ಚೀನಾದಂತೆ ಭಾರತದಲ್ಲಿಯೂ ಶೀಘ್ರವೇ ಫೇಸ್‌ಬುಕ್‌ ಮತ್ತು ವಾಟ್ಸ್‌ಆಪ್ ಬ್ಯಾನ್‌.?!

|

ಈಗಾಗಲೇ ತನ್ನ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಲು ಅನುಮತಿ ನೀಡುತ್ತಿಲ್ಲ ಎನ್ನುವ ಕಾರಣಕ್ಕೆ ಆಪಲ್ ಐಫೋನ್ ಅನ್ನು ನಿಷ್ಕ್ರಿಯಗೊಳಿಸಲು ಮುಂದಾಗಿರುವ ಟೆಲಿಕಾಂ ಇಲಾಖೆ (ಡಿಒಟಿ)ಯೂ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಬಳಕೆದಾರರಿಗೆ ಕಿರಿಕಿರಿಯನ್ನು ಮಾಡುತ್ತಿರುವ ಸೋಶಿಯಲ್ ಮೀಡಿಯಾ ಆಪ್ ಗಳನ್ನು ಬ್ಲಾಕ್ ಮಾಡಲು ಯೋಜನೆಯೊಂದನ್ನು ರೂಪಿಸಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಿಂದಾಗಿ ದೇಶದಲ್ಲಿ ಅಶಾಂತಿಯ ವಾತವರಣವೂ ನಿರ್ಮಾಣವಾಗಿದ್ದು, ಇದರಿಂದಾಗಿ ಅವುಗಳ ಮೇಲೆಯೂ ನಿಯಂತ್ರಣ ಹೇರಲು ಯೋಜನೆಯನ್ನು ರೂಪಿಸುತ್ತಿದೆ.

ಚೀನಾದಂತೆ ಭಾರತದಲ್ಲಿಯೂ ಶೀಘ್ರವೇ ಫೇಸ್‌ಬುಕ್‌ ಮತ್ತು ವಾಟ್ಸ್‌ಆಪ್ ಬ್ಯಾನ್‌.?!

ಟೆಲಿಕಾಂ ಇಲಾಖೆ (ಡಿಒಟಿ)ಯೂ ಮೊಬೈಲ್ ಆಪ್‌ಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆಪ್, ಟೆಲಗ್ರಾಂ ಸೇರಿದಂತೆ ಮಾರುಕಟ್ಟೆಯಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿರುವ ಆಪ್ ಗಳಿಂದಾಗಿ ದೇಶದ ಭದ್ರತೆಗೆ ಮತ್ತು ಸಾರ್ವಜನಿಕ ಜನ ಜೀವನಕ್ಕೆ ಅಡಿಯುಂಟಾಗುತ್ತಿದ್ದು, ಇದರಿಂದಾಗಿ ಇವುಗಳ ಮೇಲೆ ಹೇಗೆ ನಿಯಂತ್ರಣ ಸಾಧಿಸುವುದು ಮತ್ತು ಅವುಗಳನ್ನು ಒಮ್ಮೆಗೆ ಹೇಗೆ ಬ್ಲಾಕ್ ಮಾಡುವುದು ಎನ್ನುವದನ್ನು ಕುರಿತು ಸಲಹೆಗಳನ್ನು ಪಡೆಯುತ್ತಿದೆ ಎನ್ನಲಾಗಿದೆ.

ಜುಲೈನಿಂದಲೇ ತಯಾರಿ:

ಜುಲೈನಿಂದಲೇ ತಯಾರಿ:

ಜುಲೈ 18 ರಂದು ಟೆಲಿಕಾಂ ಅಪರೇಟರ್ಸ್ ಮತ್ತು ಇಂಟರ್ನೆಟ್ ಸರ್ವೀಸ್ ಪ್ರವೈಡರ್ ಅಸೋಷಿಯೇಷನ್ ಹಾಗೂ ಇನ್‌ಡಸ್ಟ್ರಿ ಬಾಡಿ ಸೆಲ್ಯೂಲ್ ಆಪರೇಟರ್ಸ್ ಅಸೋಷಿಯೇಷನ್ ಗೆ ಪತ್ರವನ್ನು ಬರೆದಿರುವ ಟೆಲಿಕಾಂ ಇಲಾಖೆ (ಡಿಒಟಿ) ಈ ಸೋಶಿಯಲ್ ಮೀಡಿಯಾ ಆಪ್‌ಗಳನ್ನು ಹೇಗೆ ಬ್ಲಾಕ್ ಮಾಡುವುದು ಎನ್ನುವ ಕುರಿತು ಮಾಹಿತಿಯನ್ನು ನೀಡುವಂತೆ ಮನವಿಯನ್ನು ಮಾಡಿದೆ ಎನ್ನಲಾಗಿದೆ.

ಸೆಕ್ಷನ್ 69A IT ಆಕ್ಟ್:

ಸೆಕ್ಷನ್ 69A IT ಆಕ್ಟ್:

ಟೆಲಿಕಾಂ ಇಲಾಖೆ (ಡಿಒಟಿ)ಯೂ ಮೊಬೈಲ್ ಆಪ್‌ಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆಪ್, ಟೆಲಗ್ರಾಂ ಸೇರಿದಂತೆ ಸೋಶಿಯಲ್ ಮೀಡಿಯಾ ಆಪ್‌ಗಳ ಮೇಲೆ ಸೆಕ್ಷನ್ 69A IT ಆಕ್ಟ್ ಅನ್ವಯ ನಿಯಂತ್ರಣವನ್ನು ಹೇರಿ ಬ್ಲಾಕ್ ಮಾಡಲು ಯೋಜನೆಯನಜ್ನು ರೂಪಿಸಲು ಮುಂದಾಗಿದೆ.

ರೂಮರ್‌ಗಳು ಹೆಚ್ಚು:

ರೂಮರ್‌ಗಳು ಹೆಚ್ಚು:

ಸೋಶಿಯಲ್ ಮೀಡಿಯಾ ಮೊಬೈಲ್ ಆಪ್‌ಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆಪ್, ಟೆಲಿಗ್ರಾಂ ಸೇರಿದಂತೆ ಇತರ ಆಪ್‌ಗಳಿಂದಾಗಿ ಸುಳ್ಳು ಸುದ್ದಿಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ. ಇದಲ್ಲದೇ ಕೋಮುಗಲಭೆಗಳಿಗೂ ಇದು ಕಾರಣವಾಗುತ್ತಿದೆ. ಈ ಹಿನ್ನಲೆಯಲ್ಲಿ ಅವುಗಳನ್ನು ಬ್ಲಾಕ್ ಮಾಡುವ ಹಿಡಿತವನ್ನು ಪಡೆಯಬೇಕು ಎನ್ನುವುದು ಟೆಲಿಕಾಂ ಇಲಾಖೆಯ ನಿರ್ಧಾರವಾಗಿದೆ.

ಫೇಸ್‌ಬುಕ್‌ ಕಂಪನಿಯಿಂದಲೇ ಹೆಚ್ಚು:

ಫೇಸ್‌ಬುಕ್‌ ಕಂಪನಿಯಿಂದಲೇ ಹೆಚ್ಚು:

ದೇಶದಲ್ಲಿ ಫೇಸ್‌ಬುಕ್ ಒಡೆತನದ ಕಂಪನಿಗಳ ಪ್ರಭಾವವೇ ಹೆಚ್ಚಾಗಿದ್ದು, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್‌ಆಪ್ ಗಳು ಅತೀ ಹೆಚ್ಚಿನ ಪ್ರಮಾಣದ ಬಳಕೆದಾರರನ್ನು ಹೊಂದಿದೆ ಎನ್ನಲಾಗಿದ್ದು, ಇವುಗಳಿಂದಲೇ ಹೆಚ್ಚಿನ ಪ್ರಮಾಣದ ತೊಂದರೆಯೂ ನಿರ್ಮಾಣವಾಗುತ್ತಿದೆ. ಹಲವು ಸಾವು ನೋವುಗಳಿಗೂ ಇದು ಕಾರಣವಾಗುತ್ತಿದೆ. ಈ ಹಿನ್ನಲೆಯಲ್ಲಿ ಇವುಗಳಿಗೆ ಮೂಗುದಾರ ಹಾಕಲು ಮುಂದಾಗಿದೆ.

Best Mobiles in India

English summary
FACEBOOK, WHATSAPP, INSTAGRAM CAN BE BLOCKED, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X