ಫೇಸ್‌ಬುಕ್‌ನಲ್ಲಿಯೂ ಕಾಸು ಮಾಡಿ, ಬೇಡದೆ ಇರುವುದನ್ನು ಮಾರಾಟ ಮಾಡಿ..!

|

ಫೇಸ್‌ಬುಕ್ ಬಳಕೆ ಮಾಡಿಕೊಳ್ಳುವುದು ಸಮಯ ವ್ಯರ್ಥ ಎನ್ನುವ ಕಾಲವು ಮುಗಿಯತ್ತಿದೆ. ಫೇಸ್‌ಬುಕ್ ನಿಂದಲೇ ಹಣ ಮಾಡುವ ದಿನಗಳ ಶುರುವಾಗುತ್ತಿದೆ. ಫೇಸ್‌ಬುಕ್ ಈಗಾಗಲೇ ತನ್ನ ಬಳಕೆದಾರರಿಗೆ ಹೊಸ ಹೊಸ ಆಯ್ಕೆಗಳನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಮಾರ್ಕೆಟ್ ಪ್ಲೆಸ್ ಸೇವೆಯನ್ನು ಬಹುದಿನಗಳ ಹಿಂದೆಯೇ ಆರಂಭಿಸಿದೆ.

ಫೇಸ್‌ಬುಕ್‌ನಲ್ಲಿಯೂ ಕಾಸು ಮಾಡಿ, ಬೇಡದೆ ಇರುವುದನ್ನು ಮಾರಾಟ ಮಾಡಿ..!

ಈಗಾಗಲೇ ಆನ್‌ಲೈನಿನಲ್ಲಿ ಮಾರಾಟ ಮಾಡಲು OLx, ಸುಲೇಖಾ, ಇ-ಬೇ, ಕ್ವಿಕರ್‌ ಮುಂತಾದ ತಾಣಗಳನ್ನು ಕಾಣಬಹುದಾಗಿದ್ದು, ಇದೇ ಮಾದರಿಯಲ್ಲಿ ಫೇಸ್‌ಬುಕ್ ಮಾರ್ಕೆಟ್ ಪ್ಲೆನ್‌ನಲ್ಲಿಯೂ ವಸ್ತುಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದನ್ನು ಮಾಡಬಹುದಾಗಿದೆ.

ಹಲವು ಮಂದಿಗೆ ತಿಳಿದಿಲ್ಲ:

ಹಲವು ಮಂದಿಗೆ ತಿಳಿದಿಲ್ಲ:

ಫೇಸ್‌ಬುಕ್‌ನಲ್ಲಿಯೇ ವಸ್ತುಗಳನ್ನು ಮಾರಾಟ ಮಾಡಬಹುದು ಮತ್ತು ವಸ್ತುಗಳನ್ನು ಖರೀದಿಸಬಹುದು ಎಂಬುದು ಹಲವು ಮಂದಿಗೆ ಇನ್ನು ತಿಳಿದಿಲ್ಲ ಎನ್ನಲಾಗಿದೆ. ಫೇಸ್‌ಬುಕ್ ಕೇವಲ ಸಮಯ ಕಳೆಯಲು ಎಂದುಕೊಂಡಿದ್ದಾರೆ.

ಗ್ರೂಪ್:

ಗ್ರೂಪ್:

ಫೇಸ್‌ಬುಕ್ ನಲ್ಲಿ ನೀವು ನೇರಾವಾಗಿ ಮಾರಾಟ ಮಾಡಲು ಸಾಧ್ಯವಿಲ್ಲ ಇದಕ್ಕಾಗಿ ನೀವು ಮಾರಾಟ ಗ್ರೂಪ್ ಗಳಿವೆ ಅಲ್ಲಿ ನೀವು ಸೇರ್ಪಡೆಯಾಗಬೇಕಿದ್ದು, ಅಲ್ಲಿಯೇ ಖರೀದಿಸಿ, ಅಲ್ಲಿಯೇ ಮಾರಾಟ ಮಾಡಬಹುದಾಗಿದೆ. ಅಥವಾ ತಮ್ಮ ಮಾರ್ಕೆಟ್‌ ಪ್ಲೇಸ್‌ ಸ್ಥಾಪಿಸಿ ಸ್ನೇಹಿತರ ಗ್ರೂಪ್ ನಿರ್ಮಿಸಿಕೊಳ್ಳಬಹುದು.

ಆಪ್‌ ಮತ್ತು ಡೆಸ್ಕ್ ಟಾಪ್:

ಆಪ್‌ ಮತ್ತು ಡೆಸ್ಕ್ ಟಾಪ್:

ಫೇಸ್‌ಬುಕ್ ತನ್ನ ಬಳಕೆದಾರರಿಗೆ ನೀಡಿರುವ ಮಾರ್ಕೆಟ್‌ ಪ್ಲೇಸ್‌ಸ್ಮಾರ್ಟ್‌ ಫೋನ್‌ನ ಆಪ್‌ ಮೂಲಕವೂ ಕಾರ್ಯನಿರ್ವಹಿಸಲಿದೆ ಮತ್ತು ವೆಬ್‌ ನಲ್ಲಿಯೂ ಕಾರ್ಯನಿರ್ವಹಿಸಲಿದೆ. ವಸ್ತುಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಲು ಬೇರೆ ತಾಣಕ್ಕೆ ಹೋಗಬೇಕಾಗಿಲ್ಲ, ಮತ್ತೊಂದು ಆಪ್‌ ಅಳವಡಿಸಿಕೊಳ್ಳಬೇಕಿಲ್ಲ. ಸದ್ಯ ಇರುವ ಫೇಸ್‌ಬುಕ್‌ ಮೂಲಕವೇ ಸಾಧ್ಯ.

ಎಲ್ಲಾ ಸಿಗುತ್ತದೆ:

ಎಲ್ಲಾ ಸಿಗುತ್ತದೆ:

ಫೇಸ್‌ಬುಕ್ ನ್ಯೂಸ್‌ಫೀಡ್‌ನ ಎಡ ಮೇಲ್ಭಾಗದಲ್ಲಿ 'ಫೇಸ್‌ಬುಕ್‌ ಮಾರ್ಕೆಟ್‌ ಪ್ಲೇಸ್‌' ಇರಲಿದ್ದು, ಅದರಲ್ಲಿ ನಿರ್ದಿಷ್ಟ ವಿಭಾಗಗಳಲ್ಲಿ ಫಿಲ್ಟರ್‌ ಮಾಡುವ ಆಯ್ಕೆಗಳಿವೆ. ಟಿವಿ, ಫ್ರಿಜ್, ಕಾರು, ಬೈಕು, ಮೊಬೈಲ್‌ ಫೋನ್‌, ಸೀರೆ, ಗಿಟಾರು, ಹೆಲ್ಮೆಟ್, ಸೈಕಲ್ಲು ಏನು ಬೇಕಾದರು ಇಲ್ಲಿ ನಿಮಗೆ ಸಿಗಲಿದೆ.

ನಿಮ್ಮ ಸುತ್ತಮುತ್ತಲಿನವು ಮಾತ್ರ:

ನಿಮ್ಮ ಸುತ್ತಮುತ್ತಲಿನವು ಮಾತ್ರ:

ನೀವು ಇರುವ ಪ್ರದೇಶದ ಸುಮಾರು 60 ಕಿ.ಮೀ. ವ್ಯಾಪ್ತಿಯಲ್ಲಿ ಮಾರಾಟಕ್ಕೆ ಇರುವ ವಸ್ತುಗಳನ್ನು ಫೇಸ್‌ಬುಕ್‌ ತೋರಿಸುತ್ತದೆ. ಗೃಹಬಳಕೆ ವಸ್ತುಗಳು, ಮನರಂಜನೆ, ಉಡುಪು, ಎಲೆಕ್ಟ್ರಾನಿಕ್ಸ್ ವಾಹನಗಳನ್ನು ನೀವು ಹೋಗಿ ನೋಡಿ ಕೊಳ್ಳಬಹುದು. ಇಲ್ಲವೇ ಸಣ್ಣ ಪ್ರಮಾಣದ್ದಾದರೆ ಪಾರ್ಸಲ್ ಮೂಲಕವು ಸ್ವೀಕರಿಸಬಹುದಾಗಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಎಚ್ಚರ ಅಗತ್ಯ:

ಎಚ್ಚರ ಅಗತ್ಯ:

ಫೇಕ್ ಫೇಸ್‌ಬುಕ್ ಖಾತೆಗಳು ಇಲ್ಲಿಯೂ ವಂಚನೆಗೆ ಮುಂದಾಗುತ್ತವೆ, ಈ ಬಗ್ಗೆ ಎಚ್ಚರ ವಹಿಸಬೇಕು. ಫೇಸ್‌ಬುಕ್‌ ಮಾರುಕಟ್ಟೆಯಲ್ಲಿ ಹೊಚ್ಚಹೊಸ ಐಟಂಗಳೂ ಸಿಗುತ್ತವೆ ಅವು ನಕಲಿಯಾಗಿರಲುಬಹುದು. ಖರೀದಿಸುವ ಸಂದರ್ಭದಲ್ಲಿ ಮತ್ತು ಮಾರಾಟ ಮಾಡುವ ಸಂದರ್ಭದಲ್ಲಿ ಎಚ್ಚರ ವಹಿಸುವುದು ಅಗತ್ಯ.

Best Mobiles in India

English summary
Facebook MarketPlace is Now Available in india. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X