ಫೇಸ್‌ಬುಕ್ ಪರಿಚಯಿಸಲಿದೆ 'ಶೇರ್ ಯುವರ್ ಸ್ಟೋರಿ'..!

|

ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಇದೀಗ ಹೊಸದೊಂದು ಫೀಚರ್ ಅನ್ನು ತನ್ನ ಬಳಕೆದಾರರಿಗೆ ಪರಿಚಯಿಸುವ ಪ್ರಯತ್ನದಲ್ಲಿದೆ. ಫೇಸ್‌ಬುಕ್ ಶೇರ್ ಯುವರ್ ಸ್ಟೋರಿ' ಎಂಬ ಹೊಸದೊಂದು ಫೀಚರ್ ಅನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದ್ದು, ಪ್ರಸ್ತುತ ಈ ಫೀಚರ್ ಕುರಿತು ಈಗ ಪ್ರಯೋಗಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಫೇಸ್‌ಬುಕ್ ಪರಿಚಯಿಸಲಿದೆ 'ಶೇರ್ ಯುವರ್ ಸ್ಟೋರಿ'..!

ಯುಎಸ್, ಮೆಕ್ಸಿಕೋ ಮತ್ತು ಬ್ರೆಜಿಲ್ ದೇಶಗಳಲ್ಲಿ ಈಗಾಗಲೇ 'ಶೇರ್ ಯುವರ್ ಸ್ಟೋರಿ' ಫೀಚರ್ ಕುರಿತಾಗಿ ಫೇಸ್‌ಬುಕ್ ಹಲವು ಟೆಸ್ಟ್‌ಗಳನ್ನು ನಡೆಸುತ್ತಿದೆ ಎಂದು ಹೇಳಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಫೇಸ್‌ಬುಕ್ ಬಳಕೆದಾರರಿಗೂ ಈ ಆಯ್ಕೆ ಬರುವ ಸೂಚನೆ ಸಿಕ್ಕಿದೆ. ಈ 'ಶೇರ್ ಯುವರ್ ಸ್ಟೋರಿ' ಫೀಚರ್ ಆಮಂತ್ರಣದ ತರಹ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ.

ಫೇಸ್‌ಬುಕ್ ಪರಿಚಯಿಸಲಿದೆ 'ಶೇರ್ ಯುವರ್ ಸ್ಟೋರಿ'..!

ಇಲ್ಲಿ ನೀವು ನಿಮ್ಮ ದಿನಚರಿ ಮಾಹಿತಿಯನ್ನು, ಅಂದರೇ ನೀವು ಯಾವ ಸಭೆ, ಸಮಾರಂಭ ಅಥವಾ ಬೇರೆ ಕಾರ್ಯಕ್ರಮಕ್ಕೆ ಭೇಟಿ ಕೊಡಲಿದ್ದಿರಿ ಎನ್ನುವ ಮಾಹಿತಿಯನ್ನು ನೀಡುವ ಮೂಲಕ ನಿಮ್ಮ ಫೇಸ್‌ಬುಕ್ ಖಾತೆಯ ಸ್ನೇಹಿತರನ್ನು ಆಮಂತ್ರಿಸಬಹುದಾಗಿದೆ. ಈ ಡಿಜಿಟಲ್ ಆಮಂತ್ರಣವನ್ನು ಫೇಸ್‌ಬುಕ್ ಗೆಳೆಯರು ನೋಡಿ, ಬರುವುದಿದ್ದರೇ ಮರಳಿ ಪ್ರತಿಕ್ರಿಯಿಸಬಹುದಾಗಿದೆ.

ಫೇಸ್‌ಬುಕ್ ಪರಿಚಯಿಸಲಿದೆ 'ಶೇರ್ ಯುವರ್ ಸ್ಟೋರಿ'..!

ಫೇಸ್‌ಬುಕ್‌ನಲ್ಲಿ ಎಲ್ಲರೂ ಒಂದೇ ಕಡೆ ಸೇರಬಹುದಾಗಿರುವ ಡಿಜಿಟಲ್ ವೇದಿಕೆಯಾಗಿ ಈ ಹೊಸ ಶೇರ್ ಯುವರ್ ಸ್ಟೋರಿ ಫೀಚರ್ ಸಹಾಯಕವಾಗಲಿದೆ ಎಂದು ಹೇಳಬಹುದಾಗಿದ್ದು, ಫೇಸ್‌ಬುಕ್ ಗೆಳೆಯರೆಲ್ಲರೂ ಒಂದೇ ಸಮಯದಲ್ಲಿ ಅಥವಾ ಸಮಾರಂಭದಲ್ಲಿ ಒಂದುಗೂಡಲು ಉತ್ತಮ ವೇದಿಕೆಯಾಗಿದೆ. ಇದು ಕೂಡ ಒಂದು ರೀತಿಯಲ್ಲಿ ಗ್ರೂಪ್‌ನಂತೆಯೇ ಕಾಣಿಸಲಿದೆ.

ಫೇಸ್‌ಬುಕ್ ಪರಿಚಯಿಸಲಿದೆ 'ಶೇರ್ ಯುವರ್ ಸ್ಟೋರಿ'..!

ಇದನ್ನು ಬಳಸುವುದು ಕೂಡ ಸುಲಭವಾಗಿದ್ದು, ನಿಮ್ಮ ಫೇಸ್‌ಬುಕ್ ಖಾತೆ ಓಪನ್ ಮಾಡಿ 'ಇವೆಂಟ್ಸ್' ಆಯ್ಕೆ ತೆರೆದು ಅಲ್ಲಿ ನೀವು ನಿಮ್ಮ ಸಭೆ, ಸಮಾರಂಭ ಅಥವಾ ಇನ್ಯಾವುದೇ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದು. ನಂತರ ಆ ಮಾಹಿತಿಯನ್ನು ಶೇರ್ ಮಾಡುವುದು. ನೀವು ಶೇರ್ ಮಾಡಿದ ಮಾಹಿತಿ ನಿಮ್ಮ ಫೇಸ್‌ಬುಕ್ ಗೆಳೆಯರಿಗೆ ತಲುಪುತ್ತದೆ.

Best Mobiles in India

English summary
According to a report on Monday, the test will involve a new option to "Share to Your Story" that appears when you visit an event's page on Facebook.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X