TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಸ್ಮಾರ್ಟ್‌ಫೋನ್ ಬಳಸುವ ಪ್ರತಿಯೊಬ್ಬರಿಗೂ ಸಾಮಾಜಕ ಜಾಲತಾಣಗಳ ದಿಗ್ಗಜ ಫೇಸ್‌ಬುಕ್ ಚಿರಪರಿಚಿತ. ಹೀಗೆ ಜನಗಳ ಮನಗಳಲ್ಲಿ ಗಟ್ಟಿ ಸ್ಥಾನ ಪಡೆದಿರುವ ಫೇಸ್‌ಬುಕ್ ಅನ್ನು ಪ್ರತಿ ದಿನ ಬಳಸದೇ ಇರಲು ಆಗದಂತ ಸ್ಥಿತಿ ಸ್ಮಾರ್ಟ್‌ಫೋನ್ ಬಳಕೆದಾರರದಾಗಿದೆ. ಸ್ಮಾರ್ಟ್‌ಫೋನ್ ಬಳಕೆದಾರರೆಲ್ಲರೂ ಫೇಸ್‌ಬುಕ್ ಮೋಡಿಗೆ ಒಳಗಾಗಿದ್ದು, ದಿನವೊಂದಕ್ಕೆ ಅದೆಷ್ಟು ಬಾರಿ ಫೇಸ್‌ಬುಕ್ ತೆರೆಯುತ್ತಿರಿ ಮತ್ತು ಎಷ್ಟು ಸಮಯ ಫೇಸ್‌ಬುಕ್ ನಲ್ಲಿ ಕಳೆಯುತ್ತಿರಿ ಎಂದು ನಿಮಗೆ ಗೊತ್ತಾ?
ಫೇಸ್‌ಬುಕ್ ಅನ್ನು ಎಲ್ಲರೂ ಬಳೆಸುತ್ತಿದ್ದು, ಅವರಲ್ಲಿ ಕೆಲವು ಬಳಕೆದಾರರು ಅತೀಯಾಗಿ ಬಳೆಸಿದರೆ, ಇನ್ನು ಕೆಲವು ಬಳಕೆದಾರರು ಮಿತವಾಗಿ ಬಳೆಸುತ್ತಾರೆ. ಆದರೆ ಫೇಸ್‌ಬುಕ್ ಅನ್ನು ಬಿಟ್ಟಿರುವುದು ಕಷ್ಟದ ಮಾತಾಗಿದೆ ಎನ್ನಬಹುದು. ಅತೀ ಆದರೆ ಅಮೃತವು ವಿಷ ಎಂಬ ಮಾತಿನಂತೆ ಎಲ್ಲದಕ್ಕೂ ಒಂದು ಮಿತಿ ಇರಬೇಕು. ನೀವು ಎಷ್ಟು ಸಮಯ ಫೇಸ್‌ಬುಕ್‌ನಲ್ಲಿ ವ್ಯಯಿಸುತ್ತಿದ್ದಿರಿ ಎಂಬುದನ್ನು ತಿಳಿಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಫೇಸ್‌ಬುಕ್‌ನಲ್ಲಿ ಎಷ್ಟು ಸಮಯ ಕಳೆಯುತ್ತಿರಿ?
ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನೀವು ಎಷ್ಟು ಸಮಯವನ್ನು ಕಳೆಯುತ್ತಿರಿ ಎಂಬುದನ್ನು ತಿಳಿಯಲು ಪ್ರಯತ್ನಿಸಿದ್ದಿರಾ? ನಿಮಗೆ ಗೊತ್ತಿಲ್ಲದೇ ಇರಬಹುದು ಆದರೆ ಫೇಸ್‌ಬುಕ್ ಎಲ್ಲವನ್ನು ನಮೂದಿಸಿರುತ್ತದೆ. ಪ್ರತಿ ದಿನ ಎಷ್ಟು ಸಮಯವನ್ನು ನೀವು ಫೇಸ್‌ಬುಕ್‌ನಲ್ಲಿ ಕಳೆದಿರುವಿರಿ ಎಂಬುದನ್ನು ತಿಳಿಯಬಹುದು. ಇದರೊಂದಿಗೆ ಒಂದು ವಾರದಲ್ಲಿ ನಿಮ್ಮ ಫೇಸ್‌ಬುಕ್ ಬಳಕೆಯ ಶೇಖಡಾವಾರು ಅನುಪಾತವನ್ನು ಸಹ ತಿಳಿಯಬಹುದು.
ಈ ಹಂತಗಳನ್ನು ಅನುಸರಿಸಿ ಫೇಸ್‌ಬುಕ್ ಬಳಕೆಯ ಸಮಯ ತಿಳಿಯಿರಿ
ಹಂತ.1 ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ಫೇಸ್‌ಬುಕ್ ಖಾತೆ ತೆರೆಯಿರಿ.
ಹಂತ.2 ಬಲ ಭಾಗದ ಮೂಲೆಯಲ್ಲಿರುವ ಮೂರು ಗೆರೆಗಳಿರುವ ಮೆನು(ಹ್ಯಾಮ್‌ಬರ್ಗರ್ ಮೆನು) ಆಯ್ಕೆಯನ್ನು ಒತ್ತಿರಿ.
ಹಂತ.3 ಕಾಣಿಸುವ ಆಯ್ಕೆಗಳಲ್ಲಿ 'ಸೆಟ್ಟಿಂಗ್ಸ್ ಮತ್ತು ಪ್ರೈವಸಿ' ಆಯ್ಕೆಯನ್ನು ಒತ್ತಿರಿ
ಹಂತ.4 ಯೂವರ್ ಟೈಮ್ ಆನ್ ಫೇಸ್‌ಬುಕ್ ಆಯ್ಕೆಯನ್ನು ನೋಡಿರಿ.
ಹಂತ.5 ಸೆಟ್ಟ್ ಡೈಲಿ ರಿಮೈಂಡರ್ ಆಯ್ಕೆಯ ಮೂಲಕ ಫೇಸ್‌ಬುಕ್ ಬಳಕೆಯ ಸಮಯವನ್ನು ನಿಯಂತ್ರಿಸಬಹುದು.
ಫೇಸ್‌ಬುಕ್ ಬಳಕೆಯ ನಿಯಂತ್ರಣ ಸಾಧ್ಯ!
ಅತೀಯಾಗಿ ಫೇಸ್‌ಬುಕ್ ಬಳಸುತ್ತಿದ್ದೆನೆ ಎಂದೆನಿಸಿದರೇ ನಿಯಂತ್ರಿಸಲು ಫೇಸ್‌ಬುಕ್‌ನಲ್ಲಿಯೇ 'ಸೆಟ್ಟ್ ಡೈಲಿ ರೆಮೈಂಡರ್' ಆಯ್ಕೆ ಇದ್ದು, ಒಂದು ದಿನಕ್ಕೆ ಇಷ್ಟೇ ಸಮಯ ಫೇಸ್‌ಬುಕ್ ಬಳಕೆ ಮಾಡುವೆ ಎಂದು ನೀವು ಸಮಯ ಸೆಟ್ಟ್ ಮಾಡಿದರೇ ಸಾಕು. ಸೆಟ್ಟ್ ಮಾಡಿರುವ ಸಮಯ ಮೀರಿ ನೀವು ಫೇಸ್‌ಬುಕ್ ಬಳಸಲಾರಂಭಿಸಿದರೇ ಫೇಸ್‌ಬುಕ್ ನಿಮಗೆ ಅಲರ್ಟ್ ಮಾಡುತ್ತದೆ. ಇದರೊಂದಿಗೆ ಫೇಸ್‌ಬುಕ್ ಮಿತ ಬಳಕೆ ಮಾಡಲು ನೀವು ಗಟ್ಟಿ ಮನಸ್ಸು ಮಾಡಬೇಕು.