ್ ಬಗ್ಗೆ AT&T ರವರ ಕಾದಂಬರಿಯಲ್ಲಿ ಹೇಳಲಾಗಿತ್ತು. ಅಲ್ಲದೇ 1911 ರಲ್ಲಿ ಹ್ಯೂಗೊ ಜರ್ನ್ಸ್‌ಬ್ಯಾಕ್'ರವರ 'Ralph 124C 41+' ಕಾದಂಬರಿಯಲ್ಲೂ ಸಹ ವೀಡಿಯೋ ಚಾಟಿಂಗ್ ಮತ್ತು ಆಧುನಿಕ ಟೆಕ್ನಾಲಜಿ ಬಗ್ಗೆ ಹೇಳಲಾಗಿತ್ತು.

ನ್ಯಾನೋ ಟೆಕ್ನಾಲಜಿ
ನ್ಯಾನೋ ಟೆಕ್ನಾಲಜಿ ಕಲ್ಪನೆಯನ್ನು ಮೊದಲಿಗೆ 1950ರಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಆದರೆ 1986 ರಲ್ಲಿ ನೀಲ್ ಸ್ಟೆಫೆನ್‌ಸನ್'ರವರ 'ದಿ ಡೈಮೆಂಡ್ ಏಜ್' ಕಾದಂಬರಿಯಲ್ಲಿ ನ್ಯಾನೋ ಟೆಕ್ನಾಲಜಿಯ ಹೆಚ್ಚಿನ ಸಾಧ್ಯತೆಗಳ ಬಗ್ಗೆ ವಿವರಿಸಲಾಗಿತ್ತು.

ಗಿಜ್‌ಬಾಟ್

ಓದಿರಿ ಗಿಜ್‌ಬಾಟ್ ಲೇಖನಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470