'ಫೇಸ್‌ಬುಕ್‌' ಮಾಲೀಕನ ವಿರುದ್ಧ ಕೆಟ್ಟದಾಗಿ ಕಮೆಂಟ್ ಮಾಡಿದರೇ ಹುಷಾರ್!!

|

ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣ 'ಫೇಸ್‌ಬುಕ್‌' ತನ್ನ ಆಕರ್ಷಕ ಫೀಚರ್ಸ್‌ಗಳಿಂದ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೆ ಇದೆ. ನಿಮ್ಮ ಫೇಸ್‌ಬುಕ್ ಖಾತೆಯ ಮೂಲಕ ವೈಯಕ್ತಿಕ ಫೋಟೊಗಳನ್ನು ಹಂಚಿಕೊಳ್ಳುವುದು, ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಮಾತ್ರವಲ್ಲದೆ ಸಾಮಾಜಿಕ ಘಟನೆಗಳಿಗೆ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಹ ಫೇಸ್‌ಬುಕ್ ಅನುಕೂಲ ಮಾಡಿಕೊಟ್ಟಿದೆ. ಹಾಗಂತ ಫೇಸ್‌ಬುಕ್‌ ಸಂಸ್ಥೆಗೆ ಕೆಟ್ಟದಾಗಿ ಕಮೆಂಟ್ ಮಾಡಿದರೇ ಅಂಥವರ ಮೇಲೆ ಫೇಸ್‌ಬುಕ್ ಒಂದು ಕಣ್ಣಿಡದೇ ಬಿಡುತ್ತಾ.!?

'ಫೇಸ್‌ಬುಕ್‌' ಮಾಲೀಕನ ವಿರುದ್ಧ ಕೆಟ್ಟದಾಗಿ ಕಮೆಂಟ್ ಮಾಡಿದರೇ ಹುಷಾರ್!!

ಹೌದು, ಕೆಲವು ಬಳಕೆದಾರರು ಸಾಮಾಜಿಕ ಜಾಲತಾಣಗಳ ದಿಗ್ಗಜ 'ಫೇಸ್‌ಬುಕ್' ಸಂಸ್ಥೆಯ ವಿರುದ್ಧವು ಅವಹೇಳನಕಾರಿ ಕಮೆಂಟ್‌ಗಳನ್ನು ಹೇಳಿದರೇ ಅಥವಾ ಮಾಲೀಕ 'ಮಾರ್ಕ್ ಜುಕರ್ಬರ್ಗ್' ಅವರಿಗೂ ಕೆಟ್ಟದಾಗಿ ಕಮೆಂಟ್ ಮಾಡಿದರೇ. ಅವರನ್ನು ಫೇಸ್‌ಬುಕ್ ಸುಮ್ಮನೇ ಬಿಡುತ್ತಾ? ನೋ ಚಾನ್ಸ್, ಯಾರಾದರೋ ಫೇಸ್‌ಬುಕ್‌ ಕಂಪನಿಗೆ, ಕಂಪನಿಯ ಉದ್ಯೋಗಿಗಳಿಗೆ ಮತ್ತು ಮಾಲೀಕರಾದ 'ಮಾರ್ಕ್ ಜುಕರ್ಬರ್ಗ್' ಅವರಗೆ ಕೆಟ್ಟದಾಗಿ ಕಮೆಂಟ್‌ಗಳನ್ನು ಪೋಸ್ಟ್ ಮಾಡಿದರೇ ಅವರನ್ನು ಫೇಸ್‌ಬುಕ್ ಟ್ರಾಕ್ ಮಾಡಲಿದೆ ಎಚ್ಚರ.

'ಫೇಸ್‌ಬುಕ್‌' ಮಾಲೀಕನ ವಿರುದ್ಧ ಕೆಟ್ಟದಾಗಿ ಕಮೆಂಟ್ ಮಾಡಿದರೇ ಹುಷಾರ್!!

ಇನ್ನೂ ಕೆಲ ಬಳಕೆದಾರರೂ ಫೇಸ್‌ಬುಕ್ ಕಂಪನಿ ವಿರುದ್ಧವೇ ಕೆಟ್ಟ ಕಮೆಂಟ್‌ಗಳನ್ನು ಮಾಡಿದ್ದು, ಅಲ್ಲಿಯ ಉದ್ಯೋಗಿಗಳಿಗೆ ಬೆದರಿಕೆಯ ಮೇಲ್‌ಗಳನ್ನು ಸಹ ಮಾಡಿದ್ದಾರೆ ಎಂಬುದನ್ನು ಸ್ವಂತ ಫೇಸ್‌ಬುಕ್ ಕಂಪನಿಯ ಹಳೇ ಉದ್ಯೋಗಿಗಳು CNBCಗೆ ತಿಳಿಸಿದ್ದಾರೆ. ಫೇಸ್‌ಬುಕ್ 2008 ರಿಂದಲೂ ಪ್ರತಿ ವಾರ ತನ್ನ ವಿರುದ್ಧ ಕೆಟ್ಟದಾಗಿ ಕಮೆಂಟ್ ಮಾಡುವವರನ್ನು ಮತ್ತು ಬೆದರಿಕೆ ಮೇಲ್‌ ಕಳುಹಿಸುವವರ ಹೆಸರು, ಅವರ ಫೋಟೋ, ನಿಖರ ವಿಳಾಸ ಸೇರಿದಂತೆ ಎಲ್ಲ ಮಾಹಿತಿಯನ್ನು ಫೇಸ್‌ಬುಕ್ ತನ್ನ "be on lookout" or a "BOLO" ನಲ್ಲಿ ದಾಖಲುಮಾಡಿಕೊಳ್ಳುತ್ತ ಬಂದಿದೆ.

'ಫೇಸ್‌ಬುಕ್‌' ಮಾಲೀಕನ ವಿರುದ್ಧ ಕೆಟ್ಟದಾಗಿ ಕಮೆಂಟ್ ಮಾಡಿದರೇ ಹುಷಾರ್!!

ಈ ವಿಷಯವನ್ನು ಫೇಸ್‌ಬುಕ್‌ ಇದೀಗ ಗಂಭೀರವಾಗಿ ಪರಿಗಣಿಸಿದ್ದು, ಹೀಗಾಗಿ ಇನ್ಮುಂದೆ ಬಳಕೆದಾರರು ಸಂಸ್ಥೆಗೆ ಕೆಟ್ಟದಾಗಿ ಕಮೆಂಟ್ ಮಾಡುವುದು ಅಥವಾ ಸಂಸ್ಥೆಯ ಮಾಲೀಕ ಮಾರ್ಕ್ ಜುಕರ್ಬರ್ಗ್ ಅವರಿಗೆ ಏನಾದರೂ ಅಶ್ಲೀಲ ಪದಗಳನ್ನು ಉಪಯೋಗಿಸಿ ಕೆಟ್ಟದಾಗಿ ಕಮೆಂಟ್ ಮಾಡಿದರೇ ಆ ಬಳಕೆದಾರರು ಇನ್ಮುಂದೆ ಫೇಸ್‌ಬುಕ್‌ ಕಣ್ಣಿನಿಂದ ತಪ್ಪಿಸಿಕೊಳ್ಳಲು ಆಗೋದಿಲ್ಲ. ಹೀಗಾಗಿ ಕಮೆಂಟ್‌ಗಳನ್ನು ಮಾಡುವಾಗ ಎಚ್ಚರವಿರಲಿ.

'ಫೇಸ್‌ಬುಕ್‌' ಮಾಲೀಕನ ವಿರುದ್ಧ ಕೆಟ್ಟದಾಗಿ ಕಮೆಂಟ್ ಮಾಡಿದರೇ ಹುಷಾರ್!!

ಉಪಯುಕ್ತ ಮಾಹಿತಿಗಳು ಬಹುಬೇಗನೆ ಎಲ್ಲ ಕಡೆಯಲ್ಲೂ ತಲುಪಿಸುವ ಅನುಕೂಲ ಮಾಡಿಕೊಟ್ಟಿರುವ ಸಾಮಾಜಿಕ ತಾಣ ಫೇಸ್‌ಬುಕ್‌ ಅನ್ನು, ಕೆಲವರು ಸುಳ್ಳು ವದಂತಿಗಳನ್ನು, ಗಾಳಿಸುದ್ದಿಗಳನ್ನು ಹರಡಿಸಲು ಬಳೆಸುತ್ತಾರೆ, ಇನ್ನೂ ಕೆಲವರು ಇತರರಿಗೆ ನಿಂದನೆ ಮಾಡಲು ಫೇಸ್‌ಬುಕ್‌ ಅನ್ನು ವೇದಿಕೆಯನ್ನಾಗಿ ಮಾಡಿಕೊಂಡಿದ್ದರೇ ಮತ್ತೆ ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಫೇಸ್‌ಬುಕ್ಕ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಟೆಕ್ನಾಲಜಿಯನ್ನು ದುರುಪಯೋಗಕ್ಕೆ ಬಳಸಿಕೊಳ್ಳುತ್ತಿರುವುದು ದೊಡ್ಡ ದುರಂತವೇ ಸರಿ.

Most Read Articles
Best Mobiles in India

English summary
Speaking to CNBC, more than a dozen former Facebook employees confirmed that the company keeps a log of negative comments on its platform and in some cases tracks those individuals who might pose a threat to its employees and the company itself.To know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X