ಅಚ್ಚರಿ: ಈತನ ಕೃತಕ ಕೈಯಲ್ಲಿದೆ ಡ್ರೋನ್, ಫೋನ್ ಬ್ಯಾಟರಿ ಚಾರ್ಜರ್

By Shwetha
|

ಇಂದಿನ ಲೇಖನದಲ್ಲಿ ನಾವು ಹೇಳಹೊರಟಿರುವುದು 26 ಹರೆಯದ ಯುವಕ ರೈಲಿನ ಅಡಿಯಲ್ಲಿ ಬಿದ್ದು ತನ್ನ ಎಡಗೈ ಕಳೆದುಕೊಂಡು ನಂತರ ಆತ ಇದಕ್ಕಾಗಿ ಏನು ಮಾಡಿದ ಎಂಬುದರ ಕಥೆಯನ್ನಾಗಿದೆ. ಈತ ಹೆಚ್ಚಿನ ಗಾಯಗಳನ್ನು ಈ ಅಪಘಾತದಲ್ಲಿ ಹೊಂದಿದ್ದರೂ ಕುಸಿದ ಶ್ವಾಸಕೋಶ, ಮುರಿದ ತಲೆಬುರುಡೆ ಮುಖದ ಸ್ನಾಯು ಮುರಿತಗಳು ಮತ್ತು ಬಿರುಕು ಇದರ ಜೊತೆಗೆ ಎಡಗೈ ನಷ್ಟ ಇದಿಷ್ಟು ಅಪಘಾತ ಆತನಿಗೆ ನೀಡಿದ ವರಗಳು.

ಈ ಅಪಘಾತ ಸಂಭವಿಸಿದಾಗ ಜೇಮ್ಸ್‌ಗೆ 22 ರ ಹರೆಯ ರಾತ್ರಿ ವೇಳೆಯಲ್ಲಿ ಸ್ನೇಹಿತರೊಂದಿಗೆ ಸುತ್ತಾಡ ನಡೆಸುತ್ತಿದ್ದಾಗ ಉಂಟಾದ ಅಪಘಾತ ಇದಾಗಿತ್ತು. ಪ್ಲಾಟ್‌ಫಾರ್ಮ್ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ರೈಲು ಈತನನ್ನು ತನ್ನ ಅಡಿಯಲ್ಲಿ ಅಪ್ಪಚ್ಚಿಯಾಗಿಸಿತು. ಅದೃಷ್ಟವಶಾತ್ ಈತ ಬದುಕಿದರೂ ದೇಹದ ಮೇಲೆ ಸಾಕಷ್ಟು ಗಾಯಗಳನ್ನು ಪಡೆದುಕೊಂಡ. ಜೊತೆಗೆ ಕೈಯನ್ನು ಕೂಡ. 12 ದಿನಗಳ ಕೋಮದಲ್ಲಿದ್ದ ಜೇಮ್ಸ್ ಮೆದುಳಿನ ಮತ್ತು ದೇಹದ ಇತರ ಭಾಗಗಳಿಗೆ ಚಿಕಿತ್ಸೆಯನ್ನು ಪಡೆದುಕೊಂಡ. ಸತತ 12 ಶಸ್ತ್ರಕ್ರಿಯೆಗಳ ನಂತರ ಹಿಂದನ ಸ್ಥಿತಿಗೆ ಜೇಮ್ಸ್ ಮರಳಿದ್ದ.

ಮೂರೂವರೆ ತಿಂಗಳುಗಳ ಆಸ್ಪತ್ರೆ ವಾಸದ ನಂತರ ಜೇಮ್ಸ್ ಪ್ರಮಾಣದ ಎನ್‌ಎಚ್‌ಎಸ್ ಪ್ರಾಸ್ಥೆಟಿಕ್ ಕಾಲು ಮತ್ತು ಕೈಗಳೊಂದಿಗೆ ಜೇಮ್ಸ್ ಮನೆಗೆ ಮರಳಿದ್ದ. ಆದರೆ ಈ ಕೈಗಳು ಸೀಮಿತ ಸಾಮರ್ಥ್ಯಗಳನ್ನು ಪಡೆದುಕೊಂಡಿತ್ತು, ಕೈಗಳ ಬದಲಿಗೆ ಹುಕ್ ಅನ್ನುಇದರಲ್ಲಿ ಜೋಡಿಸಲಾಗಿತ್ತು. ಸಣ್ಣ ಸಣ್ಣ ಕೆಲಸಗಳನ್ನು ಈ ಪ್ರಾಸ್ಥೆಟಿಕ್ ಕೈಗಳು ಮತ್ತು ಕಾಲುಗಳನ್ನು ಬಳಸಿಕೊಂಡು ಮಾಡಲು ಅಸಾಧ್ಯವಾಗುತ್ತಿತ್ತು.

ಈ ಕೈಗಳನ್ನು ಇರಿಸಿಕೊಂಡು ಕಷ್ಟದ ಕೆಲಸಗಳನ್ನು ಮಾಡಲು ಜೇಮ್ಸ್‌ಗೆ ಸಾಧ್ಯವಾಗುತ್ತಿರಲಿಲ್ಲ ಅಂತೆಯೇ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ನೋವು ನಿವಾರಕಗಳ ಮೊರೆ ಹೋಗುತ್ತಿದ್ದ ಜೇಮ್ಸ್ ಇದರಿಂದ ಇನ್ನಷ್ಟು ಕಂಗೆಟ್ಟಿದ್ದ ಆದರೂ ಜೇಮ್ಸ್ ಈಗ ಹೊಸತನದಿಂದ ಪುನಃ ಚಟುವಟಿಕೆಯುಳ್ಳ ಕೆಲಸಗಳನ್ನು ಮಾಡುತ್ತಿದ್ದಾನೆ ಅದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.

ಓದಿರಿ: 10 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಶ್ವದಲ್ಲೇ ಹೆಚ್ಚು ಪ್ರಬಲ ದೇಶ ಭಾರತ

#1

#1

ಹಲವಾರು ವರ್ಷಗಳ ನಂತರ ಜೇಮ್ಸ್ ಜೀವನ ಬದಲಾಯಿತು. ಪಾರ್ಟ್ ಸಿಬಾರ್ಗ್ ಎಂಬ ವಿಭಿನ್ನ ಪ್ರಯೋಗಕ್ಕೆ ಈತ ಒಳಗಾಗಿದ್ದು ಕೃತಕ ಬಯೋನಿಕ್ ಕೈಯನ್ನು ಈತನಿಗೆ ಅಳವಡಿಸಲಾಯಿತು.

#2

#2

ಜೇಮ್ಸ್ ಒಬ್ಬ ವೀಡಿಯೊ ಗೇಮ್ ಅಭಿಮಾನಿಯಾಗಿದ್ದು, ಬಲಗೈಯನ್ನು ಚೆನ್ನಾಗಿ ಬಳಸಿಕೊಂಡು ಆಟವನ್ನು ಆಡುತ್ತಾನೆ. ಅಂತೆಯೇ ಗೇಮಿಂಗ್ ಕಂಪೆನಿಯಾದ ಕೊನಾಮಿಗೆ ಜಾಹೀರಾತನ್ನು ಜೇಮ್ಸ್ ನೀಡಿದ್ದಾನೆ.

#3

#3

ರೊಬೋಟಿಕ್ಸ್ ಇದರಲ್ಲಿದ್ದು ಇದನ್ನು ಭುಜದಲ್ಲಿರುವ ಸ್ನಾಯು ಮತ್ತು ನರಗಳಿಗೆ ಜೋಡಿಸಲಾಗಿದೆ. ಇದರಲ್ಲಿ ಅನನ್ಯ ವಿನ್ಯಾಸವಿದ್ದು ಇದು ಧರಿಸುವವರ ವ್ಯಕ್ತಿತ್ವವನ್ನು ತೋರಿಸುತ್ತದೆ.

#4

#4

ಈ ಕೈಯನ್ನು ಜೇಮ್ಸ್‌ಗೆ ಜೋಡಿಸಿದವರು ಲಂಡನ್ ಸ್ಟುಡಿಯೊದ ಪ್ರಾಸ್ಥೆಟಿಕ್ ಕಲಾವಿದ ಡಿ ಒಲಿವಿರಾ ಬರಾತಾ ಆಗಿದ್ದಾರೆ ಈತ ಪರ್ಯಾಯ ಲಿಂಬ್ ಪ್ರಾಜೆಕ್ಟ್ ರಚನೆಕಾರರಾಗಿದ್ದಾರೆ.

#5

#5

ಸೋಫಿ ಸಿನಿಮಾಗಳಲ್ಲಿ ವಿಶೇಷ ಇಫೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದು, ಜೇಮ್ಸ್‌ನ ಬೆಸ್‌ಪೋಕ್ ಮೆಟಲ್ ಆರ್ಮ್ ಅನ್ನು ಪ್ಲಾಸ್ಟಿಕ್ ಆರ್ಟಿಕ್ಯುಲೇಟೆಡ್ ಕೈಗಳಿಗೆ ಅಟ್ಯಾಚ್ ಮಾಡಲಾಯಿತು. ಭುಜಗಳ ಸ್ನಾಯುಗಳನ್ನು ವೈದ್ಯರು ಇದಕ್ಕಾಗಿ ಬಳಸಿಕೊಂಡಿದ್ದಾರೆ.

#6

#6

ಈತನ ಭುಜಗಳಲ್ಲಿ ಅಳವಡಿಸಿರುವ ಸ್ನಾಯು ಸಿಗ್ನಲ್‌ಗಳನ್ನು ಪತ್ತೆಹಚ್ಚುತ್ತದೆ ಈ ಸೆನ್ಸಾರ್‌ಗಳನ್ನು ದೇಹದ ಮೇಲ್ಭಾಗದಲ್ಲಿ ಸಂಪರ್ಕಪಡಿಸಲಾಗಿದ್ದು ಇದು ಕೈಗಳು ಮತ್ತು ಭುಜಗಳ ಕಾರ್ಯನಿರ್ವಹಣೆಗೆ ಸಹಕಾರಿಯಾಗಲಿದೆ. ಇದೆಲ್ಲವೂ ಬ್ಯಾಟರಿ ಚಾಲಿತವಾಗಿದೆ.

#7

#7

ಜೇಮ್ಸ್‌ನ ಹೊಸ ಕೈಯು ನೈಜ ಕೈಯಂತೆಯೇ ಇದ್ದು ಸೆನ್ಸಾರ್‌ಗಳೊಂದಿಗೆ ಕಾರ್ಯನಿರ್ವಹಿಸುವ ರೀತಿಯಲ್ಲಿ ಭುಜ ಮತ್ತು ಕೈಗಳ ಮೂಲಕ ಆದೇಶಗಳನ್ನು ಕಳುಹಿಸಲಾಗುತ್ತದೆ.

#8

#8

ಇದು ನನಗೆ ಕೈಯನ್ನು ನೀಡಿದ್ದು ಇದನ್ನು ಡಿವೈಸ್‌ನಂತೆ ನಾನು ಕಾಣುತ್ತಿಲ್ಲ. ಇದು ಮೃದುವಾಗಿದ್ದರೂ ಗಡುಸಾಗಿದೆ ಆದ್ದರಿಂದ ಇದನ್ನು ಶೇಕ್ ಮಾಡಲು ಸಾಧ್ಯವಾಗುತ್ತಿದೆ ಎಂಬುದು ಜೇಮ್ಸ್ ಮಾತಾಗಿದೆ.

#9

#9

ಈ ಕೈಗೆ ಸೈಬಾರ್ಗ್ ಸ್ಟೈಲ್ ಆರ್ಮ್‌ನಲ್ಲಿ ಲೇಸರ್ ಲೈಟ್ ಇದ್ದು, ಟಾರ್ಚ್ ಅನ್ನು ಇದು ಹೊಂದಿದೆ. ಯುಎಸ್‌ಬಿ ಪೋರ್ಟ್ ಮಣಿಗಂಟಿನ ಪಕ್ಕದಲ್ಲಿದ್ದು ಫೋನ್ ಚಾರ್ಜ್ ಮಾಡುವ ಸೌಲಭ್ಯವನ್ನು ಪಡೆದುಕೊಂಡಿದೆ. ವಾಚ್ ಮತ್ತು ಡ್ರೋನ್ ಅನ್ನು ಈ ಕೈಯಲ್ಲಿ ಅಳವಡಿಸಲಾಗಿದೆ.

#10

#10

ಇದರ ತೂಕ 4.5 ಕೆಜಿಯಾಗಿದ್ದು ತುಂಬಾ ಭಾರವಾಗಿದೆ. ಈತನ ರೊಬೋಟಿಕ್ ಆರ್ಮ್ ಜೇಮ್ಸ್‌ಗೆ ಹೊಸ ಜೀವನವನ್ನು ನೀಡಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಜಿ.ಫಾಸ್ಟ್‌: ಪ್ರಸ್ತುತ ಇಂಟರ್ನೆಟ್‌ಗಿಂತ 50 ಪಟ್ಟು ವೇಗದ ಇಂಟರ್ನೆಟ್</a><br /><a href=ಬಜೆಟ್ ಬೆಲೆಯಲ್ಲಿ ಟಾಪ್ 5 ದೀರ್ಘ ಬ್ಯಾಟರಿ ಸ್ಮಾರ್ಟ್‌ಫೋನ್ಸ್
ಬಾಹ್ಯಾಕಾಶ ನೌಕೆ ಲಾಂಚ್ ಇಸ್ರೋದಿಂದ ಇತಿಹಾಸ ನಿರ್ಮಾಣ" title="ಜಿ.ಫಾಸ್ಟ್‌: ಪ್ರಸ್ತುತ ಇಂಟರ್ನೆಟ್‌ಗಿಂತ 50 ಪಟ್ಟು ವೇಗದ ಇಂಟರ್ನೆಟ್
ಬಜೆಟ್ ಬೆಲೆಯಲ್ಲಿ ಟಾಪ್ 5 ದೀರ್ಘ ಬ್ಯಾಟರಿ ಸ್ಮಾರ್ಟ್‌ಫೋನ್ಸ್
ಬಾಹ್ಯಾಕಾಶ ನೌಕೆ ಲಾಂಚ್ ಇಸ್ರೋದಿಂದ ಇತಿಹಾಸ ನಿರ್ಮಾಣ" />ಜಿ.ಫಾಸ್ಟ್‌: ಪ್ರಸ್ತುತ ಇಂಟರ್ನೆಟ್‌ಗಿಂತ 50 ಪಟ್ಟು ವೇಗದ ಇಂಟರ್ನೆಟ್
ಬಜೆಟ್ ಬೆಲೆಯಲ್ಲಿ ಟಾಪ್ 5 ದೀರ್ಘ ಬ್ಯಾಟರಿ ಸ್ಮಾರ್ಟ್‌ಫೋನ್ಸ್
ಬಾಹ್ಯಾಕಾಶ ನೌಕೆ ಲಾಂಚ್ ಇಸ್ರೋದಿಂದ ಇತಿಹಾಸ ನಿರ್ಮಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Most Read Articles
Best Mobiles in India

English summary
Man with amazing hand 26-year-old carries a futuristic limb, which includes phone charger , torch in addition to even DRONE.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X