3 ತಿಂಗಳಿನಲ್ಲಿ 3 ಸಾವಿರ ಉದ್ಯೋಗ ಕಡಿತ ಮಾಡಿದ ವಿಪ್ರೊ!!

Written By:

ದೇಶಿಯ ಐ.ಟಿ ಉದ್ದಿಮೆಗಳಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎನ್ನುವ ಹಲವು ವರದಿಗಳ ಬೆನ್ನಲ್ಲೇ ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಕಂಪೆನಿ ವಿಪ್ರೊ ಬಾರಿ ಉದ್ಯೋಗಗಳನ್ನು ಕಡಿಮೆ ಮಾಡಿದೆ!.ವಿಪ್ರೊ ಉದ್ಯೋಗಿಗಳ ಸಂಖ್ಯೆ ಕೇವಲ ಮೂರು ತಿಂಗಳಿನಲ್ಲಿ 3 ಸಾವಿರದಷ್ಟು ಕಡಿಮೆಯಾಗಿದೆ ಎಂದು ವರದಿಯಾಗಿದೆ.!!

ಜೂನ್‌ ತಿಂಗಳ ತ್ರೈಮಾಸಿಕದಲ್ಲಿ 1,66,790ರಷ್ಟಿದ್ದ ಉದ್ಯೋಗಿಗಳ ಸಂಖ್ಯೆ ಸೆಪ್ಟೆಂಬರ್‌ ತಿಂಗಳಾಂತ್ಯಕ್ಕೆ 1,63,759ಕ್ಕೆ ಇಳಿದಿದ್ದು, ಒಟ್ಟು 3,031 ಉದ್ಯೋಗಿಗಳು ಕಡಿಮೆಯಾಗಿದ್ದಾರೆ.ಆದರೆ, ಈ ಅವಧಿಯಲ್ಲಿ ಯಾವುದೇ ಹೊಸ ಉದ್ಯೋಗಿಯನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ವಿಪ್ರೊ ಸಂಸ್ಥೆ ಮಾಹಿತಿ ನೀಡಿಲ್ಲ.!!

 3 ತಿಂಗಳಿನಲ್ಲಿ 3 ಸಾವಿರ ಉದ್ಯೋಗ ಕಡಿತ ಮಾಡಿದ ವಿಪ್ರೊ!!

ಉದ್ಯೋಗ ಕಡಿತಗೊಂಡಿರುವ ಸುದ್ದಿಗೆ ತದ್ವಿರುದ್ದ ಎನ್ನುವಂತೆ ವಿಪ್ರೊದ ದ್ವಿತೀಯ ತ್ರೈಮಾಸಿಕದ ನಿವ್ವಳ ಲಾಭವು ಶೇ 5.57ರಷ್ಟು ಹೆಚ್ಚಾಗಿ ವಿಪ್ರೊ ಕಂಪೆನಿ 2,192 ಕೋಟಿಗಳಷ್ಟು ಲಾಭ ಪಡೆದಿದ್ದು, ಇದು ಈ ಮೊದಲಿನ ಅಂದಾಜಿಗಿಂತ ಹೆಚ್ಚಾಗಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಲಾಭ 2,067 ಕೋಟಿಗಳಷ್ಟಿತ್ತು.!!

 3 ತಿಂಗಳಿನಲ್ಲಿ 3 ಸಾವಿರ ಉದ್ಯೋಗ ಕಡಿತ ಮಾಡಿದ ವಿಪ್ರೊ!!

ಹಣಕಾಸು, ಬ್ಯಾಂಕಿಂಗ್‌ ಮತ್ತು ವಿಮೆ ಸೇವೆಗಳ ಮೂಲಕ ವಿಪ್ರೊಗೆ ಸಿಗುವ ವರಮಾನವು ಶೇ 8.2ರಷ್ಟು ಏರಿಕೆಯಾಗಿರುವುದರಿಂದ ಲಾಭದಲ್ಲಿ ಈ ಹೆಚ್ಚಳ ಕಂಡು ಬಂದಿದೆ. ಐ.ಟಿ ಸೇವೆಗಳಿಂದ 13,169 ಕೋಟಿಗಳಷ್ಟು ವರಮಾನ ಬಂದಿದ್ದು, ಡಿಸೆಂಬರ್‌ಗೆ ವೇಳೆಗೆ 13,351 ಕೋಟಿಗೆ ಏರಲಿದೆ ಎಂದು ಸಂಸ್ಥೆ ಅಂದಾಜಿಸಿದೆ.

ಓದಿರಿ: ಜಿಯೋವಿನ ಹೊಸ ಆಫರ್ ಘೋಷಣೆ!..ಟೆಲಿಕಾಂಗೆ ಭಾರಿ ಶಾಕ್!!

English summary
Profit for the quarter ended June 2017 stood at Rs 2,192 crore.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot