ಫೇಸ್‌ಬುಕ್‌ ಹೊಸ ಸೇವೆಗೆ ಗ್ರಾಹಕರು ಫುಲ್ ಖುಷ್!

|

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಸಂಕಷ್ಟವೊಂದು ಎದುರಾದರೂ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಮುಂದಿನ ದಿನಗಳಲ್ಲಿ ಫೇಸ್‌ಬುಕ್‌ ಪುಟದ ಜಾಹೀರಾತುಗಳ ನಿಯಂತ್ರಣ ಬಳಕೆದಾರರ ಕೈಯಲ್ಲಿರಲಿದೆ. ಇಂತಹ ಜಾಹೀರಾತುಗಳ ಕಡಿವಾಣಕ್ಕೆ ಹೊಸ ಆಯ್ಕೆಯೊಂದು ಫೇಸ್‌ಬುಕ್‌ನಲ್ಲಿ ಸೇರ್ಪಡೆಗೊಳ್ಳಲಿದ್ದು, ಸಂಸ್ಥೆಯ ಆದಾಯ ಖೋತಾ ಆಗಲಿದೆ ಎಂದು ಹೇಳಲಾಗಿದೆ.

ಫೇಸ್‌ಬುಕ್‌ ಹೊಸ ಸೇವೆಗೆ ಗ್ರಾಹಕರು ಫುಲ್ ಖುಷ್!

ಹೌದು, ಈ ಕುರಿತು ಮಂಗಳವಾರ ಪ್ರಕಟಣೆ ಹೊರಡಿಸಿರುವ ಕಂಪನಿ, 'ಫೇಸ್‌ಬುಕ್‌ ಪುಟದಲ್ಲಿ ಬರುವಂತಹ ಸುದ್ದಿ, ವಿಡಿಯೊ, ಚಿತ್ರಗಳನ್ನು ಲೈಕ್‌ ಮಾಡಿದಾಗ ಆ ವಿಷಯಕ್ಕೆ ಸಂಬಂಧಿಸಿದಂತಹ ಜಾಹೀರಾತುಗಳು ಪುಟದಲ್ಲಿ ಕಾಣಿಸಿಕೊಳ್ಳಲಾರಂಭಿಸುತ್ತವೆ. ಮುಂದೆ ಇಂತಹ ಗ್ರಾಹಕ ಟ್ರ್ಯಾಕಿಂಗ್‌ ಅನ್ನು ನಿಷೇಧಿಸುವ ಆಯ್ಕೆ ಸೇರ್ಪಡೆಗೊಳಿಸುತ್ತೇವೆ ಎಂದು ಮಾಹಿತಿ ನೀಡಿದೆ.

ಉತ್ತರ ಕೊರಿಯಾ, ಐರ್ಲೆಂಡ್‌ ಮತ್ತು ಸ್ಪೇನ್‌ನಲ್ಲಿ ಮಂಗಳವಾರ ಇದನ್ನು ಸೇರ್ಪಡೆಗೊಳಿಸಲಾಗಿದ್ದು, ಉಳಿದ ದೇಶಗಳಲ್ಲಿ ಮುಂದಿನ ತಿಂಗಳಿಂದ ಲಭ್ಯವಾಗಲಿದೆ. ಸೆಟ್ಟಿಂಗ್ಸ್‌ನಲ್ಲಿ ಯುವರ್ ಫೇಸ್‌ಬುಕ್‌ ಇನ್ಫಾರ್ಮೇಷನ್ ಎಂಬ ಆಯ್ಕೆಯಡಿ 'ಆಫ್‌-ಫೇಸ್‌ಬುಕ್‌ ಆಕ್ಟಿವಿಟಿ' ಲಭ್ಯವಿದೆ. 'ಕ್ಲಿಯರ್‌ಹಿಸ್ಟರಿ' ಬದಲಾಗಿ 'ಆಫ್‌-ಫೇಸ್‌ಬುಕ್‌ ಆಕ್ಟಿವಿಟಿ' ಆಯ್ಕೆ ಬಳಕೆದಾರರಿಗೆ ದೊರೆಯಲಿದೆ.

ಫೇಸ್‌ಬುಕ್‌ ಹೊಸ ಸೇವೆಗೆ ಗ್ರಾಹಕರು ಫುಲ್ ಖುಷ್!

ನೀವು ಯಾವ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ್ದೀರಿ ಅಥವಾ ಅಲ್ಲಿ ಏನು ಮಾಡಿದ್ದೀರಿ ಎಂಬುದು ನಮಗೆ ತಿಳಿಯುವುದಿಲ್ ಮತ್ತು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ಮೆಸೆಂಜರ್‌ನಲ್ಲಿ ನಿಮಗೆ ಜಾಹೀರಾತುಗಳನ್ನು ಗುರಿಯಾಗಿಸಲು ನೀವು ಸಂಪರ್ಕ ಕಡಿತಗೊಳಿಸಿದ ಯಾವುದೇ ಡೇಟಾವನ್ನು ನಾವು ಬಳಸುವುದಿಲ್ಲ ಎಂದು ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ತಿಳಿಸಿದೆ.

ಇನ್ನು ಹೊಸ ಆಯ್ಕೆಯಿಂದಾಗಿ ಫೇಸ್‌ಬುಕ್ ಜಾಹೀರಾತು ಆದಾಯ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಫೇಸ್‌ಬುಕ್‌ನ ಉತ್ಪನ್ನ ವ್ಯವಸ್ಥಾಪಕ ಸ್ಟೀಫೈನ್‌ ಮ್ಯಾಕ್ಸ್‌ ಅವರು ತಿಳಿಸಿದ್ದಾರೆ. ಆದರೆ,'ಆದಾಯಕ್ಕಿಂತ ಜನರ ಖಾಸಗಿತನ ಮತ್ತು ಅವರ ಕೈಗೆ ನಿಯಂತ್ರಣ ನೀಡುವುದೇ ಮುಖ್ಯ ಎಂದಿರುವ ಅವರು ಗ್ರಾಹಕ ಟ್ರ್ಯಾಕಿಂಗ್‌ ಅನ್ನು ನಿಷೇಧಿಸುವ ಆಯ್ಕೆಯನ್ನು ಸ್ವಾಗತಿಸಿದ್ದಾರೆ.

ರೆಡ್‌ಮಿ ನೋಟ್ 8 ಚಿತ್ರ ಲೀಕ್: ಅಚ್ಚರಿ ನೀಡುವ ಸನಿಹದಲ್ಲಿ ಶಿಯೋಮಿ!ರೆಡ್‌ಮಿ ನೋಟ್ 8 ಚಿತ್ರ ಲೀಕ್: ಅಚ್ಚರಿ ನೀಡುವ ಸನಿಹದಲ್ಲಿ ಶಿಯೋಮಿ!

'ಕ್ಲಿಯರ್‌ಹಿಸ್ಟರಿ' ಬದಲಾಗಿ 'ಆಫ್‌-ಫೇಸ್‌ಬುಕ್‌ ಆಕ್ಟಿವಿಟಿ' ಆಯ್ಕೆಯಿಂದ ವ್ಯಕ್ತಿಯೊಬ್ಬ ಯಾವುದಾದರೂ ಜಾಹೀರಾತನ್ನು ವೀಕ್ಷಿಸಿದರೆ, ಆ ಜಾಹಿರಾತನ್ನು ಯಾರು ವೀಕ್ಷಿಸಿದರು ಎನ್ನುವುದನ್ನು ತಿಳಿಯಲು ಸಾಧ್ಯವಿಲ್ಲ. ಆದರೆ ಒಬ್ಬರು ಈ ಜಾಹೀರಾತು ವೀಕ್ಷಿಸಿದ್ದಾರೆ ಎನ್ನುವುದು ತಿಳಿಯಲಿದೆ. ಇದರಿಂದ ಗ್ರಾಹಕ ಟ್ರ್ಯಾಕಿಂಗ್‌ ಎಂಬ ಖಾಸಗಿತನದ ನಿಯಂತ್ರಣ ಬಳಕೆದಾರರಿಗೆ ಸಿಗಲಿದೆ.

Best Mobiles in India

English summary
The new tool can be found in setting menu of the Facebook app. By clicking on it, users can see the list of data collected from them by the websites they’ve visited. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X