TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಮತ್ತೊಂದು ಫೇಸ್‌ಬುಕ್ ಹ್ಯಾಕ್ ಕಥೆ..! ನೀವು ಮಾಡಬೇಡಿ ಈ ತಪ್ಪು..!
ಫೇಸ್‌ಬುಕ್‌ನಲ್ಲಿ ನಿತ್ಯ ಒಂದಲ್ಲ ಒಂದು ಹೊಸ ಮಾದರಿಯ ವಿಷಯಗಳು ಕಾಣಿಸಿಕೊಳ್ಳುತ್ತವೆ. ಹಲವು ವಿಷಯಗಳು ವೈರಲ್ ಆಗುತ್ತವೆ. ಇದೇ ಮಾದರಿಯಲ್ಲಿ ಸೋಶಿಯಲ್ ಮೀಡಿಯಾ ಹ್ಯಾಕಿಂಗ್ ವಿಚಾರವನ್ನು ಇಟ್ಟುಕೊಂಡು ಹೊಸದೊಂದು ಕೋಡಿಂಗ್ ಟೆಸ್ಟ್ ವೈರಲ್ ಆಗಿದ್ದು, ಹಲವು ಮಂದಿ ಇದನ್ನು ನಂಬಿಕೊಂಡು ತಮ್ಮ ಆಕೌಂಟ್ ಹ್ಯಾಕ್ ಆಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳು ಮುಂದಾಗಿದ್ದಾರೆ. ಯಾರೋ ಕಿಡಿಗೇಡಿಗಳು ಹರಿಬಿಟ್ಟ ಸುದ್ದಿಗೆ ಹಲವರು ಮರಳಾಗುತ್ತಿದ್ದಾರೆ.
ಈ ಹಿಂದೆ ಫೇಸ್‌ಬುಕ್ ಆಕೌಂಟ್‌ಗಳು ಹ್ಯಾಕ್ ಆಗಿದೆ, ಬಳಕೆದಾರರ ಮಾಹಿತಿಯನ್ನು ಆಪ್‌ಗಳು ಅಪಹರಿಸಿವೆ ಎನ್ನುವ ಮಾತು ಕೇಳಿ ಬಂದ ಸಂದರ್ಭದಲ್ಲಿ ಕಾಮೆಂಟ್ ನಲ್ಲಿ BFF ಎಂದು ಟೈಪ್ ಮಾಡಿ ಅದು ಬಣ್ಣವನ್ನು ಬದಲಾಯಿಸಿದರೆ ನಿಮ್ಮ ಆಕೌಂಟ್ ಹ್ಯಾಕ್ ಆಗಿದೆ ಎಂದು ಸತ್ಯವಾಗಲಿದೆ ಎಂಬ ವಿಷಯವು ವೈರಲ್ ಆಗಿತ್ತು. ಆ ಸಂದರ್ಭದಲ್ಲಿ ಇದು ಸುಳ್ಳು ಎಂಬುದನ್ನು ನಿಮಗೆ ಬಿಡಿಸಿ ತಿಳಿಸಿದ್ದವು, ಇದೇ ಮಾದರಿಯ ಸದ್ಯ GRATULA ಟೈಪ್ ಮಾಡಿ ಎನ್ನುವ ಮಾಹಿತಿಯೊಂದು ವೈರಲ್ ಆಗಿದೆ. ಈ ಕುರಿತ ಸತ್ಯ ಸಂಗತಿ ಇಲ್ಲಿದೆ.
GRATULA ಎಂದು ಕಾಮೆಂಟ್ ಮಾಡಿ:
BFF ನಂತರದಲ್ಲಿ ಫೇಸ್‌ಬುಕ್‌ನಲ್ಲಿ GRATULA ಎಂದು ಕಾಮೆಂಟ್ ಮಾಡಿ ಎನ್ನುವ ಪೋಸ್ಟ್ ಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಫೇಸ್‌ಬುಕ್ ಖಾತೆಯ ಭದ್ರತೆ ಬಗ್ಗೆ ಎಚ್ಚರಿಸುವ ಪೋಸ್ಟ್‌ಗಳು ವೈರಲ್ ಆಗಿಗುತ್ತಿದ್ದು, GRATULA ಎಂದು ಕಾಮೆಂಟ್ನಲ್ಲಿ ಟೈಪ್ ಮಾಡುವ ಮೂಲಕ ನಿಮ್ಮ ಫೇಸ್‌ಬುಕ್ ಖಾತೆ ಪರೀಕ್ಷಿಸಿ ಎನ್ನುವ ಫೋಸ್ಟ್ ಗಳು ಬಂದರೆ ಸುಮ್ಮನೆ ಅದನ್ನು ನಿರ್ಲಕ್ಷಿಸುವುದು ಉತ್ತಮ.
ಕೆಂಪು ಬಂದರೆ:
GRATULA ಎಂದು ಕಾಮೆಂಟ್ನಲ್ಲಿ ಟೈಪ್ ಮಾಡಿರೆ ನಿಮ್ಮ ಕಾಮೆಂಟ್ ಕೆಂಪು ಬಣ್ಣದಲ್ಲಿ ಮೂಡಿದರೆ ನಿಮ್ಮ ಖಾತೆ ಭದ್ರವಾಗಿದೆ, ಹಸಿರು ಬಣ್ಣಕ್ಕೆ ತಿರುಗದಿದ್ದರೆ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ ಎಂದು ತಿಳಿಸುವ ಪೋಸ್ಟ್‌ಗಳಿಂದ ನಿಮಗೇನು ಲಾಭ ಮತ್ತು ನಷ್ಟಗಳು ಆಗುವುದಿಲ್ಲ. ಬದಲಿಗೆ ಆ ಫೋಸ್ಟ್ ಅನ್ನು ಹಾಕಿಕೊಂಡಿರುವ ಫೇಸ್‌ಬುಕ್ ಪೇಜಿನವರಿಗೆ ನೀವು ಮಾಡುವ ಒಂದೊಂದು ಕಾಮೆಂಟ್ ನಿಂದಲೂ ಭಾರೀ ಪ್ರಮಾಣದ ಲಾಭವಿರಲಿದೆ.
ಫೇಸ್‌ಬುಕ್ ಎಂದಿಗೂ ಮಾಡುವುದಿಲ್ಲ:
ನಿಮ್ಮ ಖಾತೆಯ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಿ ಎಂದು ಫೇಸ್‌ಬುಕ್ ಸರ್ವೆಯನ್ನು ತಾನಗಿಯೇ ನಡೆಸಲಿದೆಯೇ ಹೊರತು, ಕಾಮೆಂಟ್ ನಲ್ಲಿ ಅದು ಟೈಪ್ ಮಾಡಿ- ಇದು ಟೈಪ್ ಮಾಡಿ ಪರೀಕ್ಷಿಸಿಕೊಳ್ಳಿ ಎಂದು ತನ್ನ ಬಳಕೆದಾರರಿಗೆ ತಿಳಿಸುವುದಿಲ್ಲ. ಈ ರೀತಿಯಲ್ಲಿ ಮೇಸೆಜ್ ಗಳನ್ನು ಕಿಡಿಗೇಡಿಗಳು ಮಾತ್ರವೇ ಹರಿಬಿಡುತ್ತಾರೆ. ಈ ಹಿನ್ನಲೆಯಲ್ಲಿ ನೀವು ಸುಮ್ಮನೆ ಈ ಮೇಸೆಜ್ ಗಳನ್ನು ನಂಬಲು ಹೋಗ ಬೇಡಿ.
ಸುಮ್ಮನೇ ಶೇರ್ ಮಾಡಬೇಡಿ:
ಈ ಸುಳ್ಳು ಸುದ್ದಿಗಳು ಹೆಚ್ಚು ಬಾರಿ ಶೇರ್ ಮಾಡುವುದರಿಂದಲೇ ಹರಡಲಿದೆ. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ನೋಡುವ ಸಂದರ್ಭದಲ್ಲಿ ಈ ಮಾದರಿಯ ಪೋಸ್ಟ್ ಗಳು ಕಾಣಿಸಿಕೊಂಡ ಸಂದರ್ಭದಲ್ಲಿ ಅವುಗಳನ್ನು ಸುಮ್ಮನೇ ಶೇರ್ ಮಾಡಬೇಡಿ. ಅದರ ಬದಲು ಫೇಸ್‌ಬುಕಿಗೆ ರಿಫೋರ್ಟ್ ಮಾಡಿ. ಇದರಿಂದ ಸುಮ್ಮನೆ ಹಲವು ಮಂದಿ ಮೋಸ ಹೋಗುವುದನ್ನು ತಡೆಯಬಹುದಾಗಿದೆ.