ನೀವು ಫೇಸ್‌ಬುಕ್‌ನಲ್ಲಿ ಎಷ್ಟು ಸಮಯ ಕಳೆದಿದ್ದೀರಾ ಎಂದು ನಿಖರವಾಗಿ ತಿಳಿಯಬಹುದು!!

|

ಫೇಸ್‌ಬುಕ್ ಕಂಪೆನಿಗೆ ಪ್ರಮುಖ ಬಂಡವಾಳವೇ ಸಮಯ ಆಗಿರುವಾಗ, ಪ್ರತಿಯೋರ್ವ ಬಳಕೆದಾರ ಒಂದು ದಿನದಲ್ಲಿ ಎಷ್ಟು ಕಾಲ ಫೇಸ್‌ಬುಕ್‌ಗಾಗಿ ಸಮಯವನ್ನು ವ್ಯಯಿಸಿದ್ದಾನೆ ಎಂಬ ಮಾಹಿತಿಯನ್ನು ಫೇಸ್‌ಬುಕ್ ನಿಡಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಬಳಕೆದಾರರಿಗೆ ಅನುಕೂಲವಾಗುವಂತೆ ಇಂತಹ ಹೊಸದೊಂದು ಫೀಚರ್ ಅನ್ನು ಫೇಸ್‌ಬುಕ್ ತರಲಿದೆ ಎನ್ನಲಾಗಿದೆ.

"ಯುವರ್ ಟೈಮ್ ಆನ್ ಫೇಸ್‌ಬುಕ್" ಎಂಬ ಹೊಸ ವೈಶಿಷ್ಟ್ಯವನ್ನು ಫೇಸ್‌ಬುಕ್ ತರಲು ಚಿಂತಿಸಿದೆ. ಈ ಹೊಸ ವೈಶೀಷ್ಟ್ಯವು ಫೇಸ್‌ಬುಕ್ ಬಳಕೆದಾರರು ಫೇಸ್‌ಬುಕ್‌ಗಾಗಿ ಖರ್ಚಾಗಿರುವ ತಮ್ಮ ದೈನಂದಿಕ ಮತ್ತು ವಾರದ ಸರಾಸರಿ ಸಮಯವನ್ನು ತಿಳಿದುಕೊಳ್ಳಬಹುದಾಗಿದೆ ಮತ್ತು ಫೇಸ್‌ಬುಕ್‌ನಲ್ಲಿ ದೈನಂದಿನ ಸಮಯದ ಮಿತಿಯನ್ನು ಹೊಂದಬಹುದಾಗಿದೆ ಎನ್ನಲಾಗಿದೆ.

ನೀವು ಫೇಸ್‌ಬುಕ್‌ನಲ್ಲಿ ಎಷ್ಟು ಸಮಯ ಕಳೆದಿದ್ದೀರಾ ಎಂದು ನಿಖರವಾಗಿ ತಿಳಿಯಬಹುದು!!

ನಮ್ಮ ಬಳಕೆದಾರರು ಫೇಸ್‌ಬುಕ್‌ನಲ್ಲಿ ಉತ್ತಮವಾಗಿ ಸಮಯವನ್ನು ವಿನಿಯೋಗಿಸಲು ನಾವು ಯಾವಾಗಲೂ ಹೊಸ ದಾರಿಯಲ್ಲಿ ಕೆಲಸ ಮಾಡುತ್ತೇವೆ. ಹಾಗಾಗಿ, ಫೇಸ್‌ಬುಕ್ ಅಧಿಸೂಚನೆಗಳನ್ನು ನಿರ್ವಹಿಸುವ ಲಿಂಕ್ ಅನ್ನು ಹೊಂದಿಸುವ ಆಯ್ಕೆಯನ್ನು ನೀಡುತ್ತದೆ ಎಂದು ಫೇಸ್‌ಬುಕ್ ವಕ್ತಾರ ಹೇಳಿರುವುದಾಗಿ ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿವೆ.

ಫೇಸ್‌ಬುಕ್‌ನಲ್ಲಿ ನೀವು ಕಳೆದಿರುವ ಸಮಯದ ನಿಖರ ಮಾಹಿತಿಯನ್ನು ತಿಳಿಯಬಹುದಾದ ಈ ಫೀಚರ್ ಮೂಲಕ ಸಮಯ ಮಿತಿ ಬಗ್ಗೆ ಎಚ್ಚರಿಕೆ ನೀಡುವಂತಹ ಸೌಲಭ್ಯ ಕೂಡ ಲಭ್ಯವಿದೆ. ಒಮ್ಮೆ ಈ ಸಮಯದ ಮಿತಿ ದಾಟಿದ ನಂತರ ಫೇಸ್‌ಬುಕ್ ಅಪ್ಲಿಕೇಶನ್ ಅನ್ನೇ ಬ್ಲಾಕ್ ಸಹ ಮಾಡಬಹುದಾದ ಈ ವೈಶಿಷ್ಟ್ಯವು ಅಭಿವೃದ್ಧಿ ಹಂತದಲ್ಲಿದೆ ಎಂದು ಹೇಳಲಾಗಿದೆ.

ನೀವು ಫೇಸ್‌ಬುಕ್‌ನಲ್ಲಿ ಎಷ್ಟು ಸಮಯ ಕಳೆದಿದ್ದೀರಾ ಎಂದು ನಿಖರವಾಗಿ ತಿಳಿಯಬಹುದು!!

ಈ ಹಿಂದೆ, ಆಪಲ್ ಮತ್ತು ಗೂಗಲ್‌ನಂತಹ ಕಂಪೆನಿಗಳು ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಖರ್ಚು ಮಾಡಿದ ಸಮಯದಲ್ಲಿ ಟ್ಯಾಬ್ ಅನ್ನು ಇರಿಸಿಕೊಳ್ಳಲು ವೈಶಿಷ್ಟ್ಯಗಳನ್ನು ಹೊರತಂದಿದ್ದವು. ಇದಾದ ನಂತರ, ಫೇಸ್‌ಬುಕ್ ಕೂಡ ತನ್ನ ಸೈಟ್‌ನಲ್ಲಿ ಬಳಕೆದಾರರು ಕಳೆದಿರುವ ಸಮಯವನ್ನು ಅವರಿಗೆ ತಿಳಿಸಲು ಮುಂದಾಗಿರುವುದು ಸ್ಪಷ್ಟವಾಗಿದೆ.

Best Mobiles in India

English summary
The new feature would offer users the option to set a daily time limit as well as a link to manage their Facebook notifications. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X