ಫೇಸ್‌ಬುಕ್‌ನಿಂದ ಮತ್ತೊಂದು ಹೊಸ ಆಪ್‌..! ಇನ್‌ಸ್ಟಾಗ್ರಾಂನಂತೆ ಫೀಚರ್ಸ್‌..!

By Gizbot Bureau
|

ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ ಈಗಾಗಲೇ ಇನ್‌ಸ್ಟಾಗ್ರಾಂ ಮತ್ತು ವಾಟ್ಸ್‌ಆಪ್‌ನಿಂದ ಬಹುದೊಡ್ಡ ಆದಾಯವನ್ನು ಗಳಿಸುತ್ತಿದೆ. ಈ ಪಟ್ಟಿಗೆ ಮತ್ತೊಂದು ಆಪ್‌ ಸೇರ್ಪಡೆಯಾಗುತ್ತಿದ್ದು, ಜಗತ್ತಿನಾದ್ಯಂತ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಥ್ರೆಡ್ಸ್ ಎಂಬ ಹೊಸ ಆಪ್‌ನ್ನು ಪರಿಚಯಿಸಿದೆ. ಈ ಆಪ್‌, ಸಂಪೂರ್ಣವಾಗಿ ಹೊಸದಾಗಿರದಿದ್ದರೂ, ವಿಭಿನ್ನವಾದ ಪರಿಕಲ್ಪನೆಯೊಂದಿಗೆ ಇನ್‌ಸ್ಟಾಗ್ರಾಂನ ನೇರ ಸಂದೇಶ ಫೀಚರ್‌ನ ವಿಸ್ತರಣೆಯಾಗಿದೆ. ಕಂಪನಿಯು ಥ್ರೆಡ್ಸ್‌ ಆಪ್‌ನ್ನು 'ಕ್ಯಾಮೆರಾ-ಫಸ್ಟ್’ ಮೆಸೇಜಿಂಗ್ ಆಪ್‌ ಎಂದಿದ್ದು, ಇದರ ಮೂಲಕ ನೀವು ಇನ್‌ಸ್ಟಾಗ್ರಾಂನಲ್ಲಿನ ಸೀಮಿತ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಬಹುದಾಗಿದೆ.

ಸೀಮಿತ ಸ್ನೇಹಿತರೊಂದಿಗೆ ಹೆಚ್ಚು ಸಂಪರ್ಕ

ಸೀಮಿತ ಸ್ನೇಹಿತರೊಂದಿಗೆ ಹೆಚ್ಚು ಸಂಪರ್ಕ

ಇನ್‌ಸ್ಟಾಗ್ರಾಂನ ಉತ್ಪನ್ನ ನಿರ್ದೇಶಕ ರಾಬಿ ಸ್ಟೈನ್ ವಿವರಿಸುವಂತೆ, ಕಳೆದ ಕೆಲವು ವರ್ಷಗಳಿಂದ, ಇನ್‌ಸ್ಟಾಗ್ರಾಂನಲ್ಲಿ ದೃಶ್ಯಾತ್ಮಕವಾಗಿ ವಿಷಯ ಹಂಚಿಕೊಳ್ಳಲು ಮತ್ತು ನೀವು ಕಾಳಜಿವಹಿಸುವ ಜನರೊಂದಿಗೆ ಸಂಪರ್ಕ ಸಾಧಿಸಲು ಹಲವಾರು ಹೊಸ ಮಾರ್ಗಗಳನ್ನು ನಾವು ಪರಿಚಯಿಸಿದ್ದೇವೆ. ದೈನಂದಿನ ಕ್ಷಣಗಳನ್ನು ಸ್ಟೋರಿಗಳಿಂದ ನೇರವಾಗಿ ದೃಶ್ಯ ಸಂದೇಶಗಳಾಗಿ ಹಂಚಿಕೊಳ್ಳುವ ಆಯ್ಕೆಗಳನ್ನು ನೀಡಿದ್ದೇವೆ. ಆದರೆ, ನಿಮ್ಮ ಸೀಮಿತ ಸ್ನೇಹಿತರ ವಲಯದೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿರಬೇಕೆಂದು ನಾವು ಬಯಸುತ್ತೇವೆ.

ಹೊಸ ಖಾಸಗಿ ವೇದಿಕೆ

ಹೊಸ ಖಾಸಗಿ ವೇದಿಕೆ

ನೀವು ಏನು ಮಾಡುತ್ತಿದ್ದೀರಿ ಮತ್ತು ಹೇಗಿದ್ದೀರಿ ಎಂಬುದನ್ನು ಫೋಟೋ ಮತ್ತು ವೀಡಿಯೊಗಳ ಮೂಲಕ ಸಂವಹನ ಮಾಡಬಹುದಾಗಿದ್ದು, ಅದಕ್ಕಾಗಿಯೇ ನಾವು ಥ್ರೆಡ್ಸ್ ಆಪ್‌ನ್ನು ಸೃಷ್ಟಿಸಿದ್ದೇವೆ. ಇದು ನಿಮ್ಮ ಆಪ್ತ ಸ್ನೇಹಿತರೊಂದಿಗೆ ಖಾಸಗಿಯಾಗಿ ಸಂದೇಶ ಕಳುಹಿಸುವ ಹೊಸ ಮಾರ್ಗವಾಗಿದೆ.

ನಿರ್ಬಂಧಿತ ಪಟ್ಟಿ ತಯಾರಿಸಿ

ನಿರ್ಬಂಧಿತ ಪಟ್ಟಿ ತಯಾರಿಸಿ

ಥ್ರೆಡ್ಸ್‌ ಆಪ್‌ನೊಂದಿಗೆ, ಇನ್‌ಸ್ಟಾಗ್ರಾಂ ಬಳಕೆದಾರರು ಫೋಟೋ, ವಿಡಿಯೋ, ಸಂದೇಶ ಮತ್ತು ಸ್ಟೋರಿಗಳನ್ನು ಹಂಚಿಕೊಳ್ಳಬಹುದು. ಆದರೆ, ಇನ್‌ಸ್ಟಾಗ್ರಾಂನಂತೆ ವಿಶಾಲ ಜನರಿಗೆ ಇಲ್ಲಿ ಪೋಸ್ಟ್‌ಗಳು ಗೋಚರಿಸುವುದದಿಲ್ಲ. ನೀವು ಥ್ರೆಡ್ಸ್ ಆಪ್‌ನಿಂದ ನಿರ್ಬಂಧಿತ ಪಟ್ಟಿಯನ್ನು ತಯಾರಿಸಬಹುದಾಗಿದ್ದು, ಇದು ಇನ್‌ಸ್ಟಾಗ್ರಾಂನ ಮುಖ್ಯ ಆಪ್‌ನನಲ್ಲಿಯೂ ಕಾರ್ಯನಿರ್ವಹಿಸುತ್ತದೆ.

ಸ್ಟೇಟಸ್‌ ಫೀಚರ್‌

ಸ್ಟೇಟಸ್‌ ಫೀಚರ್‌

ಫೇಸ್‌ಬುಕ್‌ನ ಮುಖ್ಯ ಆಪ್‌ನಂತೆಯೇ ಸ್ಟೇಟಸ್‌ ಫೀಚರ್‌ನ್ನು ಥ್ರೆಡ್ಸ್‌ ಆಪ್‌ ಹೊಂದಿದ್ದು, ವಿದ್ಯಾಭ್ಯಾಸದಿಂದಿಡಿದು ನಿಮಗೆ ಇಷ್ಟ ಬಂದಿದ್ದನ್ನು ಇಲ್ಲಿ ಹಾಕಬಹುದಾಗಿದೆ. ಇದನ್ನು, ನಿಮ್ಮ ಆಪ್ತರು ಮಾತ್ರ ನೋಡುತ್ತಾರೆ ಮತ್ತು ಮತ್ತು ಅದು ಸಂಪೂರ್ಣವಾಗಿ ನಿಮ್ಮ ಆಯ್ಕೆಯಾಗಿರುತ್ತದೆ ಎಂದು ಸ್ಟೈನ್ ಉಲ್ಲೇಖಿಸಿದ್ದಾರೆ.

ಡೈರೆಕ್ಟ್‌ ಮೆಸೇಜ್‌ಗೆ ಮೀಸಲು

ಡೈರೆಕ್ಟ್‌ ಮೆಸೇಜ್‌ಗೆ ಮೀಸಲು

ಥ್ರೆಡ್ಸ್‌ ಕೆಲವು ಹೊಸ ಸಾಮರ್ಥ್ಯಗಳೊಂದಿಗೆ ಇನ್‌ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಫೀಚರ್‌ಗಾಗಿ ಮೀಸಲಾದ ಆಪ್‌ ಆಗಿದೆ ಎಂದರೆ ತಪ್ಪಾಗಲ್ಲ. ಥ್ರೆಡ್ಸ್‌ನಲ್ಲಿ ಇತರರಿಗೆ ಕಳುಹಿಸಲಾದ ಸಂದೇಶಗಳು ಇನ್‌ಸ್ಟಾಗ್ರಾಂನ ನೇರ ಸಂದೇಶಗಳಲ್ಲಿಯೂ ನೋಡಬಹುದಾಗಿದೆ. ಹೊಸ ಥ್ರೆಡ್ಸ್ ಆಪ್‌ ಈಗ ಜಗತ್ತಿಗೆ ಪರಿಚಯವಾಗುತ್ತಿದ್ದು, ಎಲ್ಲ ಬಳಕೆದಾರರನ್ನು ತಲುಪಲು ಸ್ವಲ್ಪ ಸಮಯ ಬೇಕಾಗುತ್ತದೆ.

Best Mobiles in India

English summary
Instagram Threads App Now Available As An Extension To Instagram Direct Messaging

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X