ಟಾಪ್ 14 ಫೇಸ್‌ಬುಕ್ ರೂಲ್ಸ್ ನೀವು ಪಾಲಿಸುತ್ತೀರಾ?

Written By:

ಫೇಸ್‌ಬುಕ್ ಜಾಲತಾಣ ಹೆಚ್ಚು ಪ್ರಖ್ಯಾತಿಯಲ್ಲಿರುವ ವಿಷಯ ನಿಮಗೆ ತಿಳಿದೇ ಇದೆ. ಎಲ್ಲೆಲ್ಲೋ ಇರುವ ಸ್ನೇಹಿತರನ್ನು ಸಂಪರ್ಕದಲ್ಲಿರಿಸಿಕೊಳ್ಳಲು ಈ ತಾಣ ಸಹಾಯ ಮಾಡುತ್ತದೆ. ಹೊಸ ಹೊಸ ಮಾಹಿತಿಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು, ಗೆಳೆಯರೊಂದಿಗೆ ಚಾಟ್ ಮಾಡುವುದು, ಈವೆಂಟ್‌ ವಿವರಗಳನ್ನು ತಿಳಿಸುವುದು, ಹೀಗೆ ಫೇಸ್‌ಬುಕ್ ತಾಣ ಹಲವಾರು ಪ್ರಮುಖ ಘಟನೆಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಆದರೆ ಈ ತಾಣವನ್ನು ಹೆಚ್ಚು ಕಿರಿಕಿರಿಯನ್ನುಂಟು ಮಾಡುವ ಸಂಗತಿಗಳಿಗಾಗಿ ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ಆಗ ನಿಮ್ಮನ್ನು ಸ್ನೇಹಿತರು ಫೇಸ್‌ಬುಕ್‌ನಲ್ಲಿ ಬ್ಲಾಕ್ ಮಾಡುವುದು ಖಂಡಿತ. ಐದು ಐದು ನಿಮಿಷಗಳಿಗೊಮ್ಮೆ ನೀವೇನು ಮಾಡುತ್ತಿದ್ದೀರಿ ಎಂಬುದನ್ನು ದಾಖಲಿಸುವುದು, ಹೆಚ್ಚು ಫೋಟೋಗಳು, ಸೆಲ್ಫಿಗಳನ್ನು ಪೋಸ್ಟ್ ಮಾಡುತ್ತಿರುವುದು ಮೊದಲಾದ ಕೆಲಸಗಳನ್ನು ನೀವು ಮಾಡುತ್ತಿದ್ದೀರಿ ಎಂದಾದಲ್ಲಿ ಅದಕ್ಕೆ ಈಗಲೇ ಕಡಿವಾಣ ಹಾಕಿ. ಇಂದಿನ ಲೇಖನದಲ್ಲಿ ಫೇಸ್‌ಬುಕ್‌ನಲ್ಲಿ ಹೆಚ್ಚು ಹೆಚ್ಚು ಕಿರಿಕಿರಿಯನ್ನುಂಟು ಮಾಡುವ 14 ಸಂಗತಿಗಳನ್ನು ನಾವಿಲ್ಲಿ ನೀಡುತ್ತಿದ್ದು ಆ ಕೆಲಸಗಳನ್ನು ನೀವು ಮಾಡುತ್ತಿದ್ದೀರಿ ಎಂದಾದಲ್ಲಿ ಅದನ್ನೀಗಲೇ ತ್ಯಜಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಮೋಶನ್‌ಗಾಗಿ ಫೇಸ್‌ಬುಕ್ ಬಳಕೆ

ಪ್ರಮೋಶನ್‌ಗಾಗಿ ಫೇಸ್‌ಬುಕ್ ಬಳಕೆ

#1

ನೀವು ಹೊಸದಾಗಿ ಯಾವುದಾದರೂ ವ್ಯವಹಾರ ಮಾಡುತ್ತಿದ್ದೀರಿ ಎಂದಾದಲ್ಲಿ ಅದನ್ನು ಒಮ್ಮೆ ಪೋಸ್ಟ್ ಮಾಡಿ ಆದರೆ ಆಗಾಗ್ಗೆ ಇಂತಹುದೇ ಪೋಸ್ಟ್‌ಗಳನ್ನೇ ಅಪ್‌ಡೇಟ್ ಮಾಡುವುದು ಫೇಸ್‌ಬುಕ್ ಗೆಳೆಯರಿಗೆ ಕಿರಿಕಿರಿಯನ್ನುಂಟು ಮಾಡಬಹುದು.

ನಿಮ್ಮ ಮಗುವಿನ ಬಗ್ಗೆ ಪೋಸ್ಟ್ ಮಾಡುವುದು

ನಿಮ್ಮ ಮಗುವಿನ ಬಗ್ಗೆ ಪೋಸ್ಟ್ ಮಾಡುವುದು

#2

ನಿಮಗೆ ನಿಮ್ಮ ಮಕ್ಕಳು ಮುದ್ದಾಗಿರಬಹುದು. ಆದರೆ ಅವುಗಳು ಮಾಡುವ ಸಣ್ಣ ಸಣ್ಣ ಸಂಗತಿಗಳನ್ನೇ ಹಿರಿದಾಗಿಸಿ ಅದನ್ನು ಪೋಸ್ಟ್ ಮಾಡಲು ಹೋಗದಿರಿ. ಇದರಿಂದ ನೋಡುಗರಿಗೆ ಇರಿಸು ಮುರಿಸಾಗುವುದು ಖಂಡಿತ.

ಫೋಟೋ ಟ್ಯಾಗ್ ಮಾಡುವುದು

ಫೋಟೋ ಟ್ಯಾಗ್ ಮಾಡುವುದು

#3

ಸುಮ್ಮ ಸುಮ್ಮನೇ ಬೇಕಾ ಬಿಟ್ಟಿ ಫೋಟೋಗಳಿಗೆ ಸ್ನೇಹಿತರನ್ನು ಟ್ಯಾಗ್ ಮಾಡದಿರಿ. ಈ ಸ್ನೇಹಿತರಿಗೆ ನೀವು ಟ್ಯಾಗ್ ಮಾಡುವುದು ಇಷ್ಟವಾಗದೇ ಇರುವ ಸಂಗತಿಯಾಗಿದ್ದಲ್ಲಿ ಇದು ನಿಮಗೆ ತೊಂದರೆಯನ್ನುಂಟು ಮಾಡಬಹುದು ಅಂತೆಯೇ ನಿಮ್ಮ ಗೆಳೆತನ ಕೊನೆಯಾಗಬಹುದು.

ಖಾಸಗಿ ವಿಷಯಗಳ ಪ್ರಸ್ತುತಿ ಬೇಡ

ಖಾಸಗಿ ವಿಷಯಗಳ ಪ್ರಸ್ತುತಿ ಬೇಡ

#4

ನಿಮ್ಮ ಹೊಸ ಕೆಲಸದಲ್ಲಿ ನಿಮಗುಂಟಾದ ತೊಂದರೆ ಇಲ್ಲವೇ ನಿಮ್ಮ ರಜಾದಿನಗಳಲ್ಲಿ ನೀವು ಅನುಭವಿಸಿದ ಕಷ್ಟಗಳನ್ನೇ ಸುಮ್ಮನೇ ವಿವರಿಸಿ ಫೇಸ್‌ಬುಕ್‌ನಲ್ಲಿ ಬರೆಯದಿರಿ.

ತ್ವರಿತ ಮೆಸೆಂಜರ್‌ನಂತೆ ಫೇಸ್‌ಬುಕ್ ಬಳಸುವುದು

ತ್ವರಿತ ಮೆಸೆಂಜರ್‌ನಂತೆ ಫೇಸ್‌ಬುಕ್ ಬಳಸುವುದು

#5

ನಿಮ್ಮ ಫೋನ್‌ನಲ್ಲಿ ಫೇಸ್‌ಬುಕ್ ಇದೆ ಎಂದ ಮಾತ್ರಕ್ಕೆ ಮೆಸೇಜ್ ಮಾಡುವುದನ್ನೇ ನಿಮ್ಮ ಕೆಲಸವಾಗಿಸಬೇಡಿ. ಬೇಕಾದಲ್ಲಿ ಮಾತ್ರವೇ ಸಂದೇಶಗಳನ್ನು ರವಾನಿಸಿಕೊಳ್ಳಿ

ಇತರರ ಮಕ್ಕಳ ಫೋಟೋ ಪೋಸ್ಟ್ ಮಾಡುವುದು

ಇತರರ ಮಕ್ಕಳ ಫೋಟೋ ಪೋಸ್ಟ್ ಮಾಡುವುದು

#6

ನಿಮ್ಮ ನೆರೆಹೊರೆಯವರ ಇಲ್ಲವೇ ಸ್ನೇಹಿತರ ಮಕ್ಕಳ ಫೋಟೋವನ್ನು ಅವರಿಗೆ ತಿಳಿಸದೆಯೇ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡದಿರಿ. ಅವರಿಗೆ ಈ ವಿಷಯವನ್ನು ತಿಳಿಸಿ ನಂತರವಷ್ಟೇ ಅದನ್ನು ಫೇಸ್‌ಬುಕ್‌ನಲ್ಲಿ ಹಾಕಿ.

ಗೇಮ್ ರಿಕ್ವೆಸ್ಟ್

ಗೇಮ್ ರಿಕ್ವೆಸ್ಟ್

#7

ಕ್ಯಾಂಡಿಕ್ರಶ್‌ನಂತಹ ಗೇಮ್ ವಿನಂತಿಗಳನ್ನು ಸ್ನೇಹಿತರಿಗೆ ಕಳುಹಿಸುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದರಿಂದ ಕಿರಿಕಿರಿ ಉಂಟಾಗುವುದು ಸಹಜವೇ ಆಗಿದೆ.

ಎಲ್ಲವನ್ನೂ ಪೋಸ್ಟ್ ಮಾಡದಿರಿ

ಎಲ್ಲವನ್ನೂ ಪೋಸ್ಟ್ ಮಾಡದಿರಿ

#8

ನೀವು ಮಾಲ್‌ಗೆ ಭೇಟಿ ನೀಡುತ್ತಿರುವ ಸಂಗತಿ, ಸಿನಿಮಾಗಳನ್ನು ನೋಡುವುದು ಮೊದಲಾದ ನಿಮ್ಮ ಚಟುವಟಿಕೆಗಳನ್ನೆಲ್ಲಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಬೇಡಿ.

ಹಳೆಯ ಗೆಳತಿ/ಗೆಳೆಯನನ್ನು ದೂರುವುದು

ಹಳೆಯ ಗೆಳತಿ/ಗೆಳೆಯನನ್ನು ದೂರುವುದು

#9

ನಿಮ್ಮ ಮಾಜಿ ಪ್ರೇಯಸಿ ಅಥವಾ ಪ್ರಿಯಕರ ನಿಮ್ಮ ಮನಸ್ಸಿಗೆ ನೋವುಂಟು ಮಾಡಿರುವುದು ನಿಜವೇ. ಆದರೆ ನಿತ್ಯವೂ ಅವರನ್ನೇ ದೂಷಿಸುತ್ತಾ ಫೇಸ್‌ಬುಕ್‌ನಲ್ಲಿ ಇದನ್ನೇ ಹಾಕದಿರಿ. ನಿತ್ಯವೂ ಇದೇ ಸುದ್ದಿಯನ್ನು ಓದಲು ಯಾರಿಗೆ ಇಷ್ಟವಿರುವುದಿಲ್ಲ.

ಸ್ನೇಹಿತರ ಸಮಸ್ಯೆಗಳನ್ನು ಹೇಳಿಕೊಳ್ಳುವುದು

ಸ್ನೇಹಿತರ ಸಮಸ್ಯೆಗಳನ್ನು ಹೇಳಿಕೊಳ್ಳುವುದು

#10

ನಿಮ್ಮ ಸ್ನೇಹಿತರ ಯಾವುದೇ ಸಮಸ್ಯೆಗಳನ್ನು ತೋಡಿಕೊಳ್ಳಲು ಫೇಸ್‌ಬುಕ್ ವೇದಿಕೆಯಾಗಿದ್ದರೂ ಅದಕ್ಕೆ ತಕ್ಕುದಾದ ಸಮಯ ಮತ್ತು ಸಂದರ್ಭವನ್ನು ಅರಿಸಿಕೊಳ್ಳಿ. ಆಗಾಗ್ಗೆ ಇದರ ಬಗ್ಗೆಯೇ ನೀವು ಕೊರೆಯುವುದರಿಂದ ಇತರ ಸ್ನೇಹಿತರುಗಳಿಗೂ ಕಿರಿಕಿರಿ ಉಂಟಾಗಬಹುದು ಎಂಬುದು ನಿಮ್ಮ ಮನದಲ್ಲಿರಲಿ.

ಫೇಸ್‌ಬುಕ್‌ಗೆ ಇತರ ಸಾಮಾಜಿಕ ಮಾಧ್ಯಮವನ್ನು ಲಿಂಕ್ ಮಾಡುವುದು

ಫೇಸ್‌ಬುಕ್‌ಗೆ ಇತರ ಸಾಮಾಜಿಕ ಮಾಧ್ಯಮವನ್ನು ಲಿಂಕ್ ಮಾಡುವುದು

#11

ನೀವು ಹೊಂದಿರುವ ಇತರೆ ಸಾಮಾಜಿಕ ಮಾಧ್ಯಮಗಳನ್ನು ಫೇಸ್‌ಬುಕ್‌ಗೆ ಲಿಂಕ್ ಮಾಡುವುದರಿಂದಲೂ ಇತರರು ಕಿರಿಕಿರಿಯನ್ನು ಅನುಭವಿಸುತ್ತಾರೆ.

ರಾಜಕೀಯ ಚರ್ಚೆ

ರಾಜಕೀಯ ಚರ್ಚೆ

#12

ಫೇಸ್‌ಬುಕ್ ಮನರಂಜಕ ನೆಲೆಯಲ್ಲಿರುವ ತಾಣವಾಗಿರುವುದರಿಂದ ರಾಜಕೀಯದಂತಹ ತೀವ್ರ ಸ್ವರೂಪದ ವಿಷಯಗಳನ್ನು ಇಲ್ಲಿ ಚರ್ಚಿಸುವುದು ಅಷ್ಟೊಂದು ಸೂಕ್ತವಲ್ಲ. ನಿಮ್ಮ ರಾಜಕೀಯ ಆಸಕ್ತಿ ಇತರರಿಗೆ ಉಪದ್ರವಕಾರಿ ವಿಷಯವಾಗಿರಬಹುದು. ಆದ್ದರಿಂದ ಈ ಅಂಶದ ಮೇಲೆ ಗಮನ ನೀಡಿ.

ಗಮನ ಸೆಳೆಯುವ ಪೋಸ್ಟ್‌ಗಳು

ಗಮನ ಸೆಳೆಯುವ ಪೋಸ್ಟ್‌ಗಳು

#13

ಫೇಸ್‌ಬುಕ್‌ನಲ್ಲಿ ಯಾವಾಗಲೂ ಗಮನ ಸೆಳೆಯುವ ಪೋಸ್ಟ್‌ಗಳನ್ನು ಹಾಕದಿರಿ. ಇದರಿಂದ ಪೋಸ್ಟ್ ನೋಡುವವರಿಗೂ ಕಿರಿಕಿರಿ ತಪ್ಪಿದ್ದಲ್ಲ.

ಫೇಸ್‌ಬುಕ್ ಅನ್ನು ಘೋಷಣಾ ಸೇವೆಯಂತೆ ಬಳಸುವುದು

ಫೇಸ್‌ಬುಕ್ ಅನ್ನು ಘೋಷಣಾ ಸೇವೆಯಂತೆ ಬಳಸುವುದು

#14

ನಿಮ್ಮ ಮನೆಯಲ್ಲಿ ಯಾರಾದರೂ ಹಿರಿಯರು ಆರೋಗ್ಯವಾಗಿಲ್ಲ ಎಂದಾದಲ್ಲಿ ಅದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವ ಚಾಳಿಯನ್ನು ಇರಿಸಿಕೊಳ್ಳದಿರಿ. ಇದು ನಿಜಕ್ಕೂ ಖೇದಕರವಾಗಿರುತ್ತದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಹೆಚ್ಚಿನ ಸುದ್ದಿಗಳನ್ನು ಓದಲು ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are the 14 most annoying social media moves you'll want to avoid.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot