Subscribe to Gizbot

ಫೇಸ್‌ಬುಕ್‌ನಲ್ಲಿ ಎಷ್ಟು ನಕಲಿ ಖಾತೆಗಳಿವೆ ಗೊತ್ತಾ?..ಕುತೋಹಲಕ್ಕೆ ತೆರೆ!!

Written By:

ವಿಶ್ವದಲ್ಲಿಯೇ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನಕಲಿ ಖಾತೆಗಳು ಎಷ್ಟಿರಬಹುದು ಎಂಬ ಪ್ರಶ್ನೆ ನಿಮ್ಮಲಿದ್ದರೆ, ಈ ಪ್ರಶ್ನೆಗೆ ಉತ್ತರವನ್ನು ಫೇಸ್‌ಬುಕ್ ನೀಡಿದೆ.! ಹೌದು, ಈ ವರ್ಷದ ಮೂರನೇ-ತ್ರೈಮಾಸಿಕ ಲಾಭಾಂಶವನ್ನು ಪ್ರಕಟಿಸುವ ವೇಳೆ ಫೇಸ್‌ಬುಕ್ ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದೆ.!!

ಬಹುತೇಕ ಎಲ್ಲರಿಗೂ ಕುತೋಹಲ ಕೆರಳಿಸಿರುವ ಈ ಪ್ರಶ್ನೆಗೆ ಫೆಸ್‌ಬುಕ್ ಉತ್ತರ ನೀಡಿದ್ದು, ಫೇಸ್‌ಬುಕ್‌ನಲ್ಲಿ ಪ್ರಸ್ತುತ 270 ಮಿಲಿಯನ್‌ಗಿಂತ ಹೆಚ್ಚು ನಕಲಿ ಖಾತೆಗಳಿವೆ ಎಂದು ಸ್ಪಷ್ಟಪಡಿಸಿದೆ.!! ಈ ಸಂರ್ಖಯೆ ಜುಲೈ ತಿಂಗಳಿನಲ್ಲಿ ಅಂದಾಜಿಸಿದ್ದಕ್ಕಿಂತ ಶೇ.1 ರಷ್ಟು ಹೆಚ್ಚು ನಕಲಿ ಖಾತೆಗಳಿವೆ ಎಂದು ಫೇಸ್‌ಬುಕ್ ಹೇಳಿರುವುದಾಗಿ ದಿ ಟೆಲಿಗ್ರಾಫ್ ವರದಿ ಮಾಡಿದೆ.

ಫೇಸ್‌ಬುಕ್‌ನಲ್ಲಿ ಎಷ್ಟು ನಕಲಿ ಖಾತೆಗಳಿವೆ ಗೊತ್ತಾ?..ಕುತೋಹಲಕ್ಕೆ ತೆರೆ!!

ಪ್ರತಿ ತಿಂಗಳು ಫೇಸ್‌ಬುಕ್ ಬಳಸುವ 2.1 ಬಿಲಿಯನ್ ಬಳಕೆದಾರರದಲ್ಲಿ ಶೇಕಡ 2 ರಿಂದ 3 ಪರ್ಸೆಂಟ್‌ನಷ್ಟು ಬಳಕೆದಾರರರು ನಕಲಿ ಖಾತೆಗಳನ್ನು ಬಳಸುತ್ತಿದ್ದಾರೆ. ಮತ್ತು ಶೇ.10 ರಷ್ಟು ನಕಲಿ ಖಾತೆಗಳು ಅಸಲಿ ಖಾತೆ ಹೊಂದಿರುವ ವ್ಯಕ್ತಿಗಳದ್ದೇ ಮತ್ತೊಂದು ಖಾತೆಯಾಗಿರುತ್ತದೆ ಎಂದು ಫೇಸ್‌ಬುಕ್ ಹೇಳಿದೆ.!!

ಫೇಸ್‌ಬುಕ್‌ನಲ್ಲಿ ಎಷ್ಟು ನಕಲಿ ಖಾತೆಗಳಿವೆ ಗೊತ್ತಾ?..ಕುತೋಹಲಕ್ಕೆ ತೆರೆ!!

ಒಟ್ಟಾರೆಯಾಗಿ 2.1 ಬಿಲಿಯನ್ ಬಳಕೆದಾರರ ಪೈಕಿ ಶೇ.13 ರಷ್ಟು ಫೇಸ್‌ಬುಕ್ ಖಾತೆಗಳೂ ಅಕ್ರಮ ಖಾತೆಗಳಾಗಿವೆ ಎಂದು ಫೇಸ್‌ಬುಕ್ ತಿಳಿಸಿದ್ದು, ಕೊನೆಗೂ ಸಹ ಬಗೆಹರಿಯಲಾರದೆಂದು ತಿಳಿದಿದ್ದ ಫೇಸ್‌ಬುಕ್‌ನಲ್ಲಿನ ನಕಲಿ ಖಾತೆಗಳ ಬಗ್ಗೆ ಮಾಹಿತಿ ಸಿಕ್ಕಿದ್ದು, ಹಲವರ ಸಮಸ್ಯೆಗೆ ಬ್ರೇಕ್ ಬಿದ್ದಿದೆ.!!

ಓದಿರಿ: "ಒಪ್ಪೊ ಎಫ್5" ಸೆಲ್ಫಿ ಕ್ಯಾಮೆರಾ ದಿಗ್ಗಜನಾಗಲು ಕಾರಣ AI ತಂತ್ರಜ್ಞಾನ!! ಏನಿದು ಗೊತ್ತಾ?

English summary
it disclosed that there are tens of millions more fake and duplicate accounts than it had previously thought.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot