Subscribe to Gizbot

ಫೇಸ್ ಬುಕ್ ನಲ್ಲಿ ಕ್ರಿಪ್ಟೋಕರೆನ್ಸಿ ಆಡ್ ಗಳು ಕಾಣಿಸಿಕೊಳ್ಳುವುದಿಲ್ಲ..!

Posted By: Precilla Dias

ಸೋಶಿಯಲ್ ಮೀಡಿಯಾ ದೈತ್ಯ ಫೇಸ್ ಬುಕ್ ಉತ್ತಮ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದೆ . ಈಗಾಗಲೇ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿರುವ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಆಡ್ ಗಳನ್ನು ತನ್ನ ತಾಣದಲ್ಲಿ ನಿರ್ಬಂಧಿಸಲಿದೆ ಎನ್ನಲಾಗಿದೆ. ಅದರಲ್ಲಿಯೂ ಬಿಟ್ ಕಾಯಿನ್ ಸಂಬಂಧಿಸಿದಂತೆ ಬರುವ ಆಡ್ ಗಳನ್ನು ಪ್ರದರ್ಶಿಸುವುದಿಲ್ಲ ಎಂದು ತಿರ್ಮಾನಿಸಿದೆ.

ಫೇಸ್ ಬುಕ್ ನಲ್ಲಿ ಕ್ರಿಪ್ಟೋಕರೆನ್ಸಿ ಆಡ್ ಗಳು ಕಾಣಿಸಿಕೊಳ್ಳುವುದಿಲ್ಲ..!

ಫೇಸ್ ಬುಕ್ ಒಡೆತನಕ್ಕೆ ಸೇರಿರುವ ಎಲ್ಲಾ ತಾಣಗಳಲ್ಲೂ ಕಾಣಿಸಿಕೊಳ್ಳುವ ಆಡ್ ಗಳಿಗೂ ಇದು ಅನ್ವಯಿಸಲಿದೆ ಎನ್ನಲಾಗಿದೆ. ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಆಡ್ ಗಳು ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರಿಗೆ ಮೋಸ ಮಾಡಲಿದೆ. ಇದಲ್ಲದೇ ಕ್ರಿಪ್ಟೋಕರೆನ್ಸಿ ಮಾನ್ಯತೆಯನ್ನು ಪಡೆದುಕೊಂಡಿಲ್ಲ ಈ ಕಾರಣದಿಂದಾಗಿ ಬಳಕೆದಾರರಿಗೆ ತಪ್ಪು ಮಾಹಿತಿಯನ್ನು ರವಾನೆ ಮಾಡಬಾರದು ಎಂದು ಈ ನಿರ್ಧಾರವನ್ನು ಕೈಗೊಂಡಿದೆ.

ಈಗಾಗಲೇ ಸುಳ್ಳು ಸುದ್ದಿಗಳನ್ನು ನಿರ್ಬಂಧಿಸುವ ಮಾದರಿಯಲ್ಲಿ ಆಡ್ ಗಳಲ್ಲಿಯೂ ಗ್ರಾಹಕರನ್ನು ಮರಳು ಮಾಡುವ ಆಡ್ ಗಳನ್ನು ತಡೆಹಿಡಿಯಲಿದೆ. ಇದರಿಂದಾಗಿ ಫೇಸ್ ಬುಕ್ ಮತ್ತು ಫೇಸ್ ಬುಕ್ ಬಳಕೆದಾರರಿಬ್ಬರಿಗೂ ಸಹಾಯ ಮಾಡಲಿದೆ ಎನ್ನಲಾಗಿದೆ. ಇದರಿಂದ ಫೇಸ್ ಬುಕ್ ಆದಾಯಕ್ಕೂ ಹೊಡೆತ ಬಿಳಲಿದೆ ಎನ್ನಲಾಗಿದೆ.

How to view all photos, pages, comments and posts you liked on Facebook (KANNADA)

ಭಾರತದಲ್ಲಿ ಶಿಯೋಮಿ ಅಲೆ ಅಳಿಸಲಿದೆ ಭಾರತೀಯ 'ಸ್ಮಾರ್ಟಾನ್ ಟಿ' ಫೋನ್!!

ಇದಲ್ಲದೇ ಫೇಸ್ ಬುಕ್ ಕಣ್ಣು ತಪ್ಪಿಸಿ ಬರುವ ಆಪ್ ಗಳ ಕುರಿತು ಬಳಕೆದಾರರು ಸಹ ಫೇಸ್ ಬುಕ್ ಗೆ ಮಾಹಿತಿಯನ್ನು ನೀಡಬಹುದಾಗಿದೆ. ದಿನೇ ದಿನೇ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿರುವ ಕ್ರಿಪ್ಟೋಕರೆನ್ಸಿ ಹೆಚ್ಚಿನ ಜನರನ್ನು ಆಕರ್ಷಿಸಲು ಫೇಸ್ ಬುಕ್ ಅನ್ನು ಮಾಧ್ಯಮವಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಇದಕ್ಕೆ ಕಾರಣವಾಗಿದೆ.

ಈಗಾಗಲೇ ಹೆಚ್ಚಿನ ಮಂದಿಯೂ ಕ್ರಿಪ್ಟೋಕರೆನ್ಸಿ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇದು ಅರ್ಥಿಕ ವ್ಯವಸ್ಥೆಯ ಮೇಲೆ ವ್ಯತಿ ರೀಕ್ತ ಪರಿಣಾವನ್ನು ಬೀರಲಿದೆ. ಮುಂದಿನ ದಿನದಲ್ಲಿ ಹೆಚ್ಚಿನ ತೊಂದರೆಯನ್ನು ಸೃಷ್ಟಿಸಲಿದೆ. ಈ ಹಿನ್ನಲೆಯಲ್ಲಿ ಫೇಸ್ ಬುಕ್ ಈ ನಿರ್ಧಾರಕ್ಕೆ ಮುಂದಾಗಿದೆ.

English summary
Facebook is planning to ban all the advertisements for Cryptocurrencies.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot