ಜೀರೋ ಗ್ರಾವಿಟಿಯಲ್ಲೂ 'ಉಸೇನ್​ ಬೋಲ್ಟ್' ಓಟ...ಅಂತರಿಕ್ಷದಲ್ಲಿಯೂ ದಾಖಲೆ!!

|

ಮಾನವರಲ್ಲೇ ಈವರೆಗೂ ಅತ್ಯಂತ ವೇಗದ ಓಟಗಾರ ಎಂದೇ ಖ್ಯಾತರಾಗಿರುವ ಮತ್ತು ಒಲಂಪಿಕ್ಸ್​ನಲ್ಲಿ 8 ಚಿನ್ನದ ಪದಕ ಗೆದ್ದಿರುವ ಉಸೇನ್​ ಬೋಲ್ಟ್​ ಈಗ ಮತ್ತೊಂದು ರೇಸ್​ನಲ್ಲಿ ಗೆಲುವು ಸಾಧಿಸಿದ್ದಾರೆ. ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ವ್ಯಕ್ತಿ ಎನ್ನುವ ಖ್ಯಾತಿ ಪಡೆದಿರುವ ಉಸೇನ್ ಬೋಲ್ಟ್, ಈಗ ಅಂತರಿಕ್ಷದಲ್ಲಿಯೂ ದಾಖಲೆ ನಿರ್ಮಿಸಿದ್ದಾರೆ.

ಹೌದು, ಎಂಟು ಬಾರಿ ಒಲಿಂಪಿಕ್ ಚಾಂಪಿಯನ್ ಆಗಿರುವ ಉಸೇನ್ ಬೋಲ್ಟ್, ಗುರುತ್ವಾಕರ್ಷನೆ ಇರದ ಏರ್ ಬಸ್ಸಿನಲ್ಲಿ ಓಡಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಭೂಮಿಯ ಮೇಲಿನ ಶರವೇಗದ ಸರದಾರ ಅಂತರಿಕ್ಷದಲ್ಲೂ ತಮ್ಮ ಕಾಲ್ಚಳಕವನ್ನು ತೋರಿದ್ದು, ಜೀರೋ ಗ್ರಾವಿಟಿಯಲ್ಲಿ ನಡೆದ ರೇಸ್​ನಲ್ಲಿ ಗೆಲುವು ಸಾಧಿಸಿದ್ದಾರೆ.

ಜೀರೋ ಗ್ರಾವಿಟಿಯಲ್ಲೂ 'ಉಸೇನ್​ ಬೋಲ್ಟ್' ಓಟ...ಅಂತರಿಕ್ಷದಲ್ಲಿಯೂ ದಾಖಲೆ!!

ಫ್ರಾನ್ಸ್​ನ ಅಂತರಿಕ್ಷಯಾತ್ರಿ ಜೇನ್​ ಫ್ರಾಂಕೋಯಿಸ್​ ಕ್ಲರ್ವೆ ಮತ್ತು ನೋವೆಸ್ಪೇಸ್​ನ ಸಿಇಒ ಹಾಗೂ ಫ್ರಾನ್ಸ್​ನ ಇಂಟೀರಿಯರ್​ ಡಿಸೈನರ್​ ಆಕ್ಟೇವ್ ದೆ ಗೌಲೆ ಅವರೊಂದಿಗೆ ಉಸೇನ್​ ಬೋಲ್ಟ್ ಅವರು ಗುರುತ್ವಾಕರ್ಷಣೆ ಇಲ್ಲದ ಓಟದ ಸ್ಪರ್ಧೆಗೆ ಇಳಿದು ಗೆದ್ದಿದ್ದಾರೆ. ರೇಸ್​ನಲ್ಲಿ ಗೆದ್ದ ಬೋಲ್ಟ್​ ಎಂದಿನಂತೆ ತಮ್ಮದೇ ಶೈಲಿನಲ್ಲಿ ವಿಶಿಷ್ಟವಾಗಿ ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ.

ಗುರುತ್ವಾಕರ್ಷಣೆ ಇಲ್ಲದ ಓಟ ಆರಂಭಸಿದ ಬೋಲ್ಟ್ ಮತ್ತು ಇತರ ಈರ್ವರು ಅಂತರಿಕ್ಷಯಾತ್ರಿಗಳು ನೆಲಕ್ಕೆ ಕಾಲು ತಾಕಿಸಲು ಕಷ್ಟಪಡುತ್ತಾರೆ. ಓಟ ಆರಂಭಸಿದ ಬೋಲ್ಟ್ ಉತ್ತಮ ಆರಂಭ ಪಡೆದರೂ ತಮ್ಮ ಎದುರಿಗೆ ಇರುವ ಗೋಡೆಯನ್ನು ಮುಟ್ಟುವ ಮೊದಲೇ ಜಾರಿ ಕೆಳಗೆ ಬೀಳುತ್ತಾರೆ. ಆದರೆ, ಗುರಿಯನ್ನು ಮುಟ್ಟುವಲ್ಲಿ ಎಡವದೇ ಅಂತರಿಕ್ಷದಲ್ಲಿಯೂ ಗೆಲುವು ಸಾಧಿಸಿದ್ದಾರೆ.

ಜೀರೋ ಗ್ರಾವಿಟಿಯಲ್ಲೂ 'ಉಸೇನ್​ ಬೋಲ್ಟ್' ಓಟ...ಅಂತರಿಕ್ಷದಲ್ಲಿಯೂ ದಾಖಲೆ!!

ಜಯದ ನಗೆ ಬೀರುತ್ತಿದ್ದಂತೆ , 'ನಾನು ಸ್ವಲ್ಪ ಹೊತ್ತು ನಿಶಕ್ತನಾಗಿಬಿಟ್ಟಿದ್ದೇ. ಓ ದೇವರೇ ಏನಾಯಿತು ನನಗೆ ಎನ್ನುವ ಭಾವನೆ ಮೂಡಿತ್ತು. ಆದರೆ, ಇದು ನನಗೆ ಉತ್ಸಾಹ ತಂದುಕೊಟ್ಟಿದೆ ಎಂದು ಬೋಲ್ಟ್ ಹೇಳಿದ್ದಾರೆ.ಈ ಮೂಲಕ ತಾನೂ ಗುರುತ್ವಾಕರ್ಷಣೆ ಇಲ್ಲದ ಪ್ರದೇಶದಲ್ಲಿಯೂ ವೇಗವಾಗಿ ಓಡಬಲ್ಲೇ ಎನ್ನುವುದನ್ನು ಉಸೇನ್ ಬೋಲ್ಟ್ ಸಾಬೀತುಪಡಿಸಿದ್ದಾರೆ.

View this post on Instagram

‪Changing the game @ghmumm Celebrating life by running and drinking champagne in Zero Gravity 🚀 #DareWinCelebrate #NextVictory ‬

A post shared by Usain St.Leo Bolt (@usainbolt) on Sep 12, 2018 at 11:10am PDT

Best Mobiles in India

English summary
Usain Bolt Wins Another Race. The Twist - It Was On A Zero-Gravity Flight. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X