ಬಳಕೆದಾರರಿಗೆ ಶಾಕ್ ಕೊಟ್ಟ ಫೇಸ್‌ಬುಕ್‌ ಸಿಓಓ: FB ಬಳಸಲು ಕಾಸು ಕೊಡಬೇಕಂತೆ..!

|

ಫೇಸ್‌ಬುಕ್‌ ತನ್ನ ಬಳಕೆದಾರರ ಮಾಹಿತಿಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಅಲ್ಲದೇ ಕೋಟಿ ಕೋಟಿ ಬಳಕೆದಾರರ ಮಾಹಿತಿಯನ್ನು ಲೀಕ್ ಮಾಡಿದ ಎನ್ನುವ ಸುದ್ದಿಯೂ ಫೇಸ್‌ಬುಕ್ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿತ್ತು. ಇದಾದ ನಂತರದಲ್ಲಿ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಸುರಕ್ಷಿತವಾಗಿರುವ ಭರವಸೆಯನ್ನು ನೀಡಿತ್ತು. ಆದರೆ ಈಗ ಬಳಕೆದಾರರ ಮಾಹಿತಿಯೂ ಸೇಫ್‌ ಆಗಿರಬೇಕು ಎಂದು ಎಂದರೆ ಪಾವತಿ ಮಾಡುವಂತೆ ಹೊಸ ಪ್ರಸ್ತಾವವನ್ನು ಇರಿಸಿದೆ ಎನ್ನಲಾಗಿದೆ.

ಬಳಕೆದಾರರಿಗೆ ಶಾಕ್ ಕೊಟ್ಟ ಫೇಸ್‌ಬುಕ್‌ ಸಿಓಓ: FB ಬಳಸಲು ಕಾಸು ಕೊಡಬೇಕಂತೆ..!

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಫೇಸ್‌ಬುಕ್ ಸಿಓಓ ಷೆರಿಲ್ ಸ್ಯಾಂಡ್ಬರ್ಗ್, ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್ ಯಾವುದೇ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳದೆ, ಜಾಹೀರಾತುದಾರರಿಗೂ ನೀಡದೆ ಭದ್ರವಾಗಿ ಇರಿಸಿಕೊಳ್ಳಬೇಕಾದರೆ, ಭವಿಷ್ಯದಲ್ಲಿ ಫೇಸ್‌ಬುಕ್‌ ಬಳಸುವುದಕ್ಕೆ ಪಾವತಿ ಸೇವೆಯನ್ನು ಬಳಕೆದಾರರು ಪಡೆಯಬೇಕಾಗಬಹುದು ಎಂದಿದ್ದಾರೆ.

ಓದಿರಿ: ಓಲಾ ಕ್ಯಾಬ್‌ನಲ್ಲಿ ಲ್ಯಾಪ್‌ಟಾಪ್ ಕಳೆದರು, ಪ್ಲೈಟ್ ಮಿಸ್ ಆದ್ರೂ ಚಿಂತೆ ಇಲ್ಲ..!

ಬಳಕೆದಾರರು ತಮ್ಮ ಡೇಟಾವನ್ನು ಜಾಹೀರಾತು ನೀಡಲು ಮತ್ತು ಬೇರೆ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳದೆ ಕಾಪಾಡುವ ಸಲುವಾಗಿ ಫೇಸ್‌ಬುಕ್ ಪಾವತಿ ಸೇವೆಯನ್ನು ಆರಂಭಿಸುವ ಸಾಧ್ಯತೆ ಇದೆ. ಇದಕ್ಕಾಗಿ ಫೇಸ್‌ಬುಕ್ ಯೋಜನೆಯೊಂದನ್ನು ರೂಪಿಸುತ್ತಿರುದಾಗಿ ಅವರು ಮಾಹಿತಿಯನ್ನು ನೀಡಿದ್ದಾರೆ. ಇದರಿಂದಾಗಿ ಬಳಕೆದಾರರ ಮಾಹಿತಿಯೂ ಸಂಪೂರ್ಣ ಸುಕ್ಷಿತವಾಗಿರಲಿದೆ.

ಬಳಕೆದಾರರಿಗೆ ಶಾಕ್ ಕೊಟ್ಟ ಫೇಸ್‌ಬುಕ್‌ ಸಿಓಓ: FB ಬಳಸಲು ಕಾಸು ಕೊಡಬೇಕಂತೆ..!

ಫೇಸ್‌ಬುಕಿಗೆ ಆದಾಯ ಮೂಲ ಜಾಹೀರಾತು ಆಗಿದ್ದು, ಅದಿಲ್ಲದೇ ಕಾರ್ಯನಿರ್ವಹಿಸುವುದು ಕಷ್ಟಸಾಧ್ಯ. ಈ ಹಿನ್ನಲೆಯಲ್ಲಿ ಬಳಕೆದಾರರು ತಮ್ಮ ಮಾಹಿತಿಯನ್ನು ಯಾವುದೇ ಮಟ್ಟದಲ್ಲಿಯೂ ಬಳಕೆ ಮಾಡಿಕೊಳ್ಳಬಾರದು ಎಂದು ಬಯಸಿದರೆ ಇದಕ್ಕಾಗಿ ಪಾವತಿ ಸೇವೆಯನ್ನು ಪಡೆಯಬೇಕಾಗುತ್ತದೆ ಎಂದಿದ್ದಾರೆ. ಇದರಿಂದ ಫೇಸ್‌ಬುಕ್ಕಿಗೂ ಆದಾಯದೊರೆಯಲಿದೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಇದಲ್ಲದೇ ಫೇಸ್‌ಬುಕ್‌ ನಿಂದ ಇನ್ನು ಮುಂದೆ ಯಾರು ಬಳಕೆದಾರರ ಮಾಹಿತಿಯನ್ನು ಕಳ್ಳತನ ಮಾಡಬಾರದು ಎಂಬ ಕಾರಣಕ್ಕೆ ಸೆಕ್ಯೂರಿಟಿ ಲೆವೆಲ್ ಅನ್ನು ಹೆಚ್ಚು ಮಾಡುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ. ಬಳಕೆದಾರರು ಯಾವುದೇ ಭಯವಿಲ್ಲದೇ ಫೇಸ್‌ಬುಕ್ ಬಳಕೆಯನ್ನು ನಿರ್ಭಿತಿಯಿಂದ ಮಾಡಬಹುದು ಎಂದಿದ್ದಾರೆ.

Best Mobiles in India

English summary
Facebook users would have to pay. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X