ಫೇಸ್ಬುಕ್ ಮೆಸೆಂಜನರ್ ‘ಲೈಟ್’ ಭಾರತದಲ್ಲಿ ಆರಂಭ

By: Prathap T

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಮನ್ನಣೆ ಪಡೆದಿರುವ ಫೇಸ್ಬುಕ್ ನವೀನ ಮಾದರಿಯ ಹಲವು ವೈಶಿಷ್ಠತೆಯಿಂದ ಕೂಡಿರುವ ಮೆಸೆಂಜರ್ 'ಲೈಟ್’ ಹೊಸ ಆಪ್ ಅನ್ನು ಭಾರತಕ್ಕೆ ಪರಿಚಯಿಸಿದೆ.

ಫೇಸ್ಬುಕ್ ಮೆಸೆಂಜನರ್ ‘ಲೈಟ್’ ಭಾರತದಲ್ಲಿ ಆರಂಭ

ನಿಧಾನಗತಿಯಲ್ಲಿ ಮೊಬೈಲ್ ಇಂಟರ್ ನೆಟ್ ಸಂಪರ್ಕದಿಂದ ಗ್ರಾಹಕರಿಗೆ ಆಗುತ್ತಿದ್ದ ಕಿರಿಕಿರಿಯನ್ನು ತಪ್ಪಿಸುವ ಸಲುವಾಗಿ ಈ ಹೊಸ ಆಪ್ ಅನ್ನು ಬಳಕೆದಾರರ ಮುಂದಿಡುವ ಮೂಲಕ ಮತ್ತಷ್ಟು ತನ್ನ ಕಾರ್ಯವ್ಯಾಪ್ತಿಯನ್ನು ಪಸರಿಸಿಕೊಂಡಿದೆ.

"ಮೆಸೆಂಜರ್ ಲೈಟ್" ಅತ್ಯಂತ ಹಗುರವಾದ, ವೇಗವಾದ ಮತ್ತು ಸರಳವಾದ ವರ್ಸನ್ ಆಪ್ ಆಗಿದ್ದು, ಕೋರ್ ಆಪ್ ಮಾದರಿಯಲ್ಲಿ ಸರಾಸರಿ ಕಡಿಮೆ ಇಂಟರ್ ನೆಟ್ ವೇಗದಲ್ಲಿ ಸಾಮಾನ್ಯ ಸ್ಮಾರ್ಟ್ ಫೋನ್ ಗಳಲ್ಲಿ ಈ ಆಪ್ ಬಳಕೆ ಮಾಡುವುದಾಗಿದೆ ಎಂದು ಕಂಪನಿ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.

Facebook !! ಕೆಲವೊಂದು ಸಿಂಪಲ್ ಫೇಸ್‌ಬುಕ್ ಟ್ರಿಕ್ಸ್....ಜಸ್ಟ್ ಸಿಂಪಲ್!!
ವಿಶೇಷತೆಗಳೇನಿವೆ?

10MBಯಷ್ಟು ಗಾತ್ರದಲ್ಲಿ 'ಮೆಸೆಂಜರ್ ಲೈಟ್’ ಈಗಿರುವ ಮೆಸೆಂಜರ್ ನಂತೆಯೇ ಅದೇ ಮೂಲಭೂತ ಕಾರ್ಯವೈಖರಿಯನ್ನು ಹೊಂದಿದ್ದರೂ, ಬಳಕೆದಾರರು ಪಠ್ಯ ಸಂದೇಶಗಳು, ಫೋಟೋಗಳು, ಲಿಂಕ್ ಗಳು, ಎಮೊಜಿಗಳು ಮತ್ತು ಸ್ಟಿಕ್ಕರ್ ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಹೊಸ ಆಪ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಮತ್ತೊಂದು ವಿಶೇಷವೆಂದರೆ, ಈ ಆಪ್ ನಲ್ಲಿ ವಾಯ್ಸ್ ಕಾಲ್ ಮಾಡಿ ಮಾತನಾಡಬಹುದಾಗಿದೆ. ಮಾತ್ರವಲ್ಲದೇ, ಮೆಸೆಂಜನರ್ ಲೈಟ್ ನಲ್ಲಿ ಗ್ರೂಪ್ ರಚಿಸಿ ಚಾಟ್ ಕೂಡ ಮಾಡಬಹುದಾಗಿದ್ದು, ಗ್ರೂಪಿನಲ್ಲಿರುವ ಯಾರೆಲ್ಲಾ ಸದಸ್ಯರಿದ್ದಾರೆ ಎಂದು ನೋಡಬಹುದಾಗಿದೆ. ಗ್ರೂಪಿಗೆ ಸದಸ್ಯರನ್ನ ಸೇರ್ಪಡೆಗೊಳಿಸಬಹುದು ಅಥವಾ ಬೇಡವಾದ ಸದಸ್ಯರನ್ನು ಗ್ರೂಪನಿಂದ ಹೊರ ಹಾಕಲು ಬಹುದಾಗಿದೆ.

ಮೆಸೆಂಜರ್ ಲೈಟ್ ಆಪ್ ಅನ್ನು ಈ ಹಿಂದೆ ವಿಯೆಟ್ನಾಂ, ನೈಜೀರಿಯಾ, ಪೆರು, ಟರ್ಕಿ, ಜರ್ಮನಿ, ಜಪಾನ್ ಮತ್ತು ನೆದರ್ಲ್ಯಾಂಡ್ಸ್ ದೇಶಗಳಲ್ಲಿ ಆರಂಭಿಸಲಾಗಿತ್ತು. ಇದೀಗ ಭಾರತದಲ್ಲಿ ಪರಿಚಯಿಸಿದೆ.

ಆಂಡ್ರಾಯ್ಡ್ ಮೆಸೆಂಜರ್ ಅಪ್ಲಿಕೇಶನ್ ಅನ್ನು ಸುಮಾರು 5,000,000,000 ರಷ್ಟು ಮಂದಿ ಡೌನ್ ಲೋಡ್ ಮಾಡಿ ಬಳಕೆ ಮಾಡುತ್ತಿದ್ದು, ಆ ಪೈಕಿ 46,056,597 ಬಳಕೆದಾರರು ಐದಕ್ಕೆ ನಾಲ್ಕು ರೇಟ್ ನೀಡಿ ಮೆಚ್ಚುಗೆ ಸೂಚಿಸಿರುವುದು ಗಮನಾರ್ಹ.

Read more about:
English summary
For places where mobile internet connections are slow, Facebook has rolled out the "lite" version of its Messenger app in India.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot