3 ದಶಲಕ್ಷ ಜಾಹೀರಾತುದಾರರನ್ನು ತಲುಪಿದ ಫೇಸ್‌ಬುಕ್‌: ರಹಸ್ಯವೇನು?

By Suneel
|

ಫೇಸ್‌ಬುಕ್‌ ಇಂದು ತಿಂಗಳಿಗೆ 1.59 ಶತಕೋಟಿಗಿಂತ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಅಲ್ಲಾ ನಾವು ದಿನನಿತ್ಯ ನೋಡುತ್ತಲೇ ಇದ್ದೀವಿ. ಈ ಫೇಸ್‌ಬುಕ್‌ ವೆಬ್‌ಸೈಟ್‌ನವರಿಗೆ ಏನ್‌ ಪ್ರಯೋಜನ ಆಗುತ್ತೇ ಅಂತಾನೆ ಗೊತ್ತಾಗ್ತಾನೆ ಇಲ್ವಲ್ಲಾ ಅನ್ನೋದು ಬಹುಸಂಖ್ಯಾತ ಫೇಸ್‌ಬುಕ್‌ ಬಳಕೆದಾರರ ಪ್ರಶ್ನೆ. ಪಾಪ ಅವರಿಗೆ ಇದು ಕೂಡ ಜಾಹೀರಾತು ನೀಡುತ್ತೇ ಅನ್ನೋದು ಗೊತ್ತೇಇಲ್ಲ.

ಜಾಹೀರಾತು ಹಿನ್ನೆಲೆಯಲ್ಲಿ ಹೇಳುವುದಾದರೆ ಫೇಸ್‌ಬುಕ್‌ಗೆ ಇಂದು ಶುಭದಿನ. ಫೇಸ್‌ಬುಕ್‌ 3 ದಶಲಕ್ಷ ಜಾಹೀರಾತುದಾರರನ್ನು ತಲುಪಿದೆ. ಅಲ್ಲದೇ ಯಾವುದೇ ಉದ್ದಿಮೆ, ವ್ಯವಹಾರ ಮಾಡುವವರು ತಮ್ಮ ವ್ಯವಹಾರದ ಬಗ್ಗೆ ಜಾಹೀರಾತು ನೀಡಲು ಫೇಸ್‌ಬುಕ್‌ "Your Business Story" ಲಾಂಚ್ ಮಾಡಿದೆ. ಇಂದು ಫೇಸ್‌ಬುಕ್‌ ಉಪಯೋಗ ಅಷ್ಟಿಷ್ಟಲ್ಲಾ. ಈ ಬಗ್ಗೆ ವಿಶೇಷ ಮಾಹಿತಿ ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿ.

ಫೇಸ್‌ಬುಕ್‌

ಫೇಸ್‌ಬುಕ್‌

ಫೇಸ್‌ಬುಕ್‌ ಈಗ 3 ದಶಲಕ್ಷ ಬ್ಯುಸಿನೆಸ್‌ ಜಾಹೀರಾತುದಾರರನ್ನು ತಲುಪಿದೆ. ಫೇಸ್‌ಬುಕ್‌ 2015ರ ಸೆಪ್ಟೆಂಬರ್‌ನಲ್ಲಿ 2.5 ದಶಲಕ್ಷ ಜಾಹೀರಾತುದಾರರನ್ನು, 2 ದಶಲಕ್ಷ ಜಾಹೀರಾತುದಾರರನ್ನು ಕಳೆದ ಫೆಬ್ರವರಿ ತಿಂಗಳಲ್ಲಿ ತಲಿಪಿದ್ದು, ಒಂದು ಬ್ಯುಸಿನೆಸ್‌ಗೆ ಒಂದು ಶತಕೋಟಿ ಫೇಸ್‌ಬುಕ್‌ ಬಳಕೆದಾರರು ಸಂಪರ್ಕ ಹೊಂದಿದ್ದಾರೆ.

 ಫೇಸ್‌ಬುಕ್‌

ಫೇಸ್‌ಬುಕ್‌

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಹೊಸ ಟೂಲ್‌ "Your Business Story" ಪ್ರಕಟಗೊಳಿಸಿದ್ದು, ಟೂಲ್‌ ವ್ಯವಹಾರಗಳ ಮಾಲೀಕರಿಗೆ ಫೋಟೋ ಅಪ್‌ಲೋಡ್‌ ಮಾಡಲು, ಮ್ಯೂಸಿಕ್‌ ಅಪ್‌ಲೋಡ್‌ ಮಾಡಲು ಮತ್ತು ತಮ್ಮ ವ್ಯವಹಾರಗಳ ಬಗ್ಗೆ ಹೇಳಲು ಉಪಯುಕ್ತವಾಗಿದೆ.

 ಫೇಸ್‌ಬುಕ್‌

ಫೇಸ್‌ಬುಕ್‌

ಫೇಸ್‌ಬುಕ್‌ 3 ದಶಲಕ್ಷ ಜಾಹೀರಾತುದಾರರನ್ನು ತಲುಪಿದ ವೇಳೆಯಲ್ಲಿ ಕೆಲವು ಪ್ರಮುಖ ಅಂಕಿಅಂಶಗಳನ್ನು ಸೋಶಿಯಲ್‌ ಟೈಮ್ಸ್‌ ಮಾಧ್ಯಮಕ್ಕೆ ಇಮೇಲ್‌ ಮೂಲಕ ನೀಡಿದ್ದು ಅವುಗಳನ್ನು ಫೇಸ್‌ಬುಕ್‌ ಪ್ರಿಯರು ತಿಳಿಯಲೇ ಬೇಕಿದೆ.
* 50 ದಶಲಕ್ಷ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಫೇಸ್‌ಬುಕ್ ಪೇಜ್‌ ಅನ್ನು ಪ್ರಸ್ತುತದಲ್ಲಿ ಬಳಕೆ ಮಾಡುತ್ತಿವೆ.

ಫೇಸ್‌ಬುಕ್‌

ಫೇಸ್‌ಬುಕ್‌

43 ಶತಕೋಟಿಗಿಂತಲು ಹೆಚ್ಚು ಸೋಶಿಯಲ್‌ ನೆಟ್‌ವರ್ಕ್‌ ಸಂಪರ್ಕಗಳು ಫೇಸ್‌ಬುಕ್‌ ಬಳಕೆದಾರರು ಮತ್ತು ಬ್ಯುಸಿನೆಸ್‌ಗಳ ನಡುವೆ ಇವೆ.

ಫೇಸ್‌ಬುಕ್‌

ಫೇಸ್‌ಬುಕ್‌

ಟಾಪ್‌ 3 ಸಂಸ್ಥಾ ಫೇಸ್‌ಬುಕ್‌ ಪುಟಗಳು ಸೇವೆ, ಸ್ಥಳೀಯ ವ್ಯವಹಾರ ಮತ್ತು ಇ-ಕಾಮರ್ಸ್‌ಗೆ ಮೀಸಲಿವೆ.

ಫೇಸ್‌ಬುಕ್‌

ಫೇಸ್‌ಬುಕ್‌

1 ದಶಲಕ್ಷಕ್ಕೂ ಹೆಚ್ಚು ಫೇಸ್‌ಬುಕ್‌ ಜಾಹಿರಾತುದಾರರು ಜಾಹೀರಾತುಗಳನ್ನು ಮೊಬೈಲ್‌ ಸೇವೆಯ ಮೂಲಕ ತಯಾರು ಮಾಡುತ್ತಿದ್ದಾರೆ.

ಫೇಸ್‌ಬುಕ್‌

ಫೇಸ್‌ಬುಕ್‌

20 ದಶಲಕ್ಷಕ್ಕೂ ಹೆಚ್ಚು ಸಕ್ರಿಯ ಪುಟಗಳು ಸೋಶಿಯಲ್‌ ನೆಟ್‌ವರ್ಕ್‌ ಪೇಜ್‌‌ ಅಪ್ಲಿಕೇಶನ್‌ ಬಳಸುತ್ತಿವೆ.

ಫೇಸ್‌ಬುಕ್‌

ಫೇಸ್‌ಬುಕ್‌

ಶೇಕಡ 70, 3 ದಶಲಕ್ಷಕ್ಕೂ ಅಧಿಕ ಜಾಹೀರಾತುದಾರರು ಅಮೇರಿಕದಿಂದ ಹೊರಗಿನವರು. ಅದರಲ್ಲಿ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಶೀಘ್ರ ಬೆಳವಣಿಗೆ ಹೊಂದಿದೆ.

ಫೇಸ್‌ಬುಕ್‌

ಫೇಸ್‌ಬುಕ್‌ ಜಾಹೀರಾತುದಾರರಿಗೆ ಅಂದ್ರೆ ಬ್ಯುಸಿನೆಸ್ ಮಾಲೀಕರಿಗೆ ಹೊಸ ಬ್ಯುಸಿನೆಸ್‌ ಟೂಲ್‌ "Your Business Story" ಲಾಂಚ್‌ ಮಾಡಿದೆ. ಇದರಿಂದ ಉದ್ದಿಮೆ ಮಾಲೀಕರು ತಮ್ಮ ವ್ಯವಹಾರದ ಬಗ್ಗೆ ವೀಡಿಯೋಗಳನ್ನು, ಫೋಟೋಗಳನ್ನು, ಮ್ಯೂಸಿಕ್‌ ಅನ್ನು ಅಪ್‌ಲೋಡ್‌ ಮಾಡಬಹುದಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಇಯರ್‌ಫೋನ್‌/ಹೆಡ್‌ಫೋನ್‌ ಬಳಕೆ ಅಪಾಯ ನಿಮ್ಮ ಸನಿಹಕ್ಕೆಇಯರ್‌ಫೋನ್‌/ಹೆಡ್‌ಫೋನ್‌ ಬಳಕೆ ಅಪಾಯ ನಿಮ್ಮ ಸನಿಹಕ್ಕೆ

ಫೇಸ್‌ಬುಕ್ ಉದ್ಯೋಗಿಯಾಗಲು ಇರಬೇಕಾದ ಅರ್ಹತೆಗಳೇನು?ಫೇಸ್‌ಬುಕ್ ಉದ್ಯೋಗಿಯಾಗಲು ಇರಬೇಕಾದ ಅರ್ಹತೆಗಳೇನು?

ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣುಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು

ಕಾಣೆಯಾದವರನ್ನು ಪತ್ತೆಹಚ್ಚಲು ಫೇಸ್‌ಬುಕ್‌ ನೆರವುಕಾಣೆಯಾದವರನ್ನು ಪತ್ತೆಹಚ್ಚಲು ಫೇಸ್‌ಬುಕ್‌ ನೆರವು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌

ಗಿಜ್‌ಬಾಟ್‌ ಟೆಕ್ನಾಲಜಿ ಕುರಿತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Best Mobiles in India

English summary
Facebook Reaches 3 Million Advertisers, Launches Your Business Story Video Tool. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X