ಬಳಕೆದಾರರಿಗೆ ರೋಮಾಂಚನ ಸುದ್ದಿ ನೀಡಿತು 'ಇನ್‌ಸ್ಟಾಗ್ರಾಮ್'!

|

ಶೀಘ್ರದಲ್ಲೇ ಫೇಸ್‌ಬುಕ್, ವಾಟ್ಸ್‌ಆಪ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಏಕರೂಪದ ಮೆಸೇಜಿಂಗ್ ಆಪ್ ತಯಾರಿಸುವ ಚಿಂತನೆ ಹೊಂದಿರುವ ಪ್ರಖ್ಯಾತ ಜಾಲತಾಣ ಸಂಸ್ಥೆ ಫೇಸ್‌ಬುಕ್ ಮತ್ತೊಂದು ಸಿಹಿಸುದ್ದಿ ನೀಡಿದೆ. ಜನಪ್ರಿಯ ಫೋಟೊ ಜಾಲತಾಣ ಆಪ್ ಇನ್‌ಸ್ಟಾಗ್ರಾಮ್ ಬಳಕೆದಾರರು ಇನ್ಮುಂದೆ ಡೆಸ್ಕ್‌ಟಾಪ್‌ ಆವೃತ್ತಿಯಲ್ಲೂ ಡೈರೆಕ್ಟ್ ಮೆಸೇಜ್ ಕಳುಹಿಸಬಹುದಾದ ಅಪ್‌ಡೇಟ್ ನೀಡಿ ಇನ್‌ಸ್ಟಾಗ್ರಾಮ್ ಅನ್ನು ಬದಲಿಸಿದೆ.

ಹೌದು, ಈವರೆಗೂ ಇನ್‌ಸ್ಟಾಗ್ರಾಮ್ ಬಳಕೆದಾರರು ಫೋಟೋ ಅಪ್‌ಲೋಡ್ ಮಾಡಲು ಮತ್ತು ಡೈರೆಕ್ಟ್ ಮೆಸೇಜ್ ಕಳುಹಿಸಲು ಮೊಬೈಲ್‌ ಆಪ್‌ನಲ್ಲಿ ಮಾತ್ರ ಅವಕಾಶವಿತ್ತು. ಆದರೆ, ಈಗ ಈಗ ಡೆಸ್ಕ್‌ಟಾಪ್‌ ಆವೃತ್ತಿಯಲ್ಲೂ ಡೈರೆಕ್ಟ್ ಮೆಸೇಜ್ ಕಳುಹಿಸಬಹುದಾದ ಆಯ್ಕೆ ಕೆಲ ಬಳಕೆದಾರರಿಗೆ ದೊರೆತಿದ್ದು, ಇಷ್ಟು ಮಾತ್ರವಲ್ಲದೆ ಗ್ರಾಹಕರು ಬೇಡಿಕೆಯಿಟ್ಟಿದ್ದ ಹಲವು ಆಯ್ಕೆಯನ್ನು ಇನ್‌ಸ್ಟಗ್ರಾಮ್‌ನಲ್ಲಿ ಒದಗಿಸಲಾಗಿದೆ ಎಂದು ತಿಳಿದುಬಂದಿದೆ.

ಬಳಕೆದಾರರಿಗೆ ರೋಮಾಂಚನ ಸುದ್ದಿ ನೀಡಿತು 'ಇನ್‌ಸ್ಟಾಗ್ರಾಮ್'!

ಇಂತಹದೊಂದು ಅಪ್‌ಡೇಟ್ ಕುರಿತು ಸಂಶೋಧನೆ ನಡೆಸುತ್ತಿರುವ 'ಜೇನ್ ಮಂಚುನ್ ವೊಂಗ್' ಎಂಬುವವರು ಟ್ವೀಟ್ ಮಾಡಿ ತಿಳಿಸಿದ್ದು, ಸ್ವತಃ ಇನ್‌ಸ್ಟಾಗ್ರಾಮ್ ತಂಡವೇ ಡೆಸ್ಕ್‌ಟಾಪ್ ಬಳಕೆದಾರರಿಗೆ ನೇರವಾಗಿ ಸಂದೇಶ ಕಳುಹಿಸುವ ಆಯ್ಕೆಯನ್ನು ಡೆವಲಪರ್ ಬಳಿ ಪರೀಕ್ಷಿಸುತ್ತಿದೆ. ಈ ಅಪ್‌ಡೇಟ್ ಈಗಾಗಲೇ ಕೆಲ ಬಳಕೆದಾರರಿಗೆ ದೊರೆತಿದ್ದು, ನಂತರದಲ್ಲಿ ಅದು ಸಾರ್ವಜನಿಕರಿಗೆ ಬಳಕೆಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಇಲ್ಲಿಯವರೆಗೂ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಲಾಗಿನ್ ಆಗಿ, ಸ್ಕ್ರಾಲ್ ಮಾಡಿ, ಪೋಸ್ಟ್ ವೀಕ್ಷಿಸಲು, ಲೈಕ್ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಮೊಬೈಲ್ ಆಪ್‌ನಲ್ಲಿರುವ ಡೈರೆಕ್ಟ್ ಮೆಸೇಜ್, ಫೋಟೋ ಅಪ್‌ಲೋಡ್ ಮತ್ತು ಡಿಎಂ ಆಯ್ಕೆ ಲಭ್ಯವಿರದೇ ಸೊರಗುತ್ತಿದ್ದ ಇನ್‌ಸ್ಟಗ್ರಾಮ್‌ನ ಡೆಸ್ಕ್‌ಟಾಪ್ ಆವೃತ್ತಿ ಸೂಕ್ತ ಆಯ್ಕೆಯೂ ಅಲ್ಲದ ಮತ್ತು ಅತ ಜನಪ್ರಿಯವೂ ಅಲ್ಲದ ಒಂದು ಸೇವೆಯಾಗಿ ಕಂಡುಬರುತ್ತಿತ್ತು.

ಆದರೆ, ಈ ನೂತನ ಅಪ್‌ಡೇಟ್ ಮೂಲಕ ಇನ್‌ಸ್ಟಾಗ್ರಾಮ್ ವೆಬ್ ಪ್ರಿಯರನ್ನು ಸೆಳೆಯಲು ಮುಂದಾಗಿದೆ. ಇನ್‌ಸ್ಟಾಗ್ರಾಮ್ ಗ್ರಾಹಕರು ಬಯಸಿದ ಹಲವು ಅಪ್‌ಡೇಟ್‌ಗಳನ್ನು ಹೊಂದುವ ಮೂಲಕ ಇನ್‌ಸ್ಟಾಗ್ರಾಮ್ನ ಡೆಸ್ಕ್‌ಟಾಪ್ ಆವೃತ್ತಿ ಭಾರೀ ಬದಲಾಗುವ ನಿರೀಕ್ಷೆಯನ್ನು ಹೊಂದಲಾಗಿದೆ. ಮೊಬೈಲ್ ಆಪ್‌ನಲ್ಲಿರುವ ಡೈರೆಕ್ಟ್ ಮೆಸೇಜ್, ಫೋಟೋ ಅಪ್‌ಲೋಡ್ ಆಯ್ಕೆಗಳು ಸಿಗುವುದರಿಂದ ವೆಬ್‌ ಆವೃತ್ತಿ ಹೊಸ ವಿನ್ಯಾಸ ಕಂಡುಕೊಳ್ಳಲಿದೆ.

Best Mobiles in India

English summary
Instagram users soon send direct messages using desktop web. It was first spotted by app researcher Jane Manchun Wong who shared screenshots of the upcoming feature on Twitter. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X