Just In
- 2 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 3 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 4 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- 4 hrs ago
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
Don't Miss
- Sports
Ind vs NZ 1st ODI: ಟೀಮ್ ಇಂಡಿಯಾಗೆ ಗೆಲ್ಲಲು ಸವಾಲಿನ ಗುರಿ ನೀಡಿದ ನ್ಯೂಜಿಲೆಂಡ್
- Movies
3 ನಿಮಿಷದ ಐಟಂ ಸಾಂಗ್ಗೆ 'ಐರಾವತ'ನ ಅರಗಿಣಿ ಪಡೆದಿದ್ದು ಎಷ್ಟು ಕೋಟಿ?
- News
ವಿಧಾನಸಭಾ ಚುನಾವಣೆ: ಮತ್ತೆ ರಾಜ್ಯಕ್ಕೆ ಅಮಿತ್ ಶಾ, ಮತ ಬೇಟೆಗೆ ಕುಂದಗೋಳದಲ್ಲಿ ಬೃಹತ್ ಸಾರ್ವಜನಿಕ ಸಭೆ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ? ಈ ಬಗೆಯ ಆಹಾರ ಸೇವನೆ ಒಳ್ಳೆಯದು
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫೇಸ್‌ಬುಕ್‌ನಿಂದ ಆನ್‌ಲೈನ್‌ನಲ್ಲಿ ಲಕ್ಷಾಂತರ ಮೊಬೈಲ್ ಸಂಖ್ಯೆ ಬಹಿರಂಗ..!
ಕೆಂಬ್ರಿಡ್ಜ್ ಅನಾಲಿಟಿಕಾ ಮಾಹಿತಿ ಸೋರಿಕೆಯ ನಂತರ ಮತ್ತೊಂದು ದೊಡ್ಡ ಮಾಹಿತಿ ಸೋರಿಕೆಗೆ ಫೇಸ್‌ಬುಕ್ ಸಾಕ್ಷಿಯಾಗಿದೆ. ಹೌದು, ಫೇಸ್‌ಬುಕ್ ಖಾತೆಗಳಿಗೆ ಲಿಂಕ್ ಮಾಡಲಾದ ಲಕ್ಷಾಂತರ ಫೋನ್ ಸಂಖ್ಯೆಗಳು ಆನ್‌ಲೈನ್‌ನಲ್ಲಿ ಬಹಿರಂಗವಾಗಿವೆ. ಈ ಮೂಲಕ ಫೇಸ್‌ಬುಕ್ ಮತ್ತೊಂದು ಸಲ ಸೇಫ್ ಅಲ್ಲ ಎಂಬುದು ಸಾಬೀತಾಗಿದೆ. ವೈಯಕ್ತಿಕ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುನ್ನ ಎಚ್ಚರದಿಂದ ಇರಬೇಕಾಗಿದ್ದು ಅವಶ್ಯಕವಾಗಿದೆ. ಹಾಗಿದ್ರೆ ಈ ಮಾಹಿತಿ ಸೋರಿಕೆಯ ಬಗ್ಗೆ ಒಂದಿಷ್ಟು ಮಾಹಿತಿ ಮುಂದೆ ನೋಡಿ..

ಮೊಬೈಲ್ ಸಂಖ್ಯೆ ಲೀಕ್ ಮಾಡಿದ ಸರ್ವರ್‌ನಲ್ಲಿ ಬಳಕೆದಾರರ ಮೇಲೆ 419 ಮಿಲಿಯನ್‌ಗೂ ಹೆಚ್ಚಿನ ದಾಖಲೆ ಇವೆ. ಇದರಲ್ಲಿ 133 ಮಿಲಿಯನ್ ಯುಎಸ್ ಆಧಾರಿತ ಫೇಸ್‌ಬುಕ್ ಬಳಕೆದಾರರು, 18 ಮಿಲಿಯನ್ ಯುಕೆ ಬಳಕೆದಾರರು ಮತ್ತು ವಿಯೆಟ್ನಾಂನ 50 ಮಿಲಿಯನ್ ಬಳಕೆದಾರರ ಹೆಚ್ಚಿನ ದಾಖಲೆಗಳು ಸಿಕ್ಕಿವೆ. ಸರ್ವರ್‌ನ್ನು ಪಾಸ್‌ವರ್ಡ್‌ನಿಂದ ರಕ್ಷಿಸದ ಕಾರಣ, ಯಾರಾದರೂ ಡೇಟಾಬೇಸ್‌ನ್ನು ಹುಡುಕಬಹುದು ಮತ್ತು ಪ್ರವೇಶಿಸಬಹುದಾಗಿದೆ.

ಪ್ರತಿ ದಾಖಲೆಯಲ್ಲೂ ಬಳಕೆದಾರರ ಫೇಸ್‌ಬುಕ್ ಐಡಿ ಮತ್ತು ಖಾತೆಯಲ್ಲಿರುವ ಫೋನ್ ಸಂಖ್ಯೆ ಇರುತ್ತದೆ. ಫೇಸ್‌ಬುಕ್ ಐಡಿ ಸಾಮಾನ್ಯವಾಗಿ ಖಾತೆಗೆ ಸಂಬಂಧಿಸಿದ ದೀರ್ಘ, ಅನನ್ಯ ಮತ್ತು ಸಾರ್ವಜನಿಕ ಸಂಖ್ಯೆಯನ್ನು ಹೊಂದಿದೆ. ಇದರಿಂದ ಖಾತೆಯ ಬಳಕೆದಾರರ ಹೆಸರನ್ನು ಸುಲಭವಾಗಿ ತಿಳಿಯಬಹುದು. ಆದರೆ, ಬಳಕೆದಾರರ ಫೋನ್ ಸಂಖ್ಯೆಗಳಿಗೆ ಫೇಸ್‌ಬುಕ್ ಪ್ರವೇಶ ನಿರ್ಬಂಧಿಸಿದಾಗಿನಿಂದ ವರ್ಷಕ್ಕೂ ಹೆಚ್ಚು ಕಾಲ ಫೋನ್ ಸಂಖ್ಯೆಗಳು ಸಾರ್ವಜನಿಕವಾಗಿ ಕಾಣುತ್ತಿಲ್ಲ.

ಫೇಸ್‌ಬುಕ್ ಬಳಕೆದಾರರ ಫೋನ್ ಸಂಖ್ಯೆಯನ್ನು ಮತ್ತು ಅವರ ಫೇಸ್‌ಬುಕ್ ಐಡಿಗೆ ಹೊಂದಿಸುವ ಮೂಲಕ ಡೇಟಾಬೇಸ್‌ನಲ್ಲಿನ ಹಲವು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಫೇಸ್‌ಬುಕ್‌ನ ಸ್ವಂತ ಪಾಸ್‌ವರ್ಡ್ ಮರುಹೊಂದಿಸುವ ಫೀಚರ್‌ಗೆ ವಿರುದ್ಧವಾಗಿ ಫೋನ್ ಸಂಖ್ಯೆಗಳನ್ನು ಹೊಂದಿಸುವ ಮೂಲಕ ಇತರ ದಾಖಲೆಗಳನ್ನು ಕೂಡ ಪರಿಶೀಲಿಸಲಾಗಿದ್ದು, ಖಾತೆಗೆ ಲಿಂಕ್ ಬಳಕೆದಾರರ ಫೋನ್ ಸಂಖ್ಯೆಯನ್ನು ಭಾಗಶಃ ಬಹಿರಂಗಪಡಿಸಲು ಈ ಕ್ರಮವನ್ನು ಬಳಸಬಹುದಾಗಿದೆ. ಇದರಲ್ಲಿ ಕೆಲವು ದಾಖಲೆಗಳು ಬಳಕೆದಾರರ ಹೆಸರು, ಲಿಂಗ ಮತ್ತು ದೇಶದ ಮಾಹಿತಿಯನ್ನು ಸಹ ಹೊಂದಿವೆ.

ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣದ ನಂತರ ಫೇಸ್‌ಬುಕ್ ಡೇಟಾವನ್ನು ಒಳಗೊಂಡ ಇತ್ತೀಚಿನ ಭದ್ರತಾ ಲೋಪ ಇದಾಗಿದೆ. 2016ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವಿಂಗ್ ಮತದಾರರನ್ನು ಗುರುತಿಸಲು ಸಹಾಯ ಮಾಡಲು 80 ದಶಲಕ್ಷಕ್ಕೂ ಹೆಚ್ಚು ಪ್ರೊಫೈಲ್‌ಗಳನ್ನು ಸ್ಕ್ರಾಪ್ ಮಾಡಲಾಗಿತ್ತು. ಅಂದಿನಿಂದ ಕಂಪನಿಯು ಇನ್‌ಸ್ಟಾಗ್ರಾಮ್ ಸೇರಿ ಹಲವಾರು ಉನ್ನತ ಪ್ರೊಫೈಲ್ ಸ್ಕ್ರಾಪಿಂಗ್ ಘಟನೆಗಳನ್ನು ನೋಡಿದ್ದು, ಇತ್ತೀಚೆಗೆ ಪ್ರೊಫೈಲ್ ಡೇಟಾವನ್ನು ದೊಡ್ಡ ಪ್ರಮಾಣದಲ್ಲಿ ಸೋರಿಕೆ ಮಾಡಿರುವುದನ್ನು ಫೇಸ್‌ಬುಕ್ ಒಪ್ಪಿಕೊಂಡಿದೆ.

ಲಕ್ಷಾಂತರ ಬಳಕೆದಾರರ ಫೋನ್ ಸಂಖ್ಯೆಗಳನ್ನು ಫೇಸ್‌ಬುಕ್ ಐಡಿಗಳಿಂದ ಬಹಿರಂಗಪಡಿಸಲಾಗಿದ್ದು, ಸ್ಪ್ಯಾಮ್ ಕರೆ ಮತ್ತು ಸಿಮ್ ಸ್ವಾಪಿಂಗ್ ದಾಳಿಯ ಆತಂಕ ಎದುರಗಿದೆ. ಬೇರೊಬ್ಬರ ಫೋನ್ ಸಂಖ್ಯೆಯೊಂದಿಗೆ, ಹ್ಯಾಕರ್‌ಗಳು ಆ ಮೊಬೈಲ್ ಸಂಖ್ಯೆಗೆ ಸಂಬಂಧಿಸಿದ ಯಾವುದೇ ಇಂಟರ್‌ನೆಟ್ ಖಾತೆಯಲ್ಲಿ ಪಾಸ್‌ವರ್ಡ್‌ನ್ನು ಬಲವಂತವಾಗಿ ಮರುಹೊಂದಿಸಬಹುದಾಗಿದೆ. ಭದ್ರತಾ ಸಂಶೋಧಕ ಮತ್ತು ಜಿಡಿಐ ಫೌಂಡೇಶನ್ ಸದಸ್ಯರಾದ ಸನ್ಯಾಮ್ ಜೈನ್ ಡೇಟಾಬೇಸ್‌ನ್ನು ಕಂಡುಕೊಂಡಿದ್ದಾರೆ. ವೆಬ್ ಹೋಸ್ಟ್ ಮೂಲಕ ಡೇಟಾಬೇಸ್‌ನ್ನು ಆಫ್‌ಲೈನ್‌ಗೆ ತರಲಾಗಿದೆ.

ಈ ಮಾಹಿತಿ ಸೋರಿಕೆಯಲ್ಲಿ ಹಲವಾರು ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಫೋನ್ ಸಂಖ್ಯೆಗಳೊಂದಿಗೆ ಪ್ರೊಫೈಲ್‌ಗಳು ಬಹಿರಂಗವಾಗಿವೆ ಎಂದು ಜೈನ್ ಹೇಳಿದ್ದಾರೆ. ಇನ್ನು, ಫೇಸ್‌ಬುಕ್ ಬಳಕೆದಾರರ ಫೋನ್ ಸಂಖ್ಯೆಗಳಿಗೆ ಪ್ರವೇಶ ಕಡಿತಗೊಳಿಸುವ ಮೊದಲು ಈ ಮಾಹಿತಿಯನ್ನು ಕದಿಯಲಾಗಿದೆ ಎಂದು ಫೇಸ್‌ಬುಕ್ ವಕ್ತಾರ ಜೇ ನ್ಯಾನ್‌ಕಾರೋ ಹೇಳಿದ್ದಾರೆ. ಈ ಮಾಹಿತಿ ಹಳೆಯದಾಗಿದೆ. ಮತ್ತು ನಾವು ಕಳೆದ ವರ್ಷ ಬದಲಾವಣೆಗಳನ್ನು ಮಾಡುವ ಮೊದಲು ಈ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎಂದು ವಕ್ತಾರ ಹೇಳಿದ್ದು, ಡೇಟಾ ಸೆಟ್ ಅನ್ನು ತೆಗೆದುಹಾಕಲಾಗಿದೆ ಮತ್ತು ಫೇಸ್‌ಬುಕ್ ಖಾತೆಗಳನ್ನು ಹೊಂದಾಣಿಕೆ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದಿದ್ದಾರೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470