ಇನ್ಮುಂದೆ ನಿಮ್ಮಿಂದ ತೆಗೆದುಕೊಂಡ ಮಾಹಿತಿಗೆ ಫೇಸ್‌ಬುಕ್ ನೀಡುತ್ತೆ ಹಣ..!

By Gizbot Bureau
|

ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್‌ ಮತ್ತೊಂದು ಆವಿಷ್ಕಾರಕ್ಕೆ ಮುಂದಾಗಿದೆ. ತನ್ನ ಹೊಸ ಆಪ್‌ ಮೂಲಕ ಗ್ರಾಹಕರ ಸ್ಮಾರ್ಟ್‌ಫೋನ್‌ ಬಳಸಿಕೊಳ್ಳುವ ಹೊಸ ಯೋಜನೆಯನ್ನು ಫೇಸ್‌ಬುಕ್‌ ಕಂಪನಿ ತರಲು ಮುಂದಾಗಿದೆ. ಹೌದು, ಸ್ಟಡಿ ಎಂಬ ಆಪ್‌ ಮೂಲಕ ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಎಫ್‌ಬಿ ಮುಂದಾಗಿದೆ. ಇದಕ್ಕಾಗಿ ಫೇಸ್‌ಬುಕ್‌ ಬಳಕೆದಾರರಿಗೆ ಹಣವನ್ನು ಕೂಡ ನೀಡಲು ಮುಂದಾಗಿದೆ. ಗ್ರಾಹಕರಿಗೆ ಹಣಕೊಟ್ಟು ಮಾಹಿತಿ ಕಲೆಹಾಕುವ ಕೆಲಸಕ್ಕೆ ಮುಂದಾಗಿದೆ. ಹಾಗಾದ್ರೆ, ಸ್ಟಡಿ ಆಪ್‌ ಅಂದ್ರೇ ಏನು..? ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಮುಂದೆ ನೋಡಿ.

ಆಪ್‌ಗಳ ಟ್ರಾಕ್

ಆಪ್‌ಗಳ ಟ್ರಾಕ್

ಫೇಸ್‌ಬುಕ್‌ನ ಸ್ಟಡಿ ಆಪ್‌ ಬಳಕೆದಾರರ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್‌ ಆದ ಆಪ್‌ಗಳನ್ನು ಟ್ರಾಕ್‌ ಮಾಡುತ್ತದೆ. ಇದರ ಜೊತೆಗೆ ನೀವು ಆಪ್‌ಗಳನ್ನು ಬಳಸುವ ಸಮಯ, ದೇಶ, ರಾಜ್ಯ ಮತ್ತಿತರ ಮಾಹಿತಿಗಳನ್ನು ಫೇಸ್‌ಬುಕ್‌ ಕಲೆಹಾಕುತ್ತದೆ. ಇನ್ನು, ಫೇಸ್‌ಬುಕ್‌ ಕಂಪನಿ ಹೇಳುವ ರೀತಿ ಸ್ಟಡಿ ಆಪ್‌ ಯಾವುದೇ ವೈಯಕ್ತಿಕ ಮಾಹಿತಿಯನ್ನು ಕಲೆಹಾಕುವುದಿಲ್ಲ. ಪಾಸ್‌ವರ್ಡ್‌, ಮೆಸೇಜ್‌ಗಳು ಮತ್ತು ಗ್ರಾಹಕರು ವೀಕ್ಷಿಸುವ ವೆಬ್‌ಸೈಟ್‌ಗಳ ಮಾಹಿತಿಯನ್ನು ಕ್ರೋಢಿಕರಿಸುವುದಿಲ್ಲವಂತೆ.

ಮಾಹಿತಿ ಮಾರಾಟಕ್ಕಿಲ್ಲ

ಮಾಹಿತಿ ಮಾರಾಟಕ್ಕಿಲ್ಲ

ಸ್ಟಡಿ ಆಪ್‌ ಮೂಲಕ ಫೇಸ್‌ಬುಕ್‌ ಸರ್ವರ್‌ನಲ್ಲಿ ಶೇಖರಣೆಯಾಗಿರುವ ಮಾಹಿತಿ ಯಾವುದೇ ಕಾರಣಕ್ಕೂ ಲಾಭಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಫೇಸ್‌ಬುಕ್ ಹೇಳಿದೆ. ಈ ಹಿಂದೆ ಮಾಹಿತಿ ಸೋರಿಕೆಯಿಂದ ಬಹಳ ಮುಜುಗರಕ್ಕೊಳಗಾಗಿದ್ದ ಫೇಸ್‌ಬುಕ್‌ ಈ ಮೂಲಕ ಥರ್ಡ್‌ ಪಾರ್ಟಿ ಆಪ್‌ಗಳಿಗೆ ಮಾಹಿತಿ ಮಾರಾಟ ಮಾಡದೇ ಜನರ ನಂಬಿಕೆ ಉಳಿಸಿಕೊಳ್ಳಲು ಮುಂದಾಗಿದೆ. ಅದಲ್ಲದೇ ಈ ಮಾಹಿತಿಯನ್ನು ಜಾಹೀರಾತುಗಳಿಗೂ ಬಳಸಿಕೊಳ್ಳಲ್ಲ ಎಂದು ಫೇಸ್‌ಬುಕ್ ಹೇಳಿದೆ.

ಹೇಗೆ ಬಳಸೋದು..?

ಹೇಗೆ ಬಳಸೋದು..?

ಫೇಸ್‌ಬುಕ್‌ ಸ್ಟಡಿ ಪ್ರೋಗ್ರಾಂನಡಿಯಲ್ಲಿ ಬಳಕೆದಾರರನ್ನು ಆಹ್ವಾನಿಸುವ ಫೇಸ್‌ಬುಕ್‌ ಸ್ಟಡಿ ಆಪ್‌ನ್ನು ಅವರ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಸುತ್ತದೆ. ಆಪ್‌ ಇನ್‌ಸ್ಟಾಲ್‌ ಆದ ನಂತರ ಫೋನ್‌ನ್ನು ಸಾಮಾನ್ಯವಾಗಿ ಬಳಸಲು ಬೇಕಾದ ಪರ್ಮಿಷನ್‌ಗಳನ್ನು ಆಪ್‌ಗೆ ನೀಡಬೇಕಾಗುತ್ತದೆ. ಈ ಆಪ್‌ನಲ್ಲಿ ನೊಂದಣಿಯಾದ ಬಳಕೆದಾರರಿಗೆ ಹಣದ ರೂಪದ ರೀವಾರ್ಡ್‌ಗಳನ್ನು ಕೂಡ ಫೇಸ್‌ಬುಕ್‌ ನೀಡಲು ಮುಂದಾಗಿದೆ. ಅದಲ್ಲದೇ ನೀವು ಯಾವಾಗ ಬೇಕಾದರೂ ಈ ಪ್ರೋಗ್ರಾಂನಿಂದ ಹೊರಬರಲು ಸ್ಟಡಿ ಆಪ್‌ ಅನ್‌ ಇನ್‌ಸ್ಟಾಲ್‌ ಮಾಡಿದ್ರೆ ಸಾಕು. ಆಗ ನಿಮ್ಮ ಪಾಲುದಾರಿಕೆಯನ್ನು ಅಂತ್ಯಗೊಳಿಸಲು ಸ್ಟಡಿ ಆಪ್‌ ಫೇಸ್‌ಬುಕ್‌ಗೆ ನೊಟಿಫೀಕೆಷನ್ ನೀಡುತ್ತದೆ.

ಬಳಕೆದಾರರ ಅಧ್ಯಯನ

ಬಳಕೆದಾರರ ಅಧ್ಯಯನ

ಸ್ಟಡಿ ಆಪ್‌ ಮೂಲಕ ಫೇಸ್‌ಬುಕ್‌ ಬಳಕೆದಾರರನ್ನು ಅಧ್ಯಯನ ಮಾಡಲು ಮುಂದಾಗಿದೆ. ಗ್ರಾಹಕರ ವಯಸ್ಸು, ಲಿಂಗ ಹಾಗೂ ಫೇಸ್‌ಬುಕ್‌ ಉತ್ಪನ್ನಗಳನ್ನು ಅವರು ಹೇಗೆ ಬಳಸುತ್ತಾರೆ ಎಂಬುದನ್ನು ಅರಿಯಲು ಸ್ಟಡಿ ಆಪ್‌ ಸಹಕಾರಿಯಾಗಲಿದೆ. ಈ ಮೂಲಕ ಬಳಕೆದಾರರು ವಿವಿಧ ಸೇವೆಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ತಿಳಿಯಲು ಸ್ಟಡಿ ಆಪ್‌ ಉಪಕಾರಿಯಾಗಲಿದೆ. ಈ ಮಾಹಿತಿಯನ್ನು ಬಳಕೆದಾರರ ಯಾವುದೇ ಅಕೌಂಟ್‌ಗೆ ಲಿಂಕ್‌ ಮಾಡುವುದಿಲ್ಲ ಎಂದು ಭರವಸೆ ನೀಡಿದೆ. 18 ವರ್ಷದ ಮೇಲ್ಪಟ್ಟ ಬಳಕೆದಾರರಿಗೆ ಈ ಆಪ್‌ ಲಭ್ಯವಿದೆ. ಈ ಕಾರ್ಯಕ್ರಮದ ಬಗ್ಗೆ ಫೇಸ್‌ಬುಕ್‌ ಭಾರತ ಮತ್ತು ಅಮೆರಿಕದಲ್ಲಿ ಜಾಹೀರಾತನ್ನು ಕೂಡ ನೀಡುತ್ತಿದೆ.

Most Read Articles
Best Mobiles in India

English summary
Facebook Release A New App To Collect User Data And Pay Money In Return

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more