ಫೇಸ್ ಬುಕ್ ನ್ಯೂಸ್ ಫೀಡ್ ಬದಲಾಗಲಿದೆ: ಬಳಕೆದಾರರಿಗೆ ನೈಜ ಸುದ್ದಿಗಳು ದೊರೆಯಲಿದೆ..!

By Lekhaka
|

ಫೇಸ್ ಬುಕ್ ತನ್ನ ಬಳಕೆದಾರರಿಗೆ ದಿನಕ್ಕೊಂದು ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ. ಇದೇ ಹಿನ್ನಲೆಯಲ್ಲಿ ಈ ಬಾರಿ ತನ್ನ ನ್ಯೂಸ್ ಫಿಡ್ಸ್ ನಲ್ಲಿ ಬದಲಾವಣೆಯನ್ನು ಮಾಡಿದೆ ಎನ್ನಲಾಗಿದೆ. ಇನ್ನು ಮುಂದೆ ಫೇಸ್ ಬುಕ್ ನ್ಯೂಸ್ ಫೀಡ್ಸ್ ನಲ್ಲಿ ನಂಬಿಕೆ ಆರ್ಹವಾದ ಪಬ್ಲಿಷರ್ ಗಳಿಂದ ಪ್ರಕಟವಾದ ವಿಷಯಗಳನ್ನು ಮಾತ್ರವೇ ತೋರಿಸಲಿದೆ ಎನ್ನಲಾಗಿದೆ.

ಫೇಸ್ ಬುಕ್ ನ್ಯೂಸ್ ಫೀಡ್ ಬದಲಾಗಲಿದೆ: ಬಳಕೆದಾರರಿಗೆ ನೈಜ ಸುದ್ದಿಗಳು ದೊರೆಯಲಿದೆ.!

ಇದರಿಂದಾಗಿ ಫೇಕ್ ನ್ಯೂಸ್ ಗಳು ಮಾಯವಾಗಿ ಆ ಜಾಗಕ್ಕೆ ಉತ್ತಮವಾಗಿ ಸುದ್ದಿಗಳನ್ನು ತೋರಿಸಲು ಫೇಸ್ ಬುಕ್ ಮುಂದಾಗಿದೆ ಎನ್ನಲಾಗಿದೆ. ಶೀಘ್ರವೇ ಫೇಸ್ ಬುಕ್ ನ್ಯೂಸ್ ಫೀಡ್ಸ್ ಆಪ್ ಡೇಟ್ ಆಗಲಿದ್ದು, ಸದ್ಯ ಆಯ್ಕೆಯೂ ಮೊದಲಿಗೆ ಅಮೆರಿಕಾದಲ್ಲಿ ಕಾಣಿಸಿಕೊಳ್ಳಲಿದ್ದು, ನಂತರದಲ್ಲಿ ವಿಶ್ವದ ಬೇರೆ ರಾಷ್ಟ್ರಗಳಲ್ಲಿಯೂ ಕಾಣಿಸಿಕೊಳ್ಳಲಿದೆ.

ಈಗಾಗಲೇ ಫೇಸ್ ಬುಕ್ ನ್ಯೂಸ್ ಫೀಡ್ಸ್ ಬೇಕಾದ ಮತ್ತು ಬೇಡದಿರುವ ವಿಚಾರಗಳಿಂದಲೇ ತುಂಬಿಕೊಂಡಿತ್ತು ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಕಿರಿಕಿರಿ ಉಂಟಾಗಲಿದೆ. ಇದರಿಂದ ಮುಕ್ತಿ ನೀಡುವ ಸಲುವಾಗಿ ಫೇಸ್ ಬುಕ್ ಬದಲಾವಣೆಯನ್ನು ಮಾಡುತ್ತಿದೆ ಎನ್ನಲಾಗಿದೆ. ಈ ಕುರಿತು ಫೇಸ್ ಬುಕ್ ಸಿಇಓ ಮಾರ್ಕ್ ಜುಕರ್ ಬರ್ಗ್ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ.

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?

ಇದರಿಂದಾಗಿ ಬಳಕೆದಾರರು ಹೆಚ್ಚಿನ ಮಾಹಿತಿಯನ್ನು ಒಳ್ಳೆಯ ಮಾಧ್ಯಮಗಳಿಂದ ಪಡೆದುಕೊಳ್ಳಬಹುದಾಗಿದ್ದು, ಹೆಚ್ಚು ಸುಳ್ಳು ಸುದ್ದಿಗಳಿಂದ ದೂರ ಉಳಿಯಬಹುದಾಗಿದೆ. ಫೇಸ್ ಬುಕ್ ಮಾಡುತ್ತಿರುವ ಈ ಬದಲಾವಣೆಯಿಂದ ಹೆಚ್ಚಿನ ನಷ್ಟವನ್ನು ಹೊಂದಿದಲಿದೆ. ಇದರಿಂದಾಗಿ ಫೇಸ್ ಬುಕ್ ಹೆಚ್ಚಿನ ಜನರನ್ನು ಸೆಳೆದುಕೊಳ್ಳಿದೆ.

ಮೆಲ್ಟ್ ಡೌನ್ ಮತ್ತು ಸ್ಪೆಕ್ಟ್ರಾ: ನಿಮ್ಮ ಕಂಪ್ಯೂಟರ್ ಸೇಫ್ ಆಗಿದ್ಯಾ ಚೆಕ್ ಮಾಡಿ..!ಮೆಲ್ಟ್ ಡೌನ್ ಮತ್ತು ಸ್ಪೆಕ್ಟ್ರಾ: ನಿಮ್ಮ ಕಂಪ್ಯೂಟರ್ ಸೇಫ್ ಆಗಿದ್ಯಾ ಚೆಕ್ ಮಾಡಿ..!

ಫೇಸ್ ಬುಕ್ ಹೊಸ ಆಪ್ ಡೇಟ್ ನಿಂದಾಗಿ ಬಳಕೆದಾರರು ಫೇಸ್ ಬುಕ್ ಅನ್ನು ಅರ್ಹ ಸುದ್ದಿ ಮಾಧ್ಯಮವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಹೊಸ ಆಪ್ ಡೇಟ್ ನಿಂದ ಬಳಕೆದಾರರು ಇನ್ನು ಹೆಚ್ಚಿನ ಸಮಯವನ್ನು ಫೇಸ್ ಬುಕ್ ನಲ್ಲೇ ಕಳೆಯುವಂತೆ ಮಾಡಲಿದೆ ಎನ್ನಲಾಗಿದೆ. ಇದರಿಂದ ಒಂದು ಮಾದರಿಯ ಆದಾಯವನ್ನು ಕಳೆದುಕೊಂಡರು ಮತ್ತೊಂದು ಮಾದರಿಯಲ್ಲಿ ಆದಾಯವನ್ನು ಪಡೆದುಕೊಳ್ಳಲಿದೆ.

Best Mobiles in India

English summary
Facebook has announced a major update to its News Feed section. The social media platform will prioritize news content that is published by trustworthy publishers. Furthermore, users will be shown only informative and relevant news.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X