TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಫೇಸ್‌ಬುಕ್ ಮೆಸ್ಸೆಂಜರ್ ಬಳಕೆದಾರರಿಗೊಂದು ಗುಡ್‌ನ್ಯೂಸ್! ಏನ್ ಗೊತ್ತಾ?
ನೀವು ಫೇಸ್‌ಬುಕ್ ಮೆಸ್ಸೆಂಜರ್ ಆಪ್ ಬಳಕೆದಾರರೇ? ಹಾಗಿದ್ದರೇ ನೀವು ಅಚಾನಕಾಗಿ ತಪ್ಪಾದ ಮೆಸ್ಸೆಜ್ ಕಳುಹಿಸಿರುತ್ತಿರಿ ಆವಾಗ ಇದನ್ನು ಡೀಲಿಟ್ ಮಾಡಲಾಗದೇ ಅಯೋ, ವಾಟ್ಸಪ್ ತರಹ ಮೆಸ್ಸೆಂಜರ್ ನಲ್ಲಿಯೂ ಕಳುಹಿಸಿದ ಮೆಸೆಜ್ ಡೀಲಿಟ್ ಮಾಡುವ ಆಯ್ಕೆ ಕೊಡಬೇಕಿತ್ತು ಎಂದು ಅನಿಸಿರುತ್ತದೆ, ಅಲ್ಲವೇ? ಹಾಗಾದರೇ ಇನ್ನೂ ಮುಂದೆ ಹೀಗಾಗೊದಿಲ್ಲ ಬಿಡಿ. ಏಕೆಂದರೇ ಫೇಸ್‌ಬುಕ್ ತನ್ನ ಮೆಸ್ಸೆಂಜರ್ ಆಪ್ ಬಳಕೆದಾರರಿಗೆ ಒಂದು ಸಿಹಿಸುದ್ದಿಯೊಂದನ್ನು ನೀಡಿದೆ.
ಹೌದು, ಫೇಸ್‌ಬುಕ್ ಒಡೆತನದ ಮೆಸ್ಸೆಂಜರ್ ಆಪ್‌ನಲ್ಲಿ ಕಳುಹಿಸಿದ ಮೆಸೆಜ್ ಅನ್ನು ಮೆಸೆಜ್ ಸ್ವೀಕರಿಸಿದರ ಚಾಟ್ ಲೀಸ್ಟ್‌ನಿಂದಲೂ ಡೀಲಿಟ್ ಮಾಡುವ ಆಯ್ಕೆಯನ್ನು ಹೊಸದಾಗಿ ಸೇರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಈ ಮೊದಲು ಒಂದು ಬಾರಿ ಮೆಸೆಜ್ ಕಳುಹಿಸಿದರೇ ಮುಗಿತು ಅದನ್ನು ಡೀಲಿಟ್ ಮಾಡುವ ಆಯ್ಕೆ ಇರಲಿಲ್ಲ. ಇನ್ನೂ ಮುಂದೆ ಈ ಹೊಸ ಫೀಚರ್‌ನಿಂದಾಗಿ ಬಳಕೆದಾರರಿಗೆ ಮೆಸೆಜ್ ಡೀಲಿಟ್ ಮಾಡುವ ಅವಕಾಶ ಸೀಗಲಿದೆ.
ಬಳಕೆದಾರರ ಬಹುದಿನಗಳ ನಿರೀಕ್ಷೆಯಂತೆ ಫೇಸ್‌ಬುಕ್ ಮೆಸ್ಸೆಂಜರ್‌ನಲ್ಲಿ ಡೀಲಿಟ್ ಆಯ್ಕೆ ನೀಡಲಾಗುತ್ತಿದ್ದು, ಬಳಕೆದಾರರು ಮೆಸೆಜ್ ಕಳುಹಿಸಿದ 10 ನಿಮಿಷದ ಒಳಗಾಗಿ ಕಳುಹಿಸಿದ ಮೆಸೆಜ್ ಅನ್ನು ಡೀಲಿಟ್ ಮಾಡಬಹುದಾಗಿದೆ. ಡೀಲಿಟ್ ಮಾಡುವಾಗ ಎರಡು ಆಯ್ಕೆಗಳು ಇರಲಿದ್ದು, (Remove for everyone) ಎಲ್ಲರಲ್ಲೂ ಡೀಲಿಟ್ ಮತ್ತು (Remove for you) ನಿನಗೆ ಮಾತ್ರ ಡೀಲಿಟ್ ಎಂಬ ಆಯ್ಕೆಗಳಲ್ಲಿ ಬಳಕೆದಾರ ಯಾವುದನ್ನಾದರೂ ಆಯ್ದುಕೊಳ್ಳಬಹುದಾಗಿದೆ.
ವಾಟ್ಸ್ಆಪ್ ಅನ್ನು ಫೇಸ್‌ಬುಕ್ ಖರೀದಿಸಿದ ನಂತರ ವಾಟ್ಸ್‌ಆಪ್ ಮೆಸ್ಸೆಂಜರ್‌ನಲ್ಲಿ ಕಳುಹಿಸಿದ ಮೆಸೆಜ್ ಡೀಲಿಟ್ ಮಾಡುವ ಅವಕಾಶ ಸೇರಿಸಲಾಗಿತ್ತು. ಅದೇ ರೀತಿ ಇದೀಗ ಫೇಸ್‌ಬುಕ್ ಮೆಸ್ಸೆಂಜರ್‌ನಲ್ಲಿಯೂ ಸಹ ಕಳುಹಿಸಿದ ಮೆಸೆಜ್ ಅನ್ನು ಸ್ವೀಕರಿಸಿದವರ ಚಾಟ್ ಲಿಸ್ಟ್‌ನಿಂದ ಡೀಲಿಟ್ ಮಾಡುವ ಆಯ್ಕೆ ನೀಡಲಾಗುವುದು ಎಂದು ಫೇಸ್‌ಬುಕ್ ಸಂಸ್ಥೆ ತಿಳಿಸಿದೆ. ಇದು ಮೆಸ್ಸೆಂಜರ್ ಬಳಕೆದಾರರಿಗೆ ಖುಷಿ ತಂದಿದೆ.
ಇನ್ನೂ ಫೇಸ್‌ಬುಕ್ ತನ್ನ ಜನಪ್ರಿಯ 'ಮೆಸ್ಸೆಂಜರ್ ಆಪ್‌ನ ಅಪ್‌ಡೇಟ್ ವರ್ಷ್‌ನಲ್ಲಿ ಈ ಡೀಲಿಟ್ ಆಯ್ಕೆಯು ಲಭ್ಯವಾಗಲಿದೆ ಎಂದು ಹೇಳಿದ್ದು, ಈ ಹೊಸ ಡೀಲಿಟ್ ಆಯ್ಕೆಯು ಆಂಡ್ರಾಯ್ಡ್ ಮತ್ತು ಐಓಎಸ್ ಆಪರೇಟಿಂಗ್ ಸಿಸ್ಟಮ್ ಬಳಕೆದಾರರಿಬ್ಬರಿಗೂ ದೊರೆಯಲಿದೆ ಎಂದು ಹೇಳಲಾಗುತ್ತಿದೆ.