ಫೇಸ್‌ಬುಕ್ ಬಳಕೆದಾರರಿಗೆ ಸಿಗಲಿದೆ ಹೊಸ ಅಸ್ತ್ರ!!..ಮಾಧ್ಯಮಗಳಿಗೆ ಪೀಕಲಾಟ!!

  ಓದುಗರ ಗ್ರಹಿಕೆಯ ಮೇಲೆ ನಕಾರಾತ್ಮಕ ಧೋರಣೆ ಮೂಡಿಸುತ್ತಿರುವ ಸುಳ್ಳು ಸುದ್ದಿಗಳು ಫೇಸ್‌ಬುಕ್ ಅನ್ನು ಕಂಗೆಡಿಸಿದೆ.! ಹಾಗಾಗಿ, ಫೇಸ್‌ಬುಕ್ ನೂತನ ಯೋಜನೆಯೊಂದಕ್ಕೆ ಕೈ ಹಾಕಿದ್ದು, ಬಳಕೆದಾರರಿಂದಲೇ ವಿಶ್ವಾಸಾರ್ಹ ಸುದ್ದಿ ಮೂಲಗಳು ಯಾವುವು ಎಂಬುದನ್ನು ಇತರರಿಗೆ ತಿಳಿಸಲು ಸುದ್ದಿ ಮೂಲಗಳಿಗೆ ರ್ಯಾಂಕ್ ನೀಡಿಸಲು ಮುಂದಾಗಿದೆ.!!

  ಸಾಮಾಜಿಕ ಮಾಧ್ಯಮದ ಮೂಲಕ ಸಾಮಾಜಿಕ ಸಂಬಂಧಗಳನ್ನು ಉತ್ತಮಪಡಿಸುವ ದೃಷ್ಟಿಯಿಂದ ಬಳಕೆಗೆ ಬಂದ ಫೇಸ್‌ಬುಕ್‌ನಲ್ಲಿ ದಿನದಿಂದ ದಿನಕ್ಕೆ ಸುದ್ದಿ-ಮಾಹಿತಿ ಪೋಸ್ಟ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಫೇಸ್‌ಬುಕ್‌ನಲ್ಲಿ ನ್ಯೂಸ್ ಓದುವವರ ಸಂಖ್ಯೆ ಕೂಡ ಹೆಚ್ಚಾಗಿರುವುದರಿಂದ ಸುಳ್ಳು ನಕಾರಾತ್ಮಕ ಧೋರಣೆ ಮೂಡಿಸುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ.!!

  ಫೇಸ್‌ಬುಕ್ ಬಳಕೆದಾರರಿಗೆ ಸಿಗಲಿದೆ ಹೊಸ ಅಸ್ತ್ರ!!..ಮಾಧ್ಯಮಗಳಿಗೆ ಪೀಕಲಾಟ!!

  ಇಷ್ಟೇ ಅಲ್ಲದೇ ಹೆಚ್ಚು ಆದಾಯಕ್ಕೋಸ್ಕರ ಆಕರ್ಷಕ ಸುದ್ದಿಗಳನ್ನು ಫೇಸ್‌ಬುಕ್‌ನಲ್ಲಿ ಬಿತ್ತರಿಸುವವರಿಗೂ ಫೇಸ್‌ಬುಕ್ ಕಡಿವಾಣ ಹಾಕಲು ಮುಂದಾಗಿದ್ದು, ಹಾಗಾದರೆ, ಫೇಸ್‌ಬುಕ್ ಬಳಕೆದಾರರಿಂದಲೇ ಸುದ್ದಿ ಮೂಲಗಳನ್ನು ಹೇಗೆ ರ್ಯಾಂಕ್ ಮಾಡಲಾಗುತ್ತದೆ? ಇದರಿಂದ ಏನೆಲ್ಲಾ ಪ್ರಯೋಜನ ಎಂಬುದನ್ನು ಮುಂದೆ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ವಸ್ತುನಿಷ್ಠ ಸುದ್ದಿಗೆ ಫೆಸ್‌ಬುಕ್ ಹುಡುಕಾಟ!!

  ಪ್ರತಿ ತಿಂಗಳಿಗೆ 2 ಬಿಲಿಯನ್‌ಗೂ ಹೆಚ್ಚು ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿರುವ ಫೇಸ್‌ಬುಕ್‌ ವಸ್ತುನಿಷ್ಠ ಸುದ್ದಿ ಪ್ರಸರಿಸುವ ಸಂಸ್ಥೆಗಳ ಹುಡುಕಾಟದಲ್ಲಿದೆ. ಕೆಬಹಳ ಸುಲಭವಾಗಿ ಮಾಧ್ಯಗಳನ್ನು ಸ್ಥಾಪಿಸಿ ಫೇಸ್‌ಬುಕ್ ಮೂಲಕ ಹಲವು ಸುಳ್ಳುಸುದ್ದಿ ಮಾಧ್ಯಮಗಳು ಸದ್ದು ಮಾಡುತ್ತಿರುವುದು ಇದಕ್ಕೆ ಕಾರಣವಾಗಿದೆ.!!

  ಟ್ರಂಪ್ ಆಯ್ಕೆಯಿಂದ ಹುಟ್ಟಿದ್ದು ತಲೆಬಿಸಿ!!

  ರಷ್ಯಾ ಮೂಲದ ಸಾವಿರಾರು ಸುದ್ದಿ ಪೇಜ್‌ಗಳು ಅಮೆರಿಕಾದಲ್ಲಿ ಡೋನಾಲ್ಡ್ ಟ್ರಂಪ್ ಬಗ್ಗೆ ಫೇಸ್‌ಬುಕ್ ಮೂಲಕ ಪ್ರಚಾರ ಕೈಜೊಮಡಿದ್ದನ್ನು ಫೇಸ್‌ಬುಕ್ ಕಂಪೆನಿ ಸ್ವತಃ ದೃಢಪಡಿಸಿತ್ತು. ಆ ನಂತರ ವಿಶ್ವಾಸಾರ್ಹ ಸುದ್ದಿ ಮೂಲಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲು ಫೇಸ್‌ಬುಕ್ ಹೊಸಹೊಸ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿತ್ತು.!!

  ಬಳಕೆದಾರರಿಂದಲೇ ರ್ಯಾಂಕಿಂಗ್!!

  ಸುತ್ತಮುತ್ತಲಿನ ಸುದ್ದಿ-ಸಮಾಚಾರಗಳನ್ನು ತಿಳಿಯಲು ಬಳಕೆದಾರರು ಸಹ ಉತ್ಸಾಹಿಗಳಾಗಿರುವುದನ್ನು ಗಮನಿಸಿರುವ ಫೇಸ್‌ಬುಕ್‌, ಸುದ್ದಿ ಪೋಸ್ಟ್‌ ಮಾಡುವ ಪೇಜ್‌ಗಳಿಗೆ ಬಳಕೆದಾರರಿಂದಲೇ ರ್ಯಾಂಕ್ ಕೊಡಿಸುವ ಯೋಜನೆಯೊಂದನ್ನು ರೂಪಿಸಿದೆ. ಬಳಕೆದಾರರಿಗೆ ಪ್ರಶ್ನೆಗಳನ್ನು ಕೇಳಿ ರ್ಯಾಂಕ್ ನಿಗದಿಪಡಿಸುತ್ತದೆ.!!

  ಕಳಪೆ ಪಟ್ಟಿಗೆ ಸೇರಲಿವೆ ಮಾಧ್ಯಮಗಳು!!

  ಸುದ್ದಿ ಪೋಸ್ಟ್‌ ಮಾಡುವ ಪೇಜ್‌ಗಳಿಗೆ ಬಳಕೆದಾರರಿಂದಲೇ ರ್ಯಾಂಕ್ ಕೊಡಿಸುವ ಯೋಜನೆಯಲ್ಲಿ ವಿಶ್ವಾಸಾರ್ಹ ಸುದ್ದಿ ಮೂಲಗಳನ್ನು ‘high quality news' ಎಂಬ ಪಟ್ಟಿಗೆ ಫೇಸ್‌ಬುಕ್ ಸೇರಿಸಲಿದೆ ಹಾಗೂ ಕಳಪೆ ಗುಣಮಟ್ಟದ ಸುದ್ದಿ ಪೋಸ್ಟ್‌ ಮಾಡುತ್ತಿರುವ ಸಂಸ್ಥೆಗಳನ್ನು ‘less trusted source' ಪಟ್ಟಿಗೆ ಸೇರಿಸಲಿದೆ.!!

  How to view all photos, pages, comments and posts you liked on Facebook (KANNADA)
  ಮಾರ್ಕ್‌ಜುಗರ್‌ಬರ್ಗ್ ಹೇಳಿದ್ದೇನು?

  ಮಾರ್ಕ್‌ಜುಗರ್‌ಬರ್ಗ್ ಹೇಳಿದ್ದೇನು?

  ನ್ಯೂಸ್‌ ಫೀಡ್‌ ವಿಷಯದಲ್ಲಿ ರ್ಯಾಂಕ್ ಆಧಾರಿತ ಸುದ್ದಿಗಳನ್ನು ನೀಡುವುದರಿಂದ ಫೇಸ್‌ಬುಕ್‌ ಸಮುದಾಯದ ಸದಸ್ಯರಿಗೆ ಗುಣಮಟ್ಟದ ಸುದ್ದಿಗಳು ದೊರೆಯಲಿವೆ ಎಂದು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ಜುಗರ್‌ಬರ್ಗ್ ತಿಳಿಸಿದ್ದಾರೆ.

  ಮಾಧ್ಯಮಗಳಿಗೆ ಪೀಕಲಾಟ!!

  ಸುದ್ದಿ ಪೇಜ್‌ಗಳಿಗೆ ರ್ಯಾಂಕ್ ಕೊಡಿಸುವ ಯೋಜನೆಯಿಂದ ಮಾಧ್ಯಮಗಳಿಗೆ ಪೀಕಲಾಟ ಶುರುವಾಗಿದೆ.! ಫೇಸ್‌ಬುಕ್ ಬಳಕೆದಾರರಲ್ಲಿ ಬಹತೇಕರು ಒಂದು ಮಾಧ್ಯಮದ ಪರ ಹಾಗೂ ಇನ್ನೊಂದು ಮಾಧ್ಯಮದ ವಿರುದ್ದ ಅಭಿಪ್ರಾಯ ಹೊಂದಿರುವುದರಿಂದ ರ್ಯಾಂಕ್ ಕೊಡಿಸುವ ಯೋಜನೆ ಉಲ್ಟಾ ಹೊಡೆಯಬಹುದು ಎನ್ನುತ್ತಿವೆ ವರದಿಗಳು!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Facebook already conducted a test survey among “a diverse and representative sample of people using Facebook across the US. to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more