ಒಂದು ನಿರ್ಧಾರಕ್ಕೆ 21 ಸಾವಿರ ಕೋಟಿ ಹಣ ಕಳೆದುಕೊಂಡ ಫೇಸ್‌ಬುಕ್ ಮಾಲಿಕ!..ಆದರೂ ಖುಷಿಯಂತೆ!!

ಯಾವಾಗಲೂ ಒಳ್ಳೆಯ ದಿನಗಳನ್ನು ಹೊಂದಿದ್ದ ಫೇಸ್‌ಬುಕ್ ಇತ್ತೀಚಿಗೆ ತರಲಾದ ಒಂದು ಅಪ್‌ಡೇಟ್‌ಗೆ 3.3 ಬಿಲಿಯನ್ ಡಾಲರ್ ಹಣವನ್ನು ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ.!!

|

ವಿಶ್ವದ ನಂಬರ್ ಒನ್ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಎಂದೂ ನಷ್ಟ ಅನುಭವಿಸುವುದಿಲ್ಲ ಎಂದುಕೊಂಡವರಿಗೆ ಶಾಕ್ ಆಗಿದೆ.! ಯಾವಾಗಲೂ ಒಳ್ಳೆಯ ದಿನಗಳನ್ನು ಹೊಂದಿದ್ದ ಫೇಸ್‌ಬುಕ್ ಇತ್ತೀಚಿಗೆ ತರಲಾದ ಒಂದು ಅಪ್‌ಡೇಟ್‌ಗೆ 3.3 ಬಿಲಿಯನ್ ಡಾಲರ್ ಹಣವನ್ನು ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ.!!

ಒಂದು ನಿರ್ಧಾರಕ್ಕೆ 21 ಸಾವಿರ ಕೋಟಿ ಹಣ ಕಳೆದುಕೊಂಡ ಫೇಸ್‌ಬುಕ್ ಮಾಲಿಕ!!

ಹೌದು, ಫೇಸ್‌ಬುಕ್ ಪೋಸ್ಟ್‌ಗಳನ್ನು ರ್ಯಾಂಕ್ ಮಾಡುವ ವಿಧಾನ ಬದಲಿಸಿದ ನ್ಯೂಸ್‌ಫೀಡ್‌ನಿಂದಾಗಿ ಮಾರ್ಕ್ ಜುಕರ್‌ಬರ್ಗ್ 21 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ..! ಹಾಗಾದರೆ, ಫೆಸ್‌ಬುಕ್‌ಗೆ ಅಷ್ಟೊಂದು ಹಣ ನಷ್ಟವಾಗಲು ಕಾರಣ ಏನು? ಜುಕರ್‌ಬರ್ಗ್ ಮುಂದಿನ ನಡೆಯೇನು ಎಂಬುದನ್ನು ಮುಂದೆ ತಿಳಿಯಿರಿ.!!

ಹೊಸ ನ್ಯೂಸ್ ಫೀಡ್!!

ಹೊಸ ನ್ಯೂಸ್ ಫೀಡ್!!

ಸಾಮಾಜಿಕವಾಗಿ ಪರಸ್ಪರ ಬೆರೆಯುವಿಕೆ ಮತ್ತು ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಫೇಸ್‌ಬುಕ್ ನಲ್ಲಿ ಕಳೆಯುವ ಸಮಯ ಹೆಚ್ಚು ಮೌಲ್ಯಯುತವಾಗಿರುತ್ತದೆ. ಹಾಗಾಗಿ, ಪ್ರಸಿದ್ಧ ವ್ಯಕ್ತಿಯೊರ್ವರ ಪೋಸ್ಟ್ ಗಿಂತ ಹತ್ತಿರದವರ ಪೋಸ್ಟ್ ಅನ್ನು ಜನರಿಗೆ ನೀಡುವ ನಿರ್ಧಾರವನ್ನು ಫೆಸ್‌ಬುಕ್ ಕೈಗೊಂಡಿತ್ತು.!!

ಇದಕ್ಕೆ ಪೇಸ್‌ಬುಕ್ ಹೇಳಿದ್ದೇನು?

ಇದಕ್ಕೆ ಪೇಸ್‌ಬುಕ್ ಹೇಳಿದ್ದೇನು?

ಅನಗತ್ಯವಾಗಿ ಇತರ ವಿಷಯಗಳ ಬಗ್ಗೆ ಕಾಲ ಕಳೆಯುವುದಕ್ಕಿಂತ ತಮ್ಮ ಹತ್ತಿರದವರೊಂದಿಗೆ ಪರಸ್ಪರ ಬೆರೆತು ಸಂವಹನ ನಡೆಸುವುದು ಹೆಚ್ಚು ಮುಖ್ಯವಾದುದು. ನಾವು ಮಾಡಿರುವ ಅಪ್ಡೇಟ್ಗಳಲ್ಲಿ ಇದು ಪ್ರಮುಖವಾದುದು ಎಂದು ಫೆಸ್‌ಬುಕ್ ವಕ್ತಾರ ಹೆಜ್ಮೆನ್ ತಿಳಿಸಿದ್ದಾರೆ.!!

ಫೇಸ್‌ಬುಕ್‌ಗೆ ಭಾರಿ ನಷ್ಟ.!!

ಫೇಸ್‌ಬುಕ್‌ಗೆ ಭಾರಿ ನಷ್ಟ.!!

ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಫೇಸ್‌ಬುಕ್ ನಲ್ಲಿ ಸಮಯ ಹೆಚ್ಚು ಕಳೆಯುವಂತೆ ಮಾಡಿರುವ ಈ ನಿರ್ಧಾರಕ್ಕೆ ಫೇಸ್‌ಬುಕ್ ಬೆಲೆತೆತ್ತಿದೆ.! ಪ್ರಾಯೋಜಕತ್ವದಿಂದಲೇ ಬಹುತೇಕ ಹಣ ಸಂಪಾದಿಸುವ ಫೇಸ್‌ಬುಕ್‌ ನಿರ್ಧಾರದಿಂದ ಬಹುಬೇಗ ತನ್ನ ಶೇರುಗಳ ಬೆಲೆಯನ್ನು ಕಳೆದುಕೊಂಡಿದೆ.!!

ಇದೆ ಮೊದಲು ಇಷ್ಟು ಲಾಸ್‌!!

ಇದೆ ಮೊದಲು ಇಷ್ಟು ಲಾಸ್‌!!

ಫೇಸ್‌ಬುಕ್‌ನ ಹೊಸ ನಿರ್ಧಾರದಿಂದ ಫೇಸ್‌ಬುಕ್ ಶೇರುಗಳ ಬೆಲೆ ಭಾರಿ ಕಡಿಮೆಯಾಗಿದೆ. ಮಾಧ್ಯಮ ವರದಿಗಳಲ್ಲಿ ತಿಳಿಸಿರುವಂತೆ ಫೇಸ್‌ಬುಕ್ ಇದೇ ಮೊದಲ ಸಾರಿ ಇಷ್ಟು ನಷ್ಟ ಅನುಭವಿಸಿದ್ದು, 3.3 ಬಿಲಿಯನ್ ಡಾಲರ್ (21 ಸಾವಿರ ಕೋಟಿ) ಹಣವನ್ನು ಫೇಸ್‌ಬುಕ್ ಕಳೆದುಕೊಂಡಿದೆ.!!

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?
ಜುಕರ್‌ಬರ್ಗ್ ಮೂಂದಿನ ನಡೆಯೇನು?

ಜುಕರ್‌ಬರ್ಗ್ ಮೂಂದಿನ ನಡೆಯೇನು?

ಸಾಮಾಜಿಕ ಜಾಲತಾಣದಲ್ಲಿ ತುಂಬಿರುವ ದ್ವೇಷ ಮತ್ತು ನಿಂದನೆಗಳನ್ನು ನಿರ್ಮೂಲನೆಮಾಡಿ ಫೇಸ್‌ಬುಕ್ನಲ್ಲಿ ಕಳೆಯುವ ಸಮಯವನ್ನು ಅರ್ಥಪೂರ್ಣವಾಗಿಸುವುದು ಜುಕರ್‌ಬರ್ಗ್ ಅವರ ಗುರಿಯಾಗಿದೆ. ಹಾಗಾಗಿ, ನಷ್ಟವಾದರೂ ಸರಿ ಜನರು ತಮ್ಮ ಹತ್ತಿರದವರ ಜೊತೆ ಪರಸ್ಪರ ಬೆರೆಯುವಂತೆ ಮಾಡುವ ಖುಷಿ ಮತ್ತು ಗುರಿ ನನ್ನಲ್ಲಿದೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ ಎನ್ನಲಾಗಿದೆ..!!

</a></strong><a class=‘ಮುಖ ಗುರುತಿಸುವಿಕೆ' ತಂತ್ರಜ್ಞಾನ ಆಧಾರ್‌ನಲ್ಲಿ ಹೇಗೆ ಬಳಕೆಯಾಗಲಿದೆ ಗೊತ್ತಾ?" title="‘ಮುಖ ಗುರುತಿಸುವಿಕೆ' ತಂತ್ರಜ್ಞಾನ ಆಧಾರ್‌ನಲ್ಲಿ ಹೇಗೆ ಬಳಕೆಯಾಗಲಿದೆ ಗೊತ್ತಾ?" loading="lazy" width="100" height="56" />‘ಮುಖ ಗುರುತಿಸುವಿಕೆ' ತಂತ್ರಜ್ಞಾನ ಆಧಾರ್‌ನಲ್ಲಿ ಹೇಗೆ ಬಳಕೆಯಾಗಲಿದೆ ಗೊತ್ತಾ?

Best Mobiles in India

English summary
Although it is the most popular social network in the world, it does not mean that the social network giant Facebook always has good days. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X