ಫೇಸ್ ಬುಕ್ CEO ಮಾರ್ಕ್ ಜುಕರ್ ಬರ್ಗ್ ಹೊಸ ಸಂಕಲ್ಪ

By Lekhaka
|

ಹೊಸ ವರ್ಷದಂದು ಪ್ರತಿಯೊಬ್ಬರು ಒಂದಲ್ಲ ಒಂದು ಸಂಕಲ್ಪವನ್ನು ಮಾಡುತ್ತಾರೆ. ಇದೇ ಮಾದರಿಯಲ್ಲಿ ಫೇಸ್ ಬುಕ್ CEO ಮಾರ್ಕ್ ಜುಕರ್ ಬರ್ಗ್ ಸಹ ಸಂಕಲ್ಪವೊಂದನ್ನು ಮಾಡಿದ್ದು, ನೂತನ ವರ್ಷಕ್ಕೆ ಹೊಸದೊಂದು ಚಾಲೆಂಜ್ ಅನ್ನು ಮಾಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಯುವ ಸಮುಹಕ್ಕೆ ಮಾದರಿಯಾಗಿದ್ದಾರೆ.

ಫೇಸ್ ಬುಕ್ CEO ಮಾರ್ಕ್ ಜುಕರ್ ಬರ್ಗ್ ಹೊಸ ಸಂಕಲ್ಪ


2018ರಲ್ಲಿ ಫಿಕ್ಸ್ ಫೇಸ್ ಬುಕ್ ಎನ್ನುವ ಸಂಕಲ್ಪವನ್ನು ಫೇಸ್ ಬುಕ್ CEO ಮಾರ್ಕ್ ಜುಕರ್ ಬರ್ಗ್ ಮಾಡಿದ್ದು, ಫೇಕ್ ನ್ಯೂಸ್ ಗಳನ್ನು ತೊಡೆದು ಹಾಕುವುದಲ್ಲದೇ ಇಷ್ಟು ಸಮಾಜಮುಖಿಯಾಗಿ ಫೇಸ್ ಬುಕ್ ಅನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳಿದ್ದಾರೆ.

2018ರಲ್ಲಿ ತಾನು ಏನು ಮಾಡುತ್ತೇನೆ ಎಂಬುದನ್ನು ಪೋಸ್ಟ್ ಮಾಡಿರುವ ಮಾರ್ಕ್, ಫೇಸ್ ಬುಕ್ ಎದುರಿಸುತ್ತಿರುವ ಸಮಸ್ಯೆಗಳನ್ನು ಸರಿಪಡಿಸುವುದಾಗಿದೆ. ಮಾಡಿರುವ ತಪ್ಪುಗಳನ್ನು ಸರಿಪಡಿಸುವುದು, ಮುಂದೆ ತಪ್ಪಾಗದ ರೀತಿಯಲ್ಲಿ ಮುಂದುವರೆಯುವುದು ಅಲ್ಲದೇ ಫೇಸ್ ಬುಕ್ ಅನ್ನು ಮತ್ತಷ್ಟು ಯಶಸ್ವಿ ಗೊಳಿಸುವ ಸಂಕಲ್ಪವನ್ನು ಮಾಡಿರುವುದಾಗಿ ತಿಳಿದಿದ್ದಾರೆ.

ಹೊಸ ವರ್ಷದಂದು ವಾಟ್ಸ್‌ಆಪ್ ಸ್ಥಗಿತ: ಕಾರಣ ಯಾರು? ವಾಟ್ಸ್‌ಆಪ್ ಹೇಳಿದ್ದೇನು.?ಹೊಸ ವರ್ಷದಂದು ವಾಟ್ಸ್‌ಆಪ್ ಸ್ಥಗಿತ: ಕಾರಣ ಯಾರು? ವಾಟ್ಸ್‌ಆಪ್ ಹೇಳಿದ್ದೇನು.?

ಇದನ್ನು ವೈಯಕ್ತಿಕ ಸಮಸ್ಯಗಳಿಗಿಂತ ಹೆಚ್ಚಾಗಿ ಗಮನ ಹರಿಸಿ ಪರಿಹರಿಸಲು ಮುಂದಾಗುವೆ ಎಂದಿರುವ ಜುಕರ್, ಎಲ್ಲಾ ಪಾಲಿಸಿಗಳನ್ನು ಬದಲಾಯಿಸಿ ಎಲ್ಲಾ ವಿಭಾಗದಲ್ಲಿಯೂ ಇರುವ ಫೇಕ್ ಮಾಹಿತಿಯನ್ನು ಹರಡುವುದನ್ನು ತಪ್ಪಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.

ಫೇಸ್ ಬುಕ್ ಇಂದು ಜಾಗತಿಕ ದನಿಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಫೇಸ್ ಬುಕ್ ಮಾಡುವ ತಪ್ಪುಗಳಿಂದ ತೊಂದರೆಗಳು ಹೆಚ್ಚಾಗುತ್ತದೆ. ಈ ಹಿನ್ನಲೆಯಲ್ಲಿ ತನ್ನ ತಪ್ಪನ್ನು ಸರಿ ಮಾಡಿಕೊಂಡು, ಸಮಾಜದ ಒಳತಿಗೆ ಕಾರ್ಯನಿರ್ವಹಿಸುವಂತೆ ಮಾಡುವುದೇ ಈ ವರ್ಷದ ಗುರಿ ಎಂದು ಎಲ್ಲರೊಂದಿಗೆ ತಮ್ಮ ಸಂಕಲ್ಪವನ್ನು ತಿಳಿಸಿದ್ದಾರೆ.

Best Mobiles in India

Read more about:
English summary
Mark Zuckerberg's goal for 2018 is to "fix Facebook" when it comes to dealing with abuse and hate, fake news or interference by nation-states on the platform.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X