ಫೇಸ್‌ಬುಕ್ ಬಳಕೆದಾರರಿಗೆ ಬಂತು ಬಹುನಿರೀಕ್ಷಿತ 'ಡಾರ್ಕ್​ ಮೋಡ್'​ ಫೀಚರ್!!​

|

ಕಳೆದ ವರ್ಷ ಮೇ ತಿಂಗಳನಲ್ಲೇ ಬಳಕೆದಾರರಿಗೆ ಡಾರ್ಕ್‌ ಮೋಡ್ ಪರಿಚಯಿಸುತ್ತೇವೆ ಎಂದು ಹೇಳಿದ್ದ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಇದೀಗ ಡಾರ್ಕ್​ ಮೋಡ್​ ಫೀಚರ್​ ಅನ್ನು ಪರಿಚಯಿಸಿದೆ ಎಂದು ತಿಳಿದುಬಂದಿದೆ. ಫೇಸ್‌ಬುಕ್ ಮೆಸೆಂಜರ್‌ನಲ್ಲಿ 'ಡಾರ್ಕ್ ಮೋಡ್ 'ಪರಿಚಯಿಸಲು ಫೇಸ್‌ಬುಕ್ ಕಂಪೆನಿ ಸಕಲ ಸಿದ್ಧತೆ ನಡೆಸಿದ್ದು, ಹೊಸ ಡಾರ್ಕ್​ ಮೋಡ್ ಫೀಚರ್ ಈಗಾಗಲೇ ಕೆಲವು ದೇಶಗಳಲ್ಲಿ ಲಭ್ಯವಿದೆ ಎಂದು ತಿಳಿದುಬಂದಿದೆ.

ಹೌದು, ಫೇಸ್​ಬುಕ್​​ ಬಳಕೆದಾರರ ಬಹು ದಿನದ ಬೇಡಿಕೆಯಾಗಿದ್ದ 'ಡಾರ್ಕ್ ಮೋಡ್' ಆಯ್ಕೆ ಶೀಘ್ರದಲ್ಲೇ ಎಲ್ಲಾ ಫೇಸ್‌ಬುಕ್ ಬಳಕೆದಾರರಿಗೂ ಲಭ್ಯವಾಗುವ ನಿರೀಕ್ಷೆಯಿದೆ. ಮೆಸೆಂಜರ್ ಆಪ್ ತೆರೆದು ಅದರಲ್ಲಿ ಯಾರಿಗಾದರೂ ಅರ್ಧಚಂದ್ರ ಇರುವ ಇಮೋಜಿ ಕಳುಹಿಸಿದರೆ, ತಕ್ಷಣ ಮೇಲ್ಗಡೆ You Found Dark Mode! ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ನಂತರ ಸೆಟ್ಟಿಂಗ್ಸ್‌ನಲ್ಲಿ ಡಾರ್ಕ್ ಮೋಡ್ ಆನ್ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತಿದೆ ಎನ್ನಲಾಗಿದೆ.

ಫೇಸ್‌ಬುಕ್ ಬಳಕೆದಾರರಿಗೆ ಬಂತು ಬಹುನಿರೀಕ್ಷಿತ 'ಡಾರ್ಕ್​ ಮೋಡ್'​ ಫೀಚರ್!!​

ಈ ಡಾರ್ಕ್ ಮೋಡ್ ಫೀಚರ್ ಸಿಕ್ಕ ನಂತರ ಫೇಸ್​ಬುಕ್​ ಬಳಕೆದಾರರು ತಮ್ಮ ಮೆಸೆಂಜರ್​ನ ಪ್ರೊಫೈಲ್​ನಲ್ಲಿ ಈ ಆಯ್ಕೆಯನ್ನು ಪಡೆದುಕೊಳ್ಳಬಹುದು ಎನ್ನಲಾಗುತ್ತಿದೆ. ಕೆಲ ಸ್ಮಾರ್ಟ್​ಫೋನ್​ಗಳ ಫೇಸ್​ಬುಕ್​ನ ಫೋಟೋ ಆಯ್ಕೆ ಕೆಳಗೆ ಡಾರ್ಕ್​ ಮೋಡ್​ ಆಯ್ಕೆಯನ್ನು ನೀಡಲಾಗಿದೆ ಎನ್ನಲಾಗಿದ್ದು, ಅದನ್ನು ಆಕ್ಟಿವೇಟ್​ ಮಾಡಿಕೊಳ್ಳುವ ಮೂಲಕ ಹೊಸ ಆಯ್ಕೆಯನ್ನು ಬಳಸಿಕೊಳ್ಳಬಹುದು ಎಂದು ಇತ್ತೀಚಿನ ಮಾಧ್ಯಮ ವರದಿಗಳ ಮೂಲಕ ತಿಳಿದುಬಂದಿದೆ.

ಫಿಲಿಪ್ಪೀನ್ಸ್, ಪೋರ್ಚುಗಲ್, ಜೆಕ್ ರಿಪಬ್ಲಿಕ್, ಸೌದಿ ಅರೇಬಿಯಾ ಮತ್ತು ಇಂಡೋನೇಷ್ಯಾದ ಬಳಕೆದಾರರು ತಮಗೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಡಾರ್ಕ್‌ ಮೋಡ್ ದೊರೆಯುತ್ತಿದೆ ಎಂದಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಕೂಡ ಫೇಸ್​ಬುಕ್​ ಸಂಸ್ಥೆ​ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲದಿರುವುದು ಕುತೋಹಲಕಾರಿಯಾಗಿದೆ. ಒಟ್ಟಿನಲ್ಲಿ ಫೇಸ್‌ಬುಕ್ ಬಳಕೆದಾರರು ಭಾರೀ ದಿನಗಳಿಂದ ಕಾಯುತ್ತಿದ್ದ ಫೀಚರ್ ಒಂದು ಬಹುಬೇಗ ಸಿಗುವ ನಿರೀಕ್ಷೆಯನ್ನು ಮೂಡಿಸಿದೆ.

ಫೇಸ್‌ಬುಕ್ ಬಳಕೆದಾರರಿಗೆ ಬಂತು ಬಹುನಿರೀಕ್ಷಿತ 'ಡಾರ್ಕ್​ ಮೋಡ್'​ ಫೀಚರ್!!​

ಏನಿದು ಡಾರ್ಕ್ ಮೋಡ್
ರಾತ್ರಿ ವೇಳೆಯಲ್ಲಿ ಸ್ಮಾರ್ಟ್​ಫೋನ್​ ಬಳಸುವವರಿಗೆ ಕಣ್ಣಿನ ಮೇಲೆ ಒತ್ತಡ ಬೀಳುವುದನ್ನು ಕಡಿಮೆ ಮಾಡಲು ಬಳಸುವ ಫೀಚರ್​ಗೆ ಸುಲಭವಾಗಿ ಡಾರ್ಕ್ ಮೋಡ್ ಎಂದು ಹೇಳಬಹುದಾಗಿದೆ. ಈ ಡಾರ್ಕ್ ಮೋಡ್ ಆಯ್ಕೆ ಇದ್ದರೆ, ರಾತ್ರಿವೇಳೆಯಲ್ಲಿ ಫೋನಿನಬ್ರೈಟ್‌ನೆಸ್ ಕಡಿಮೆ ಆಗುವುದರಿಂದ ಕಣ್ಣಿನ ಮೇಲೆ ಬೀಳುವ ಒತ್ತಡವನ್ನು ನಿಯಂತ್ರಿಸುತ್ತದೆ. ಮತ್ತು ಮೊಬೈಲ್‌ಗಳ ಬ್ಯಾಟರಿಯ ಚಾರ್ಜನ್ನು ಕೂಡ ಉಳಿಸಬಹುದಾದ ಫೀಚರ್ ಇದಾಗಿದೆ.

Best Mobiles in India

English summary
Facebook Messenger to receive dark mode. How to Activate the Hidden Dark Mode in Facebook Messenger. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X