ಏಕಾಂಗಿ ಯುವಕ, ಯುವತಿಯರಿಗೆ ಕಿಚ್ಚು ಹಚ್ಚಲಿದೆ 'ಫೇಸ್‌ಬುಕ್‌'ನ ಡೇಟಿಂಗ್ ಆಪ್!!

|

ಫೇಸ್‌ಬುಕ್ ಒಂದು ಹೊಸದಾದ ಅಪ್ಲಿಕೇಷನ್ ಅನ್ನು ಈ ವರ್ಷದ ಅಂತ್ಯದ ವೇಳೆಗೆ ಅನಾವರಣ ಮಾಡಲು ಮುಂದಾಗಿದೆ. ಇದು ಸಾಮಾನ್ಯ ಅಪ್ಲಿಕೇಷನ್ ಆಗಿದ್ದರೆ ನಾವೇನು ವಿಶೇಷವಾಗಿ ನಿಮಗೆ ಹೇಳುತ್ತಿರಲಿಲ್ಲ. ಆದರೆ, ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಬಿಡುಗಡೆ ಮಾಡುತ್ತಿರುವ ಈ ವಿಷಯ ಯುವಕ, ಯುವತಿಯರಿಗೆ ರೂಮಾಂಚನಗೊಳಿಸಲಿದೆ.!

ಹೌದು, ವಿಶ್ವದಲ್ಲಿಯೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ತನ್ನ ಬಳಕೆದಾರರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಅದರಲ್ಲಿಯೂ ಏಕಾಂಗಿಯಾಗಿರುವ ಯುವಕ, ಯುವತಿಯರಿಗೆ ಈ ಸುದ್ದಿ ಭಾರೀ ಖುಷಿತಂದಿದೆ. ಯಾಕೆಂದರೆ ಫೇಸ್‌ಬುಕ್ ಇನ್ನು ಮುಂದೆ ತನ್ನ ಬಳಕೆದಾರರಿಗೆ 'ಡೇಟಿಂಗ್ ಸೇವೆ'ಯನ್ನು ನೀಡಲಿದೆ!

ಏಕಾಂಗಿ ಯುವಕ, ಯುವತಿಯರಿಗೆ ಕಿಚ್ಚು ಹಚ್ಚಲಿದೆ 'ಫೇಸ್‌ಬುಕ್‌'ನ ಡೇಟಿಂಗ್ ಆಪ್!!

ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಸ್ಯಾನ್‌ ಜೋಸ್‌ನಲ್ಲಿ ನಡೆದ 'ಫೇಸ್‌ಬುಕ್ ಎಫ್‌8' ಡೆವಲಪರ್‌ಗಳ ವಾರ್ಷಿಕ ಸಭೆಯಲ್ಲಿ ಫೇಸ್‌ಬುಕ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಮಾರ್ಕ್‌ ಝುಕರ್‌ಬರ್ಗ್ ಅವರು ಡೇಟಿಂಗ್ ಫೀಚರ್ ಅನ್ನು ಪ್ರಕಟಿಸಿದ್ದಾರೆ. ಹಾಗಾದರೆ, ಫೇಸ್‌ಬುಕ್ ತರಲಿರುವ 'ಡೇಟಿಂಗ್ ಸೇವೆ' ಹೇಗಿರಲಿದೆ ಎಂಬ ಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.

ಏಕಾಂಗಿ ಯುವ ಜನರಿಗೆ ಫೇಸ್‌ಬುಕ್ ಗಾಳ!

ಏಕಾಂಗಿ ಯುವ ಜನರಿಗೆ ಫೇಸ್‌ಬುಕ್ ಗಾಳ!

ಡೇಟಿಂಗ್ ಸೇವೆ ನೀಡುವ ಮೂಲಕ ಯುವ ಜನರನ್ನು ಹೆಚ್ಚು ಆರ್ಕರ್ಷಿಸುವುದು ‌ಫೇಸ್‌ಬುಕ್ ಗುರಿ ಎನ್ನಲಾಗಿದ್ದು, ಪ್ರಸ್ತುತ ಸುಮಾರು 20 ಕೋಟಿ ಬಳಕೆದಾರರು ಅವಿವಾಹಿತರು ಇದ್ದಾರೆ ಎಂದು ಫೇಸ್‌ಬುಕ್‌ ಅಂದಾಜಿಸಿದೆ. ಹಾಗಾಗಿ, ಆದಷ್ಟು ಬೇಗ ಈ ಸೇವೆಯನ್ನು ಜಾರಿಗೆ ತಂದರೆ ಬಳಕೆದಾರರನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು ಎಂಬುದು ಜುಕರ್ ಬರ್ಗ್ ಅವರ ಲೆಕ್ಕಾಚಾರವಾಗಿದೆ

ಫೇಸ್‌ಬುಕ್ ಡೇಟಿಂಗ್ ಪ್ರೊಫೈಲ್

ಫೇಸ್‌ಬುಕ್ ಡೇಟಿಂಗ್ ಪ್ರೊಫೈಲ್

ಮೊಬೈಲ್‌ ಆಪ್‌ ಮೂಲಕ ಫೇಸ್‌ಬುಕ್ ಡೇಟಿಂಗ್ ಸೇವೆ' ನೀಡುವುದಾಗಿ ಫೇಸ್‌ಬುಕ್ ತಿಳಿಸಿದೆ. ಈ ಮೂಲಕ ಬಳಕೆದಾರರು ಡೇಟಿಂಗ್ ಪ್ರೊಫೈಲ್ ಕ್ರಿಯೇಟ್ ಮಾಡಿಕೊಳ್ಳಬಹುದಾಗಿದ್ದು, ಡೇಟಿಂಗ್ ಪ್ರೊಫೈಲ್ ಹೊಂದಿದವರ ಆಯ್ಕೆ, ಆದ್ಯತೆಗಳಿಗೆ ಹೊಂದಾಣಿಕೆಯಾಗುವ ವ್ಯಕ್ತಿಯನ್ನು ಫೇಸ್‌ಬುಕ್ ಡೇಟಿಂಗ್‌ಗೆ ಶಿಫಾರಸು ಮಾಡುತ್ತದೆ ಎಂದು ತಿಳಿದುಬಂದಿದೆ.

ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲ!

ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲ!

ಡೇಟಿಂಗ್ ಪ್ರೋಫೈಲ್ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎನ್ನುವುದಕ್ಕೂ ಸಹ ಫೇಸ್‌ಬುಕ್ ಹೊಸ ಮಾರ್ಗವನ್ನು ಹುಡುಕಿದೆ. ಈಗಾಗಲೇ ಫೇಸ್‌ಬುಕ್‌ ಸ್ನೇಹಿತರ ಪಟ್ಟಿಯಲ್ಲಿರುವವರನ್ನು ಹೊರತುಪಡಿಸಿ ಇತರರನ್ನು ಶಿಫಾರಸು ಮಾಡಲಿದೆ. ಫೇಸ್‌ಬುಕ್‌ನ ಬಳಕೆದಾರರು ಕ್ರಿಯೇಟ್ ಮಾಡಿರುವ ಡೇಟಿಂಗ್ ಪ್ರೊಫೈಲ್ ಅವರ ಸ್ನೇಹಿತರಿಗೆ ಕಾಣಿಸುವುದಿಲ್ಲ ಎನ್ನಲಾಗಿದೆ.

ಈ ವರ್ಷವೇ ರಿಲೀಸ್!!

ಈ ವರ್ಷವೇ ರಿಲೀಸ್!!

ಫೇಸ್‌ಬುಕ್ ತರುತ್ತಿರುವ ಫೇಸ್‌ಬುಕ್ ಡೇಟಿಂಗ್ ಆಪ್ ಈ ವರ್ಷವೇ ಬಿಡುಗಡೆಯಾಗುವುದಾಗಿ ಫೇಸ್‌ಬುಕ್ ತಿಳಿಸಿದೆ. ಆದಷ್ಟು ಬೇಗ ಈ ಸೇವೆಯನ್ನು ಜಾರಿಗೆ ತಂದರೆ ಬಳಕೆದಾರರನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಹೊಂದಿರುವ ಮಾರ್ಕ್‌ ಜುಕರ್‌ಬರ್ಗ್ ಸಹ ಆಪ್ ಬಿಡುಗಡೆಗೆ ಕಾತುರರಾಗಿದ್ದಾರೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?
ಮೊಬೈಲ್ ಆಪ್‌ನಲ್ಲಿ ಮಾತ್ರ!

ಮೊಬೈಲ್ ಆಪ್‌ನಲ್ಲಿ ಮಾತ್ರ!

ಫೇಸ್‌ಬುಕ್ ಡೇಟಿಂಗ್ ಸೇವೆ ಮೊದಲು ಮೊಬೈಲ್‌ ಆಪ್ ರೂಪದಲ್ಲಿ ಕಾಲಿಡಲಿದೆ. ಆಂಡ್ರಾಯ್ಡ್, ವಿಂಡೊಸ್ ಮತ್ತು ಐಒಎಸ್ ಮೂರು ಮಾದರಿಯಲ್ಲೂ ಈ ಡೇಟಿಂಗ್ ಆಪ್ ಲಭ್ಯವಿರಲಿದೆ. ಆರಂಭಿಕ ಹಂತದಲ್ಲಿ ಡೇಟಿಂಗ್ ಪೀಚರ್ ಅನ್ನು ಮೊಬೈಲ್ ಆಪ್‌ನಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ ಎಂದು ಫೇಸ್‌ಬುಕ್ ಸ್ಪಷ್ಟಗೊಳಿಸಿದೆ.

Best Mobiles in India

English summary
Facebook announces dating feature for meeting non-friends. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X