1000ಕ್ಕೂ ಅಧಿಕ ಆಪ್‌ಗಳಿಗೆ ನಿಷೇಧ ಹೇರಿದೆ ಫೇಸ್‌ಬುಕ್‌!..ಏಕೆ ಗೊತ್ತಾ?

|

'ಕೇಂಬ್ರಿಜ್ ಅನಾಲಿಟಿಕಾ' ಪ್ರಕರಣದಿಂದ ತನ್ನ ಅಸ್ತಿತ್ವಕ್ಕೆ ಧಕ್ಕೆತಂದುಕೊಂಡಿದ್ದ ಫೇಸ್‌ಬುಕ್ ಇದೀಗ 1000ಕ್ಕೂ ಅಧಿಕ ಆಪ್‌ಗಳನ್ನು ನಿಷೇಧಿಸಿ ಹೊಸ ಕ್ರಮ ಕೈಗೊಂಡಿದೆ. ಮಾರ್ಚ್ 2018ರಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣದ ನಂತರ ಸಂಸ್ಥೆ ಪ್ರಾರಂಭಿಸಿದ್ದ ''ಡೇಟಾ ಬಳಕೆ ತನಿಖೆ''ಯ ಭಾಗವಾಗಿ 1000ಕ್ಕೂ ಅಧಿಕ ಆಪ್‌ಗಳನ್ನು ನಿಷೇಧಿಸಲಾಗಿದೆ. ದತ್ತಾಂಶ ಕಳವು ಪ್ರಕರಣ ಮತ್ತು ಮಾಹಿತಿ ಸೋರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಫೇಸ್‌ಬುಕ್ ಇಂತಹದೊಂದು ಕ್ರಮ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

 ಅಮೆರಿಕಾ ಚುನಾವಣೆ

ಹೌದು, ಅಮೆರಿಕಾ ಚುನಾವಣೆಯ ಸಂದರ್ಭದಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾ ಪ್ರಕರಣ ಹೆಚ್ಚು ಸದ್ದು ಮಾಡಿತ್ತು. ಲಕ್ಷಾಂತರ ಫೇಸ್‌ಬುಕ್ ಪ್ರೊಫೈಲ್‌ಗಳ ಮಾಹಿತಿಯನ್ನು ಅಭಿಪ್ರಾಯದ ಮೇಲೆ ಪ್ರಭಾವ ಬೀರಲು ಹೇಗೆ ಬಳಸಲಾಗಿದೆ ಎಂಬುದನ್ನು ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣ ಬಹಿರಂಗಪಡಿಸಿದ ನಂತರ ಫೇಸ್‌ಬುಕ್ ಮೇಲೆ ಆಕ್ರೋಶ ಹೊರಬಿದ್ದಿತ್ತು. ಇದೀಗ ಇಂತಹ ಪ್ರಮಾದ ಮತ್ತೊಮ್ಮೆ ಜರುಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಸಾವಿರಕ್ಕೂ ಹೆಚ್ಚು ಆಪ್‌ಗಳಿಗೆ ಫೇಸ್‌ಬುಕ್ ನಿರ್ಬಂಧ ಹೇರಿರುವುದನ್ನು ಸಂಸ್ಥೆ ಖಚಿತಪಡಿಸಿದೆ.

ಎಪಿಐಗಳನ್ನು ನಿರ್ಬಂಧಿಸಲಾಗಿದೆ

ಫೇಸ್‌ಬುಕ್‌ಗೆ ಸಂಪರ್ಕಿಸಲು ಬಳಸುವ ಎಪಿಐಗಳನ್ನು ನಿರ್ಬಂಧಿಸಲಾಗಿದೆ ಮತ್ತು ಫೇಸ್‌ಬುಕ್‌ನಲ್ಲಿ ಹೆಚ್ಚು ನಿರ್ದಿಷ್ಟವಾದ ನೀತಿಗಳನ್ನು ರೂಪಿಸಲಾಗಿದೆ. ಅಪ್ಲಿಕೇಶನ್ ಡೆವಲಪರ್ಗಳು ಫೇಸ್‌ಬುಕ್ ಪರಿಸರ ವ್ಯವಸ್ಥೆಯ ಪ್ರಮುಖ ಭಾಗವಾಗಿ ಉಳಿದಿದ್ದಾರೆ" ಎಂದು ಫೇಸ್‌ಬುಕ್ ಹೇಳಿದೆ. "ಅವರು ನಮ್ಮ ಜಗತ್ತನ್ನು ಹೆಚ್ಚು ಸಾಮಾಜಿಕ ಮತ್ತು ಹೆಚ್ಚು ಆಕರ್ಷಕವಾಗಿ ಮಾಡಲು ಸಹಾಯ ಮಾಡುತ್ತಾರೆ. ಆದರೆ, ನಾವು ಗೌಪ್ಯತೆಯನ್ನು ರಕ್ಷಿಸುತ್ತಿದ್ದೇವೆ ಎಂದು ಜನರು ತಿಳಿದುಕೊಳ್ಳಬೇಕು ಎಂದು ಸಂಸ್ಥೆ ಹೇಳಿದೆ.

ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ

ಪ್ರಸ್ತುತ ತೆಗೆದುಹಾಕಿರುವ ನೂರಾರು ಅಪ್ಲಿಕೇಶನ್‌ಗಳು ಕೇವಲ 400 ಡೆವಲಪರ್‌ಗಳಿಂದ ಅಭಿವೃದ್ಧಿಯಾಗಿವೆ ಎಂದು ಫೇಸ್‌ಬುಕ್ ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ ಮತ್ತು ಇನ್ನೂ ಇಂತಹ ಲಕ್ಷಾಂತರ ಜನರನ್ನು ತನಿಖೆ ಮಾಡಲಾಗಿದೆ ಎಂದು ಹೇಳಿದೆ. ಈ ಬಗ್ಗೆ ವಿಮರ್ಶೆ ನಡೆಯುತ್ತಿದ್ದು, ವಕೀಲರು, ಬಾಹ್ಯ ತನಿಖಾಧಿಕಾರಿಗಳು, ದತ್ತಾಂಶ ವಿಜ್ಞಾನಿಗಳು, ಎಂಜಿನಿಯರ್‌ಗಳು, ನೀತಿ ತಜ್ಞರು ಮತ್ತು ಫೇಸ್‌ಬುಕ್‌ನೊಳಗಿನ ತಂಡಗಳು ಸೇರಿದಂತೆ ನೂರಾರು ಜನರಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಸಂಪೂರ್ಣವಾಗಿ ಸಂಯೋಜಿಸಿದ್ದೇವೆ

ಇನ್ನು ತನ್ನ ಬಳಕೆದಾರರಿಗೆ ಸುರಕ್ಷತೆ ಬಗ್ಗೆ ಅಭಯ ನೀಡಿರುವ ಫೇಸ್‌ಬುಕ್, "ಪ್ರತಿ ತಿಂಗಳು ಕಳೆದಂತೆ, ನಾವು ಕಲಿತದ್ದನ್ನು ನಾವು ಸಂಪೂರ್ಣವಾಗಿ ಸಂಯೋಜಿಸಿದ್ದೇವೆ ಮತ್ತು ನಮ್ಮ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ಡೆವಲಪರ್‌ಗಳು ನಿರ್ಮಿಸಬಹುದಾದ ಮಾರ್ಗಗಳನ್ನು ನಾವು ಮರುಪರಿಶೀಲಿಸಿದ್ದೇವೆ" ಎಂದು ಹೇಳಿದೆ. 'ನಾವು ಕಂಡುಕೊಳ್ಳುವ ಸಂಭಾವ್ಯ ನೀತಿ ಉಲ್ಲಂಘನೆಗಳ ವಿರುದ್ಧ ನಾವು ತನಿಖೆ ಮಾಡುವ ಮತ್ತು ಜಾರಿಗೊಳಿಸುವ ವಿಧಾನಗಳನ್ನು ಸಹ ನಾವು ಸುಧಾರಿಸಿದ್ದೇವೆ' ಎಂದು ತಿಳಿಸಿದೆ.

Best Mobiles in India

English summary
The Cambridge Analytica scandal, which uncovered how information from millions of Facebook profiles was used to influence opinion during Brexit and the 2016 US election. to know more visit to kanada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X