ವಿಜ್ಞಾನ ಕೂಡ ವಿವರಣೆ ನೀಡಲಾಗದ ಸಾಮಾನ್ಯ 10 ಪ್ರಶ್ನೆಗಳಿವು!!

|

ವಿಜ್ಞಾನ ಹೇಳದಿರುವುದನ್ನು ಆಧ್ಯಾತ್ಮ ಹೇಳುತ್ತದೆ ಎಂಬ ಮಾತನ್ನು ಒಪ್ಪುವುದು ಅಥವಾ ಒಪ್ಪದಿರುವುದು ಅವರವರಿಗೆ ಬಿಟ್ಟ ವಿಷಯ. ಏಕೆಂದರೆ, ವಿಜ್ಞಾನವೇ ಇರಬಹುದು ಅಥವಾ ಆಧ್ಯಾತ್ಮವೇ ಇರಬಹುದು ಅದಕ್ಕೊಂದು ಸ್ಪಷ್ಟ ಉತ್ತರವಿದ್ದರೆ ಅದನ್ನು ಒಪ್ಪಬಹುದು. ಆದರೆ, ಕೆಲವೊಂದು ಪ್ರಶ್ನೆಗಳಿಗೆ ಉತ್ತರವೇ ಸಿಗದಿದ್ದರೆ ಏನು ಮಾಡುವುದು.?

ಹೌದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ದಿ ನಿರಂತರವಾಗಿ ನಡೆಯುವ ಪ್ರಕ್ರಿಯೆಗಳಾಗಿವೆ. ಮಂಗಳ ಮತ್ತು ಚಂದ್ರನ ಮೇಲೆ ಹೋಗಿ ವಾಸಿಸುವಷ್ಟು ತಂತ್ರಜ್ಞಾನ ಬೆಳವಣಿಗೆ ಆಗುತ್ತಿದೆ. ಭೂಮಿ ಬಿಟ್ಟು ಹೋಗಿ ವಾಸಿಸಲು ಚಿಂತಿಸುವ ವಿಜ್ಞಾನಿಗಳಿಗೆ ಭೂಮಿಯ ಮೇಲಿನ ಸಾಧಾರಣ ವಿಷಯಗಳಿಗೆ ವಿಜ್ಞಾನ ವಿವರಣೆ ನೀಡಲು ಸಾಧ್ಯವಾಗಿಲ್ಲ.

ವಿಜ್ಞಾನ ಕೂಡ ವಿವರಣೆ ನೀಡಲಾಗದ ಸಾಮಾನ್ಯ 10 ಪ್ರಶ್ನೆಗಳಿವು!!

ಭೂಮಿಯ ಮೇಲಿನ ಈ ವಿಷಯಗಳಿಗೆ ಯಾವ ವಿಜ್ಞಾನಿಗಳು ಇದುವರೆಗೂ ಯಾವುದೇ ನಿರ್ದಿಷ್ಟವಾದ ಸಿದ್ಧಾಂತಗಳು ಮತ್ತು ಥಿಯರಿಯನ್ನು ನೀಡಿಲ್ಲ. ಹಾಗಾಗಿ, ಇದಕ್ಕೆ ಆಧ್ಯಾತ್ಮ ಉತ್ತರವೆಂದು ನಮ್ಮ ಅನಿಸಿಕೆಯಲ್ಲ. ಆದರೂ, ಇಂದಿನ ಲೇಖನದಲ್ಲಿ . ವಿಜ್ಞಾನದಿಂದಲೂ ವಿವರಿಸಲಾಗದ ಅಂತಹ ಸಾಧಾರಣ ವಿಷಯಗಳು ಯಾವುವು ಎಂದು ತಿಳಿಯೋಣ.

ಬಲಗೈಯನ್ನೇ ಬರೆಯಲು ಬಳಸುವುದು ಏಕೆ?

ಬಲಗೈಯನ್ನೇ ಬರೆಯಲು ಬಳಸುವುದು ಏಕೆ?

ಪ್ರಪಂಚದಾದ್ಯಂತ ಹೆಚ್ಚು ಜನರು ಎಡಗೈಗಿಂತ ಅಧಿಕವಾಗಿ ಬಲಗೈಯನ್ನೇ ಬರೆಯಲು ಬಳಸುವುದು ಏಕೆ ಎಂದು ಇದುವರೆಗೆ ಯಾವ ವಿಜ್ಞಾನಿಗಳು ಸಹ ವಿವರಣೆ ನೀಡಿಲ್ಲ.

ಅಂತಃಪ್ರಜ್ಞೆ(sixth sense)

ಅಂತಃಪ್ರಜ್ಞೆ(sixth sense)

ಈ 6ನೇ ಸೆನ್ಸ್ (ಅಂತಃಪ್ರಜ್ಞೆ) ಮನೋವೈದ್ಯರಿಗೂ ಸಹ ವಿಸ್ಮಯ ಎನಿಸಿದ್ದು, ಕೆಲವೊಂದು ಘಟನೆಗಳು ಮೊದಲೇ ಜರುಗಿದಂತೆ ಭಾಸವಾಗುತ್ತದೆ. ಆದರೆ, ಈ ಪ್ರಕ್ರಿಯೆ ಹೇಗೆ ನೆಡೆಯುತ್ತದೆ ಎಂದು ಇದುವರೆಗೂ ಯಾವುದೇ ಅಧ್ಯಯನಗಳು ಸಾಬೀತು ಪಡಿಸಿಲ್ಲ.

ಆಮ್ಲಜನಕ ಇಲ್ಲದೇ ಬದುಕುವ ಪ್ರಾಣಿ

ಆಮ್ಲಜನಕ ಇಲ್ಲದೇ ಬದುಕುವ ಪ್ರಾಣಿ

ಭೂಮಿಯ ಮೇಲೆ ಸೂಕ್ಷ್ಮ ಜೀವಿಗಳು ಸೇರಿದಂತೆ ಎಲ್ಲಾ ಜೀವಗಳು ಸಹ ಬದುಕಲು ಆಮ್ಲಜನಕ ಅತಿ ಮುಖ್ಯ ಎಂದು ವಿಜ್ಞಾನ ಹೇಳುತ್ತದೆ. ಆದರೆ, ಕೆಲ ತಳಿಯ ಬ್ಯಾಕ್ಟೀರಿಯಾ ಆಕ್ಸಿಜನ್ ಇಲ್ಲದೆಯೂ ಬುದುಕಲು ಸಾಧ್ಯವಿರುವ ಅಂಶವು ವಿಜ್ಞಾನಿಗಳಿಗೆ ಸವಾಲಾಗಿಯೇ ಉಳಿದಿದೆ.

ಪ್ರಾಣಿಗಳ ವಲಸೆ

ಪ್ರಾಣಿಗಳ ವಲಸೆ

ಪ್ರಾಣಿಗಳ ವಲಸೆಗೆ ವಿಜ್ಞಾನ ಇದುವರೆಗೂ ಸಹ ನಿರ್ಧಿಷ್ಟ ವಿವರಣೆ ನೀಡಿಲ್ಲ. ವಿಶೇಷವಾಗಿ ಪಕ್ಷಿಗಳು ತಾವು ಮೊದಲಿದ್ದ ಪ್ರದೇಶವನ್ನು ಒಂದು ಋತುಮಾನ ಮುಗಿದ ನಂತರ ಯಾವುದೇ ಟ್ರ್ಯಾಕರ್‌, ನಾವಿಗೇಷನ್ ಇಲ್ಲದೇ ನಿಖರವಾಗಿ ತಲುಪುವುದು ಹೇಗೆ.?

ಆಯಸ್ಕಾಂತ ಮತ್ತು ಅದರ ದಿಕ್ಕುಗಳು

ಆಯಸ್ಕಾಂತ ಮತ್ತು ಅದರ ದಿಕ್ಕುಗಳು

ವಿಜ್ಞಾನಿಗಳು ಇದುವರೆಗೂ ಸಹ ಆಯಸ್ಕಾಂತ ಉತ್ತರ ಮತ್ತು ದಕ್ಷಿಣ ದ್ರುವವನ್ನು ಮಾತ್ರ ಏಕೆ ಹೊಂದಿದೆ ಎಂದು ಸರಿಯಾದ ವಿವರಣೆ ನೀಡಿಲ್ಲ. ಆಯಸ್ಕಾಂತರಗಳನ್ನು ಸಣ್ಣ ಸಣ್ಣದಾಗಿ ವಿಭಾಗಿಸಿದರೂ ಸಹ ಅವು ಉತ್ತರ ಮತ್ತು ದಕ್ಷಿಣ ದ್ರುವದಲ್ಲಿರುತ್ತವೆ. ಭೂಮಿ ಕೂಡ ಒಂದು ಆಯಸ್ಕಾಂತವೇ ಆಗಿದೆ.

ಆಕಳಿಕೆ ಏಕೆ ಬರುತ್ತದೆ?

ಆಕಳಿಕೆ ಏಕೆ ಬರುತ್ತದೆ?

ನಿದ್ದೆ ಬಂದಾಗ ಆಕಳೀಕೆ ಬರುತ್ತದೆ ಎಂದು ಎಲ್ಲರಿಗೂ ಗೊತ್ತು. ಆಕ್ಸಿಜನ್‌ ಪ್ರಮಾಣ ಕಡಿಮೆಯಾದಾಗ ಬರುತ್ತದೆ ಎಂದು ಹಲವು ಕಾರಣವನ್ನು ನೀಡಲಾಗುತ್ತದೆ. ಆದರೆ, ಆಕಳಿಕೆ ಬರುವಾಗ ದೇಹದಲ್ಲಿ ಯಾವ ರೀತಿ ಪ್ರಕ್ರಿಯೆ ನಡೆಯುತ್ತದೆ ಎಂದು ವಿಜ್ಞಾನ ವಿವರಣೆ ನೀಡಿಲ್ಲ.

ಟೊಮೊಟೊ ಜೀನ್‌!!

ಟೊಮೊಟೊ ಜೀನ್‌!!

ನಾವು ತಿನ್ನುವ ಒಂದು ಟೊಮೊಟೊ ಮನುಷ್ಯನಿಗಿಂತ ಹೆಚ್ಚು ಜೀನ್‌ಗಳನ್ನು ಹೊಂದಿದೆ. ಟೊಮೊಟೊ 31,360 ಜೀನ್ಸ್‌ಗಳನ್ನು ಹೊಂದಿದ್ದು, ಮಾನವರಿಗಿಂತ 7000 ಹೆಚ್ಚು ಜೀನ್ಸ್‌ಗಳನ್ನು ಹೊಂದಿರುವ ವಿಪರ್ಯಾಸದ ಬಗ್ಗೆ ವಿಜ್ಞಾನಿಗಳು ಯಾವುದೇ ಮಾಹಿತಿ ನೀಡಲು ಸಾಧ್ಯವಾಗಿಲ್ಲ.

ಬ್ಲಾಕ್‌ ಹೋಲ್‌ ತಳ (ಕಪ್ಪು ಕುಳಿ ತಳ)

ಬ್ಲಾಕ್‌ ಹೋಲ್‌ ತಳ (ಕಪ್ಪು ಕುಳಿ ತಳ)

ಪ್ರಪಂಚದಾದ್ಯಂತದ ಎಲ್ಲಾ ಭೌತವಿಜ್ಞಾನಿಗಳು ಸಹ ಕಪ್ಪು ಕುಳಿ ಬಗ್ಗೆ ವಿವರಣೆ ನೀಡಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಆದರೆ ಇದುವರೆಗೆ ಕಪ್ಪು ಕುಳಿವಿಷಯದ ಬಗ್ಗೆ ಯಾರಿಗೂ ವಿವರಿಸಲು ಸಾಧ್ಯವಾಗಿಲ್ಲ. ಕೆಲವೊಮದು ವಿವರಣೆಗಳನ್ನು ನೀಡಿದರೂ ಸಹ ಅವುಗಳನ್ನು ವಿಜ್ಞಾನ ಪ್ರಪಂಚವೇ ಒಪ್ಪಿಲ್ಲ.

ಭೂತವೆಂಬ ಕಲ್ಪನೆ

ಭೂತವೆಂಬ ಕಲ್ಪನೆ

ಭೂತವೆಂಬ ಕಲ್ಪನೆವನ್ನು ನಂಬುವ ಮತ್ತು ನಂಬದವರ ಮಧ್ಯೆ ಯಾವಾಗಲು ಹೆಚ್ಚು ಚರ್ಚೆಗಳು ನಡೆಯುತ್ತಿರುತ್ತವೆ. ಯಾರಾದರೂ ಸಾಕ್ಷಿ ಸಮೇತ ಭೂತದ ಬಗ್ಗೆ ಹೇಳಿದರೆ ವಿಜ್ಞಾನ ಇದನ್ನು ಮಾನಸಿಕ ವಿದ್ಯಾಮಾನ ಎಂದು ಹೇಳುತ್ತಾರೆ. ಇದಕ್ಕೆ ವಿವರಣೆ ನೀಡಲು ವಿಜ್ಞಾನ ಮುಂದಾಗಿಲ್ಲ. ಏಕೆಂದರೆ, ವಿಜ್ಞಾನದ ಪ್ರಕಾರ ಭೂತವೆಂಬುದು ಕಲ್ಪನೆ.

How to send WhatsApp Payments invitation to others - GIZBOT KANNADA
ಏಲಿಯನ್ಸ್ ಮತ್ತು ಅವುಗಳ ಸ್ಥಳ

ಏಲಿಯನ್ಸ್ ಮತ್ತು ಅವುಗಳ ಸ್ಥಳ

ಏಲಿಯನ್ಸ್‌ಗಳ ಇರುವಿಕೆ ಬಗ್ಗೆ ಯಾವಾಗಲು ಮಾಹಿತಿ ಹರಿದಾಡುತ್ತಿದ್ದರೂ ಸಹ ವಿಜ್ಞಾನ ಮಾತ್ರ ಇದರ ಬಗ್ಗೆ ವಿವರಣೆ ನೀಡಿಲ್ಲ. ಪ್ರತಿಯೋರ್ವ ವಿಜ್ಞಾನಿಯೂ ಅನ್ಯಗ್ರಹ ಜೀವಿಗಳು ಇರಬಹುದು ಎಂಬುದನ್ನು ಒಪ್ಪುತ್ತಾರೆ. ಆದರೆ, ಅವುಗಳು ಭೂಮಿಗೆ ಬರುತ್ತವೆ ಎಂಬುದನ್ನು ಒಪ್ಪುವವರು ಕಡಿಮೆ.

Best Mobiles in India

English summary
Science and technology are marching ahead at breakneck speed. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X