ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದರು ಏಳನೇ ತರಗತಿ ವಿಧ್ಯಾರ್ಥಿಗಳು!!

ಕೀಟಲೆ, ತಂಟೆ ಮತ್ತು ಓದು ಎಂಬ ಉತ್ತರಗಳಷ್ಟೆ ನಮಗೆ ಜ್ನಾಪಕ ಬರುತ್ತದೆ. ಏಕೆಂದರೆ ನಾವು ಮಕ್ಕಳಾಗಿದ್ದಾಗ ನಾವೂ ಕೂಡ ಇವುಗಳನ್ನು ಬಿಟ್ಟು ಬಹುಶಃ ಬೇರೇನೂ ಮಾಡಿರುವುದಿಲ್ಲ ಎನ್ನಬಹುದು ಅಲ್ಲವೇ?

|

ಆರರಿಂದ ಏಳನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ಶಾಲೆಯಲ್ಲಿ ಏನೆಲ್ಲಾ ಮಾಡಬಹುದು ಎಂದು ಪ್ರಶ್ನಿಸಿದರೆ? ಕೀಟಲೆ, ತಂಟೆ ಮತ್ತು ಓದು ಎಂಬ ಉತ್ತರಗಳಷ್ಟೆ ನಮಗೆ ಜ್ನಾಪಕ ಬರುತ್ತದೆ. ಏಕೆಂದರೆ ನಾವು ಮಕ್ಕಳಾಗಿದ್ದಾಗ ನಾವೂ ಕೂಡ ಇವುಗಳನ್ನು ಬಿಟ್ಟು ಬಹುಶಃ ಬೇರೇನೂ ಮಾಡಿರುವುದಿಲ್ಲ ಎನ್ನಬಹುದು ಅಲ್ಲವೇ?

ಆದರೆ, ನಾಸಿಕ್‌ನಲ್ಲಿನ ಆರರಿಂದ ಏಳನೇ ತರಗತಿಯ ವಿಧ್ಯಾರ್ಥಿಗಳು ದೇಶವೇ ಹೆಮ್ಮೆಪಡುವಂತಹ ವಿಶಿಷ್ಟ ಸಾಧನೆ ಮಾಡಿದ್ದಾರೆ. ಶಾಲೆಯಲ್ಲಿ ಕೇವಲ ಆಟ ಪಾಠಕ್ಕೆ ಮೀಸಲಾಗದೇ ಶಿಕ್ಷಕರ ಸಹಾಯದಿಂದ ನೀರನ್ನು ಸ್ವಚ್ಚಗೊಳಿಸುವ ಅತ್ಯಾಧುನಿಕ ವಾಟರ್ ಬೈಸಿಕಲ್ ಬೋಟ್( ದೋಣಿ) ಒಂದನ್ನು ನಿರ್ಮಿಸಿ ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದಾರೆ.!!

ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದರು ಏಳನೇ ತರಗತಿ ವಿಧ್ಯಾರ್ಥಿಗಳು!!

ನಾಸಿಕ್‌ನಲ್ಲಿ ಹರಿಯುವ ನದಿಗಳ ಕಲುಶಿತ ನೀರನ್ನು ಸ್ವಚ್ಚಗೊಳಿಸಲು ಪ್ರೇರಣೆಯಿಯಿಂದಾಗಿ ಈ ವಿಶೇಷ ವಾಟರ್ ಬೈಸಿಕಲ್ ಬೋಟ್( ದೋಣಿ)ಅನ್ನು ತಯಾರಿಸಿರುವುದಾಗಿ ಮಕ್ಕಳು ಹೇಳಿದ್ದಾರೆ.! ಹಾಗಾದರೆ, ಮಕ್ಕಳು ತಯಾರಿಸಿರುವ ವಿಶೇಷ ವಾಟರ್ ಬೈಸಿಕಲ್ ಬೋಟ್( ದೋಣಿ) ಹೇಗಿದೆ? ಬೋಟ್‌ನಲ್ಲಿ ಅಳವಡಿಸಿರುವ ತಂತ್ರಜ್ಞಾನ ಯಾವುದು ಎಂದು ಮುಂದೆ ತಿಳಿಯಿರಿ.!!

ವಾಟರ್ ಬೈಸಿಕಲ್ ಬೋಟ್!!

ವಾಟರ್ ಬೈಸಿಕಲ್ ಬೋಟ್!!

ಎಸ್ಪಲೈಯರ್ ಎಕ್ಸ್ಪರಿಮೆಂಟಲ್ ಶಾಲೆಯ ವಿಧ್ಯಾರ್ಥಿಗಳು ನೀರಿನ ಮೇಲೆ ಸರಾಗವಾಗಿ ತೇಲುವ ವಾಟರ್ ಬೈಸಿಕಲ್ ಬೋಟ್ ಅನ್ನು ಸೈನ್ಸ್ ಡೇ ಸಂದರ್ಭದಲ್ಲಿ ಪ್ರಾರಂಭಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕಿ ಶ್ರೀಮತಿ ಕಲ್ಯಾಣಿ ಜೋಷಿಯ ಮಾರ್ಗದರ್ಶನದಲ್ಲಿ ವಾಟರ್ ಬೈಸಿಕಲ್ ಬೋಟ್ ಅನ್ನು ತಯಾರಿಸಲು ಮುಂದಾಗಿ ಆ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.!!

ಕಡಿಮೆ ವೆಚ್ಚದ ಬೋಟ್!!

ಕಡಿಮೆ ವೆಚ್ಚದ ಬೋಟ್!!

ಕಲುಶಿತ ನೀರನ್ನು ಸ್ವಚ್ಚಗೊಳಿಸುವ ಸಲುವಾಗಿ ಕಂಡುಹಿಡಿದಿರುವ ಈ ವಿಶೇಷ ವಾಟರ್ ಬೈಸಿಕಲ್ ಬೋಟ್ ಅನ್ನು ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಸಾಮಾನ್ಯ ಸೈಕಲ್‌ಗೆ ನೀರಿನ ಕ್ಯಾನ್, ಸ್ವಲ್ಪ ಕಬ್ಬಿಣ ಹಾಗೂ ನೀರು ಸ್ವಚ್ಚತಾ ವಸ್ತುವನ್ನು ಅಳವಡಿಸಲಾಗಿದ್ದು, 10 ಸಾವಿರಕ್ಕಿಂತ ಕಡಿಮೆ ವೆಚ್ಚದಲ್ಲಿ ವಾಟರ್ ಬೈಸಿಕಲ್ ಬೋಟ್ ತಯಾರಾಗಿದೆ.!!

ತಂತ್ರಜ್ಞಾನ ಯಾವುದು?

ತಂತ್ರಜ್ಞಾನ ಯಾವುದು?

ಈ ವಿಶೇಷ ವಾಟರ್ ಬೈಸಿಕಲ್ ಬೋಟ್ ಅನ್ನು ತಯಾರಿಸುವ ಸಂದರ್ಭದಲ್ಲಿ ಆರ್ಕಿಮಿಡೀಸ್ ತತ್ವ ಮತ್ತು ಸಾಂದ್ರತೆ ಮತ್ತು ತೇಲುವ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಗಿದೆ. ಆ ಮಾದರಿಯಲ್ಲಿಯೇ ವಿದ್ಯಾರ್ಥಿಗಳು ವಿಶೇಷ ತೇಲುವ ವಾಟರ್ ಬೈಸಿಕಲ್ ಅನ್ನು ನಿರ್ಮಿಸಿದ್ದಾರೆ ಎಂದು ಶಿಕ್ಷಕಿ ಶ್ರೀಮತಿ ಕಲ್ಯಾಣಿ ಜೋಷಿ ಅವರು ತಿಳಿಸಿದ್ದಾರೆ.!!

ಬೈಸಿಕಲ್ ಬೋಟ್ ಉಪಯೋಗವೇನು?

ಬೈಸಿಕಲ್ ಬೋಟ್ ಉಪಯೋಗವೇನು?

ಜೀವಿಗಳ ಜೀವನಾಡಿಯಾಗಿರುವ ನದಿ ಮತ್ತು ಕೆರೆ ನೀರು ಇಂದು ಕಲುಷಿತಗೊಂಡು ವಿಷಯುಕ್ತವಾಗುತ್ತಿದೆ. ಪ್ಲಾಸ್ಟಿಕ್‌ನಂತಹ ತ್ಯಾಜ್ಯಗಳು ನೀರಿನಲ್ಲಿ ಸೇರಿ ನದಿ ಮತ್ತು ಕೆರೆಗಳನ್ನು ಸೇರಿ ನೀರನ್ನು ಕಲುಷಿತಗೊಳಿಸುತ್ತಿರುವುದನ್ನು ತಡೆಯಲು ಈ ಬೈಸಿಕಲ್ ಬೋಟ್ ಉಪಯೋಗಕಾರಿಯಾಗಿದೆ.!!

ಸುರಕ್ಷತಾ ಮುನ್ನೆಚ್ಚರಿಕೆ!!

ಸುರಕ್ಷತಾ ಮುನ್ನೆಚ್ಚರಿಕೆ!!

ವಿಶೇಷ ವಾಟರ್ ಬೈಸಿಕಲ್ ಬೋಟ್ ಅನ್ನು ತಯಾರಿಸುವ ಸಂದರ್ಭದಲ್ಲಿ ವೆಲ್ಡಿಂಗ್ ಕಾರ್ಯಗಳು ಮತ್ತು ಇನ್ನಿತರ ಸಣ್ಣ ಕಾರ್ಯಗಳು 12-13 ವರ್ಷ ವಯಸ್ಸಿನ ಸುರಕ್ಷಿತ ಚಟುವಟಿಕೆಯಾಗಿಲ್ಲ. ಆದರೂ ಕೂಡ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಪ್ರತಿಹಂತದಲ್ಲಿಯೂ ಅವರ ಕುತೋಹಲವನ್ನು ತಣಿಸಲಾಗಿದೆ.!!

Bike-Car ಜಾತಕ ಹೇಳುವ ಆಪ್..!
ಗೋಡೆಗಳ ಮೀರಿ ವಿಜ್ಞಾನ ಪಾಠ!!

ಗೋಡೆಗಳ ಮೀರಿ ವಿಜ್ಞಾನ ಪಾಠ!!

ಮರದ ಬೆಂಚ್ ಮೇಲೆ ಕುಳಿತು ಪುಸ್ತಕದ ಹುಳುವಾಗುವ ಬದಲು ಪ್ರಾಪಂಚಿಕವಾಗಿ ವಿಜ್ಞಾನ ಪಾಠಗಳನ್ನು ಮಕ್ಕಳಿಗೆ ಕಲಿಸುವಲ್ಲಿ ಎಸ್ಪಲೈಯರ್ ಎಕ್ಸ್ಪರಿಮೆಂಟಲ್ ಶಾಲೆಯ ಶಿಕ್ಷಕರು ಪ್ರಗತಿಸಾಧಿಸಿದ್ದಾರೆ. ಓರ್ವ ವಿಶ್ವೇಶ್ವರಯ್ಯ, ಓರ್ವ ಅಬ್ದುಲ್ ಕಲಾಮ್‌ನಂತಹ ಸಾಧಕರನ್ನು ಹುಟ್ಟುಹಾಕಲು ಇಂತಹ ಕಲಿಕೆಯ ಅವಶ್ಯಕತೆ ಇದೆ.!! ಏನಂತಿರಾ? ಕಮೆಂಟ್ ಮಾಡಿ ತಿಳಿಸಿ.!!

Best Mobiles in India

English summary
Taking their science lessons beyond textbooks and four walls, students from the school have built a floating cycle!. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X