'ಗೂಗಲ್‌ ಅಸಿಸ್ಟಂಟ್'‌ಗೆ ಸ್ಪರ್ಧೆ ನೀಡುವ ತಯಾರಿಯಲ್ಲಿದೆ 'ಫೇಸ್‌ಬುಕ್‌ ಅಸಿಸ್ಟಂಟ್'!

|

ಸಾಮಾಜಿಕ ಜಾಲತಾಣ ದಿಗ್ಗಜ 'ಫೇಸ್‌ಬುಕ್' ಇತ್ತೀಚಿಗೆ ಡಾರ್ಕ್‌ ಮೋಡ್‌ ಆಯ್ಕೆ ಸೇರಿದಂತೆ ಹಲವು ಹೊಸ ಫೀಚರ್ಸ್‌ಗಳನ್ನು ಅಳವಡಿಸಿಕೊಳ್ಳುತ್ತ ಸದಾ ಸುದ್ದಿಯಲ್ಲಿದ್ದು, ಇದೀಗ ಮತ್ತೆ ಹೊಸದೊಂದು ಆಯ್ಕೆಯನ್ನು ತನ್ನ ಲಿಸ್ಟ್‌ಗೆ ಸೇರಿಸಲು ಸಜ್ಜಾಗುತ್ತಿದೆ. ಅದುವೇ 'ಫೇಸಬುಕ್‌ ವಾಯಿಸ್‌ ಅಸಿಸ್ಟಂಟ್' ಈ ಆಯ್ಕೆ ಮೂಲಕ 'ಗೂಗಲ್‌ ಅಸಿಸ್ಟಂಟ್' ಮತ್ತು 'ಅಮೆಜಾನ್ ಅಲೆಕ್ಸಾ' ಗಳಿಗೆ ಭರ್ಜರಿ ಪೈಪೋಟಿ ನೀಡಲು ಮುಂದಾಗುತ್ತಿದೆ.

'ಗೂಗಲ್‌ ಅಸಿಸ್ಟಂಟ್'‌ಗೆ ಸ್ಪರ್ಧೆ ನೀಡುವ ತಯಾರಿಯಲ್ಲಿದೆ 'ಫೇಸ್‌ಬುಕ್‌ ಅಸಿಸ್ಟಂಟ್

ಹೌದು, ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಫೇಸಬುಕ್‌ ವಾಯಿಸ್‌ ಅಸಿಸ್ಟಂಟ್‌ ಫೀಚರ್‌ ಅನ್ನು ಬಳಕೆದಾರರಿಗೆ ಪರಿಚಯಿಸುವ ತಯಾರಿಯಲಿದ್ದು, ಈ ಆಯ್ಕೆಯು AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ. ಈ ಫೀಚರ್‌ ಬಳಕೆದಾರರ ಧ್ವನಿ ಗ್ರಹಿಸಲಿದ್ದು, ಅವರು ವಾಯಿಸ್‌ ಆದೇಶ ನೀಡುವುದರ ಮೂಲಕ ಫೇಸ್‌ಬುಕ್‌ ಮತ್ತು ಸರ್ಚ್ ಬಳಸಬಹುದಾಗಿದೆ.

'ಗೂಗಲ್‌ ಅಸಿಸ್ಟಂಟ್'‌ಗೆ ಸ್ಪರ್ಧೆ ನೀಡುವ ತಯಾರಿಯಲ್ಲಿದೆ 'ಫೇಸ್‌ಬುಕ್‌ ಅಸಿಸ್ಟಂಟ್

ಈಗಾಗಲೇ ಗೂಗಲ್‌ ಕಂಪನಿಯ ಗೂಗಲ್ ಅಸಿಸ್ಟಂಟ್, ಅಮೆಜಾನ್‌ ಸಂಸ್ಥೆಯ ಅಲೆಕ್ಸಾ ವಾಯಿಸ್‌ ಅಸಿಸ್ಟಂಟ್‌ ಫೀಚರ್‌ಗಳಂತೆ ಇರಲಿದ್ದು, ಆದರೆ ಇವುಗಳಗೆ ಫೇಸ್‌ಬುಕ್‌ ವಾಯಿಸ್‌ ಅಸಿಸ್ಟಂಟ್‌ ಪ್ರಬಲ ಎದುರಾಳಿ ಆಗಲಿದೆ ಎನ್ನಲಾಗುತ್ತಿದೆ. ಹಾಗಾದರೇ ಪ್ರಸ್ತುತ ಚಾಲ್ತಿ ಇರುವ ವಾಯಿಸ್‌ ಅಸಿಸ್ಟಂಟ್‌ ಫೀಚರ್‌ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.

ಏನಿದು ವಾಯಿಸ್‌ ಅಸಿಸ್ಟಂಟ್

ಏನಿದು ವಾಯಿಸ್‌ ಅಸಿಸ್ಟಂಟ್

ಬಳಕೆದಾರರ ಧ್ವನಿಯನ್ನು ಗ್ರಹಿಸಿಕೊಂಡು ಅವರು ನೀಡಿದ ಆದೇಶದಂತೆ ಮಾಹಿತಿ ಸರ್ಚ್‌ ಮಾಡುವ ತಂತ್ರಜ್ಞಾನದ ಆಯ್ಕೆ ಆಗಿದ್ದು, ಇದರೊಂದಿಗೆ ವಾಯಿಸ್‌ ಮೂಲಕವೇ ಡಿವೈಸ್‌ಗಳನ್ನು ನಿಯಂತ್ರಿಸಬಹುದಾಗಿದೆ. ಬಳಕೆದಾರರು ಸರ್ಚ್‌ ಮಾಡಲು ಮಾಹಿತಿಯನ್ನು ಟೆಕ್ಸ್ಟ್ ಮಾದರಿಯಲ್ಲಿ ಬರೆಯಬೇಕೆಂದಿಲ್ಲ.

ವಾಯಿಸ್‌ ಅಸಿಸ್ಟಂಟ್ ಸಾಧನಗಳು

ವಾಯಿಸ್‌ ಅಸಿಸ್ಟಂಟ್ ಸಾಧನಗಳು

ಜನಪ್ರಿಯವಾಗಿರುವ ವಾಯಿಸ್‌ ಅಸಿಸ್ಟಂಟ್ ಫೀಚರ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಮನ್‌ ಆಗಿದೆ. ಕೇವಲ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲದೇ ಸ್ಪೀಕರ್‌, ಸ್ಮಾರ್ಟ್‌ಟಿವಿ ಸೇರಿದಂತೆ ಇತರೆ ಸ್ಮಾರ್ಟ್‌ಡಿವೈಸ್‌ಗಳು ಸಹ ವಾಯಿಸ್‌ ಆದೇಶದ ಮೇಲೆ ಕೆಲಸ ಮಾಡುವ ಆಯ್ಕೆಯನ್ನು ಹೊಂದಿವೆ.

ಫೇಸ್‌ಬುಕ್ ಅಸಿಸ್ಟಂಟ್

ಫೇಸ್‌ಬುಕ್ ಅಸಿಸ್ಟಂಟ್

ಫೇಸ್‌ಬುಕ್‌ ಇದೀಗ ವಾಯಿಸ್‌ ಆದೇಶದ ಮೇಲೆ ಸರ್ಚ್ ಮಾಡುವ ಆಯ್ಕೆಯನ್ನು ಬಿಡುಗಡೆ ಮಾಡಲಿದ್ದು, ಅದಕ್ಕಾಗಿ ಅಲೆಕ್ಸಾ ಸಾಧನಗಳಂತೆ AI ತಂತ್ರಜ್ಞಾನ ಆಧಾರಿತ ಹೊಸ ಡಿವೈಸ್‌ಯನ್ನು ಪರಿಚಯಿಸಲಿದೆ ಎನ್ನಲಾಗುತ್ತಿದೆ. ಹಾಗೂ ಫೇಸ್‌ಬುಕ್‌ ಆಪ್‌ನಲ್ಲಿಯೂ ಈ ಆಯ್ಕೆ ಸೇರಿಕೊಳ್ಳಲಿದೆ.

ಗೂಗಲ್ ಅಸಿಸ್ಟಂಟ್

ಗೂಗಲ್ ಅಸಿಸ್ಟಂಟ್

ಟೆಕ್ ಹಿರಿಯಣ್ಣ ಗೂಗಲ್ ಈಗಾಗಲೇ ಗೂಗಲ್ ಅಸಿಸ್ಟಂಟ್ ಹೆಸರಿನಲ್ಲಿ ವಾಯಿಸ್‌ ಗ್ರಹಿಸಿ ಕೆಲಸ ನಿರ್ವಹಿಸುವ ಫೀಚರ್‌ ಅನ್ನು ಪರಿಚಯಿಸಿದ್ದು, ಸ್ಮಾರ್ಟ್‌ಫೋನ್‌ ಸೇರಿದಂತೆ ಇತರೆ ಸ್ಮಾರ್ಟ್‌ ಡಿವೈಸ್‌ಗಳಲ್ಲಿ ಈ ಆಯ್ಕೆಯನ್ನು ಬಳಸಬಹುದಾಗಿದೆ. ಇಲ್ಲದೇ ಗೂಗಲ್‌ ವಾಯಿಸ್‌ ಅಸಿಸ್ಟಂಟ್‌ ಸಾಧನಗಳನ್ನು ಪರಿಚಯಿಸಿದೆ.

ಅಮೆಜಾನ್‌ ಅಲೆಕ್ಸಾ

ಅಮೆಜಾನ್‌ ಅಲೆಕ್ಸಾ

ಅಮೆಜಾನ್ ಕಂಪನಿಯ ಅಲೆಕ್ಸಾ ವಾಯಿಸ್‌ ಅಸಿಸ್ಟಂಟ್ ಫೀಚರ್‌ ಸಹ ಹೆಚ್ಚು ಬಳಕೆದಾರರನ್ನು ಹೊಂದಿದ್ದು, ಕಂಪನಿ ಸ್ಮಾರ್ಟ್‌ ಉತ್ಪನ್ನಗಳಲ್ಲಿ ಈ ಆಯ್ಕೆಯನ್ನು ಹೊಂದಿದ್ದು, ಬಳಕೆದಾರರು ಕೇವಲ ಧ್ವನಿ ಮೂಲಕ ನಿಯಂತ್ರಿಸಬಹುದಾಗಿದೆ. ಕಂಪನಿಯ ಅಲೆಕ್ಸಾ, ಇಕೋ, ಸ್ಮಾರ್ಟ್‌ಸ್ಪೀಕರ್‌ ವಾಯಿಸ್‌ ಮೂಲಕ ಕಾರ್ಯನಿರ್ವಹಿಸುತ್ತವೆ.

Best Mobiles in India

English summary
Facebook is making a voice assistant to compete with Google Assistant and Amazon Alexato know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X