ನೀವು ಎಷ್ಟು ಸಮಯ ಫೇಸ್‌ಬುಕ್ ಬಳಸಿದ್ದೀರಾ ಎಂದು ತಿಳಿದುಕೊಳ್ಳಿ.

|

ಸಾಮಾಜಿಕ ಜಾಲತಾಣ ಫೇಸ್ ಬುಕ್ ನೀವು ಅತಿ ಕಡಿಮೆ ಸಮಯವನ್ನು ಫೇಸ್ ಬುಕ್ ನಲ್ಲಿ ಕಳೆಯಬೇಕು ಎಂದು ಬಯಸುತ್ತದೆ! ಎಸ್. ನೀವು ಓದುತ್ತಿರುವುದು ನಿಜ. ಫೇಸ್ ಬುಕ್ ನಲ್ಲಿ ನೀವು ಹೆಚ್ಚು ಸಮಯ ಕಳೆಯುವುದು ಸ್ವತಃ ಫೇಸ್ ಬುಕ್ ಗೆ ಇಷ್ಟವಿಲ್ಲ.

ಯುವರ್ ಟೈಮ್ ಆನ್ ಫೇಸ್ ಬುಕ್ ಫೀಚರ್:

ಯುವರ್ ಟೈಮ್ ಆನ್ ಫೇಸ್ ಬುಕ್ ಫೀಚರ್:

ಹೌದು ಈ ವಿಶಿಷ್ಟ ಫೀಚರ್ ಬಗ್ಗೆ ಈ ವರ್ಷದ ಜೂನ್ ನಲ್ಲೇ ಮಾತನಾಡಲಾಗಿತ್ತು. ಆದರೆ ಹಲವು ಸಮಯದ ನಂತರ ಇದೀಗ ಅಂತಿಮವಾಗಿ ಈ ಫೀಚರ್ ಬಿಡುಗಡೆಗೊಂಡಿದೆ. ಈ ಟೂಲ್ ನ ಹೆಸರು "ಯುವರ್ ಟೈಮ್ ಆನ್ ಫೇಸ್ ಬುಕ್". ನಿಧಾನವಾಗಿ ಫೇಸ್ ಬುಕ್ ನಲ್ಲಿರುವ ಪ್ರತಿಯೊಬ್ಬರಿಗೂ ಈ ಟೂಲ್ ನ್ನು ಬಿಡುಗಡೆಗೊಳಿಸಲಾಗುತ್ತದೆ ಮತ್ತು ಇದು ನಿಮ್ಮ ಜೀವನದ ಎಷ್ಟು ಸಮಯವನ್ನು ಫೇಸ್ ಬುಕ್ ನಲ್ಲಿ ಕಳೆಯುತ್ತಿದ್ದೀರಿ ಎಂದು ಲೆಕ್ಕ ಹಾಕುತ್ತದೆ.

ನೀವು ಕಳೆದ ಸಮಯದ ಲೆಕ್ಕ:

ನೀವು ಕಳೆದ ಸಮಯದ ಲೆಕ್ಕ:

ನಿಮ್ಮ ಸಾಮಾಜಿಕ ಜಾಲತಾಣದ ಲೈಫ್ ನ್ನು ಮ್ಯಾನೇಜ್ ಮಾಡುವುದಕ್ಕೆ ಇದು ನೆರವು ನೀಡುತ್ತದೆ. ಫೇಸ್ ಬುಕ್ ನಲ್ಲಿ ನೀವು ಕಳೆದ ಪ್ರತಿ ಸೆಕೆಂಡ್ ನ್ನು ಲೆಕ್ಕ ಇಡುವ ಇದು ಪ್ರತಿದಿನ ಎಷ್ಟು ಸಮಯ ಕಳೆದಿದ್ದೀರಿ ಮತ್ತು ಪ್ರತಿವಾರದ ಸರಾಸರಿ ಅಂದರೆ ನೀವು ಫೇಸ್ ಬುಕ್ ನಲ್ಲಿ ಒಂದು ವಾರದಲ್ಲಿ ಕಳೆದ ಒಟ್ಟು ಸಮಯದ ಸರಾಸರಿಯನ್ನು ನಿಮಗೆ ತಿಳಿಸುವ ಕೆಲಸವನ್ನು ಈ ಹೊಸ ಫೀಚರ್ ಮಾಡುತ್ತದೆ.

ರಿಮೈಂಡರ್ ಸೆಟ್ ಮಾಡುವುದಕ್ಕೆ ಅವಕಾಶ:

ರಿಮೈಂಡರ್ ಸೆಟ್ ಮಾಡುವುದಕ್ಕೆ ಅವಕಾಶ:

ಅಷ್ಟೇ ಅಲ್ಲ ನೀವು ಎಷ್ಟು ಸಮಯ ಫೇಸ್ ಬುಕ್ ನಲ್ಲಿ ಕಳೆಯಬೇಕು ಎಂಬುದನ್ನು ಸೆಟ್ ಮಾಡಿ ಇಡುವುದಕ್ಕೂ ಕೂಡ ಇದು ಅವಕಾಶ ನೀಡುತ್ತದೆ. ನೀವು ಸೆಟ್ ಮಾಡಿದ ಸಮಯಕ್ಕೆ ಸರಿಯಾಗಿ ಫೇಸ್ ಬುಕ್ ಲಾಗ್ ಆಫ್ ಮಾಡುವುದಕ್ಕೆ ರಿಮೈಂಡರ್ ನ್ನು ನೀಡುತ್ತದೆ. ಕೆಲವು ಸಮಯದ ವರೆಗೆ ನೋಟಿಫಿಕೇಷನ್ ನ್ನು ಲಿಮಿಟ್ ಮಾಡುವುದಕ್ಕೆ ಕೂಡ ಫೇಸ್ ಬುಕ್ ಅವಕಾಶ ನೀಡುತ್ತಿದ್ದು "ಮ್ಯೂಟ್ ಫುಶ್ ನೋಟಿಫಿಕೇಷನ್" ಎಂಬ ಫೀಚರ್ ನ್ನು ಕೂಡ ಪರಿಚಯಿಸಿದೆ.

ಪ್ರೊಫೆಷನಲ್ ಗಳಿಂದ ತಯಾರಿಸಿದ ಟೂಲ್:

ಪ್ರೊಫೆಷನಲ್ ಗಳಿಂದ ತಯಾರಿಸಿದ ಟೂಲ್:

ಅತಿಯಾಗಿ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡುವುದರಿಂದಾಗಿ ಹಲವು ರೀತಿಯ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಉಹಾರಣೆಗೆ ಒತ್ತಡ, ನಿರಾಶೆ, ಮತ್ತು ಹತಾಶೆ ಇತ್ಯಾದಿ. ಫೇಸ್ ಬುಕ್ ಮೆಡಿಕಲ್ ಪ್ರೊಫೆಷನಲ್ ಗಳು ಮತ್ತು ಶೈಕ್ಷಣಿಕ ಅಭಿವೃದ್ಧಿಕಾರರ ಜೊತೆಗೆ ಚರ್ಚೆ ನಡೆಸಿ ಫೇಸ್ ಬುಕ್ ಬಳಕೆದಾರರಿಗೆ ಸ್ವಾತಂತ್ರ್ಯ ಮತ್ತು ಕಂಟ್ರೋಲ್ ಎರಡನ್ನೂ ನೀಡುವ ಉದ್ದೇಶದಿಂದ ಈ ವಿಶಿಷ್ಟ ಫೀಚರ್ ನ್ನು ಅಭಿವೃದ್ಧಿ ಪಡಿಸಲಾಗಿದೆ.

ಸ್ಮಾರ್ಟ್ ಪೋನ್ ವರ್ಷನ್ ನಲ್ಲಿ ಮಾತ್ರವೇ ಲಭ್ಯ:

ಸ್ಮಾರ್ಟ್ ಪೋನ್ ವರ್ಷನ್ ನಲ್ಲಿ ಮಾತ್ರವೇ ಲಭ್ಯ:

ಫೇಸ್ ಬುಕ್ ನ ಪ್ರತಿಸ್ಪರ್ಧಿಯಾಗಿರುವ ಗೂಗಲ್ ಫಿಸಿಕಲ್ ವೆಲ್ ಬೀಯಿಂಗ್ ಟೂಲ್ (ಶಾರೀರಿಕ ಯೋಗಕ್ಷೇಮ ಸಾಧನ) ನ್ನು ಟೆವಲಪ್ ಮಾಡಿದೆ. ಫೇಸ್ ಬುಕ್ ನ ಈ ಟೂಲ್ ಸದ್ಯ ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರವೇ ಲಭ್ಯವಿದೆ. ಸದ್ಯಕ್ಕೆ ಡೆಸ್ಕ್ ಟಾಪ್ ವರ್ಷನ್ ನಲ್ಲಿ ಲಭ್ಯವಿರುವುದಿಲ್ಲ.

ಟೂಲ್ ಬಳಸುವುದು ಹೇಗೆ?

ಟೂಲ್ ಬಳಸುವುದು ಹೇಗೆ?

ಟೂಲ್ ನ್ನು ಆಕ್ಸಿಸ್ ಮಾಡಲು, ಆಪ್ ನ್ನು ಲಾಂಚ್ ಮಾಡಿ ಮತ್ತು ಮೇಲ್ಬಾಗದ ಬಲದಲ್ಲಿರುವ ಹ್ಯಾಂಗ್ ಬರ್ಗರ್ ಐಕಾನ್ ನ್ನು ಟ್ಯಾಪ್ ಮಾಡಿ. ಪ್ರೈವೆಸಿ ಸೆಟ್ಟಿಂಗ್ ನ್ನು ಸ್ಕ್ರೋಲ್ ಮಾಡಿ ಮತ್ತು ಯುವರ್ ಟೈಮ್ ಆನ್ ಫೇಸ್ ಬುಕ್ ನ್ನು ಟ್ಯಾಪ್ ಮಾಡಿ.

ಭವಿಷ್ಯದ ವರ್ಷನ್ ಹೇಗಿರಲಿದೆ?

ಭವಿಷ್ಯದ ವರ್ಷನ್ ಹೇಗಿರಲಿದೆ?

ಈ ಟೂಲಿನ ಭವಿಷ್ಯದ ವರ್ಷನ್ ನಲ್ಲಿ ಫೇಸ್ ಬುಕ್ ಒಟ್ಟಾರೆ ಫೇಸ್ ಬುಕ್ ನಲ್ಲಿ ಕಳೆದ ಸಮಯವನ್ನು ಮಾತ್ರವಲ್ಲದೇ ಫೋಟೋ ಮತ್ತು ಫೀಡ್ ಗಳನ್ನು ಎಕ್ಸ್ ಪ್ಲೋರ್ ಮಾಡಲು ನೀವೆಷ್ಟು ಸಮಯ ತೆಗೆದುಕೊಂಡಿರಿ ಎಂಬ ಮಾಹಿತಿಯನ್ನೂ ಕೂಡ ನೀಡಲಿದೆ.

Best Mobiles in India

Read more about:
English summary
Facebook launches 'Your Time' tool to help you with social media addiction

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X