ಚೀನಾಗೆ ಕಾಲಿಟ್ಟ ಫೇಸ್‌ಬುಕ್?..ಅವರಿಗಾಗಿಯೇ ಹೊಸದೊಂದು ಆಪ್!!

ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಚೀನಾ ಮಾರುಕಟ್ಟೆ ಪ್ರವೇಶ ಮಾಡಲು ಹರಸಾಹಸ ಮಾಡುತ್ತಿದ್ದು, ಚೀನಾಗಾಗಿಯೇ ಹೊಸದೊಂದು ಆಪ್‌ ಬಿಡುಗಡೆ ಮಾಡಿದೆ.!!

|

ಕಮ್ಯುನಿಷ್ಟ್ ರಾಷ್ಟ್ರ ಚೀನಾ ಯಾವುದೇ ವಿದೇಶಿ ಉತ್ಪನ್ನವನ್ನು ತನ್ನ ನೆಲದಲ್ಲಿ ಬೆಳೆಯಲು ಬಿಡುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಫೇಸ್‌ಬುಕ್ ಮಾತ್ರ ಚೀನಿಯರಿಗೆ ಗಾಳ ಹಾಕಲು ಭಾರಿ ಪ್ರಯತ್ನಿಸುತ್ತದೆ.! ಹಾಗಾಗಿಯೇ, ಚೀನಾಗಾಗಿಯೇ ಹೊಸದೊಂದು ಆಪ್‌ ಬಿಡುಗಡೆ ಮಾಡಿದೆ.!!

ಹೌದು, ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಚೀನಾ ಮಾರುಕಟ್ಟೆ ಪ್ರವೇಶ ಮಾಡಲು ಹರಸಾಹಸ ಮಾಡುತ್ತಿದ್ದು, ಅದಕ್ಕಾಗಿಯೇ, ಚೀನಿಯರಿಗಾಗಿ 'ಸ್ನೇಕಿ ಆಪ್‌' ಅನ್ನು ಬಿಡುಗಡೆ ಮಾಡಿದೆ. ಈ ಆಪ್‌ ಮೂಲಕ ಫೇಸ್‌ಬುಕ್ ಚೀನಾಗೆ ತನ್ನ ಮೊದಲ ಹೆಜ್ಜೆಯನ್ನು ಇಟ್ಟಿದೆ.!!

ಚೀನಾಗೆ ಕಾಲಿಟ್ಟ ಫೇಸ್‌ಬುಕ್?..ಅವರಿಗಾಗಿಯೇ ಹೊಸದೊಂದು ಆಪ್!!

ಇತ್ತೀಚೆಗೆ ಚೀನಾ ಪ್ರವಾಸ ಕೈಗೊಂಡಿದ್ದ ಫೇಸ್‌ಬುಕ್‌ ಮುಖ್ಯಸ್ಥ ಮಾರ್ಕ್‌ ಜುಕರ್‌ಬರ್ಗ್‌ ಅವರು ಅಲ್ಲಿನ ರಾಜಕೀಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಭೇಟಿ ಫಲಪ್ರದವಾದಲ್ಲಿ ಫೇಸ್‌ಬುಕ್‌ ಚೀನಾ ಮಾರುಕಟ್ಟೆಗೂ ಲಗ್ಗೆ ಹಾಕಲಿದೆ ಎನ್ನಲಾಗಿದೆ.!!

ಚೀನಾಗೆ ಕಾಲಿಟ್ಟ ಫೇಸ್‌ಬುಕ್?..ಅವರಿಗಾಗಿಯೇ ಹೊಸದೊಂದು ಆಪ್!!

ಸ್ನೇಕಿ ಆಪ್‌ ಫೇಸ್‌ಬುಕ್‌ ಚಿತ್ರಗಳು ಮತ್ತು ವಿಡಿಯೊಗಳನ್ನು ಫೇಸ್‌ಬುಕ್‌ ಪ್ರಿಯರು ವೀಕ್ಷಣೆ ಮಾಡಬಹುದು ಎಂದು ಫೇಸ್‌ಬುಕ್ ಹೇಳಿದೆ.! ಆದರೆ, ಫೇಸ್‌ಬುಕ್ ಅನ್ನೇ ಒಳಬಿಟ್ಟುಕೊಳ್ಳದ ಚೀನಾ ಈ 'ಸ್ನೇಕಿ ಆಪ್‌' ಮೂಲಕ ಫೇಸ್‌ಬುಕ್‌ಗೆ ತನ್ನ ದೇಶದಲ್ಲಿ ವಾಸ್ತವ್ಯಹೂಡಲು ಬಿಡುತ್ತಿದೆಯೇ ಎಂಬುದನ್ನು ಕಾದುನೋಡಬೇಕು.!!

Best Mobiles in India

English summary
Facebook’s apps are almost entirely banned in China.But.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X