ಫೇಸ್ಬುಕ್ ನ್ಯೂಸ್ ಫೀಡ್ ಗೆ ಹೊಸ ವಿನ್ಯಾಸ , ನ್ಯಾವಿಗೇಶನ್ ಇನ್ನಷ್ಟು ಸರಳ!

By: Tejaswini P G

ಎಲ್ಲರ ಮೆಚ್ಚಿನ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನ ನ್ಯೂಸ್ಫೀಡ್ ಲ್ಲಿ ನಾವು ದಿನ ನಿತ್ಯವೂ ಹಲವಾರು ಫೋಟೋಗಳು,ವೀಡಿಯೋಗಳು,GIFಗಳು, ಲಿಂಕ್ಗಳು, ಸ್ಟೇಟಸ್ಗಳನ್ನು ನೋಡುತ್ತಲೇ ಇರುತ್ತೇವೆ.ಇಷ್ಟೊಂದು ಮಾಹಿತಿಗಳಿಂದ ತುಂಬಿರುವುದರಿಂದ ನ್ಯೂಸ್ ಫೀಡ್ ಗೊಂದಲಮಯ ಅನಿಸುವುದು ಸಹಜ.

ಫೇಸ್ಬುಕ್ ನ್ಯೂಸ್ ಫೀಡ್ ಗೆ ಹೊಸ ವಿನ್ಯಾಸ , ನ್ಯಾವಿಗೇಶನ್ ಇನ್ನಷ್ಟು ಸರಳ!

ನ್ಯೂಸ್ಫೀಡ್ ಅನ್ನು ಸರಳವಾಗಿಸಲು, ಓದಲು ಮತ್ತು ನ್ಯಾವಿಗೇಟ್ ಮಾಡಲು ಸುಲಭವಾಗಿಸಲು ಫೇಸ್ಬುಕ್ ಹೊಸ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಲೇ ಇರುತ್ತದೆ.ಫೇಸ್ಬುಕ್ ಈಗ ತನ್ನ ನ್ಯೂಸ್ಫೀಡ್ ನ ವಿನ್ಯಾಸಕ್ಕೆ ಹೊಸ ಹೊಸ ಬದಲಾವಣೆಗಳನ್ನು ತರುತ್ತಿದೆ.ನ್ಯೂಸ್ಫೀಡ್ ಅನ್ನು ಜನರಿಗೆ ತಮ್ಮ ಆತ್ಮೀಯರೊಂದಿಗೆ ಬೆರೆಯಲು ಮತ್ತಷ್ಟು ಅನುಕೂಲಕರವಾಗಿಸುವ ಉದ್ದೇಶ ಫೇಸ್ಬುಕ್ನದ್ದು.

Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
ಈ ನಿಟ್ಟಿನಲ್ಲಿ ಫೇಸ್ಬುಕ್ ಏನೇನು ಪ್ರಯತ್ನಗಳನ್ನು ನಡೆಸುತ್ತಿದೆ? ಈ ಕುರಿತು ಫೇಸ್ಬುಕ್ ಕಂಪೆನಿಯು ತಮ್ಮ ಬ್ಲಾಗ್ಪೋಸ್ಟ್ ಒಂದರಲ್ಲಿ ಮಾಹಿತಿಯನ್ನು ಈಗಾಗಲೇ ನೀಡಿದೆ. ಮುಂದಿನ ದಿನಗಳಲ್ಲಿ ನ್ಯೂಸ್ಫೀಡ್ನಲ್ಲಿ ಏನೆಲ್ಲಾ ಬದಲಾವಣೆಗಳು ಬರಬಹುದು ಎಂಬುದರ ಕುರಿತು ಸಂಕ್ಷಿಪ್ತ ವರದಿಯೊಂದನ್ನು ನಿಮಗಾಗಿ ತಂದಿದ್ದೇವೆ..
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉತ್ತಮ ಸಂಭಾಷಣೆಗಳು

ಉತ್ತಮ ಸಂಭಾಷಣೆಗಳು

ಫೇಸ್ಬುಕ್ ಬಳಕೆದಾರರು ಈ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜೀವಂತಿಕೆಯುಳ್ಳ,ಉತ್ತಮ ಭಾವಾಭಿವ್ಯಕ್ತಿಯಿಂದ ಕೂಡಿದ ಅರ್ಥಪೂರ್ಣ ಸಂಭಾಷಣೆಗಳನ್ನು ನಡೆಸುವಂಥಾಗಬೇಕು ಎನ್ನುವುದು ಫೇಸ್ಬುಕ್ ನ ಆಶಯ. ಫೇಸ್ಬುಕ್ನಲ್ಲಿ ಪೋಸ್ಟ್ ಒಂದರ ಕುರಿತು ಜನರೊಂದಿಗೆ ಸಂಭಾಷಿಸಲು ಕಮೆಂಟ್ಗಳು ಮುಖ್ಯ ಮಾಧ್ಯಮವಾಗುತ್ತದೆ.ಇದಕ್ಕೆಂದೇ ಫೇಸ್ಬುಕ್ ಕಂಪೆನಿಯು ತನ್ನ ಕೆಮಂಟ್ಗಳ ವಿನ್ಯಾಸವನ್ನು ನವೀಕರಿಸಿದೆ.ಈ ಮುಖಾಂತರ ಇನ್ನೊಬ್ಬ ವ್ಯಕ್ತಿಗೆ ಕಮೆಂಟ್ ಮುಖೇನ ನೀಡಿದ ನೇರ ಪ್ರತ್ಯುತ್ತರಗಳನ್ನು ಗುರುತಿಸಲು ಸುಲಭವಾಗಲಿದೆ.

ನ್ಯೂಸ್ಫೀಡ್ ಓದಲು ಸುಲಭ

ನ್ಯೂಸ್ಫೀಡ್ ಓದಲು ಸುಲಭ

ಫೆಸ್ಬುಕ್ ತನ್ನ ನ್ಯೂಸ್ಫೀಡ್ ಅನ್ನು ಓದಲು ಇನ್ನಷ್ಟು ಸುಲಭವಾಗುವಂತೆ ಮಾಡುವ ಪ್ರಯತ್ನದಲ್ಲಿದೆ. ಇದಕ್ಕಾಗಿ ನ್ಯೂಸ್ಫೀಡ್ ನ ವಿನ್ಯಾಸದಲ್ಲಿ ಕೆಲವೊಂದು ಬದಲಾವಣೆಗಳನ್ನು ತರಲಿದ್ದು ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲಿದೆಯಂತೆ. ನ್ಯೂಸ್ಫೀಡ್ ನ ಕಲರ್ ಕಾಂಟ್ರಾಸ್ಟ್ ಅನ್ನು ಹೆಚ್ಚಿಸುವ ಮೂಲಕ ಅಕ್ಷರಗಳು ಹೆಚ್ಚು ಸ್ಪಷ್ಟವಾಗಿ ಕಾಣುವಂತೆ ಮಾಡಲಿದೆ. ಅಲ್ಲದೆ ದೊಡ್ಡದಾದ ಲಿಂಕ್ ಪ್ರಿವ್ಯೂಗಳು ಇರಲಿದೆ. ಇವುಗಳ ಮೂಲಕ ನ್ಯೂಸ್ಫೀಡ್ ಓದಲು ಮತ್ತಷ್ಟು ಸುಲಭವೆನಿಸಲಿದೆ.

ಇಷ್ಟೇ ಅಲ್ಲದೆ ಕೆಲವು ಐಕಾನ್ ಗಳನ್ನು ಮತ್ತು ಲೈಕ್, ಶೇರ್, ಕಮೆಂಟ್ ಮುಂತಾದ ಬಟನ್ ಗಳನ್ನು ಹಿರಿದಾಗಿಸಿದ್ದು, ಒತ್ತಲು ಇನ್ನಷ್ಟು ಅನುಕೂಲಕರವಾಗಲಿದೆ.ಅಲ್ಲದೆ ಯಾರು ಪೋಸ್ಟ್ ಅಥವ ಕಮೆಂಟ್ ಮಾಡುತ್ತಿದ್ದಾರೆ ಎಂಬುದನ್ನು ತೋರಿಸಲು ವೃತ್ತಾಕಾರದ ಪ್ರೊಫೈಲ್ ಚಿತ್ರಗಳನ್ನು ಬಳಸಲಾಗುತ್ತದೆ.

ನೀವು ವಾಟ್ಸ್‌ಆಪ್‌ ನಲ್ಲೇ ಪೇಮೆಂಟ್ ಮಾಡಬಹುದು: ನಿಮ್ಮ ಫೋನಿನಲ್ಲಿ ಲಭ್ಯವಿಲ್ಲವೇ? ಹಾಗಿದ್ರೆ ಹೀಗೇ ಮಾಡಿ

ಸುಲಭವಾದ ನ್ಯಾವಿಗೇಶನ್

ಸುಲಭವಾದ ನ್ಯಾವಿಗೇಶನ್

ಜನರು ನ್ಯೂಸ್ಫೀಡ್ ನ್ಯಾವಿಗೇಟ್ ಮಾಡುವ ರೀತಿಯನ್ನು ಉತ್ತಮವಾಗಿಸುವ ಪ್ರಯತ್ನ ಫೇಸ್ಬಕ್ನದ್ದು. ನ್ಯೂಸ್ಫೀಡ್ ನಲ್ಲಿರುವ ಲಿಂಕ್ ಗಳನ್ನು ಕ್ಲಿಕ್ ಮಾಡಿದರೆ ಅದು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದನ್ನು ಕ್ಲಿಕ್ ಮಾಡುವ ಮುಂಚಿತವಾಗಿಯೇ ತಿಳಿಯಬಹುದಂತೆ.

ಅಲ್ಲದೆ ಬಳಕೆದಾರರು ಅವರು ಯಾರ ಪೋಸ್ಟನ್ನು ಓದುತ್ತಿದ್ದಾರೆ, ಯಾರ ಪೋಸ್ಟ್ ಗೆ ಕಮೆಂಟ್ ಅಥವ ರಿಯಾಕ್ಟ್ ಮಾಡಲಿದ್ದಾರೆ ಎಂಬುದನ್ನು ಆ ಪೋಸ್ಟಲ್ಲಿರುವಂತೆಯೇ ತಿಳಿದುಕೊಳ್ಳಬಹುದು. ಆ ಪೋಸ್ಟ್ ಅನ್ನು ನೋಡಿದ ನಂತರ ಮತ್ತೆ ತಮ್ಮ ನ್ಯೂಸ್ಫೀಡ್ ಗೆ ಹಿಂದಿರುಗಲು ಎದ್ದುಕಾಣುವಂಥ ಬ್ಯಾಕ್ ಬಟನ್ ಒಂದನ್ನು ನೀಡಲಾಗುತ್ತದೆ.

ಈ ಹೊಸ ಬದಲಾವಣೆಗಳು ಫೆಸ್ಬುಕ್ ಪುಟಗಳ ತಲುಪುವಿಕೆ ಅಥವಾ ರೆಫರಲ್ ಟ್ರ್ಯಾಫಿಕ್ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ ಎಂದು ಫೇಸ್ಬುಕ್ ಸ್ಪಷ್ಟೀಕರಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
In order to make News Feed more conversational and easier to read and navigate, Facebook is making a few updates to its design over the coming weeks.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot