ಫೇಸ್‌ಬುಕ್‌ ಕಮೆಂಟ್‌ಗಳಿಗೆ ಮೇಜರ್ ಸರ್ಜರಿ..! ಕಮೆಂಟ್‌ ಓದುವಾಗ ಇರಲ್ಲ ಗೊಂದಲ..!

By Gizbot Bureau
|

ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್‌ ಬಳಕೆದಾರರಿಗೆ ಹತ್ತಿರವಾಗುವಂತಹ ಸೇವೆಯನ್ನು ನೀಡಲು ಹೊಸ ಹೊಸ ಅನ್ವೇಷಣೆಗಳಲ್ಲಿ ತೊಡಗಿದೆ. ಅದರಂತೆ ಫೇಸ್‌ಬುಕ್‌ನಲ್ಲಿ ಪ್ರಮುಖವಾಗಿರುವುದು ಕಮೆಂಟ್‌ ವಿಭಾಗ ಎಂಬುದನ್ನು ಮರೆಯುವಂತಿಲ್ಲ. ಈಗ ಫೇಸ್‌ಬುಕ್‌ ಕಮೆಂಟ್‌ ವಿಭಾಗದ ಸರ್ಜರಿಗೆ ಮುಂದಾಗಿದ್ದು, ಪ್ರತಿಕ್ರಿಯೆಗಳನ್ನು ಅರ್ಥಪೂರ್ಣವಾಗಿಸಲು ಕ್ರಮ ಕೈಗೊಂಡಿದೆ. ಹೌದು, ಕೆಲವೊಂದು ಪೋಸ್ಟ್‌ಗಳಿಗೆ ಕಮೆಂಟ್‌ಗಳನ್ನು ಬಹಳ ಮಾಡುತ್ತಿರುವುದರಿಂದ ಓದುಗರಿಗೆ ಈ ಸಂಭಾಷಣೆಗಳು ಬಹಳ ಗೊಂದಲ ಮೂಡಿಸುತ್ತಿವೆ.

ಫೇಸ್‌ಬುಕ್‌ ಕಮೆಂಟ್‌ಗಳಿಗೆ ಮೇಜರ್ ಸರ್ಜರಿ..! ಕಮೆಂಟ್‌ ಓದುವಾಗ ಇರಲ್ಲ ಗೊಂದಲ..!

ಇದಕ್ಕಾಗಿಯೇ ಈಗಾಗಲೇ ಶ್ರೇಯಾಂಕ ವ್ಯವಸ್ಥೆಯನ್ನು ಫೇಸ್‌ಬುಕ್‌ ಹೊಂದಿದ್ದರೂ ಕಮೆಂಟ್‌ ಸೆಕ್ಷನ್‌ ಇನ್ನು ವ್ಯವಸ್ಥಿತವಾಗಿ ರೂಪುಗೊಳ್ಳದಿರುವುದರಿಂದ ಹೊಸ ಯೋಜನೆಗೆ ಫೇಸ್‌ಬುಕ್‌ ಮುಂದಾಗಿದ್ದು, ಶ್ರೇಯಾಂಕ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಕೆಲವು ಬದಲಾವಣೆಗಳನ್ನು ಪರಿಚಯಿಸಿದೆ. ಹೊಸ ಸುಧಾರಣೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಸಾಮಾಜಿಕ ಜಾಲತಾಣ ದೈತ್ಯ ಮಾಹಿತಿಯನ್ನು ನೀಡಿದೆ.

ಕಮೆಂಟ್ ವಿಭಾಗವನ್ನು ಹೆಚ್ಚು ಅರ್ಥಪೂರ್ಣವನ್ನಾಗಿ ಮಾಡಲು, ಫೇಸ್‌ಬುಕ್‌ ಪೇಜ್‌ ಅಥವಾ ಪ್ರೊಫೈಲ್‌ನಿಂದ ಮಾಡಲಾದ ಸಂವಹನವನ್ನು ಪ್ರಮುಖವಾಗಿ ತೋರಿಸಲಾಗುತ್ತದೆ ಎಂದು ಫೇಸ್‌ಬುಕ್‌ ಹೇಳುತ್ತಿದೆ. ಇದಲ್ಲದೆ, ಕಮೆಂಟ್ ಪೋಸ್ಟ್ ಮಾಡಿದ ವ್ಯಕ್ತಿಯ ಸ್ನೇಹಿತರಿಂದ ಬಂದ ಕಮೆಂಟ್‌ ಅಥವಾ ಪ್ರತ್ಯುತ್ತರಗಳನ್ನು ಸಹ ಇಲ್ಲಿ ಹೈಲೈಟ್ ಮಾಡಲಾಗುತ್ತದೆ. ಫೇಸ್‌ಬುಕ್‌ ಕಮೆಂಟ್‌ಗಳಿಗೆ ಶ್ರೇಯಾಂಕ ಯಾವ ರೀತಿ ನೀಡುತ್ತದೆ ಎಂದರೆ, ಪೇಜ್‌ ಮತ್ತು ಬಹಳ ಫಾಲೋವರ್‌ಗಳನ್ನು ಹೊಂದಿರುವ ಪ್ರೊಫೈಲ್‌ಗಳಿಂದ ಪೋಸ್ಟ್‌ ಆಗಿರುವ ಸಾರ್ವಜನಿಕ ಪೋಸ್ಟ್‌ಗಳಿಗೆ ಬಂದ ಕಮೆಂಟ್‌ಗಳನ್ನು ನೋಡಿ ಶ್ರೇಯಾಂಕ ನೀಡುತ್ತದೆ. ಶ್ರೇಯಾಂಕ ನೀಡಿದ ನಂತರ ಗುಣಮಟ್ಟದ ಕಮೆಂಟ್‌ಗಳನ್ನು ಇಲ್ಲಿ ಪ್ರದರ್ಶಿತವಾಗುತ್ತವೆ.

ಈ ರ್ಯಾಂಕಿಂಗ್‌ಗಳನ್ನು ನೀಡಲು ಫೇಸ್‌ಬುಕ್‌ ಹಲವು ಪ್ಯಾರಾಮೀಟರ್‌ಗಳನ್ನು ನಿಗದಿಪಡಿಸಿದೆ. ಅಧಿಕೃತ ಕಮೆಂಟ್‌ಗಳಿಂದ ಮಾತ್ರ ಹೆಚ್ಚು ಎಂಗೇಜ್‌ಮೆಂಟ್‌ ದೊರೆಯುತ್ತದೆ ಸಾಮಾಜಿಕ ಜಾಲತಾಣದ ಸೇವೆ ಖಚಿತಪಡಿಸಿದೆ. ಅದಕ್ಕಾಗಿಯೇ ಇಲ್ಲಿ ಯಾವುದೇ ಎಂಗೇಜ್‌ಮೆಂಟ್‌ ಬೇಟ್‌ ನಡೆಯುತ್ತಿಲ್ಲ. ಅದಕ್ಕಾಗಿಯೇ ಅನೇಕ ಫಿಲ್ಟರಿಂಗ್‌ ಮಾಡಲಾಗುತ್ತಿದೆ ಎಂದು ಫೇಸ್‌ಬುಕ್‌ ಖಚಿತಪಡಿಸಿದೆ.

ಇನ್ನು, ಜನ ತಮ್ಮ ಪೋಸ್ಟ್‌ನಲ್ಲಿನ ಕಮೆಂಟ್‌ಗಳನ್ನು ಮರೆಮಾಚುವ, ಅಳಿಸುವ ಅಥವಾ ಕಮೆಂಟ್‌ಗಳಿಗೆ ಪ್ರತಿಕ್ರಿಯೆ ನೀಡುವ ಮೂಲಕ ಮಾಡರೇಟ್ ಮಾಡಬಹುದಾಗಿದೆ. ಪೇಜ್‌ ಮತ್ತು ಸಾಕಷ್ಟು ಫಾಲೋವರ್ಸ್‌ ಹೊಂದಿರುವ ಪ್ರೊಫೈಲ್‌ಗಳಿಗೆ ಡಿಪಲ್ಟ್‌ ಆಗಿ ರ್ಯಾಂಕಿಂಗ್ ಆಯ್ಕೆ ನೀಡಲಾಗಿರುತ್ತದೆ. ಆದರೆ, ಪೇಜ್‌ ಮತ್ತು ಸಾಕಷ್ಟು ಫಾಲೋವರ್ಸ್‌ ಹೊಂದಿರುವ ಪ್ರೊಫೈಲ್‌ಗಳು ಕಮೆಂಟ್ ಶ್ರೇಯಾಂಕವನ್ನು ಆಫ್ ಮಾಡಬಹುದು. ಇನ್ನು, ಕಡಿಮೆ ಫಾಲೋವರ್ಸ್‌ ಹೊಂದಿರುವ ಜನರ ಫೇಸ್‌ಬುಕ್‌ನಲ್ಲಿ ಸ್ವಯಂಚಾಲಿತವಾಗಿ ಕಮೆಂಟ್ ಶ್ರೇಯಾಂಕ ಆನ್ ಆಗಿರುವುದಿಲ್ಲ. ಆದರೆ, ಯಾವುದೇ ವ್ಯಕ್ತಿಯು ತಮ್ಮ ಸೆಟ್ಟಿಂಗ್‌ಗಳಿಗೆ ಹೋಗಿ ಕಮೆಂಟ್ ಶ್ರೇಯಾಂಕವನ್ನು ಸಕ್ರಿಯಗೊಳಿಸಬಹುದು ಎಂದು ಫೇಸ್‌ಬುಕ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

Best Mobiles in India

Read more about:
English summary
Facebook Brings In A New Feature For The Comment Section

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X