ನೀರು ಮತ್ತು ವಿದ್ಯುತ್ ಎರಡನ್ನೂ ಉತ್ಪಾದಿಸುವ ಗಾಳಿಯಂತ್ರ ತಯಾರಿಸಿದ 23 ವರ್ಷದ ಇಂಜಿನಿಯರ್

By Gizbot Bureau
|

ಶುದ್ಧವಾದ ಗಾಳಿ, ಕುಡಿಯುವ ನೀರು, ವಿದ್ಯುತ್ ಸಮಸ್ಯೆಯನ್ನು ದೇಶದ ಮೂಲೆಮೂಲೆಯಲ್ಲಿ ಅನೇಕ ಮಂದಿ ಎದುರಿಸುತ್ತಿದ್ದಾರೆ. ಭಾರತದಲ್ಲಿ 88 ಮಿಲಿಯನ್ ಮಂದಿ ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ಅನೇಕ ಕಾರಣಗಳಿಂದ ಎದುರಿಸುತ್ತಿದ್ದಾರೆ. ವಾತಾವರಣದಲ್ಲಿ ಆಗುವ ಬದಲಾವಣೆ, ಅಂತರ್ಜಲದಲ್ಲಿ ವಿಷ, ಇತ್ಯಾದಿ ಸಮಸ್ಯೆಗಳಿವೆ. ಆದರೆ ಇದಕ್ಕೊಂದು ಅಧ್ಬುತ ಪರಿಹಾರವನ್ನು ಇದೀಗ ಕಂಡು ಹಿಡಿಯಲಾಗಿದೆ. ಹೌದು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಯುವ ಇಂಜಿನಿಯರ್ ಒಬ್ಬ ಇದಕ್ಕೆ ಸೂಕ್ತ ಪರಿಹಾರವೊಂದನ್ನು ಕಂಡು ಹಿಡಿದಿದ್ದಾರೆ. ಗಾಳಿಯಂತ್ರದ ಸಹಾಯದಿಂದ ಶುದ್ಧ ಕುಡಿಯುವ ನೀರು ಮತ್ತು ವಿದ್ಯುತ್ ತಯಾರಿಸುವುದಕ್ಕೆ ಇವರು ಮುಂದಾಗಿದ್ದಾರೆ.

ಯುವ ಇಂಜಿನಿಯರ್ ಹೇಳಿಕೆ

ಯುವ ಇಂಜಿನಿಯರ್ ಹೇಳಿಕೆ

"ನಾನು ವಜ್ರಕರೂರ್ ಹಳ್ಳಿಯಲ್ಲಿ ಹುಟ್ಟಿದವನು. ಇಲ್ಲಿ ನೀರಿಗಾಗಿ ನಾವು ಬೋರ್ ವೆಲ್ ಮತ್ತು ನೀರಿನ ಟ್ಯಾಂಕರ್ ಗಳನ್ನೇ ಅವಲಂಬಿಸಿದ್ದೇವೆ.ಬೋರ್ ವೆಲ್ ನಿಂದ ಪಡೆದ ನೀರನ್ನು ಕುದಿಸಿ ನಂತರ ಬಳಸುತ್ತೇವೆ. ಮಳೆಯೇ ಇಲ್ಲದ ಸಮಯದಲ್ಲಿ ಭೂಮಿಯ ನೀರಿನ ಮಟ್ಟ ಕುಸಿಯುತ್ತದೆ ಮತ್ತು ಆ ಸಂದರ್ಬದಲ್ಲಿ ಟ್ಯಾಂಕರ್ ನೀರನ್ನು ಅವಲಂಬಿಸಬೇಕಾಗುತ್ತದೆ. ನನ್ನ ತಂದೆ ಕೃಷಿಕರು ಮತ್ತು ತಾಯಿ ಗೃಹಿಣಿ. ಹಾಗಾಗಿ ಆದಾಯ ಬಹಳ ಕಡಿಮೆ. ಕೆಲವು ಸಮಯದಲ್ಲಿ ನೀರನ್ನು ಕೊಂಡುಕೊಳ್ಳುವುದಕ್ಕೂ ನಮ್ಮಿಂದ ಅಸಾಧ್ಯ, ಕೆಲವೊಮ್ಮೆ ನೆರೆಹೊರೆಯವರ ಬಳಿ ನೀರನ್ನು ಸಾಲವಾಗಿ ಪಡೆಯಬೇಕಾಗುತ್ತದೆ ಎನ್ನುತ್ತಾರೆ ಮಧು.

ವಿದ್ಯುತ್

ಹಾಗಾಗಿ ಈ ಯುವ ಅನ್ವೇಷಣಕಾರ ಪರಿಹಾರವನ್ನು ಹುಡುಕುವುದಕ್ಕೆ ಮುಂದಾದರು. ಈತ ಒಂದು ಗಾಳಿಯಂತ್ರವನ್ನು ತನ್ನ ಮನೆಯ ಹಿಂಭಾಗದಲ್ಲಿ ನಿರ್ಮಿಸಿದ ಮತ್ತು ಇದು ವಿದ್ಯುತ್ ಮತ್ತು ಕುಡಿಯುವ ನೀರು ಎರಡನ್ನೂ ಒದಗಿಸುತ್ತದೆ.

ವಿದ್ಯುತ್ ಮತ್ತು ಕುಡಿಯುವ ನೀರು ಎರಡನ್ನೂ ಒದಗಿಸುವ ಮಧು ತಯಾರಿಸಿದ ಗಾಳಿಯಂತ್ರ ಹೇಗಿದೆ?

ಇದು ಹೇಗೆ ಕೆಲಸ ಮಾಡುತ್ತದೆ?

ಇದು ಹೇಗೆ ಕೆಲಸ ಮಾಡುತ್ತದೆ?

15 ಅಡಿ ಎತ್ತರದ ವಿಂಡ್ ಟರ್ಬೈನ್ ವಾತಾವರಣದಲ್ಲಿರುವ ತೇವಾಂಶವನ್ನು ಸಂಗ್ರಹಿಸುತ್ತದೆ. ರೆಫ್ರಿಜರೇಟರ್ ಗಳಲ್ಲಿರುವಂತೆ ತಾಮ್ರದ ಪೈಪ್ ಮೂಲಕ ಇದನ್ನು ಸಂಗ್ರಹಿಸಲಾಗುತ್ತದೆ. ಅಂತಿಮವಾಗಿ ಮೂರು ಹಂತದ ಫಿಲ್ಟರ್ ಗಳನ್ನು ತಲುಪುತ್ತದೆ.

ಗಾಳಿಯ ತೇವಾಂಶವನ್ನು ಫ್ಯಾನ್ ಹಿಂಭಾಗದಲ್ಲಿ ಇರಿಸಲಾಗಿರುವ ಬ್ಲೋವರ್ ಬಳಸಿ ವಿಂಡ್ ಟರ್ಬೈನ್ ಫ್ರೇಮ್ಗೆ ಕಳಿಸಲಾಗುತ್ತದೆ. ಈ ತಂಪಾದ ಗಾಳಿಯು ಉದ್ದನೆಯ ಚೌಕಟ್ಟಿನಲ್ಲಿ ಹೋದ ನಂತರ,ತೇವಾಂಶವನ್ನು ಕೂಲಿಂಗ್ ಸಂಕೋಚಕಕ್ಕೆ ಕಳುಹಿಸಲಾಗುತ್ತದೆ. ಅದು ಗಾಳಿಯಲ್ಲಿನ ನೀರನ್ನು ಪಡೆದು ಘನೀಕರಿಸುತ್ತದೆ. ನೀರನ್ನು ತಾಮ್ರದ ಕೊಳವೆಗಳ ಮೂಲಕ ಮೂರು ಹಂತದ ಫಿಲ್ಟರ್‌ಗೆ ಮೆಂಬರೇನ್ ಫಿಲ್ಟರ್‌ಗಳು, ಕಾರ್ಬನ್ ಫಿಲ್ಟರ್‌ಗಳು ಮತ್ತು ಯುವಿ ಫಿಲ್ಟರ್‌ಗಳೊಂದಿಗೆ ನಿರ್ದೇಶಿಸಲಾಗುತ್ತದೆ. ಅಂತಿಮವಾಗಿ, ಚೌಕಟ್ಟಿನ ಮೇಲೆ ಇರಿಸಿದ ಟ್ಯಾಪ್ ಮೂಲಕ ಶುದ್ಧ ನೀರನ್ನು ಪ್ರವೇಶಿಸಬಹುದು "ಎಂದು ಮಧು ಹೇಳುತ್ತಾರೆ, 40 ಲೀಟರ್ ಸಾಮರ್ಥ್ಯವಿರುವ ಬಾಹ್ಯ ತೊಟ್ಟಿಯಲ್ಲಿಯೂ ನೀರನ್ನು ಸಂಗ್ರಹಿಸಲಾಗುತ್ತದೆ.

ವಿಂಡ್ ಟರ್ಬೈನ್

ಫ್ಯಾನ್‌ನ ಹಿಂಭಾಗದಲ್ಲಿ ಇರಿಸಲಾಗಿರುವ ಬ್ಲೋವರ್ ಬಳಸಿ ಗಾಳಿಯಲ್ಲಿನ ತೇವಾಂಶವನ್ನು ವಿಂಡ್ ಟರ್ಬೈನ್‌ಗಳ ಚೌಕಟ್ಟಿನಲ್ಲಿ ನಿರ್ದೇಶಿಸಲಾಗುತ್ತದೆ. ಈ ತಂಪಾದ ಗಾಳಿಯು ಉದ್ದನೆಯ ಚೌಕಟ್ಟಿನಲ್ಲಿ ಹೋದ ನಂತರ, ತೇವಾಂಶವನ್ನು ಕೂಲಿಂಗ್ ಸಂಕೋಚಕಕ್ಕೆ ನಿರ್ದೇಶಿಸಲಾಗುತ್ತದೆ, ಅದು ಗಾಳಿಯನ್ನು ನೀರಿನಲ್ಲಿ ಘನೀಕರಿಸುತ್ತದೆ. ನೀರನ್ನು ತಾಮ್ರದ ಕೊಳವೆಗಳ ಮೂಲಕ ಮೂರು ಹಂತದ ಫಿಲ್ಟರ್‌ಗೆ ಅಂದರೆ ಮೆಂಬರೇನ್ ಫಿಲ್ಟರ್‌ಗಳು, ಕಾರ್ಬನ್ ಫಿಲ್ಟರ್‌ಗಳು ಮತ್ತು ಯುವಿ ಫಿಲ್ಟರ್‌ಗಳೊಂದಿಗೆ ನಿರ್ದೇಶಿಸಲಾಗುತ್ತದೆ. ಅಂತಿಮವಾಗಿ, ಚೌಕಟ್ಟಿನ ಮೇಲೆ ಇರಿಸಿದ ಟ್ಯಾಪ್ ಮೂಲಕ ಶುದ್ಧ ನೀರನ್ನು ಪಡೆಯಬಹುದು. ಇದು 40 ಲೀಟರ್ ಸಾಮರ್ಥ್ಯವಿರುವ ಬಾಹ್ಯ ತೊಟ್ಟಿಯಲ್ಲಿಯೂ ನೀರನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಅಂದರೆ ಒಂದು ಲಕ್ಷ ರುಪಾಯಿ ವೆಚ್ಚದ ಈ ತಂತ್ರಗಾರಿಕೆಯಿಂದ 40 ಲೀಟರ್ ನೀರನ್ನು ಸಂಗ್ರಹಿಸುವುದಕ್ಕೆ ಸಾಧ್ಯವಾಗುತ್ತದೆ.

30 ಕಿಲೋ ವ್ಯಾಟ್ ಕೆಪಾಸಿಟಿ ಇರುವ ಇನ್ವರ್ಟರ್ ಗೆ ವಿಂಡ್ ಟರ್ಬೈನ್ ನ್ನು ಕನೆಕ್ಟ್ ಮಾಡಲಾಗಿರುತ್ತದೆ. ಇದಕ್ಕಾಗಿ ಪವರ್ ಫ್ಯಾನ್ ಗಳು, ಲೈಟ್ಸ್ ಗಳು ಮತ್ತು ಮನೆಯಲ್ಲಿರುವ ಪ್ಲಗ್ ಪಾಯಿಂಟ್ ಗಳನ್ನು ಮಧು ಅವರು ಬಳಸಿಕೊಂಡಿದ್ದಾರೆ.

ವಿಂಡ್ ಟರ್ಬೈನ್ ನ್ನು ಪ್ಲಾಸ್ಟಿಕ್ ಪೈಪ್ ಗಳು, ಕಬ್ಬಿಣದ ಸಲಾಕೆಗಳು ಮತ್ತು ಇತರೆ ಕೆಲವು ವಸ್ತುಗಳನ್ನು ಬಳಸಿ ತಯಾರಿಸಲಾಗಿದೆ. ಇವುಗಳನ್ನು ಮಧು ಅವರು ಆನ್ ಲೈನ್ ನಲ್ಲಿ ಖರೀದಿ ಮಾಡಿದ್ದಾರೆ. ಅಕ್ಟೋಬರ್ 2020 ರ ಮೊದಲ ವಾರದಲ್ಲಿ ಅವರು ಟರ್ಬೈನ್ ನ್ನು ತಯಾರಿಸುವುದಕ್ಕೆ ಪ್ರಾರಂಭಿಸಿದರು ಮತ್ತು ಕೇವಲ 15 ದಿನದಲ್ಲಿ ಇದನ್ನು ಅವರು ನಿರ್ಮಿಸಿದ್ದಾರೆ. ವೆಲ್ಡರ್ ಗಳಿಂದ ಫ್ಯಾನ್ ತಯಾರಿಕೆಗೆ ಅವರು ಸಹಾಯ ಪಡೆದರು ಮತ್ತು ಯಂತ್ರದ ತಯಾರಿಕೆಯ ಆಕಾರಕ್ಕೆ ಅವರ ಕೆಲವು ಸ್ನೇಹಿತರು ಕೂಡ ಸಹಾಯ ಮಾಡಿದ್ದಾರೆ. ಒಟ್ಟಾರೆ ಇದಕ್ಕೆ ಒಂದು ಲಕ್ಷ ರುಪಾಯಿ ವೆಚ್ಚವಾಗಿದೆ. ಈ ಹಣವನ್ನು ಮಧು ಅವರ ಉಳಿತಾಯ ಹಣ ಮತ್ತು ಅವರ ತಂದೆತಾಯಿ ನೀಡಿದ ಹಣದಿಂದ ತಯಾರಿಸಲಾಗಿದೆ.

ಒಂದು ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ವಿಂಡ್ ಟರ್ಬೈನ್ ಉತ್ತಮ ಗುಣಮಟ್ಟದ್ದಾಗಿರಲಿಕ್ಕಿಲ್ಲ. ಯಾಕೆಂದರೆ ಒಂದು ವಿಂಡ್ ಟರ್ಬೈನ್ ತಯಾರಿಕೆಗೆ ಕನಿಷ್ಟವೆಂದರೂ 35 ಲಕ್ಷ ವೆಚ್ಚವಾಗುತ್ತದೆ. ಆದರೆ ಮಧು ಅವರ ಶ್ರಮವನ್ನು ಮೆಚ್ಚಲೇಬೇಕು ಎನ್ನುತ್ತಾರೆ ಆರ್ಕೈಮೈಡ್ಸ್ ಗ್ರೀನ್ ಎನರ್ಜಿಯ ಸಂಸ್ಥಾಪಕರಾಗಿರುವ ಸೂರ್ಯಪ್ರಕಾಶ್ ಗಜ್ಜಲ.

ಸಂಶೋಧನೆಗೆ ಸ್ಪೂರ್ತಿಯಾದ ಅಂಶ:

ಸಂಶೋಧನೆಗೆ ಸ್ಪೂರ್ತಿಯಾದ ಅಂಶ:

ಗಾಳಿಯಂತ್ರ ತಯಾರಿಸುವುದು ಮಧು ಅವರ ಕನಸಾಗಿತ್ತು. ಅವರು ಪ್ರಥಮ ಪಿಯುಸಿಯಲ್ಲಿ ಈ ವಿಚಾರವನ್ನು ಮೊದಲ ಬಾರಿಗೆ ಓದಿದಾಗ ಅವರ ಕನಸು ಚಿಗುರೊಡೆದಿತ್ತು. ಆದರೆ ಅದರ ತಯಾರಿಕೆಗೆ ಬೇಕಾದ ಅನುಭವ ಮತ್ತು ತಂತ್ರಗಾರಿಕೆ ಅವರಲ್ಲಿ ಪ್ರಾರಂಭದ ದಿನಗಳಲ್ಲಿ ಇರಲಿಲ್ಲ. ಹಾಗಾಗಿ ಕಾರ್ಡ್ ಬೋರ್ಡ್ ಮೂಲಕ ಶಾಲೆಯಲ್ಲಿ ನಡೆದ ವಿಜ್ಞಾನದ ಪ್ರದರ್ಶನಗಳಲ್ಲಿ ಕೆಲವು ಮಾಡೆಲ್ ಗಳ ನಿರ್ಮಾಣವನ್ನು ಅವರು ಮಾಡಿದ್ದರು.

ಸೆಕೆಡ್ ಪಿಯುಸಿಯಲ್ಲಿದ್ದಾಗ ಮಧು ಅವರು ಸೋಲಾರ್ ಪವರ್ ಗ್ರಿಡ್ ತಯಾರಿಸುವುದನ್ನು ಕಲಿತರು ಅಷ್ಟೇ ಅಲ್ಲದೆ ಸ್ವಯಂ ಚಾಲಿತ ಸ್ಟ್ರೀಟ್ ಲೈಟ್ಸ್ ನ್ನು ತಯಾರಿಸುವುದನ್ನು ಕಲಿತರು. ಇದು ಅವರಿಗೆ ತಂತ್ರಜ್ಞಾನದ ಬಗ್ಗೆ ಪ್ರಾಯೋಗಿಕ ಅನುಭವವನ್ನು ಒದಗಿಸಿತು. ಅಕ್ಟೋಬರ್ 2020 ರಲ್ಲಿ , ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ನಲ್ಲಿ ವಿದೇಶಗಳಲ್ಲಿ ವಿಂಡ್ ಟರ್ಬೈನ್ ಗಳಿಂದ ಆಗುತ್ತಿರುವ ಪ್ರಯೋಜನಗಳ ಬಗ್ಗೆ ತಿಳಿಸಿದ್ದರು. ನೀರು ಮತ್ತು ವಿದ್ಯುತ್ ಎರಡನ್ನೂ ತಯಾರಿಸುವ ವಿಂಡ್ ಟರ್ಬೈನ್ ಗಳ ಬಗ್ಗೆ ಯುಟ್ಯೂಬ್ ವೀಡಿಯೋಗಳನ್ನು ನೋಡಿದ ನಂತರ ಹೆಚ್ಚಿನ ವಿಚಾರಗಳನ್ನು ಮಧು ಅವರು ಕಲಿತಿದ್ದಾರೆ. ಹಾಗಾಗಿ ಅದರ ಡಿಸೈನ್ ನ್ನು ತಯಾರಿಸಿದ್ದಾರೆ. ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಸಿದ್ಧಪಡಿಸಿಕೊಂಡು ತಯಾರಿಕೆಯನ್ನು ಪ್ರಾರಂಭಿಸಿದ 15 ದಿನದಲ್ಲೇ ಯಶಸ್ವಿಯಾಗಿದ್ದಾರೆ.

ಇದೀಗ ಅವರು ತಯಾರಿಸಿರುವ ವಿಂಡ್ ಟರ್ಬೈನ್ 80 ರಿಂದ 100 ಲೀಟರ್ ನೀರನ್ನು ಪ್ರತಿದಿನ ತಯಾರಿಸುತ್ತದೆ. ಹೆಚ್ಚು ವಿದ್ಯುತ್ ಬಿಲ್ ಬರುವುದನ್ನು ಇದು ತಡೆಯುತ್ತಿದೆ. ಬೋರ್ ವೆಲ್ ನಿಂದ ನೀರು ಪಂಪ್ ಮಾಡಿ ವಾಟರ್ ಟ್ಯಾಂಕ್ ಗೆ ತುಂಬಿಸುವ ಕೆಲಸ ಕಡಿಮೆಯಾಗುತ್ತಿದೆ. ಕುಡಿಯುವ ನೀರಿಗೆ ಸಮಸ್ಯೆಯಾದಾಗ ಅಕ್ಕಪಕ್ಕದವರೂ ಕೂಡ ಇದೀಗ ಇವರ ತಂತ್ರಗಾರಿಕೆಯ ಪ್ರಯೋಜನ ಪಡೆಯುತ್ತಿದ್ದಾರೆ.

ಮಧು ಅವರಿಗೆ ಈ ರೀತಿಯ ಹೊಸ ಪ್ರಯೋಗ ಮಾಡುವ ಹವ್ಯಾಸ ಮೊದಲಿನಿಂದಲೂ ಇತ್ತು ಎಂದು ಅವರ ಸ್ನೇಹಿತರಲ್ಲೊಬ್ಬರಾಗಿರುವ ವನ್ನೂರು ವಾಲಿ ತಿಳಿಸಿದ್ದಾರೆ. ಶಾಲಾ ದಿನಗಳಲ್ಲಿಯೂ ಹೀಗೆ ಪ್ರಾಯೋಗಿಕ ಕೆಲಸವನ್ನು ಅವರು ಮಾಡುತ್ತಿದ್ದು ಇದೀಗ ನೀರಿನ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಂಡಿರುವುದು ಖುಷಿ ಕೊಟ್ಟಿದೆ ಎನ್ನುತ್ತಾರೆ ಅವರು. ದೇಶಾದ್ಯಂತ ಇರುವ ನೀರಿನ ಸಮಸ್ಯೆಗೆ ಇದು ಪರಿಹಾರ ನೀಡಬಲ್ಲದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸುತ್ತಾರೆ. ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ಇದು ಬಹಳ ಪ್ರಯೋಜನಕಾರಿಯಾಗಿದೆ. ಹೆಚ್ಚಿನ ಮಾಹಿತಿ ನಿಮಗೂ ಬೇಕಿದ್ದಲ್ಲಿ [email protected]. ನಲ್ಲಿ ನೀವು ಅವರನ್ನು ಸಂಪರ್ಕಿಸಬಹುದು.

Best Mobiles in India

Read more about:
English summary
Wind Turbine Can Generate Electricity And Water Built By Andhra Engineer

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X