ಫೇಸ್ ಬುಕ್ ಬಳಕೆಯಲ್ಲಿ ಭಾರತವೇ ನಂ.1: ಬಳಕೆದಾರರ ಸಂಖ್ಯೆ ಎಷ್ಟು ಗೊತ್ತಾ...?

ಭಾರತದಲ್ಲಿ ಫೇಸ್ ಬುಕ್ ಬಳಕೆದಾರರ ಸಂಖ್ಯೆ 241 ಮಿಲಿಯನ್ ಆಗಿದ್ದು, ಇದೇ ಅಮೆರಿಕಾದಲ್ಲಿ ಫೇಸ್ ಬುಕ್ ಬಳಕೆದಾರರ ಸಂಖ್ಯೆಯೂ 240 ಮಿಲಿಯನ್ ಇದೆ ಎನ್ನಲಾಗಿದೆ.

By Lekhaka
|

ಸದ್ಯ ಬಿಡುಗಡೆಯಾಗಿರುವ ಮಾಹಿತಿಯ ಪ್ರಕಾರ ಭಾರತ ಫೇಸ್ ಬುಕ್ ಬಳಕೆ ಮಾಡುವ ಪ್ರಮುಖ ದೇಶವಾಗಿದೆ. ಅಮೆರಿಕಾವನ್ನು ಹಿಂದಿಕ್ಕಿ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ದೇಶ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.

ಫೇಸ್ ಬುಕ್ ಬಳಕೆಯಲ್ಲಿ ಭಾರತವೇ ನಂ.1: ಬಳಕೆದಾರರ ಸಂಖ್ಯೆ ಎಷ್ಟು ಗೊತ್ತಾ...?

ಭಾರತದಲ್ಲಿ ಫೇಸ್ ಬುಕ್ ಬಳಕೆದಾರರ ಸಂಖ್ಯೆ 241 ಮಿಲಿಯನ್ ಆಗಿದ್ದು, ಇದೇ ಅಮೆರಿಕಾದಲ್ಲಿ ಫೇಸ್ ಬುಕ್ ಬಳಕೆದಾರರ ಸಂಖ್ಯೆಯೂ 240 ಮಿಲಿಯನ್ ಇದೆ ಎನ್ನಲಾಗಿದೆ.

ದಿ ನೆಕ್ಸ್ ವೆಬ್ ಜುಲೈ 13 ರಂದು ಬಿಡುಗಡೆ ಮಾಡಿರುವ ಮಾಹಿತಿಯ ಅನ್ವಯ ಭಾರತವು 241 ಮಿಲಿಯನ್ ಆಕ್ಟೀವ್ ಬಳಕೆದಾರರನ್ನು ಒಳಗೊಂಡಿದೆ. ಅದೇ ಅಮೆರಿಕಾವೂ 240 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

ಇದೇ ಕೆಲವು ದಿನಗಳ ಹಿಂದೆ ಫೇಸ್ ಬುಕ್ ಹೇಳಿಕೆ ನೀಡಿದ ಮಾದರಿಯಲ್ಲೇ ಫೇನ್ ಬುಕ್ ಅನ್ನು ಇಡೀ ವಿಶ್ವದಲ್ಲಿ ಪ್ರತಿ ತಿಂಗಳು 2 ಬಿಲಿಯನ್ ಮಂದಿ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಫೇಸ್ ಬುಕ್ ಭಾರತದಲ್ಲಿ 2017 ನೇ ಇಸವಿಯಲ್ಲಿ ಹೆಚ್ಚಿನ ಬೆಳವಣಿಯನ್ನು ಸಾಧಿಸಿದೆ ಎನ್ನಲಾಗಿದೆ. ಅದುವೇ ಅಮೆರಿಕಾ ಗಿಂತ ಎರಡು ಪಟ್ಟು ವೇಗದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ ಎಂದು ಈ ವರದಿಯೂ ತಿಳಿಸಿದೆ.

ಭಾರತದಲ್ಲಿ ಕಳೆದ ಆರು ತಿಂಗಳಿನಲ್ಲಿ 27 % ಬೆಳವಣಿಗೆಯನ್ನು ಸಾಧಿಸಿದ್ದು, 50 ಮಿಲಿಯನ್ ಗೂ ಹೆಚ್ಚಿನ ಬಳಕೆದಾರರನ್ನು ಸೇರಿಸಿಕೊಂಡಿದೆ. ಆದರೆ ಇದೇ ಮಾದರಿಯಲ್ಲಿ ಅಮೆರಿಕಾವೂ 12% ಬೆಳವಣಿಗೆ ಸಾಧಿಸಿ 26 ಮಿಲಿಯನ್ ಮಂದಿಯನ್ನು ಸೇರಿಸಿಕೊಂಡಿದ್ದಾರೆ.

Best Mobiles in India

Read more about:
English summary
According to the report on TheNextWeb As of July 13, Facebook is reporting a total "potential audience" of 241 million active users in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X