ಅಶ್ಲೀಲತೆ ತಡೆಯಲು 'ಕೃತಕ ಬುದ್ದಿಮತ್ತೆ' ಮೊರೆ ಹೋದ ಫೇಸ್‌ಬುಕ್!!

Written By:

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿರುವ ಚಿತ್ರಗಳನ್ನು ದುರುದ್ದೇಶಗಳಿಗೆ ಬಳಸಿಕೊಳ್ಳುವವರಿಗೆ ಬ್ರೇಕ್ ಹಾಕಲು ಫೇಸ್‌ಬುಕ್‌ ಸಂಸ್ಥೆ "ಕೃತಕ ಬುದ್ದಿಮತ್ತೆ"ಯ ಮೊರೆ ಹೋಗಿದೆ.! ಹೌದು, ತನ್ನ ಬಳಕೆದಾರರ ರಕ್ಷಣೆಗಾಗಿ ಫೇಸ್‌ಬುಕ್ ನೂತನ ಕೃತಕ ಬುದ್ದಿಮತ್ತೆ ಟೂಲ್ ಒಂದನ್ನು ಜಾರಿಗೆ ತರಲು ಮುಂದಾಗಿದೆ.!!

ಪೋರ್ನ್ಗೆ ಕಡಿವಾಣ ಹಾಕಲು ಫೇಸ್‌ಬುಕ್‌ 'ರಿವೆಂಜ್ ಪೋರ್ನ್' ಎಂಬ ಕೃತಕ ಬುದ್ದಿಮತ್ತೆ ಟೂಲ್ ತರಲು ಮುಂದಾಗಿದ್ದು, ಈ ಟೂಲ್‌ನಲ್ಲಿ ಫೇಸ್‌ಬುಕ್ ಬಳಕೆದಾರರ ಚಿತ್ರದ ಮೇಲೆ ಡಿಜಿಟಲ್ ಫಿಂಗರ್ ಪ್ರಿಂಟ್ ಸೃಷ್ಟಿಸಿ ಅದನ್ನು ಒಪ್ಪಿಗೆ ಇಲ್ಲದ ಚಿತ್ರ ಎಂದು ಮಾರ್ಕ್ ಮಾಡಲಾಗುವ ಆಯ್ಕೆ ತರಲಿದೆ.!

ಅಶ್ಲೀಲತೆ ತಡೆಯಲು 'ಕೃತಕ ಬುದ್ದಿಮತ್ತೆ' ಮೊರೆ ಹೋದ ಫೇಸ್‌ಬುಕ್!!

ಇನ್ನು ಚಿತ್ರದ ಮೇಲೆ ಡಿಜಿಟಲ್ ಫಿಂಗರ್ ಪ್ರಿಂಟ್ ಸೃಷ್ಟಿಸುವುದರಿಂದ, ಒಂದು ವೇಳೆ ಯಾರಾದರೂ ದುರುದ್ದೇಶದಿಂದ ಯಾವುದೇ ವ್ಯಕ್ತಿಯ ಅಶ್ಲೀಲ ಚಿತ್ರ ಅಪ್ ಲೋಡ್ ಮಾಡಲು ಯತ್ನಿಸಿದರೆ ಅದನ್ನು ರಿವೆಂಜ್ ಪೋರ್ನ್ ತಡೆಯುತ್ತದೆ. ಅಶ್ಲೀಲತೆಯನ್ನು ಹೊಂದಿರುವುದನ್ನು ಈ ಟೂಲ್ ಗುರುತಿಸುತ್ತದೆ ಎಂದು ಫೇಸ್‌ಬುಕ್ ಮಾಹಿತಿ ನೀಡಿದೆ.!!

ಅಶ್ಲೀಲತೆ ತಡೆಯಲು 'ಕೃತಕ ಬುದ್ದಿಮತ್ತೆ' ಮೊರೆ ಹೋದ ಫೇಸ್‌ಬುಕ್!!

ತಂತ್ರಜ್ಞಾನದ ಬಳಕೆಯಲ್ಲಿ ಫೇಸ್‌ಬುಕ್ ಯಾವಾಗಲೂ ಮುಂದಿದ್ದು, ಕೃತಕ ಬುದ್ದಿಮತ್ತೆ ಬಳಕೆಯಿಂದ ಗ್ರಾಹಕರ ಖಾಸಾಗಿ ರಕ್ಷಣೆಗೆ ನಾವು ಉತ್ಸುಕವಾಗಿದ್ದೇವೆ. ಯಾವುದೇ ಕಾರಣಕ್ಕೂ ತನ್ನ ಬಳಕೆದಾರರ ಫೋಟೊ ದುರ್ಬಳಕೆ ಆಗಲು ಬಿಡುವುದಿಲ್ಲ ಎಂದು ಫೇಸ್‌ಬುಕ್ ಸಂಸ್ಥೆ ತಿಳಿಸಿದೆ.!!

ಓದಿರಿ: ಹೆಚ್ಚು ಜಾಹಿರಾತು ಇಲ್ಲದ ಈ 5 ಅತ್ಯುತ್ತಮ ಮತ್ತು ವಿಶಿಷ್ಟ ಆಪ್‌ಗಳು ನಿಮ್ಮ ಫೋನ್‌ನಲ್ಲಿರಲಿ!!

English summary
This strategy would help Facebook to create a digital fingerprint for the picture and mark it as non-consensual explicit media.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot