Subscribe to Gizbot

3ನೇ ಮಹಾಯುದ್ಧ ಸಂಭವಿಸಿದ್ದೇ ಆದಲ್ಲಿ ಏನಾಗಬಹುದು?

Written By:

ವಿಶ್ವ ಯುದ್ಧ 3 ಎಂಬ ಪದವೇ ಸಾಮಾಜಿಕ ತಾಣದಲ್ಲಿ ಭಾರೀ ತಲ್ಲಣವನ್ನೇ ಉಂಟುಮಾಡಿದ್ದು ಟರ್ಕಿಯು ರಷ್ಯಾದ ಜೆಟ್ ಅನ್ನು ಏರ್‌ಸ್ಪೇಸ್‌ನಿಂದ ಕೆಳಗಿಳಿಸಲು ಶೂಟ್ ಮಾಡಿರುವುದು ನ್ಯೂಕ್ಲಿಯರ್ ಆಯುಧವನ್ನು ಬಳಸಿಕೊಂಡಾಗಿದೆ. ಯುದ್ಧವು ಹೇಗಿರುತ್ತದೆ ಎಂಬುದಕ್ಕಿಂತಲೂ ಅದರ ತೀವ್ರತೆ ಯಾವ ಮಟ್ಟದಲ್ಲಿರುತ್ತದೆ ಎಂಬುದನ್ನೇ ಪ್ರತಿಯೊಂದು ಯುದ್ಧವು ತಿಳಿಯಪಡಿಸುವ ಅಂಶವಾಗಿದೆ.

ಪ್ರಸ್ತುತ ಸಕ್ರಿಯವಾಗಿ ಹೆಚ್ಚಿನ ಸಂಖ್ಯೆಯ ನ್ಯೂಕ್ಲಿಯರ್ ಆಯುಧಗಳಿವೆ ಆರ್ಮ್ ಕಂಟ್ರೋಲ್ ಅಸೋಸಿಯೇಶನ್ ಹೇಳುವಂತೆ ರಷ್ಯಾವು 7,700 ಆಯುಧಗಳನ್ನು ಸೇವೆಯಲ್ಲಿ ಹೊಂದಿದ್ದರೆ, ಅವುಗಳಲ್ಲಿ 4,500 ಅನ್ನು ದಾಸ್ತಾನು ಮಾಡಲಾಗಿದೆ ಅಂತೆಯೇ 1548 ಅನ್ನು ಕ್ಷಿಪಣಿಗಳು ಹಾಗೂ ವಾಯು ನೆಲೆಯ ಮೇಲೆ ನಿಯೋಜಿತಗೊಂಡಿವೆ.

ಹಾಗಾದರೆ ಇಂದಿನ ಲೇಖನದಲ್ಲಿ ಮೂರನೇ ಮಹಾಯುದ್ಧ ನಡೆದಾಗ ಸಂಭವಿಸಬಹುದಾದ ಘಟನೆಗಳ ಬಗ್ಗೆ ಅವಲೋಕಿಸೋಣ. ಈಗಿನ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಗಳಿದ್ದರೂ ಮಹಾಯುದ್ಧ ಸಂದರ್ಭದಲ್ಲಿ ಪರಮಾಣು ದಾಳಿಯೇ ಮೇಲ್ಮಟ್ಟದ್ದಾಗಿರುತ್ತದೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಾಲ್ಕು ನಿಮಿಷದ ಎಚ್ಚರಿಕೆ

#1

ನಾಲ್ಕು ನಿಮಿಷದ ಎಚ್ಚರಿಕೆ ವ್ಯವಸ್ಥೆ ಅಂದರೆ ಸೈರನ್‌ಗಳ ರಾಷ್ಟ್ರೀಯ ವ್ಯವಸ್ಥೆಯು ನ್ಯೂಕ್ಲಿಯರ್ ದಾಳಿಯಾದ ಸಂದರ್ಭದಲ್ಲಿ ಮೊಳಗಿದೆ

ಬದಲಾಗಿ ಪಠ್ಯ ಸಂದೇಶ

#2

ನ್ಯೂಕ್ಲಿಯರ್ ದಾಳಿ ನಡೆಯಬಹುದಾದ ಮುನ್ಸೂಚನೆಯನ್ನು ನೀಡುವ ಪಠ್ಯ ಸಂದೇಶವನ್ನು ಸರಕಾರ ಪರೀಕ್ಷಿಸಿರಬಹುದು. ನ್ಯಾಶನಲ್ ಸೆಕ್ಯುರಿಟಿ ಕೌನ್ಸಿಲ್ 2013 ರಲ್ಲಿ ಈ ಪರೀಕ್ಷೆಯನ್ನು ಗ್ಲಾಸ್ ಗೊ ಮತ್ತು ಯೊಕ್ಶೈರ್‌ನಲ್ಲಿ ನಡೆಸಿದೆ.

ಸಂದೇಶ ಬಂದೊಡನೆ ಮುನ್ಸೂಚನೆ

#3

ತಂತ್ರಜ್ಞಾನ ಅಷ್ಟೊಂದು ಮುಂದುವರಿಯದೇ ಇದ್ದುದಕ್ಕಾಗಿ ನಾಲ್ಕು ನಿಮಿಷದ ಎಚ್ಚರಿಕೆ ಪ್ರಾಯಶಃ ಮೂರು ನಿಮಿಷಗಳಲ್ಲಿ ಕೊನೆಗೊಂಡಿರಬಹುದು.

ಬಾಂಬ್ ಬಳಿ ನೀವಿದ್ದರೆ ಎಲ್ಲವೂ ಮುಗಿದಂತೆಯೇ?

#4

ಹಿರೋಶಿಮಾ ಬಾಂಬ್ ದಾಳಿಯ ಪ್ರತ್ಯಕ್ಷದರ್ಶಿಗಳು ಹೇಳುವಂತೆ ಸ್ಫೋಟದ ಸಮೀಪದಲ್ಲಿದ್ದವರು ಸಂಪೂರ್ಣವಾಗಿ ಅಳಿದೇ ಹೋಗಿದ್ದಾರೆ ಎಂದಾಗಿದೆ. ಸ್ಫೋಟ ನಡೆಯುವಾಗ ಮಧ್ಯಭಾಗದಲ್ಲಿದ್ದವರು ಸಂಪೂರ್ಣವಾಗಿ ನಶಿಸಿ ಹೋಗಿದ್ದು ಇದಕ್ಕೆ ಯಾವುದೇ ಕುರುಹು ದೊರೆತಿಲ್ಲ ಎಂದಾಗಿದೆ.

ಅಟೊಮಿಕ್ ಬಿಸಿ

#5

ಇದರ ಅಟೊಮಿಕ್ ಬಿಸಿ ಎಷ್ಟು ಪರಿಣಾಮಕಾರಿಯಾಗಿರುವಂತಹದ್ದು ಎಂದರೆ ಬೂದಿಯಾಗುವವರೆಗೆ ಅವರನ್ನು ಇದು ಸುಟ್ಟಿದೆ ಎಂದಾಗಿದೆ. ಕೆಲವೊಮ್ಮೆ ಬೂದಿಗೂ ಅಲ್ಲಿ ಜಾಗವಿಲ್ಲ ಎಂಬಂತಾಗಿತ್ತು.

ಹೈಡ್ರೋಜನ್ ಸಿಡಿತಲೆ

#6

ಹಿರೋಶಿಮಾದಲ್ಲಿ ಬಿದ್ದ ಬಾಂಬ್ ಹೈಡ್ರೋಜನ್ ಸಿಡಿತಲೆಗಳ ಗಾತ್ರದಲ್ಲಿದ್ದು ಇದೀಗ ರಷ್ಯಾ ಮತ್ತು ಯುಎಸ್ ಇದೇ ಯುದ್ಧ ತಂತ್ರಗಾರಿಕೆಯನ್ನು ಬಳಸುತ್ತಿದ್ದಾರೆ.

ಸಂಪೂರ್ಣ ನಗರವೇ ಧ್ವಂಸ

#7

ಆರು ಮಿಲಿಯನ್ ಜನರು ಹತರಾಗಿದ್ದು, ಮನೆ ಕಟ್ಟಡಗಳು ಧ್ವಂಸಗೊಂಡಿವೆ ಅಂತೆಯೇ ಮಿಲಿಯಗಟ್ಟಲೆ ಜನರು ರೇಡಿಯೊಕ್ಟೀವ್ ವಿಷದ ದಾಳಿಗೆ ಸಿಲುಕಿದ್ದು ಇದು 130 ಮೈಲುಗಳಷ್ಟು ಹಬ್ಬುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ನ್ಯೂಕ್ ಮ್ಯಾಪ್

#8

ನ್ಯೂಕ್ ಮ್ಯಾಪ್ ತೋರಿಸಿರುವಂತೆ ಅತಿ ದೊಡ್ಡ ಸೋವಿಯತ್ ಹೈಡ್ರೋಜನ್ ಬಾಂಬ್ ಲಂಡನ್‌ನಲ್ಲಿ ಬಿದ್ದಾಗ ಇದು ಹಬ್ಬಲು ಹೆಚ್ಚು ಸಮಯ ಬೇಕಾಗಿಲ್ಲ ಎಂದಾಗಿದೆ.

ಸಾಮರ್ಥ್ಯ

#9

ಆರಂಭ ಸ್ಫೋಟವು 10 ಮಿಲಿಯನ್ ಜನರನ್ನು ಕೊಂದು ಅವರನ್ನು ಗಾಯಾಳುಗಳನ್ನಾಗಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ ಎಂದಾಗಿದೆ.

ಹೆಚ್ಚಿನ ಪ್ರಮಾಣದ ನ್ಯೂಕ್ಲಿಯರ್ ದಾಳಿಯಿಂದ ವಿಶ್ವವೇ ನಾಶ

#10

1979 ರಲ್ಲಿ ಯುಎಸ್ ಕಾಂಗ್ರೆಸ್‌ನ ತಂತ್ರಜ್ಞಾನ ಕಚೇರಿಯು ವರದಿಯೊಂದನ್ನು ಪ್ರಕಟಪಡಿಸಿದ್ದು ಇದರಲ್ಲಿ ಯುದ್ಧದ ದಾಳಿಯ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಪರಮಾಣು ದಾಳಿಯ ಪರಿಣಾಮವನ್ನು ಅದು ತಿಳಿಸಿದೆ.

ನಾಶ

#11

ಈ ಸ್ಫೋಟದಿಂದ ನಾಶ ಉಂಟಾಗುವುದೇ ಖಂಡಿತವಾಗಿದ್ದು, ನೂರಾರು ಮಿಲಿಯಗಟ್ಟಲೆ ಜನರು ಮರಣವನ್ನು ಹೊಂದಲಿದ್ದಾರೆ, ಕ್ಯಾನ್ಸರ್ ಮತ್ತು ರೇಡಿಯೇಶನ್ ರೋಗ ಇವರನ್ನು ಕಾಡಬಹುದಾಗಿದೆ.

80% ಜನಸಂಖ್ಯೆ ಮರಣ

#12

ಯುಎಸ್‌ನಲ್ಲಿರುವ 80% ಜನಸಂಖ್ಯೆ ಮರಣ ಹೊಂದುವುದು ಖಾತ್ರಿಯಾಗಿದ್ದು ನಂತರ ವಿಕಿರಣ ದಾಳಿ ಅವರ ಜೀವನವನ್ನು ಧ್ವಂಸ ಮಾಡಲಿದೆ ಎಂದಾಗಿದೆ.

ಪ್ರಥಮ ಪರಿಣಾಮಗಳು

#12

ಬ್ರಿಟೀಷ್ ಸರಕಾರಿ ಮಾಧ್ಯಮ ಹೇಳುವಂತೆ, ಇದು ಯುದ್ಧಕಾಲದ ಪ್ರಸಾರಣಾ ಸೇವೆಯಾಗಿದ್ದು, ನ್ಯೂಕ್ಲಿಯರ್ ಆಯುಧಗಳಿಂದ ಈ ದೇಶವನ್ನು ಮುತ್ತಿಗೆ ಹಾಕಲಾಗಿದೆ. ಇದರಿಂದ ತಪ್ಪಿಸಿಕೊಳ್ಳುವುದು ಅಷ್ಟೊಂದು ಸುರಕ್ಷಿತವಲ್ಲ. ನಿಮ್ಮ ಮನೆಗಳನ್ನು ಬಿಟ್ಟು ಹೊರಬೀಳುವುದರಿಂದ ನೀವು ಅಪಾಯಕ್ಕೆ ಸಿಲುಕುವುದು ಖಂಡಿತವಾಗಿದೆ.

ಪರಮಾಣು ಸ್ಫೋಟ

#14

ನೀವು ಮನೆಯನ್ನು ತ್ಯಜಿಸಿದಲ್ಲಿ, ಆಹಾರ, ನೀರು, ವಸತಿ ಮತ್ತು ಸುರಕ್ಷತೆಯಿಲ್ಲದೆ ನೀವು ಕಳೆಯಬೇಕಾದೀತು. ರೇಡಿಯೊಕ್ಟೀವ್ ಹೊರಬಿದ್ದಲ್ಲಿ, ಇದು ಪರಮಾಣು ಸ್ಫೋಟಕ್ಕೆ ಕಾರಣವಾಗುತ್ತದೆ. ಇದಕ್ಕೆ ನೇರವಾಗಿ ನೀವು ಸಿಲುಕಿದಲ್ಲಿ ಹೆಚ್ಚು ಅಪಾಯಕಾರಿ ಎಂದೆನಿಸುತ್ತದೆ.

ಪರಿಸರ ನಾಶ

#15

ನ್ಯೂಕ್ಲಿಯರ್ ದಾಳಿಯ ಪರಿಣಾಮ ಎಷ್ಟು ತೀವ್ರವಾಗಿರುತ್ತದೆಂದರೆ ಇದು ಎಷ್ಟೋ ಶತಮಾನಗಳ ಕಾಲ ಹಾಗೆಯೇ ಇರುತ್ತದೆ ಮತ್ತು ಇದೊಂದು ನಿಧಾನಗತಿಯ ವಿಷವಾಗಿದೆ.

ಗಾಳಿಯಲ್ಲಿ ಬಿಸಾಡಿದ ಕಾರ್ಬನ್

#16

ಗಾಳಿಯಲ್ಲಿ ಬಿಸಾಡಿದ ಕಾರ್ಬನ್ ವಿಶ್ವದ ತಾಪಮಾನದ ಮೇಲೆ ಭೀಕರ ಪರಿಣಾಮವನ್ನು ಬೀರುತ್ತದೆ. ಭೀಕರ ಮಳೆಯುಂಟಾಗಿ ಬೆಳೆಗಳ ಬೆಳೆಯುವಿಕೆಯ ಮೇಲೆ ಇದು ಹಾನಿಯನ್ನು ಉಂಟುಮಾಡಲಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಇಂಟರ್ನೆಟ್ ವೈರಲ್ ಆಗಿರುವ ಕಣ್ಸೆಳೆಯುವ ಫೋಟೋಗಳು
ಅದ್ಭುತ! 15 ರ ಹರೆಯದ ಹುಡುಗನಿಂದ ಬಯಲಾದ ಮಾಯನ್ ನಾಗರೀಕತೆ
ಹಾಲಿವುಡ್ ಬಾಲಿವುಡ್ ಅಂಗಳದಲ್ಲಿ ಸದ್ದುಮಾಡಿದ ವಿಎಫ್‌ಎಕ್ಸ್

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The words ‘World War 3’ trended on social media worldwide as tension rose over Turkey shooting down a Russian jet over its airspace.But what would actually happen?
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot