ಪಡ್ಡೆ ಹುಡುಗರ ತಲೆಕೆಡಿಸಿದ್ದ 'ಫೇಸ್‌ಬುಕ್ ಡೇಟಿಂಗ್' ಸೇವೆ ಆರಂಭ!

|

ಡೇಟಿಂಗ್ ಪ್ರಿಯರರು ಬಹಳ ದಿನಗಳಿಂದ ಕಾಯುತ್ತಿದ್ದ 'ಫೇಸ್‌ಬುಕ್ ಡೇಟಿಂಗ್' ಸೇವೆಯು ಇದೀಗ ಅಮೆರಿಕಾದಲ್ಲಿ ಆರಂಭವಾಗಿದೆ. ನೇರವಾಗಿ ಪ್ರೇಮ ನಿವೇದನೆ ಮಾಡಲು ಸಾಧ್ಯವಿಲ್ಲದೇ ಇರುವವರು ಫೇಸ್‌ಬುಕ್ ಮೂಲಕವೇ ಪ್ರೇಮ ನಿವೇದನೆ ಮಾಡಿಕೊಳ್ಳಬಹುದಾದ ಸೇವೆ ಇದಾಗಿದ್ದು, ಪಡ್ಡೆ ಹುಡುಗರು ಬಹುದಿನಗಳ ಕಾಯುತ್ತಿದ್ದ ಈ ವಿಶೇಷ ಫೀಚರ್ ಅನ್ನು ಫೇಸ್‌ಬುಕ್ ಬಿಡುಗಡೆ ಮಾಡಿದೆ. ಈ ಫೀಚರ್ ಅಮೆರಿಕಾ ಸೇರಿದಂತೆ ಒಟ್ಟು 20 ದೇಶಗಳಲ್ಲಿ ಇದೀಗ ಕಾರ್ಯನಿರ್ವಹಿಸುತ್ತಿದೆ.

ಫೇಸ್‌ಬುಕ್ ಡೇಟಿಂಗ್

ಹೌದು, ಕಳೆದ ವರ್ಷದ ವಾರ್ಷಿಕ ಅಭಿವರ್ಧಕರ ಸಮ್ಮೇಳನದಲ್ಲಿ ಫೇಸ್‌ಬುಕ್ ತನ್ನ ಡೇಟಿಂಗ್ ಸೇವೆಯನ್ನು ಘೋಷಿಸಿತ್ತು. ಇದೀಗ ಯುಎಸ್ನಲ್ಲಿ ಫೇಸ್ಬುಕ್ ಡೇಟಿಂಗ್ ಅನ್ನು ಪ್ರಾರಂಭಿಸುವುದರ ಮೂಲಕ ಫೇಸ್‌ಬುಕ್ ಸಿಹಿಸುದ್ದಿ ನೀಡಿದೆ. 'ಫೇಸ್‌ಬುಕ್ ಡೇಟಿಂಗ್' ಬಳಕೆದಾರರು ತಮ್ಮ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಸಿಕೊಂಡು ಫೇಸ್‌ಬುಕ್‌ ಡೇಟಿಂಗ್‌ನಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. 'ಜನರು ಪ್ರೊಫೈಲ್ ಅನ್ನು ಆಧರಿಸಿ ಯಾರನ್ನಾದರೂ ಇಷ್ಟಪಡುತ್ತಾರೋ ಇಲ್ಲವೋ ಎಂಬ ಬಗ್ಗೆ ನಿರ್ಧಾರ ಕೇಳಿಕೊಳ್ಳಬಹುದಾಗಿದೆ.

ಸೀಕ್ರೆಟ್​ ಕ್ರಶ್

ಈ ಫೇಸ್‌ಬುಕ್ ಡೇಟಿಂಗ್ ಸೇವೆ ಸೀಕ್ರೆಟ್ ಕ್ರಷ್ ವೈಶಿಷ್ಟ್ಯವನ್ನು ಒಳಗೊಂಡಿದ್ದು, ಈ ಫೀಚರ್ ಮೂಲಕ ಫೇಸ್​ಬುಕ್​ನಲ್ಲಿ ನೋಡಿದ ಯಾವುದೇ ವ್ಯಕ್ತಿ ನಿಮಗೆ ಇಷ್ಟವಾದರೆ, ಅವರಿಗೆ 'ಸೀಕ್ರೆಟ್​ ಕ್ರಶ್'​ ಆಯ್ಕೆಯ ಮೂಲಕ ರಿಕ್ವೆಸ್ಟ್​ ಕಳುಹಿಸಬಹುದು. ನಂತರ ಅವರು ನಿಮ್ಮ ರಿಕ್ವೆಸ್ಟ್​ಗೆ ಸ್ಪಂದಿಸಿದರೆ ' ಪ್ರೈವೇಟ್​​ ಕ್ರಶ್​​ ಲಿಸ್ಟ್​'ನಲ್ಲಿ ಗೋಚರವಾಗುತ್ತದೆ. ಈ ಮೂಲಕ ನೀವು ನಿಮ್ಮಿಷ್ಟದವರೊಂದಿಗೆ ನೀವು ಡೇಟಿಂಗ್ ಮಾಡಬಹುದು. ಹಾಗಾದರೆ, ಏನಿದು ಸೀಕ್ರೆಟ್ ಕ್ರಷ್ ವೈಶಿಷ್ಟ್ಯ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಸಿಕ್ರೇಟ್ ಕ್ರಶ್ ಫೀಚರ್

ಡೇಟಿಂಗ್ ಆಪ್‌ ಈ ಫೀಚರ್‌ನಲ್ಲಿ ಬಳಕೆದಾರರು ತಮ್ಮ ಫ್ರೆಂಡ್‌ಲಿಸ್ಟ್‌ನಲ್ಲಿರುವ ಯಾರ ಮೇಲಾದರೂ ಕ್ರಶ್ ಆಗಿದ್ದರೇ ಅದನ್ನು ವ್ಯಕ್ತಪಡಿಸಲು ಫೇಸ್‌ಬುಕ್ ಈ ಸಿಕ್ರೇಟ್ ಕ್ರಶ್ ಆಯ್ಕೆಯನ್ನು ಪರಿಚಯಿಸಿದೆ. ಹೀಗಾಗಿ ನಿಮ್ಮ ಫ್ರೆಂಡ್‌ಲಿಸ್ಟ್‌ನಲ್ಲಿ ಇಷ್ಟವಾಗುವವರಿಗೆ ನೀವು ನಿಮ್ಮ ಕ್ರಶ್ ಇಂಗಿತವನ್ನು ತಿಳಿಸಲು ಆಯ್ಕೆ ಇದಾಗಿರಲಿದೆ. ಇದು ಡೇಟಿಂಗ್‌ಗೆ ಅವಕಾಶ ಮಾಡಿಕೊಡುತ್ತದೆ.

ಹೇಗಿರಲಿದೆ ಸಿಕ್ರೇಟ್ ಕ್ರಶ್ ಆಯ್ಕೆ?

ಈಗಾಗಲೇ ಜನಪ್ರಿಯವಾಗಿರುವ ಡೇಟಿಂಗ್‌ ಆಪ್‌ಗಳಾದ Hinge ಮತ್ತು Tinder ನಂತೆಯೇ, ಡೇಟಿಂಗ್ ಫೀಚರ್‌ಗಳನ್ನು ಈ ಸಿಕ್ರೇಟ್ ಕ್ರಶ್ ಆಯ್ಕೆ ಹೊಂದಿರಲಿದೆ. ಫೇಸ್‌ಬುಕ್‌ ಬಳಕೆದಾರರು ತಮ್ಮ ಫ್ರೆಂಡ್‌ಲಿಸ್ಟ್‌ನಲ್ಲಿರುವ ಬಳಕೆದಾರರಲ್ಲಿ ಯಾರ ಮೇಲಾದರೂ ಕ್ರಶ್‌ ಆಗಿದ್ದರೇ, ಅದನ್ನು ವ್ಯಕ್ತಪಡಿಸಲು ಫೇಸ್‌ಬುಕ್‌ನ ಈ ಸಿಕ್ರೇಟ್‌ ಕ್ರಶ್‌ ಆಯ್ಕೆ ನೆರವಾಗಲಿದೆ.

ಮ್ಯೂಚಲ್ ಕ್ರಶ್ ಬಳಕೆ ಹೇಗೆ

ನಿಮ್ಮ ಫ್ರೆಂಡ್‌ಲಿಸ್ಟ್‌ನಲ್ಲಿ ನಿಮಗೆ ಇಷ್ಟವಾಗಿರುವವರಿಗೆ ನೀವು ಕ್ರಶ್ ಇಂಗಿತವನ್ನು ತಿಳಿಸಬಹುದು. ಅದರಲ್ಲಿ ಯಾರಾದರೂ ಮರಳಿ ಅವರ ಕ್ರಶ್ ಇಂಗಿತವನ್ನು ತಿಳಿಸಿದರೇ ನಂತರ ಪರಸ್ಪರ ಮ್ಯೂಚಲ್ ಕ್ರಶ್ ( ಗರಿಷ್ಠ 9 ಜನರನ್ನು) ಎಂದು ಪರಿಗಣಿಸಿಕೊಳ್ಳಬಹುದು. ನಿಮ್ಮ ಫ್ರೆಂಡ್‌ಲಿಸ್ಟ್‌ನಲ್ಲಿದ್ದವರೂ ಈ ಆಯ್ಕೆಯನ್ನು ಬಳಸದಿದ್ದರೂ ನೀವು ಕ್ರಶ್ ಇಂಗಿತವನ್ನು ತಿಳಿಸಿಬಹುದು.

ವಯಸ್ಕರಿಗೆ ಮಾತ್ರ

ಫೇಸ್‌ಬುಕ್‌ನ ಈ ಸಿಕ್ರೇಟ್‌ ಕ್ರಶ್‌ ಫೀಚರ್‌ ಅನ್ನು ಫೇಸ್‌ಬುಕ್‌ ಬಳಕೆದಾರರು ಬಳಕೆಮಾಡಬಹುದಾಗಿದ್ದು, ಆದರೆ 18 ವಯಸ್ಸು ಮತ್ತು 18 ವಯಸ್ಸಿಗಿಂತ ಮೇಲ್ಪಟ್ಟ ಬಳಕೆದಾರರು ಆಪ್‌ ಬಳಸಬಹುದಾಗಿದೆ. ಇದು ಪ್ರೀತಿಯ ವಿಷಯವಾಗಿದ್ದರಿಂದ ಫೇಸ್‌ಬುಕ್‌ ಈ ಆಪ್‌ನ ಸೇವೆಯನ್ನು ಕೇವಲ ವಯಸ್ಕರಿಗೆ ಮಾತ್ರ ಸೀಮಿತ ಮಾಡಿದೆ.

ಜಾಹಿರಾತು ಮುಕ್ತ

ಬಹುತೇಕ ಡೇಟಿಂಗ್‌ ಆಪ್‌ಗಳು ಜಾಹಿರಾತುಗಳು ಹೆಚ್ಚಾಗಿ ಕಂಡುಬರುತ್ತವೆ. ಆದರೆ ಫೇಸ್‌ಬುಕ್‌ನ ಸಿಕ್ರೇಟ್‌ ಕ್ರಶ್‌ ಡೇಟಿಂಗ್ ಆಪ್‌ ಸಂಪೂರ್ಣ ಜಾಹಿರಾತು ಮುಕ್ತವಾಗಿದ್ದು, ಯಾವುದೇ ಪೇಯ್ಡ್ ಫೀಚರ್ಸ್‌ಗಳು ಸಹ ಇರುವುದಿಲ್ಲ ಎನ್ನಲಾಗಿದೆ. ಮುದೊಂದು ದಿನ ಡೇಟಿಂಗ್‌ ಆಪ್‌ಗಳನ್ನು ಮೀರಿಸುವ ಸಲುವಾಗಿ ಫೇಸ್‌ಬುಕ್ ಈಗ ಜಾಹಿರಾತು ನೀಡುತ್ತಿಲ್ಲ ಎನ್ನಲಾಗಿದೆ.

20 ರಾಷ್ಟ್ರಗಳಲ್ಲಿ ಲಭ್ಯ

ಫೇಸ್‌ಬುಕ್‌ನ ಈ ಹೊಸ ಡೇಟಿಂಗ್ ಆಪ್‌ ಪ್ರಸ್ತುತ ಬ್ರೆಜಿಲ್‌, ಮೆಕ್ಸಿಕೊ, ಕೆನಡಾ, ಕೊಲಂಬಿಯಾ, ಥೈಲ್ಯಾಂಡ್, ಸಿಂಗಪೂರ್, ಮಲೇಷ್ಯಾ, ಮತ್ತು ಫಿಲಿಫೈನ್ಸ್ ರಾಷ್ಟ್ರಗಳನ್ನು ಒಳಗೊಂಡಂತೆ ಸುಮಾರು ೨೦ ರಾಷ್ಟ್ರಗಳಲ್ಲಿನ ಬಳಕೆದಾರರಿಗೆ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಭಾರತೀಯರಿಗೂ ಈ ಸೇವೆ ಸಿಗಲಿದೆ. ಆದರೆ ಯಾವಾಗ ಎಂಬುದು ಪ್ರಶ್ನೆಯಾಗಿಯೇ ಉಳಿಸಿದೆ.

Best Mobiles in India

English summary
Facebook has launched its dating service Facebook Dating in the US. on Facebook Dating includes its Secret Crush feature which was announced at F8 2019. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X